ಭಾರತೀಯರು 2017ರಲ್ಲಿ ಗೂಗಲ್ ನಲ್ಲಿ ಹುಡುಕಿದ ನಂಬರ್ 1 ಸ್ಮಾರ್ಟ್ ಫೋನ್ ಯಾವುದು..?
2017ರ ಅಂತ್ಯ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ವರ್ಷದಲ್ಲಿ ನಡೆದ ಘಟನೆಗಳ ಕುರಿತಯ ವರದಿಯೊಂದನ್ನು ಪ್ರಕಟಿಸಿದೆ, ಇದರಲ್ಲಿ ವರ್ಷದಲ್ಲಿ ಅತೀ ಹೆಚ್ಚು ಮಂದಿ ಗೂಗಲ್ ನಲ್ಲಿ ಹುಡುಕಿದ ಸ್ಮಾರ್ಟ್ ಪೋನ್ ಯಾವುದು ಎನ್ನುವ ವರದಿಯನ್ನು ಬಹಿರಂಗ ಮಾಡಿದೆ.

ಇದರಲ್ಲಿ ವಿಶ್ವದಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ ಸ್ಮಾರ್ಟ್ ಫೋನ್ ಹಾಗೂ ದೇಶದಲ್ಲಿ ಹೆಚ್ಚು ಹುಡುಕಿದ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲೇ ಟಾಪ್ 10 ಮೊಬೈಲ್ ಗಳು ಯಾವುದು ಎನ್ನುವುದನ್ನು ಗೂಗಲ್ ತಿಳಿಸಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯೂ ಈ ಮುಂದಿನಂತೆ ಇದೆ.

ಆಪಲ್ ಐಫೋನ್ 8:
ಐಪೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಂಡಿತ್ತು. ಎರಡು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗುತ್ತಿತ್ತು.

ಆಪಲ್ ಐಫೋನ್ X:
ಆಪಲ್ 10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾದ ಆಪಲ್ ಐಫೋನ್ X, ಸ್ಮಾರ್ಟ್ ಫೋನ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸಾಧಿಸಿತ್ತು. ಈ ಫೋನ್ ಸಹ 2 ಆವೃತ್ತಿಯಲ್ಲಿ ದೊರೆಯಲಿದೆ.

ನಿನ್ಟೆಂಟೆಂಡೊ ಸ್ವೀಚ್:
ಮೂರನೇ ಸ್ಥಾನದಲ್ಲಿ ನಿನ್ಟೆಂಟೆಂಡೊ ಸ್ವೀಚ್ ಗೇಮಿಂಗ್ ಕನಸೋಲ್ ಕಾಣಿಸಿಕೊಂಡಿದೆ. ಇದು ಮೊಬೈಲ್ ಗೇಮಿಂಗ್ ವಿಭಾಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದರಲ್ಲಿ ಗೇಮ್ ಆಡುವುದು ಹೊಸ ಅನುಭವ ನೀಡಿಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8:
ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಈ ವರ್ಷದ ಟಾಪ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ ಫೋನಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ವರ್ಷದಲ್ಲಿ S9 ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ.

ಮೈಕ್ರೊ ಸಾಫ್ಟ್ ಏಕ್ಸ್ ಬಾಕ್ಸ್ ಒನ್ X:
ಈ ವರ್ಷ ಮೈಕ್ರೊ ಸಾಫ್ಟ್ ಬಿಡುಗಡೆ ಮಾಡಿದ್ದ ಏಕ್ಸ್ ಬಾಕ್ಸ್ ಒನ್ X ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿದ್ದಲ್ಲದೇ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಸದ್ದು ಮಾಡಿತ್ತು. ಹೆಚ್ಚು ಗ್ರಾಫಿಕ್ಸ್ ಹೊಂದಿರುವ ಗೇಮ್ ಗಳನ್ನು ಆಡಲು ಹೇಳಿ ಮಾಡಿಸಿದಂತಿದೆ.

ನೋಕಿಯಾ 3310(2017):
ನೋಕಿಯಾ ಈ ವರ್ಷದಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ನೋಕಿಯಾ 3310(2017) ಫೀಚರ್ ಫೋನ್ ಅನ್ನು ಲಾಂಚ್ ಮಾಡಿತ್ತು, ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡಿಲ್ಲವಾದರು ಗ್ರಾಹಕರಿಗೆ ಹೊಸ ಅನುಭವನ್ನು ನೀಡಿತ್ತು.

ರೆಜರ್ ಫೋನ್:
ಗೇಮಿಗ್ ಹಾರ್ಡ್ ವೇರ್ ತಯಾರಕ ರೆಜರ್ ಬಿಡುಗಡೆ ಮಾಡಿದ್ದ ರೆಜರ್ ಫೋನ್ ಸಹ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿತ್ತು. ಗೇಮರ್ ಗಳಿಗಾಗಿಯೇ ವಿನ್ಯಾಸ ಮಾಡಲಾಗಿದ್ದ ಈ ಫೋನ್ ಉತ್ತಮವಾಗಿದೆ.

ಒಪ್ಪೋ F5:
ಒಪ್ಪೋ ಬಿಡುಗಡೆ ಮಾಡಿದ್ದ ಸೆಲ್ಫಿ ಸ್ಮಾರ್ಟ್ ಫೋನ್ ಒಪ್ಪೋ F5 ಉತ್ತಮವಾದ ವಿನ್ಯಾಸವನ್ನು ಹೊಂದಿರುವುದಲ್ಲದೇ ಕೃತಕ ಬುದ್ದಿ ಮತ್ತೆಯನ್ನು ಸೆಲ್ಪಿಗಾಗಿಯೇ ಹೊಂದಿದ್ದು, ಈ ಸ್ಮಾರ್ಟ್ ಫೋನ್ ಕ್ಯಾಮೆರಾದಿಂದಲೇ ಸದ್ದು ಮಾಡುತ್ತಿತ್ತು.

ಒನ್ ಪ್ಲಸ್ 5:
ಒನ್ ಪ್ಲಸ್ ಕಂಪನಿ ಬಿಡುಗಡೆ ಮಾಡಿದ್ದ ಒನ್ ಪ್ಲಸ್ 5 ಸ್ಮಾರ್ಟ್ ಫೋನ್ ಸಹ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಎರಡು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗುತ್ತಿತ್ತು.

ನೋಕಿಯಾ 6:
ನೋಕಿಯಾ ಬಿಡುಗಡೆ ಮಾಡಿದ್ದ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ನೋಕಿಯಾ 6 ಸ್ಮಾರ್ಟ್ ಫೋನ್ ಹೆಚ್ಚು ಸದ್ದು ಮಾಡುತ್ತಿದೆ. ಇದು ಸಹ ಸ್ಟಾಕ್ ಆಂಡ್ರಾಯ್ಡ್ ಫೋನ್ ಆಗಿದೆ.


Click it and Unblock the Notifications








