Home
ಮೊಬೈಲ್

ಜಿಯೋ ಫೋನಿನ ಖರೀದಿಯ ಮೇಲೆ ರೂ.500 ರಿಯಾಯಿತಿ ಪಡೆಯುವುದು ಹೇಗೆ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನೇ ಆರಂಭಿಸಿದ ರಿಲಯನ್ಸ್ ಜಿಯೋ, ತನ್ನದೇ ಫೋನ್ ವೊಂದನ್ನು ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿಗೆ ಕಾರಣವಾಗಿದೆ. ಕೇವಲ ಸ್ಮಾರ್ಟ್‌ಫೋನ್ ಮಾತ್ರವೇ ಮಾರುಕಟ್ಟೆಯಲ್ಲಿ ರಾಜಾಜಿಸುತ್ತಿದ್ದ ಸಂದರ್ಭದಲ್ಲಿ ಸ್ಮಾರ್ಟ್ ಫೀಚರ್ ಫೋನ್ ಹೆಸರಿನಲ್ಲಿ ಲಾಂಚ್ ಆದ ಜಿಯೋ ಫೋನ್ ಇದುವರೆಗೆ ಸುಮಾರು 2 ಕೋಟಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಕೋಟ್ಯಾಂತರ ಮಂದಿ ಇದನ್ನು ಬಳಕೆ ಮಾಡುತ್ತಿದ್ದಾರೆ. ಇದಲ್ಲದೇ ಇದರೊಂದಿಗೆ ಹೊಸದಾಗಿ ಇನ್ನೊಂದು ಹೊಸ ಫೋನ್ ಸಹ ಬಿಡುಗಡೆಗೊಂಡಿದೆ.

ಜಿಯೋ ಫೋನಿನ ಖರೀದಿಯ ಮೇಲೆ ರೂ.500 ರಿಯಾಯಿತಿ ಪಡೆಯುವುದು ಹೇಗೆ..!

ಇದೇ ಸಂದರ್ಭದಲ್ಲಿ ಜಿಯೋ ಫೋನ್ ಮೇಲೆ ಬೊಂಬಾಟ್ ಆಫರ್ ವೊಂದು ಕಾಣಿಸಿಕೊಂಡಿದ್ದು, ರೂ.1500ಕ್ಕೆ ಮಾರಾಟವಾಗುತ್ತಿರುವ ಜಿಯೋ ಫೋನ್ ಅನ್ನು ರೂ.500 ಡಿಸ್ಕೌಂಟ್ ಪಡೆದು, ರೂ.1000ಕ್ಕೆ ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಜಿಯೋ ಫೋನ್ ಮೇಲೆ ರೂ.500 ರಿಯಾಯಿಟಿ ಪಡೆಯುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಪೇಟಿಎಂ ಮಾಲ್‌ನಲ್ಲಿ ಮಾತ್ರ:

ಪೇಟಿಎಂ ಮಾಲ್‌ನಲ್ಲಿ ಮಾತ್ರ:

ಪೇಟಿಎಂ ಮಾಲ್ ನಲ್ಲಿ ಮಾತ್ರವೇ ಈ ಆಫರ್ ಲಭ್ಯವಿದೆ ಎನ್ನಲಾಗಿದ್ದು, ಇಲ್ಲಿ ನೀವು ರೂ.1500ಕ್ಕೆ ಮಾರಾಟವಾಗುತ್ತಿರುವ ಜಿಯೋ ಫೋನ್ ಮೇಲೆ ರೂ.500 ಖಡಿತ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿಯೇ ಮಾನ್ಸೂನ್ 500 ಎಂಬ ಪ್ರೋ ಕೋಡ್ ವೊಂದನ್ನು ನೀಡಲಾಗಿದೆ. ಇದನ್ನು ಹಾಕಿದೆರೆ ಮಾತ್ರ ರೂ.ರೂ.1000ಕ್ಕೆ ಜಿಯೋ ಫೋನ್ ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನಿನಲ್ಲಿ 2.4 ಇಂಚಿನ QVGA TFT ಡಿಸ್ಪ್ಲೇ ಮತ್ತು ಡುಯಲ್-ಕೋರ್ ಪ್ರೊಸೆಸರ್ ನ್ನು ಹೊಂದಿದೆ.ಇದರಲ್ಲಿ 512 MB RAM ಮತ್ತು 4 GB ಇಂಟರ್ನಲ್ ಸ್ಟೋರೇಜ್ ಮತ್ತು 128 GB ವರೆಗೆ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ.

24 ಭಾಷೆಗಳು:

24 ಭಾಷೆಗಳು:

ಜಿಯೋ ಫೋನ್ 4G VoLTE ನೆಟ್ ವರ್ಕ್ ನ ಕನೆಕ್ಟಿವಿಟಿಯಲ್ಲಿ ಕಾರ್ಯನಿರ್ವಹಿಲಿದ್ದು, ಕೆಲವು ಪ್ರೀ-ಇನ್ಸ್ಟಾಲ್ಡ್ ಆಪ್ ಗಳನ್ನು ಕೂಡ ಇದು ಹೊಂದಿರುತ್ತದೆ. ಜಿಯೋ ಟಿವಿ, ಜಿಯೋ ಮ್ಯೂಸಿಕ್ ಮತ್ತು ಜಿಯೋ ಕ್ಯಾಮರಾ. ಈ ಡಿವೈಸ್ ಭಾರತದ 24 ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು ವಾಯ್ಸ್ ಕಮಾಂಡ್ ಗಳನ್ನು ಕೂಡ ಸ್ವೀಕರಿಸುತ್ತದೆ.

ವಾಟ್ಸ್‌ಆಪ್ ಸಪೋರ್ಟ್ ಮಾಡಲಿದೆ:

ವಾಟ್ಸ್‌ಆಪ್ ಸಪೋರ್ಟ್ ಮಾಡಲಿದೆ:

ಇನ್ನೊಂದು ಮಾಹಿತಿಯ ಪ್ರಕಾರ ವಾಟ್ಸ್ ಆಪ್ ಕೂಡ ಜಿಯೋ ಫೋನ್ ನಲ್ಲಿ ಬರಲಿದೆಯಂತೆ. ಒಟ್ಟಾರೆ ಜಿಯೋ ಫೋನ್ ಬಳಕೆದಾರರಿಗೆ ಅವರ ಫೋನಿನಲ್ಲಿರುವ ಕೆಲವು ವೈಶಿಷ್ಟ್ಯಗಳ ಹೊರತಾಗಿಯೂ ಇಷ್ಟು ದಿನ ಗೂಗಲ್ ಮತ್ತು ವಾಟ್ಸ್ ಆಪ್ ವರ್ಷನ್ ಗಳು ಇಲ್ಲದೇ ಇರುವುದು ಬೇಸರಕ್ಕೆ ಕಾರಣವಾಗಿತ್ತು. ಆದರೆ ಆ ಸಮಸ್ಯೆಗೆ ಇನ್ನು ಕೆಲವೇ ದಿನಗಳಲ್ಲಿ ಫುಲ್ ಸ್ಟಾಪ್ ಬೀಳುವ ನಿರೀಕ್ಷೆ ಕಾಣುತ್ತಿದೆ.

KaiOS

KaiOS

KaiOS ಒಂದು ವೆಬ್ ಬೇಸ್ ಆಗಿರುವ ಪ್ಲಾಟ್ ಫಾರ್ಮ್ ಆಗಿದ್ದು, ಬಳಕೆದಾರರು HTML5, ಜಾವಾ ಸ್ಕ್ರಿಪ್ಟ್ ಮತ್ತು ಸಿಎಸ್ ಎಸ್ ನ್ನು ಬಳಸುವ ವೇದಿಕೆಯಾಗಿದೆ. ಭಾರತದಲ್ಲಿ ಜಿಯೋಫೋನ್ ನಿಂದಾಗಿ ಜು ಶೇಕಡಾ 15 ರಷ್ಟು ಮೊಬೈಲ್ OS ಮಾರ್ಕೆಟ್ ನ್ನು ಪ್ರವೇಶಿಸಿ ಆಪಲ್ IOS ನಂತರ ಎರಡನೇ ಅತೀ ಹೆಚ್ಚು ಭಾರತದಲ್ಲಿ ಬಳಕೆ ಮಾಡುವ OS ಆಗಿ ಗುರುತಿಸಿಕೊಂಡಿದೆ.

Best Mobiles in India

English summary
Grab Jio Phone With Rs.500 Discount on PayTM Mall. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+