Home
ಮೊಬೈಲ್

Vivo V9 ಬೆಲೆಯಲ್ಲಿ ರೂ.7750 ಕಡಿತ: ಫ್ಲಿಪ್‌ಕಾರ್ಟಿನಲ್ಲಿ ಮಾತ್ರ..!

By Srinidhi

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಆರಂಭಿಸಿದ ವಿವೋ V9 ಸ್ಮಾರ್ಟ್ ಫೋನ್, ಐಫೋನ್ X ಮಾದರಿಯಲ್ಲಿ ಮೊದಲ ಬಾರಿಗೆ ನೋಚ್ ಡಿಸ್‌ಪ್ಲೇ ಹೊಂದಿದ ಆಂಡ್ರಾಯ್ಡ್ ಫೋನ್ ಎನ್ನಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಭಾರೀ ಪ್ರಮಾಣದ ಬೇಡಿಕೆಯನ್ನು ಸೃಷ್ಠಿಸಿದಲ್ಲದೇ, ಅನೇಕ ಸ್ಮಾರ್ಟ್‌ಫೋನ್ ವಿನ್ಯಾಸಕ್ಕೆ ಸ್ಪೂರ್ತಿಯನ್ನು ನೀಡಿತ್ತು. ಸದ್ಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರೀ ರಿಯಾಯಿತಿ ಆಫರ್ ಲಭ್ಯವಿದೆ. ಇದು ಕೆಲವೇ ಗಂಟೆಗಳು ಮಾತ್ರ.

Vivo V9 ಬೆಲೆಯಲ್ಲಿ ರೂ.7750 ಕಡಿತ: ಫ್ಲಿಪ್‌ಕಾರ್ಟಿನಲ್ಲಿ ಮಾತ್ರ..!

ಅಮೆಜಾನ್ ಪ್ರೈಮ್ ಡೇ ಸೇಲ್ ವಿರುದ್ಧವಾಗಿ ಫ್ಲಿಪ್‌ಕಾರ್ಟ್ ಆರಂಭಿಸಿರುವ 'ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್' ಅಂಗವಾಗಿ ವಿವೋ V9 ಸ್ಮಾರ್ಟ್ ಫೋನ್ ಮೇಲೆ ರೂ.7750 ರಷ್ಟು ಕಡಿತವನ್ನು ಮಾಡಿದ್ದಾರೆ. ನೀವು ಸಹ ವಿವೋ V9 ಸ್ಮಾರ್ಟ್ ಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದರೇ ಇದೊಂದು ಸುವರ್ಣ ಅವಕಾಶವಾಗಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಯಾದ ಮೇಲೆ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣಧ ರಿಯಾಯಿತಿಗೆ ಮಾರಾಟವಾಗುತ್ತಿದೆ.

ಎಕ್ಸ್‌ಚೇಂಜ್ ಲಭ್ಯವಿದೆ:

ಎಕ್ಸ್‌ಚೇಂಜ್ ಲಭ್ಯವಿದೆ:

ವಿವೋ V9 ಸ್ಮಾರ್ಟ್‌ಫೋನ್ ಮೇಲೆ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ನಿಮ್ಮ ಹಳೇಯ ಸ್ಮಾರ್ಟ್‌ಫೋನ್ ಅನ್ನು ನೀಡಿ ಫ್ಲಿಪ್‌ಕಾರ್ಟ್‌ನಲ್ಲಿ ಹೊಸದಾಗಿ ವಿವೋ V9 ಸ್ಮಾರ್ಟ್ ಫೋನ್ ಖರೀದಿಸಿದರೆ ರೂ.3000 ಕಡಿತವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್ ರೂ.19940ಕ್ಕೆ ಮಾರಾಟವಾಗುತ್ತಿದೆ.

10% ಕಡಿತ ಸಹ ಇದೆ:

10% ಕಡಿತ ಸಹ ಇದೆ:

ಇದೇ ಸಂದರ್ಭದಲ್ಲಿ ವಿವೋ V9 ಸ್ಮಾರ್ಟ್‌ಫೋನ್ ಖರೀದಿಸುವವರಿಗೆ SBI ಹೊಸದೊಂದು ಆಫರ್ ನೀಡುತ್ತಿದೆ. SBI ಕ್ರೆಡಿಟ್ ಕಾರ್ಡ್ ಮೂಲಕ ನೀವು ಫ್ಲಿಪ್‌ಕಾರ್ಟಿನಲ್ಲಿ ವಿವೋ V9 ಸ್ಮಾರ್ಟ್ ಫೋನ್ ಖರೀದಿ ಮಾಡಿದರೆ ಶೇ. 10% ಇನ್ಸೆಂಟ್ ಕ್ಯಾಷ್ ಬ್ಯಾಕ್ ಅನ್ನು ನೀಡಲು ಮುಂದಾಗಿದೆ. ಎಕ್ಸ್‌ಚೇಂಜ್ ಮತ್ತು ಕ್ಯಾಷ್ ಬ್ಯಾಕ್ ನಿಂದಾಗಿ ನೀವು ಒಟ್ಟು ರೂ.7750 ಕಡಿತವನ್ನು ಪಡೆದುಕೊಳ್ಳಬಹುದಾಗಿದೆ.

ಐಫೋನ್ X ಮಾದರಿಯ ಡಿಸ್‌ಪ್ಲೇ:

ಐಫೋನ್ X ಮಾದರಿಯ ಡಿಸ್‌ಪ್ಲೇ:

ಆಂಡ್ರಾಯ್ಡ್ ನಲ್ಲಿ ಮೊದಲ ಬಾರಿಗೆ ಐಫೋನ್ X ಮಾದರಿಯ ಡಿಸ್‌ಪ್ಲೇ ಹೊಂದಿದ ವಿವೋ V9 ಸ್ಮಾರ್ಟ್ ಫೋನ್ FHD+ ಗುಣಮಟ್ಟದಿಂದ ಕೂಡಿದ್ದು, 6.3 ಇಂಚಿನ 19:9 ಅನುಪಾತದ ಡಿಸ್‌ಪ್ಲೇಯಾಗಿದ್ದು, 90% ಸ್ಕ್ರಿನ್ ಟು ಬಾಡಿ ಅನುಪಾತವನ್ನು ಹೊಂದಿದೆ. ಇದರಿಂದಾಗಿ ಈ ಸ್ಮಾರ್ಟ್‌ಫೋನಿನಲ್ಲಿ ವಿಡಿಯೋ ನೋಡುವ ಅನುಭವವು ಉತ್ತಮವಾಗಿರಲಿದೆ.

ಬೆಸ್ಟ್ ಹಾರ್ಡ್‌ವೇರ್:

ಬೆಸ್ಟ್ ಹಾರ್ಡ್‌ವೇರ್:

ವಿವೋ V9 ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 626 ಪ್ರೋಸೆಸರ್ ಅಳವಡಿಸಲಾಗಿದ್ದು, ಇದರೊಂದಿಗೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಮೆಮೊರಿ ಹೆಚ್ಚಿಸಿಕೊಳ್ಳುವ ಆಯ್ಕೆಯ ಮೂಲಕ 256GB ವರೆಗೆ ವಿಸ್ತರಿಸುವ ಅವಕಾಶವಿದೆ. ಅಲ್ಲದೇ ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದು.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ವಿವೋ V9 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 16 MP ಮತ್ತು 5 MPಯ ಡ್ಯುಯಲ್ ಕ್ಯಾಮರಾ ಗಳನ್ನು ಕಾಣಬಹುದಾಗಿದ್ದು, ಇದು ಅಲ್ಟ್ರಾ HDR ಮೋಡ್ ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಲು ಅವಕಾಶವನ್ನು ಮಾಡಿಕೊಡಲಿದೆ. ಉತ್ತಮವಾದ ಚಿತ್ರಗಳನ್ನು ಇದರಲ್ಲಿ ಸೆರೆಹಿಡಿಯಬಹುದು.

24MP ಸೆಲ್ಪೀ ಕ್ಯಾಮೆರಾ:

24MP ಸೆಲ್ಪೀ ಕ್ಯಾಮೆರಾ:

ವಿವೋ V9 ಸ್ಮಾರ್ಟ್ ಫೋನಿನಲ್ಲಿ ಸೆಲ್ಫಿಗಾಗಿಗೆ ಬೆಸ್ಟ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 24MP ಕ್ಯಾಮೆರಾ AI ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಲಿದೆ. ಇದು ಗುಣಮಟ್ಟದ ಸೆಲ್ಫಿಗಳನ್ನು ಕ್ಲಿಕ್ ಮಾಡಲಿದೆ.

Best Mobiles in India

English summary
Grab Vivo V9 at Discount of Rs. 7750 on Flipkart. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+