ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

Posted By:

ಆಂಡ್ರಾಯ್ಡ್‌ ಮೊಬೈಲ್‌ ಬಳಸುವವರಿಗೆ ಗೂಗಲ್‌ ಪ್ಲೇ ಸ್ಟೋರ್‌ ಚಿರಪರಿಚಿತ. ಸಾಕಷ್ಟು ಆಪ್‌ಗಳನ್ನು ಇಲ್ಲಿ ಇದ್ದು ನಮಗೆ ಬೇಕಾದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ ಆಂಡ್ರಾಯ್ಡ್ ಆಪ್‌ಗಳಲ್ಲಿ ಕೆಲವೊಂದು ಆಪ್‌ಗಳನ್ನು ಗೂಗಲ್‌ ತನ್ನ ವೈಯಕ್ತಿಕ ಕಾರಣದಿಂದ ತನ್ನ ಪ್ಲೇ ಸ್ಟೋರ್‌ನಲ್ಲಿ ಇರಿಸಲು ಅವಕಾಶ ನೀಡಿಲ್ಲ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅವಕಾಶ ನೀಡದಿದ್ದರೂ ಈ ಆಪ್‌ಗಳನ್ನು ಜನ ಡೌನ್‌ಲೋಡ್‌ ಮಾಡುತ್ತಿದ್ದಾರೆ ಮತ್ತು ಈ ಆಪ್‌ನ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಗಿಜ್ಬಾಟ್‌ ತನ್ನ ಪ್ರೀತಿಯ ಓದುಗರಿಗಾಗಿ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿಲ್ಲದ ಜನರ ಮೆಚ್ಚುಗೆಗಳಿಸಿದ ಟಾಪ್‌-6 ಆಪ್‌ಗಳ ಮಾಹಿತಿ ಮತ್ತು ಡೌನ್‌ಲೋಡ್‌ ಲಿಂಕ್‌ಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ಈ ಆಪ್‌ಗಳು ನಿಮಗೆ ಇಷ್ಟವಾದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
TubeMate

TubeMate

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಯುಟ್ಯೂಬ್‌ ವೀಡಿಯೋ ಡೌನ್‌ಲೋಡ್‌ ಮಾಡಲು ಬಹಳಷ್ಟು ಜನ ಈ ಅಪ್ಲಿಕೇಶನ್‌ ಬಳಸುತ್ತಾರೆ. ಹಿಂದೆ ಈ ಆಪ್‌ ಆದರೆ ನೀವು ಈ ಆಪ್‌ ಮೂಲಕ ವೀಡಿಯೋ ಡೌನ್‌ಲೋಡ್‌ ಮಾಡಬಹುದು
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ : TubeMate

AdAway

AdAway

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಸ್ಮಾರ್ಟ‌ಫೋನ್‌ಲ್ಲಿ ಕೆಲವೊಂದು ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಬೇಕೆಂದಿದ್ದರೆ ಈ ಆಪ್‌ನ್ನು ಡೌನ್‌ಲೋಡ್ ಮಾಡಿ ಬ್ಲಾಕ್‌ ಮಾಡಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ: AdAway

Snes9x

Snes9x

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

Super Nintendo Entertainment System (SNES) ಬಹಳಷ್ಟು ವೀಡಿಯೋ ಗೇಮ್‌ಗಳನ್ನು ತಯಾರಿಸಿದ್ದಾರೆ. ಈ ಆಪ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿಲ್ಲ. ಈ ಆಪ್‌ ಡೌನ್‌ಲೋಡ್ ಮಾಡಿ ನೀವು SNES ಕಂಪೆನಿಯ ಗೇಮ್‌ಗಳನ್ನು ಆಡಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ: Snes9x

Grooveshar

Grooveshar

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಮ್ಯೂಸಿಕ್‌ಗಾಗಿ ಮೀಸಲಾದ ವೆಬ್‌ಸೈಟ್‌ Grooveshark.ಕಾರಣಾಂತರಿಗಳಿಂದ ಇದು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿಲ್ಲ. ಆದರೆ ನೀವು ಇದನ್ನು Grooveshark ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ : Grooveshar

Amazon Appstore

Amazon Appstore

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಗೂಗಲ್‌ ಪ್ಲೇಸ್ಟೋರ್‌ನ ಪ್ರಬಲ ಪ್ರತಿಸ್ಪರ್ಧಿ Amazon Appstore.2011,ಮಾರ್ಚ 22ರಂದು ಅಧಿಕೃತವಾಗಿ ಈ ಆಪ್‌ ಸ್ಟೋರ್‌ ಆರಂಭವಾಯಿತು.ಅಮೆರಿಕ,ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌,ಸ್ಪೇನ್‌,ಇಟಲಿಯಲ್ಲಿ ಮಾತ್ರ ಈಗ ಲಭ್ಯವಿದೆ.ಹೀಗಾಗಿ ಇದನ್ನೂ ಯಾವುದೇ ಕಾರಣಕ್ಕೂ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಸೇರಿಸಲು ಸಾಧ್ಯವಿಲ್ಲ.
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ : Amazon Appstore

TV Portal

TV Portal

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

TV Portal ಆಪ್‌ ಮೂಲಕ ನೀವು ಸಾವಿರಕ್ಕಿಂತಲೂ ಹೆಚ್ಚು ಪ್ರಖ್ಯಾತ ಮೂವಿಗಳನ್ನು ಎಚ್‌ಡಿ ಗುಣಮಟ್ಟದಲ್ಲಿ ವೀಕ್ಷಿಸಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ : TV Portal

 Dood’s Music Streamer

Dood’s Music Streamer

ಪ್ಲೇಸ್ಟೋರ್‌ನಲ್ಲಿಲ್ಲದ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಬಹಳಷ್ಟು ಮ್ಯೂಸಿಕ್‌ ಆಪ್‌ಗಳನ್ನು ಬಳಸಬೇಕಾದರೆ ಅದಕ್ಕೆ ಪಾವತಿ ಮಾಡಿ ಮ್ಯೂಸಿಕ್‌ಗಳನ್ನು ಕೇಳಬೇಕಾಗುತ್ತದೆ.ಆದರೆ ಈ ಅಪ್ಲಿಕೇಶನ್‌ ನಿಮ್ಮಲ್ಲಿದ್ದರೆ ಉಚಿತವಾಗಿ ಮ್ಯೂಸಿಕ್‌ ಕೇಳಬಹುದು.
ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ : Dood's Music Streamer

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot