Subscribe to Gizbot

ಈ ಚಿನ್ನದ ಮೊಬೈಲ್ ಬೆಲೆ ಎಷ್ಟು ಗೊತ್ತಾ?

Posted By: Super
ಈ ಚಿನ್ನದ ಮೊಬೈಲ್ ಬೆಲೆ ಎಷ್ಟು ಗೊತ್ತಾ?

 

ಇದು ಸಾದಾ ಸೀದಾ ಸ್ಮಾರ್ಟ್ ಫೋನಲ್ಲ. ಚಿನ್ನದ ಸ್ಮಾರ್ಟ್ ಫೋನ್. ನಿಮಗೆ ಫೋನ್ ಗಳ ಬಗ್ಗೆ ಕ್ರೇಝ್ ಇದ್ದರೆ, ದುಡ್ಡು ಖರ್ಚು ಮಾಡಲು ರೆಡಿ ಇದ್ರೆ ಈ ಫೋನ್ ನಿಮಗೆ ಸಖತ್ ಒಪ್ಪಿಗೆಯಾಗುತ್ತೆ. ಇದೆಂಥಾ ಫೋನಿರಬಹುದು? ಇದನ್ನು ಯಾವ ಕಂಪನಿ ತಯಾರಿಸಿದೆ ಎಂದು ಯೋಚಿಸುತ್ತಿದ್ದರೆ ಮುಂದಿದೆ ಇದಕ್ಕೆ ಉತ್ತರ.

ಗ್ರೆಸ್ಸೊ ಮೊಬೈಲ್ ಕಂಪನಿ ಗ್ರೆಸ್ಸೊ ಗ್ರ್ಯಾಂಡ್ ಪ್ರಿಮಿಯರ್ ಎಂಬ ವಿನೂತನ ಚಿನ್ನದ ಮೊಬೈಲನ್ನು ಹೊರತರುತ್ತಿರುವುದಾಗಿ ಘೋಷಿಸಿದೆ. ಈ ಮೊಬೈಲ್ ಸಿಂಬಿಯಾನ್ S40 ಆಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯನಿರ್ವಹಿಸಲಿದೆ.

ಗ್ರೆಸ್ಸೊ ಗ್ರ್ಯಾಂಡ್ ಪ್ರಿಮಿಯರ್ ವಿಶೇಷತೆ:

* 18 k ಚಿನ್ನದ ಹೊದಿಕೆ

* ಒಟ್ಟು 150 ಗ್ರಾಂ ಚಿನ್ನದ ಬಳಕೆ

* 135-ಕ್ಯಾರೆಟ್ ಇಂದ್ರ ನೀಲ ಮಣಿ ಅಂಶ

* 121 ಎಂಎಂ x 46 ಎಂಎಂ x12 ಎಂಎಂ ಸುತ್ತಳತೆ

* 190 ಗ್ರಾಂ ತೂಕ

ವಿನ್ಯಾಸಕ್ಕೇ ಹೆಚ್ಚು ಮಹತ್ವ ಕೊಟ್ಟು ಈ ಫೋನನ್ನು ತಯಾರಿಸಲಾಗಿದೆ. ಈ ಫೋನಿನಲ್ಲಿ ಹೆಚ್ಚು ತಂತ್ರಜ್ಞಾನದ ಆಯ್ಕೆಯಿಲ್ಲದಿರುವುದು ಸ್ವಲ್ಪ ಹಿನ್ನಡೆಯುಂಟುಮಾಡಿದರೂ, ಪ್ರತಿಷ್ಟೆಗಾಗಿ ಮೊಬೈಲ್ ಖರೀದಿಸುವವರಿಗೆ ಇದು ಒಳ್ಳೆ ಆಯ್ಕೆ.

ಈ ಮೊಬೈಲ್ ನಲ್ಲಿ ಬಳಸಿರುವ ಹರಳಿಗೆ ಸ್ಕ್ರ್ಯಾಚ್ ರೆಸಿಸ್ಟಂಟ್ ಇದೆ. ಈ ಗ್ರೆಸ್ಸೊ ಗ್ರ್ಯಾಂಡ್ ಪ್ರಿಮಿಯರ್ ಮೊಬೈಲ್ ಈ ತಿಂಗಳಿನಲ್ಲೇ ತೆರೆಕಾಣುವುದಾಗಿ ತಿಳಿದುಬಂದಿದೆ. ಈ ಮೊಬೈಲ್ ಬೆಲೆಯನ್ನು ಕೇಳಿದರೆ ನೀವೇ ಬೆರಗಾಗಿ ಹೋಗ್ತೀರ. ಈ ಮೊಬೈಲ್ ಬೆಲೆ ಬರೋಬ್ಬರಿ 25,00,000 ರೂಪಾಯಿ ಎಂದು ಕಂಪನಿ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot