Home
ಮೊಬೈಲ್

15 ಸಾವಿರ ರೂಪಾಯಿ ಒಳಗಡೆ ಇರುವ 8 ಎಚ್‌ಡಿ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು

By Ashwath

ಸ್ಮಾರ್ಟ್‌ಫೋನ್‌ ಖರೀದಿಸುವ ಬಹಳಷ್ಟು ಮಂದಿ ಐದು ಇಂಚು ಸ್ಕ್ರೀನ್‌ ಅದರಲ್ಲೂ ಎಚ್‌ಡಿ ಸ್ಕ್ರೀನ್‌,ಕ್ವಾಡ್‌ ಕೋರ್‌ ಪ್ರೊಸೆಸರ್‌, ಶಕ್ತಿಶಾಲಿ ಬ್ಯಾಟರಿಯಿರುವ ಸ್ಮಾರ್ಟ್‌ಫೋನ್‌ಗಳನ್ನು ಹುಡುಕಿ ಖರೀದಿಸುತ್ತಾರೆ. ವಿಶ್ವದ ಟಾಪ್‌ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳಲ್ಲಿ ಈ ಎಲ್ಲಾ ವಿಶೇಷತೆಗಳಿದ್ದರೂ ಬೆಲೆ ಮಾತ್ರ ಹೆಚ್ಚಿರುತ್ತದೆ.

ಉದಾಹರಣೆಗೆ ವಿಶ್ವದ ನಂಬರ್‌ ಒನ್‌ ಕಂಪೆನಿ ಸ್ಯಾಮ್‌ಸಂಗ್‌ನ ಗೆಲಾಕ್ಸಿ ಎಸ್‌4 ಮಿನಿ 22,400 ಬೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಫೋನ್‌ 4.27 ಇಂಚಿನ ಸ್ಕ್ರೀನ್‌ ಹೊಂದಿದ್ದರೂ 540 x 960 ಪಿಕ್ಸೆಲ್‌ ಹೊಂದಿರುವ ಕ್ಯೂ ಎಚ್‌ಡಿ ಸ್ಕ್ರೀನ್‌ ಹೊಂದಿದೆ.

ಆದರೆ ಕೆಲವು ದೇಶೀಯ ಮತ್ತು ಚೈನಾ ಕಂಪೆನಿಗಳು 15 ಸಾವಿರ ರೂಪಾಯಿ ಒಳಗಡೆ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌‌‌ಫೋನ್‌ ಬಿಡುಗಡೆ ಮಾಡುತ್ತವೆ. ಸದ್ಯ ಎಚ್‌ಡಿ ಸ್ಕ್ರೀನ್‌ ಸ್ಮಾರ್ಟ್‌ಫೋನ್‌‌ಗಳ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಎಚ್‌ಡಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ.

ಈಗಾಗಲೇ ಗೂಗಲ್‌ ಮಾಲೀಕತ್ವದ ಮೊಟರೋಲಾ ಕಡಿಮೆ ಬೆಲೆಯಲ್ಲು ಮೋಟೋ ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು,ಈ ಫೋನ್‌ 4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌,329ಪಿಪಿಐ)ಹೊಂದಿದೆ. ಅಷ್ಟೇ ಅಲ್ಲದೇ ಭಾರತದ ಮಾರುಕಟ್ಟೆಯಲ್ಲಿ ಈ ಫೋನ್‌ಗಳು 15 ಸಾವಿರ ರೂಪಾಯಿ ಒಳಗಡೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಈ ಫೋನ್‌ ಜನವರಿಯಲ್ಲಿ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಈಗ ಹೊಸದಾಗಿ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗಾಗಿ ಮಾರುಕಟ್ಟೆಯಲ್ಲಿರುವ 15 ಸಾವಿರ ರೂಪಾಯಿ ಒಳಗಡೆಯಿರುವ 8 ಎಚ್‌ಡಿ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ನೋಡಿಕೊಂಡು ಹೋಗಿ. ಇಷ್ಟವಾದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ಝೋಲೋ ಎ 1000

ಝೋಲೋ ಎ 1000

ಬೆಲೆ:8009

ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌
4 GB ಆಂತರಿಕ ಮೆಮೊರಿ
1 GB ರ್‍ಯಾಮ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖಣರಣಾ ಸಾಮರ್ಥ್ಯ
2100 mAh ಬ್ಯಾಟರಿ

   ವಿಡಿಯೋಕಾನ್‌ ಎ55 ಎಚ್‌ಡಿ

ವಿಡಿಯೋಕಾನ್‌ ಎ55 ಎಚ್‌ಡಿ

ಬೆಲೆ:12,760

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಸ್ಕ್ರೀನ್‌(720X1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್‌ ಓಎಸ್
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB ರ್‍ಯಾಮ್‌
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
8 ಎಂಪಿ ಹಿಂದುಗಡೆ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್‌
3.2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌, ಜಿಪಿಎಸ್‌/ಎ- ಜಿಪಿಎಸ್‌
2,000mAh ಬ್ಯಾಟರಿ

  ಐಬಾಲ್ ಆಂಡಿ 4.7 ಜಿ

ಐಬಾಲ್ ಆಂಡಿ 4.7 ಜಿ

ಬೆಲೆ:15,499

ವಿಶೇಷತೆ :
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಟಚ್‌ಸ್ಕ್ರೀನ್(1280 x 720 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1 GB ರ್‍ಯಾಮ್‌
16 GB ಆಂತರಿಕ ಮೆಮೋರಿ
12 ಎಂಪಿ ಹಿಂದುಗಡೆ ಕ್ಯಾಮೆರಾ(ಆಟೋ ಫೋಕಸ್‌,ಎಲ್‌ಇಡಿ ಫ್ಲ್ಯಾಶ್‌)
5ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌, ಜಿಪಿಎಸ್‌
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2200 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯಾಗ್ನಸ್

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಮ್ಯಾಗ್ನಸ್

ಬೆಲೆ:14,390

ವಿಶೇಷತೆ:
5 ಇಂಚಿನ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆ‌ಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
12 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
2000 mAh ಬ್ಯಾಟರಿ

   ಝೋಲೋ ಕ್ಯೂ 900

ಝೋಲೋ ಕ್ಯೂ 900

ಬೆಲೆ:11,690

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಎಚ್‌ಡಿ ಟಿಎಫ್‌ಟಿ ಸ್ಕ್ರೀನ್‌(720x1280)
ಆಂಡ್ರಾಯ್ಡ್‌4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
4GB ಆಂತರಿಕ ಮೆಮೊರಿ
ಬಿಎಸ್‌ಐ ಸೆನ್ಸರ್‌ ಹೊಂದಿರುವ 8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1800mAh ಬ್ಯಾಟರಿ

 ಝೋಲೋ ಪ್ಲೇ

ಝೋಲೋ ಪ್ಲೇ

ಬೆಲೆ:14,290

ವಿಶೇಷತೆ
4.7 ಇಂಚಿನ ಎಚ್‌ಡಿ ಐಪಿಎಸ್‌‌ ಟಚ್‌ಸ್ಕ್ರೀನ್‌(1280x720 ಪಿಕ್ಸೆಲ್)
ಆಂಡ್ರಾಯ್ಡ್‌ 4.1.1 ಜೆಲ್ಲಿ ಬೀನ್‌ ಓಎಸ್‌
1.5 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1 GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
4 GB ಆಂತರಿಕ ಮೆಮೋರಿ
1 GB RAM
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2000 mAh ಬ್ಯಾಟರಿ

  ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಎ 116

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಎ 116

ಬೆಲೆ:11,950

ವಿಶೇಷತೆ:
5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌)
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB ರ್‍ಯಾಮ್‌
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
2,100 mAh ಬ್ಯಾಟರಿ

ಝೋಲೋ ಕ್ಯೂ 1000

ಝೋಲೋ ಕ್ಯೂ 1000

ಬೆಲೆ:12,164

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಎಚ್‌ಡಿ ಐಪಿಎಸ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1 GB ರ್‍ಯಾಮ್‌
4 GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2100 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+