ಏಪ್ರಿಲ್‌ನಲ್ಲಿ ದೇಶದಲ್ಲಿ ಬಿಡುಗಡೆಯಾಗುತ್ತಿರುವ 5 ಕಡಿಮೆ ಬೆಲೆಯ 5G ಫೋನ್‌ಗಳಿವು!
ಮೊಬೈಲ್ ತಂತ್ರಜ್ಞಾನವು ನಿರಂತರವಾಗಿ ಬದಲಾಗುತ್ತಿದ್ದು, ಪ್ರತಿ ತಿಂಗಳು ಹಲವಾರು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತವೆ. 2025ರ ಏಪ್ರಿಲ್‌ನಲ್ಲಿ ಕೂಡ, ಹಲವು ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಮೋಟೋ, ಪೊಕೊ, ವಿವೋ ಮತ್ತು ಐಕ್ಯೂ ಕಂಪನಿಗಳು ಈಗಾಗಲೇ ತಮ್ಮ ಮುಂಬರುವ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಇದೇ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗುವುದನ್ನು ಖಚಿತಪಡಿಸಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಏಪ್ರಿಲ್ 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ವೈಶಿಷ್ಟ್ಯಗಳು ಏನಿವೆ ಎಂಬುದನ್ನು ನೋಡೋಣ ಬನ್ನಿ.
ಪೊಕೊ ಸಿ 71
ಪೊಕೊ ತನ್ನ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗಕ್ಕೆ ಹೊಸ ಸೇರ್ಪಡೆಯಾದ 'ಪೊಕೊ ಸಿ 71' ಸ್ಮಾರ್ಟ್‌ಫೋನ್ನನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನ್ 6.88-ಇಂಚಿನ HD+ 120Hz ಡಿಸ್ಪ್ಲೇಯನ್ನು ಹೊಂದಿದ್ದು, ಟ್ರಿಪಲ್ ಟಿಯುವಿ ಪ್ರಮಾಣೀಕರಣವನ್ನು ಹೊಂದಿದೆ. ಇದು ಪ್ರೀಮಿಯಂ ಸ್ಪ್ಲಿಟ್ ಗ್ರಿಡ್ ವಿನ್ಯಾಸವನ್ನು ಹೊಂದಿದ್ದು, ಆಧುನಿಕ ಸೌಂದರ್ಯವನ್ನು ಒದಗಿಸುತ್ತದೆ. ಈ ಪೊಕೊ ಸಿ 71 ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಏಪ್ರಿಲ್ 4, 2025 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ.

ಮೋಟೋರೋಲಾ ಎಡ್ಜ್ 60 ಫ್ಯೂಷನ್
ಮೋಟೋರೋಲಾ ತನ್ನ ಹೊಸ ಮೋಟೋ ಎಡ್ಜ್ 60 ಫ್ಯೂಷನ್ ಅನ್ನು ಏಪ್ರಿಲ್ 2, 2025 ರಂದು ಭಾರತದಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಫ್ಲಿಪ್‌ಕಾರ್ಟ್ ಲ್ಯಾಂಡಿಂಗ್ ಪುಟದ ಪ್ರಕಾರ, ಈ ಮಾದರಿಯು 1.5K ಆಲ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಸಾಧನವು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಚಿಪ್‌ಸೆಟ್ ಅನ್ನು ಬಳಸುತ್ತದೆ. ಮುಂಭಾಗದಲ್ಲಿ 50MP ಸೋನಿ LYT 700 ಪ್ರಾಥಮಿಕ ಕ್ಯಾಮೆರಾ ಮತ್ತು 13MP ಸೆಕೆಂಡರಿ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ, 32MP ಮುಂಭಾಗದ ಕ್ಯಾಮೆರಾ ಇರುವ ನಿರೀಕ್ಷೆಯಿದೆ. ಬೆಲೆ ಕುರಿತಾದ ಮಾಹಿತಿಯುವ ಬಿಡುಗಡೆ ದಿನದಂದು ತಿಳಿಯಲಿದೆ.
Vivo T4 5G
Vivo T3 5G ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ಹೊಸ Vivo T4 5G ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಪರಿಚಯಸಲಾಗುತ್ತಿದೆ. 91Mobiles ವರದಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. Vivo T4 5G ಯ ವಿಶೇಷತೆಯಾದ 6.67-ಇಂಚಿನ ಪೂರ್ಣ-HD+ AMOLED ಕ್ವಾಡ್-ಕರ್ವ್ಡ್ ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಒದಗಿಸುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ.
iQOO Z10 5G
iQOO Z10 5G ಕೂಡ ಏಪ್ರಿಲ್ 4 ರಂದು ಎರಡು ಶೇಖರಣಾ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಆರಂಭಿಕ ಬೆಲೆ ₹21,999 ಆಗಿದ್ದು, ₹2,000 ಬ್ಯಾಂಕ್ ಆಫರ್‌ನ್ನು ಒಳಗೊಂಡು, ಬಿಡುಗಡೆ ಸಮಯದಲ್ಲಿ ಇದರ ಪರಿಣಾಮಕಾರಿ ವೆಚ್ಚ ₹19,999 ಕ್ಕೆ ಇಳಿಯುತ್ತದೆ. iQOO Z10 120Hz ರಿಫ್ರೆಶ್ ದರದ 6.67-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 3 ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ.
Poco F7 Ultra
Poco ತನ್ನ ಹೊಸ ಫ್ಲ್ಯಾಗ್‌ಶಿಪ್ F7 Ultra ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ, ಇದು ಉನ್ನತ ಮಟ್ಟದ ಪ್ರೊಸೆಸರ್‌ಗಳು, IP68 ರೇಟಿಂಗ್ ಮತ್ತು 50MP ಪ್ರಾಥಮಿಕ ಸಂವೇದಕವನ್ನು ಹೊಂದಿದೆ. ಈ ಫೋನ್ ಈ ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. Poco F7 Ultra 6.67 ಇಂಚಿನ 2K 12-ಬಿಟ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ ಮತ್ತು 3200 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ ಬರುತ್ತದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ.


Click it and Unblock the Notifications








