ನಿಮ್ಮ ಸ್ಮಾರ್ಟ್‌ಫೋನ್ ಮಾಡಲಿದೆ ಇನ್ನಷ್ಟು ಸ್ಮಾರ್ಟ್ ಕಾರ್ಯಗಳು
ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗಳಿಗೂ ಇದರ ಗಾಳಿ ಬೀಸಿದೆ. ಕೆಲವೊಂದಷ್ಟೇ ಕಾರ್ಯಗಳನ್ನು ಮಾಡಲು ಸೀಮಿತವಾಗಿದ್ದು ಸ್ಮಾರ್ಟ್‌ಫೋನ್ ಇಂದು ನಮ್ಮ ಊಹೆಗೂ ನಿಲುಕದ ಕಾರ್ಯಗಳನ್ನು ನಡೆಸುತ್ತಿದೆ.
ಇಂದಿನ ಆಧುನಿಕ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬಳಕೆಯ ವಸ್ತುಗಳಾಗಿ ಮಾರ್ಪಟ್ಟಿವೆ. ಇಂದು ನಮ್ಮ ಸ್ಮಾರ್ಟ್‌ಫೋನ್ ಯಾವುದೆಲ್ಲಾ ಕೆಲಸಗಳನ್ನು ಮಾಡುತ್ತದೆ ಎಂಬುದಕ್ಕೆ ಲೆಕ್ಕವೇ ಇಲ್ಲ. ಮೀಟಿಂಗ್ ಸ್ಕೆಡ್ಯೂಲ್, ಪವರ್ ಪಾಯಿಂಟ್ ಪ್ರಸಂಟೇಶನ್, ರಿಮೈಂಡರ್, ಇಮೇಲ್, ಎಸ್‌ಎಮ್‌ಎಸ್, ವ್ಯವಹಾರ, ಸಾಮಾಜಿಕ ಅಪ್ಲಿಕೇಶನ್‌ಗಳ ಬಳಕೆ ಹೀಗೆ ನಮ್ಮದೇ ಮೊಬೈಲ್‌ಗಳನ್ನು ನಾವು ಬೇರೆ ಬೇರೆ ರೀತಿಯಲ್ಲಿ ಇಂದು ಬಳಸಿಕೊಳ್ಳುತ್ತಿದ್ದೇವೆ.

ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗಳಿಗೂ ಇದರ ಗಾಳಿ ಬೀಸಿದೆ. ಕೆಲವೊಂದಷ್ಟೇ ಕಾರ್ಯಗಳನ್ನು ಮಾಡಲು ಸೀಮಿತವಾಗಿದ್ದು ಸ್ಮಾರ್ಟ್‌ಫೋನ್ ಇಂದು ನಮ್ಮ ಊಹೆಗೂ ನಿಲುಕದ ಕಾರ್ಯಗಳನ್ನು ನಡೆಸುತ್ತಿದೆ. ಹಾಗಿದ್ದರೆ ಆ ಕಾರ್ಯಗಳೇನು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ.

ಟಿವಿ ನಿಯಂತ್ರಣ
ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಫ್ರಾ ರೆಡ್ ಸೆನ್ಸಾರ್‌ಗಳಿರುವುದರಿಂದ ನಿಮ್ಮ ಟಿವಿ, ಎಸಿ ಮೊದಲಾದವನ್ನು ಕುಳಿತಲ್ಲೇ ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದಾಗಿದೆ.

ಕ್ಲೌಡ್
ಕ್ಲೌಡ್ ಮೂಲಕ ದೊಡ್ಡ ಗಾತ್ರದ ಡಾಕ್ಯುಮೆಂಟ್‌ಗಳ ಕಾರ್ಯನಿರ್ವಹಣೆಯನ್ನು ಮಾಡಬಹುದಾಗಿದೆ. ಇದು ಹೆಚ್ಚಿನ ಮೆಮೊರಿಯನ್ನು ಒಳಗೊಂಡಿರುವುದರಿಂದ ಬಳಕೆದಾರರು ತಮ್ಮ ಗೂಗಲ್ ಖಾತೆಯನ್ನು ಡ್ರೈವ್ ಬಳಸಿಕೊಂಡು ಸಿಂಕ್ ಮಾಡಬಹುದಾಗಿದೆ.

ಕ್ಯಾಲೆಂಡರ್
ಫೋನ್‌ನ ಕ್ಯಾಲೆಂಡರ್ ನಿಮಗಿರುವ ಮುಖ್ಯ ಈವೆಂಟ್‌ಗಳ ಬಗ್ಗೆ ನಿಮಗೆ ಜ್ಞಾಪನೆಯನ್ನು ನೀಡುತ್ತದೆ. ಈ ಕ್ಯಾಲೆಂಡರ್‌ನಲ್ಲಿ ನೀವು ದಿನಾಂಕ ಮತ್ತು ಯಾವ ಈವೆಂಟ್‌ಗಳು ಎಂಬುದನ್ನು ದಾಖಲಿಸಬಹುದಾಗಿದೆ.

ವಾಯ್ಸ್ ಅಸಿಸ್ಟೆನ್ಸಿ
ಇಂದಿನ ಎಲ್ಲಾ ಫೋನ್‌ಗಳಲ್ಲಿ ಕೂಡ ಈ ವ್ಯವಸ್ಥೆ ಇದ್ದು ಜಿಪಿಎಸ್ ಆನ್ ಮಾಡಿಕೊಂಡು ನಿಮ್ಮ ಧ್ವನಿಯ ಮೂಲಕ ಕೈಯಲ್ಲಿ ಮಾಡಬಹುದಾದ ಕೆಲಸಗಳನ್ನು ನಿರ್ವಹಿಸಬಹುದಾಗಿದೆ. ಇಮೇಲ್ ರವಾನೆ, ಸ್ಥಳ ಹುಡುಕಾಟ ಮೊದಲಾದವುಗಳನ್ನು ಧ್ವನಿಯ ಮೂಲಕ ನಡೆಸಬಹುದಾಗಿದೆ.

ಬೇಡದ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುವುದು
ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳು ಇರುತ್ತವೆ. ಹಿನ್ನೆಲೆ ಮೆಮೊರಿಯನ್ನು ಬಳಸಿಕೊಂಡು ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಬಹುದಾಗಿದೆ. ಇದಕ್ಕಾಗಿ ನೀವು ಅಪ್ಲಿಕೇಶನ್ ಮ್ಯಾನೇಜರ್‌ಗೆ ಹೋಗಿ ಡಿಸೇಬಲ್ ಆಪ್ಶನ್ ಮೇಲೆ ಟ್ಯಾಪ್ ಮಾಡಬೇಕು.

ಕ್ರಾಸ್ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್‌ಗಳು
ನಿಮಗೆ ಕ್ರಾಸ್ ಪ್ಲಾಟ್‌ಫಾರ್ಮ್ ಅಪ್ಲಿಕೇಶನ್‌ಗಳು ಇಷ್ಟ ಎಂದಾದಲ್ಲಿ ನೀವು ಪುಶ್‌ಬುಲ್ಲೆಟ್ ಅಪ್ಲಿಕೇಶನ್ ಅನ್ನು ಹೊಂದಿರಬೇಕು. ಇದು ನಿಮ್ಮ ಡಿವೈಸ್‌ಗಳನ್ನು ಜೊತೆಯಾಗಿ ಕನೆಕ್ಟ್ ಮಾಡುವಲ್ಲಿ ಸಹಕಾರಿ. ಇದರಿಂದ ನೀವು ವಾಟ್ಸಾಪ್ ಸಂದೇಶಗಳು, ಎಸ್‌ಎಮ್‌ಎಸ್ ಮೊದಲಾದವುಗಳಿಗೆ ಉತ್ತರಿಸಬಹುದಾಗಿದೆ. ಅದೂ ಕೂಡ ನಿಮ್ಮ ಪಿಸಿಯಿಂದ ನೇರವಾಗಿ ಈ ಕಾರ್ಯಗಳನ್ನು ಮಾಡಬಹುದಾಗಿದ್ದು, ಸ್ಮಾರ್ಟ್‌ಫೋನ್‌ನಿಂದ ಪಿಸಿಗೆ ನೇರ ಕಾಪಿ ಪೇಸ್ಟ್ ಕ್ರಿಯೆ ಮಾಡಬಹುದಾಗಿದೆ.


Click it and Unblock the Notifications








