Home
ಮೊಬೈಲ್

ಅಭಿಮಾನಿಗಳಿಗೆ ಮಾತ್ರ: ಬಿಡುಗಡೆಗೂ ಮುನ್ನವೇ ಉಚಿತವಾಗಿ ಶಿಯೋಮಿ ಸ್ಮಾರ್ಟ್‌ಫೋನ್..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಸತನಗಳಿಗೆ ಸಾಕ್ಷಿಯಾಗಲು ಮುಂದಾಗಿರುವ ಶಿಯೋಮಿ, ನೂತನವಾಗಿ ಲಾಂಚ್ ಆಗಲಿರುವ ಸ್ಮಾರ್ಟ್‌ಫೋನ್ ಅನ್ನು ತನ್ನ ಅಭಿಮಾನಿಗಳಿಗೆ ಉಚಿತವಾಗಿ ನೀಡಲಿದೆ ಎನ್ನಲಾಗಿದೆ. ಈ ಮೂಲಕ ತನ್ನ ನೂತನ ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರ್ಕೆಟ್ ಮಾಡಲು ಮುಂದಾಗಿದೆ. ಆಗಸ್ಟ್ 8 ರಂದು ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಕ್ಯಾಮೆರಾ ಟೆಸ್ಟ್ ಮಾಡಲು ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಬಿಡುಗಡೆಗೂ ಮುನ್ನವೇ ಉಚಿತವಾಗಿ ಶಿಯೋಮಿ ಸ್ಮಾರ್ಟ್‌ಫೋನ್..!

ಈ ಹಿಂದೆ Mi A1 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದ ಸಂದರ್ಭದಲ್ಲಿಯೂ ಕ್ಯಾಮೆರಾ ಚಾಲೆಂಜ್ ನೀಡಿದ್ದ ಶಿಯೋಮಿ, ಈ ಬಾರಿ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಸ್ಪರ್ಧೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿಯೇ Mi A2 ಸ್ಕ್ವಾಡ್ ವೊಂದನ್ನು ರಚಿಸುತ್ತಿದ್ದು, ಇದರಲ್ಲಿ ಬಳಕೆದಾರರಿಗೆ ಉಚಿತವಾಗಿ ಸ್ಮಾರ್ಟ್‌ಫೋನ್ ಅನ್ನು ನೀಡಲಿದೆ. ಅದರಲ್ಲಿ ಫೋಟೋಗಳನ್ನು ಕ್ಲಿಕಿಸುವಂತೆ ಮನವಿ ಮಾಡಿದೆ. ಉತ್ತಮವಾಗಿ ಪೋಟೋ ಕ್ಲಿಕಿಸಿದವರಿಗೆ ಬಹುಮಾನವನ್ನು ನೀಡಲಿದೆ.

ಸ್ಮಾರ್ಟ್‌ಫೋನ್ ಫೋಟೋಗ್ರಫಿಗಾಗಿ:

ಸ್ಮಾರ್ಟ್‌ಫೋನ್ ಫೋಟೋಗ್ರಫಿಗಾಗಿ:

ಶಿಯೋಮಿ ಸ್ಮಾರ್ಟ್‌ಫೋನ್ ಫೋಟೋಗ್ರಫಿಯನ್ನು ಬೆಂಬಲಿಸುವ ಸಲುವಾಗಿ Mi A2 ಸ್ಕ್ವಾಡ್ ಕಲ್ಪನೆಯನ್ನು ಹುಟ್ಟಿ ಹಾಕಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಅನ್ನು ನೀಡುವ ಮೂಲಕ ಅವರಿಂದಲೇ ಫೋಟೋವನ್ನು ತೆಗೆಸುವ ಕಾರ್ಯವನ್ನು ಮಾಡುತ್ತಿದೆ. ಇದರಿಂದಾಗಿ ಬಳಕೆದಾರರಿಂದಲೇ ಫೋನಿನ ಮಾರ್ಕೆಟಿಂಗ್ ಮಾಡಿಸಲಿದೆ.

ಬಿಡುಗಡೆಗೂ ಮುನ್ನವೇ ಫೋನ್ ಬಳಕೆ ಮಾಡಬಹುದು:

ಬಿಡುಗಡೆಗೂ ಮುನ್ನವೇ ಫೋನ್ ಬಳಕೆ ಮಾಡಬಹುದು:

Mi A2 ಸ್ಕ್ವಾಡ್ ಒಟ್ಟು 15 ಮಂದಿಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಇರುವವರು ಶಿಯೋಮಿ Mi A2 ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಒಂದು ಸಮಯದ ವರೆಗೂ ಫೋನಿನಲ್ಲಿ ಫೋಟೋಗಳನ್ನು ತೆಗೆಯಬಹುದಾಗಿದೆ.

ಬಹುಮಾನ ಇದೆ:

ಬಹುಮಾನ ಇದೆ:

ಶಿಯೋಮಿ Mi A2 ಸ್ಮಾರ್ಟ್‌ಫೋನಿನಲ್ಲಿ ಫೋಟೋವನ್ನು ತೆಗೆಯುವ ಸಲುವಾಗಿ Mi A2 ಸ್ಕ್ವಾಡ್ ನಲ್ಲಿ ಸ್ಥಾನ ಪಡೆಯುವವರಿಗೆ ಬಹುಮಾನ ಇದೆ. ಶಿಯೋಮಿ Mi A2 ಸ್ಮಾರ್ಟ್‌ಫೋನ್ ಅನ್ನು ತಾವೇ ಇಟ್ಟು ಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಮೂವರು ವಿಜೇತರಿಗೆ ರೂ.5000 ಕೂಪನ್ ಅನ್ನು ಪಡೆದುಕೊಳ್ಳಬಹುದಾಗಿದೆ.

ವೆಬ್ ಸೈಟಿನಲ್ಲಿ:

ವೆಬ್ ಸೈಟಿನಲ್ಲಿ:

ನೀವು ಸಹ ಶಿಯೋಮಿ Mi A2 ಸ್ಮಾರ್ಟ್‌ಫೋನ್ ಫೋಟೋ ತೆಗೆಯುವ ಸಲುವಾಗಿ Mi A2 ಸ್ಕ್ವಾಡ್ ನಲ್ಲಿ ಸ್ಥಾನವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಶಿಯೋಮಿ ವೆಬ್ ಸೈಟಿನಲ್ಲಿ ಅವಕಾಶವನ್ನು ಮಾಡಿಕೊಡಲಾಗಿದೆ. ನೀವು ಅಲ್ಲಿ ಹೋಗಿ ಅರ್ಜಿಯೊಂದನ್ನು ತುಂಬಬೇಕಾಗಿದೆ. ತುಂಬಿದ ನಂತರದಲ್ಲಿ ನಿಮ್ಮದೊಂದು ಫೋಟೋ ವನ್ನು ಆಪ್‌ಲೋಡ್ ಮಾಡಬೇಕು. ಮಾಡಿದರೆ ನಿಮಗೆ ಫೋನ್ ದೊರೆಯಲಿದೆ.

ಆಗಸ್ಟ್‌ 8ಕ್ಕೆ ಲಾಂಚ್:

ಆಗಸ್ಟ್‌ 8ಕ್ಕೆ ಲಾಂಚ್:

ಈ ಸ್ಮಾರ್ಟ್‌ಫೋನ್ ಸ್ಪೇನ್ ಜುಲೈ 24 ರಂದು ಜಾಗತಿಕವಾಗಿ ಲಾಂಚ್ ಆಗಿದ್ದು, ಆಗಸ್ಟ್ 8 ರಂದು ಭಾರತೀಯ ಮಾರುಕಟ್ಟೆಗೆ ಪರಿಚಯವಾಗಲಿದೆ. ಆಂಡ್ರಾಯ್ಡ್ ಓನ್ ನಲ್ಲಿ ಕಾರ್ಯನಿರ್ವಹಿಸುವ ಶಿಯೋಮಿ Mi A2 ಸ್ಮಾರ್ಟ್‌ಫೋನ್, AI ಪೋಟ್ರೆಟ್ ಸೇರಿದಂತೆ ಅನೇಕ ವಿಶೇಷತೆಗಳನ್ನು ಹೊಂದಿದ್ದು, ಬಳಕೆದಾರರಿಗೆ ಬೆಸ್ಟ್ ಫೋನ್ ನೀಡಲು ಬೇಕಾಗಿರುವ ಎಲ್ಲಾ ಆಯ್ಕೆಗಳನ್ನು ಈ ಫೋನಿನಲ್ಲಿ ಶಿಯೋಮಿ ಅಳವಡಿಸಿದೆ.

Best Mobiles in India

English summary
Here is a change to get the Xiaomi Mi A2 for free of cost in India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+