Home
ಮೊಬೈಲ್

ಐಫೋನ್‌ ಬ್ಯಾಟರಿ ಲೈಫ್ ಹೆಚ್ಚಿಸಲು ಆಪಲ್ ಮಾಡುತ್ತಿದೆ ಪ್ಲಾನ್..!

By Gizbot Bureau

ವಿಶ್ವದ ಅಧ್ಬುತ ಮತ್ತು ಬೆಸ್ಟ್ ಪ್ರೊಡಕ್ಟ್ ಎಂದು ಹೆಸರುವಾಸಿಯಾಗಿರುವುದು ಆಪಲ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಇದನ್ನು ಬಳಕೆ ಮಾಡುವ ಕೆಲವು ಗ್ರಾಹಕರು ಆಗಾಗ ಆಪಲ್ ನ ಬ್ಯಾಟರಿ ಲೈಫ್ ಬಗ್ಗೆ ಪದೇ ಪದೇ ದೂರುಗಳನ್ನು ಹೇಳುತ್ತಲೇ ಇರುತ್ತಾರೆ. ಸದ್ಯ ಇತರೆ ಫೋನ್ ಗಳಿಗೆ ಕಾಂಪಿಟೇಷನ್ ಕೊಡುವಷ್ಟು ಆಪಲ್ ಫೋನ್ ನ ಬ್ಯಾಟರಿ ಫರ್ಫಾಮೆನ್ಸ್ ಇರುವುದಿಲ್ಲ ಎಂಬುದು ನಿಜ ಸಂಗತಿಯೇ ಆಗಿದೆ.

ಆದರೆ ಈ ಸಮಸ್ಯೆಗೆ ಹೊಸ ತಂತ್ರಜ್ಞಾನದಿಂದ ಇದಕ್ಕೆ ಪರಿಹಾರವನ್ನು ಆಪಲ್ ಕಂಡುಕೊಳ್ಳಲಿದೆ ಎಂದೆನಿಸುತ್ತದೆ. ಕೇವಲ ಐಫೋನ್ ಗಳಲ್ಲಿ ಮಾತ್ರವಲ್ಲ ಬದಲಾಗಿ ಆಪಲ್ ವಾಚ್ ಗಳಲ್ಲೂ ಈ ಸಮಸ್ಯೆಯಿದ್ದು ಅದಕ್ಕೂ ಕೂಡ ಪರಿಹಾರ ಸಿಗುವ ಸಾಧ್ಯತೆ ಇದೆ.

ಐಫೋನ್‌ ಬ್ಯಾಟರಿ ಲೈಫ್ ಹೆಚ್ಚಿಸಲು ಆಪಲ್ ಮಾಡುತ್ತಿದೆ ಪ್ಲಾನ್..!

ಕ್ಯೂಪರ್ಟಿನೋ ಮೂಲದ ಸಂಸ್ಥೆ ಐಹೆಚ್ ಎಸ್ ಮಾರ್ಕಿಟ್ ವರದಿಯ ಪ್ರಕಾರ ಹೊಸ ರೀತಿಯ ಬ್ಯಾಕ್ ಪ್ಲೇನ್ ಟಿಎಫ್ ಟಿಯನ್ನು ಬಳಕೆ ಮಾಡಲಿದೆ ಎಂದು ಹೇಳಿದೆ. ಈ ಸಂಸ್ಥೆಯು ಎಲ್ಟಿಟಿಒ ಅಥವಾ ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ನಲ್ಲಿ ಮೂರು ವರ್ಷಗಳ ಕಾಲ ವಿವಿಧ ಮೂರು ಪೇಟೆಂಟ್ಗಳಿಗೆ ಅರ್ಜಿ ಸಲ್ಲಿಸಿದೆ ಎಂದು ಹೇಳಲಾಗುತ್ತದೆ.

ಅದರಲ್ಲಿ ಮೊದಲನೆಯದು 2014ರಲ್ಲಿ ನಡೆದಿದ್ದು ಅದರ ಟೈಟಲ್ ಹೀಗಿದೆ “ಅರೆವಾಹಕ-ಆಕ್ಸೈಡ್ ಮತ್ತು ಸಿಲಿಕಾನ್ ಥಿನ್-ಫಿಲ್ಮ್ ಟ್ರಾನ್ಸಿಸ್ಟರ್ಗಳ ಜೊತೆಯಲ್ಲಿ ಜೈವಿಕ ಬೆಳಕಿನ ಹೊರಸೂಸುವ ಡಯೋಡ್ ಡಿಸ್ಪ್ಲೇಗಳು”. ಎರಡನೆಯದು ಮುಂದಿನ ವರ್ಷ ನೋಡಬಹುದಾಗಿದ್ದು ಅದರ ಟೈಟಲ್ “ಸಿಲಿಕಾನ್ ಮತ್ತು ಅರೆವಾಹಕ ಆಕ್ಸೈಡ್ ತೆಳು-ಫಿಲ್ಮ್ ಟ್ರಾನ್ಸಿಸ್ಟರ್ಗಳೊಂದಿಗಿನ ಡಿಸ್ಪ್ಲೇ”. ಮೂರನೆಯದು ಈ ವರ್ಷವೇ ನೋಡಬಹುದಾಗಿದ್ದು ಅದರ ಟೈಟಲ್ “ಹೈಬ್ರಿಡ್ TFT ಪ್ರಕ್ರಿಯೆಯ ಹರಿವಿನಲ್ಲಿ ಅರೆವಾಹಕ ಆಕ್ಸೈಡ್ ಚಾನಲ್ ಅನ್ನು ರಕ್ಷಿಸುವ ವಿಧಾನಗಳು”.

ಐಫೋನ್‌ ಬ್ಯಾಟರಿ ಲೈಫ್ ಹೆಚ್ಚಿಸಲು ಆಪಲ್ ಮಾಡುತ್ತಿದೆ ಪ್ಲಾನ್..!

ಯಾರಿಗೆ ಈ ಬಗ್ಗೆ ತಿಳಿದಿಲ್ಲವೋ, ಈ ಬ್ಯಾಕ್ ಪ್ಲೇನ್ ತಂತ್ರಜ್ಞಾನವು ಪ್ರಮುಖವಾಗಿ ಫೋನಿನ ಸ್ಕ್ರೀನ್ ಮತ್ತು ಪಿಕ್ಸಲ್ ಗಳ ಬಗೆಗಿನ ವಿಚಾರವನ್ನು ಒಳಗೊಂಡಿದೆ. ಇದು ಪ್ರತಿಯೊಂದು ಪಿಕ್ಸಲ್ ಗಳ ಬಗ್ಗೆ ವಯಕ್ತಿಕವಾಗಿ ಜಾಗೃತಿ ವಹಿಸುತ್ತದೆ ಮತ್ತು ಅದನ್ನು ಆನ್ ಮತ್ತು ಆಫ್ ಮಾಡುವ ಬಗ್ಗೆ ಕೇರ್ ತೆಗೆದುಕೊಳ್ಳುತ್ತದೆ ಹಾಗಾಗಿ ಇದು ನೇರವಾಗಿ ಬ್ಯಾಟರಿ ಲೈಫ್ ಮೇಲೆ ಹಿಡಿತವನ್ನು ಸಾಧಿಸುತ್ತದೆ.

ರಿಪೋರ್ಟ್ ನಲ್ಲಿ ಹೇಳುವಂತೆ ಆಪಲ್ ಪ್ರಮುಖ ಸಿಪಿಯುನ ಗ್ರಾಫಿಕ್ ಪ್ರೊಸೆಸ್ಸಿಂಗ್ ಯುನಿಟ್ ಇನ್ನಷ್ಟು ಬಲಪಡಿಸಲು ಪ್ರಯತ್ನಿಸುತ್ತಿದೆ ಮತ್ತು ಪವರ್ ಬಳಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೆಮೊರಿಯನ್ನು ಒಂದು ಫ್ರೇಮ್ ಗೆ ತರಲು ಯೋಜನೆ ರೂಪಿಸಿದೆ.

ಎಲ್ ಟಿಪಿಓವನ್ನು ತರಬೇಕೆಂದು ಆಪಲ್ ಯೋಜಿಸುತ್ತಿರುವುದರ ಹಿಂದೆ ಹಲವಾರು ಕಾರಣಗಳಿರಬಹುದು. ಆದರೆ ಅದರ ಪ್ರಮುಖ ಉದ್ದೇಶ ಓಎಲ್ಇಡಿ ಕಾಂಪೋನೆಂಟ್ ನ ದರ ಮತ್ತು ತಂತ್ರಜ್ಞಾನದಲ್ಲಿ ಇನ್ನೂ ಫ್ಲೆಕ್ಸಿಬಲ್ ಆಗುವುದು ಪ್ರಮುಖ ಕಾರಣವಾಗಿದೆ ಮತ್ತೊಂದು ಕಾರಣವೆಂದರೆ ಪವರ್ ನ ಉಳಿತಾಯ, ಸ್ಕ್ರೀನ್ ನಲ್ಲಿ ಅತೀ ಹೆಚ್ಚು ರೆಸಲ್ಯೂಷನ್ ಸ್ಥಾಪಿಸುವುದು ಒಟ್ಟಾರೆ ಸಪ್ಲೈ ಚೈನ್ ನ್ನು ಇನ್ನಷ್ಟು ವೃದ್ಧಿಸುವ ಉದ್ದೇಶವನ್ನು ಆಪಲ್ ಸಂಸ್ಥೆ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
Here’s how Apple plans to improve the battery life of iPhones. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+