ನೋಕಿಯಾ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಗಳಿಗೆ ವಿಮೆ ಪಡೆದುಕೊಳ್ಳುವುದು ಹೇಗೆ?
ಹೆಚ್ ಎಂಡಿ ಗ್ಲೋಬಲ್ ಸಂಸ್ಥೆ ನೋಕಿಯಾ ಸ್ಮಾರ್ಟ್ ಫೋನ್ ತಯಾರಿಸಲು ಪರವಾನಗಿ ಹೊಂದಿರುವ ಕಂಪೆನಿ. ನೋಕಿಯಾ ಸ್ಮಾರ್ಟ್ ಫೋನ್ ಗಳ ವ್ಯಾಪ್ತಿಗೆ ವಿಮೆ ನೀಡಲು ಸರ್ವೀಫ್ ಜೊತೆ ಸಹಭಾಗಿತ್ವವನ್ನು ಹೊಂದಿದೆ.

ಈ ವಿಮೆಗಳು ಡಿವೈಸ್ ಗಳ ಸುರಕ್ಷತೆ ಮತ್ತು ಸ್ಟ್ಯಾಂಡರ್ಡ್ ವಾರೆಂಟಿ ಜೊತೆಗಿರುವ ಕೆಲವು ಅಪಾಯಗಳಿಗೆ ಭದ್ರತೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಮೂರು ರೀತಿಯ ವಿಮೆ ಪ್ಲಾನ್ ಗಳು:
ಪ್ಲಾನ್ ಗಳು ರೂಪಾಯಿ 399 ರಿಂದ ಆರಂಭವಾಗುತ್ತದೆ ಮತ್ತು 12 ತಿಂಗಳ ವಿಮೆಯನ್ನು ನೀಡುತ್ತದೆ. ನೋಕಿಯ ಸ್ಮಾರ್ಟ್ ಫೋನ್ ಮಾಲೀಕರು 3 ವಿಭಿನ್ನ ರೀತಿಯ ಇನ್ಸುರೆನ್ಸ್ ಪ್ಲಾನ್ ಗಳನ್ನು ಆಯಕೆ ಮಾಡಿಕೊಳ್ಳಬಹುದು.ನೋಕಿಯಾ ಫೋನ್ ಖರೀದಿಸಿದ 15 ದಿನಗಳ ಒಳಗಾಗಿ ಈ ಮೂರರಲ್ಲಿ ಎರಡು ಪ್ಲಾನ್ ಗಳನ್ನು ಪಡೆಯಲು ಅವಕಾಶವಿರುತ್ತದೆ. ಅವುಗಳೆಂದರೆ ನೋಕಿಯಾ ಫೋನ್ ಅಪಘಾತ ಮತ್ತು ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ ಮತ್ತು ನೋಕಿಯಾ ಫೋನ್ ಸ್ಕ್ರೀನ್ ಪ್ರೊಟೆಕ್ಷನ್ ಪ್ಲಾನ್.
ಮೂರನೆಯದ್ದು ಎಕ್ಸ್ ಟೆಂಡೆಂಡ್ ವಾರೆಂಟಿ ಪ್ಲಾನ್ ಇದನ್ನು ನೀವು ಫೋನ್ ಖರೀದಿಸಿದ 365 ದಿನಗಳ ಒಳಗಾಗಿ ಖರೀದಿಸಿಬಹುದಾದ ವಿಮಾ ಪ್ಲಾನ್ ಆಗಿದೆ.

ಅಜಯ್ ಮೆಹ್ತಾ ಹೇಳಿಕೆ:
ಹೆಚ್ ಎಂಡಿ ಗ್ಲೋಬಲ್ ನ ಉಪಾಧ್ಯಕ್ಷ ಮತ್ತು ಭಾರತದ ಮುಖ್ಯಸ್ಥರಾಗಿರುವ ಅಜಯ್ ಮೆಹ್ತಾ ಅವರು ಹೇಳಿರುವಂತೆ," ನಾವು ಫೋನ್ ನಲ್ಲಿ ಎಲ್ಲಾ ಕಡೆ ತೆಗೆದುಕೊಂಡು ಹೋಗುತ್ತೇವೆ ಮತ್ತು ಅವುಗಳಲ್ಲಿದೇ ಇರುವುದು ನಮಗೆ ಬಹಳ ಕಷ್ಟ. ಹಾಗಾಗಿ ಈ ನಿಟ್ಟಿನಲ್ಲಿ ನಾವು ಎಲ್ಲೇ ಹೋದರೂ ಚಿಂತೆ ಇಲ್ಲದೆ ಇರುವುದು ಬಹಳ ಮುಖ್ಯ.
ನೋಕಿಯಾ ಫೋನ್ ಗಳು ನಂಬಿಕೆ ಮತ್ತು ವಿಶ್ವಾರ್ಹತೆಗೆ ಹೆಸರುವಾಸಿಯಾಗಿದೆ ಮತ್ತು ಈ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಸರ್ವಿಫೈ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿದ್ದು ಕೈಗೆಟುಕುವ ಬೆಲೆಯಲ್ಲಿ ವಿಮಾ ಪ್ಲಾನ್ ಗಳು ಮತ್ತು ವಾರೆಂಟಿ ಮುಂದುವರಿಸುವ ಪ್ಲಾನ್ ಗಳನ್ನು ನೀಡುತ್ತಿದ್ದೇವೆ. ನಾವು ತೆಗೆದುಕೊಂಡಿರುವ ಈ ಪ್ಲಾನ್ ಬಗ್ಗೆ ನಮ್ಮ ಅಭಿಮಾನಿಗಳ ಜೊತೆಗೆ ಚರ್ಚಿಸಿದ್ದೇವೆ ಮತ್ತು ಇದು ಖಂಡಿತವಾಗಲೂ ಮುಂದಿನ ದಿನಗಳಲ್ಲಿ ನೋಕಿಯಾ ಫೋನ್ ಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಮತ್ತು ಅವರ ಹೂಡಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ಬಹಳವಾಗಿ ನೆರವಿಗೆ ಬರುತ್ತದೆ".

ಶ್ರೀವತ್ಸ ಪ್ರಭಾಕರ್ ಅವರ ಹೇಳಿಕೆ:
ಸರ್ವಿಫೈ ನ ಸ್ಥಾಪಕರಾಗಿರು ಶ್ರೀವತ್ಸ ಪ್ರಭಾಕರ್ ಅವರು ಹೀಗೆ ಹೇಳುತ್ತಾರೆ" ಹೆಚ್ಎಂಡಿ ಗ್ಲೋಬಲ್ ಜೊತೆಗೆ ಕೈಜೋಡಿಸಿರುವುದಕ್ಕೆ ನಮಗೆ ಬಹಳ ಖುಷಿಯಾಗಿದೆ. ನೋಕಿಯಾ ಸ್ಮಾರ್ಟ್ ಫೋನ್ ಗಳಿಗೆ ವಿಮೆ ಮತ್ತು ವಾರೆಂಟಿಯನ್ನು ಹೆಚ್ಚಿಸುವ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡುವುದಕ್ಕೆ ನಮಗೆ ಹೆಮ್ಮೆ ಇದೆ. ನಂಬಿಕೆ ಮತ್ತು ವಿಶ್ವಾಸಾರ್ಹತೆ ಒಬ್ಬ ಗ್ರಾಹಕರಿಗೆ ಉತ್ತಮ ಅನುಭವ ನೀಡಲು ಬಹಳವಾಗಿ ಅಗತ್ಯವಿರುವ ಅಂಶವಾಗಿದೆ.ನೋಕಿಯಾ ಸ್ಮಾರ್ಟ್ ಫೋನ್ ಅಭಿಮಾನಿಗಳಿಗೆ ಯಾವುದೇ ನಿರಾಸೆ ಆಗದಂತೆ ಮತ್ತು ಪಾರದರ್ಶಕವಾಗಿರುವ ಜೊತೆಗೆ ಯಾವುದೇ ಕಾಂಪ್ಲಿಕೇಷನ್ ಇಲ್ಲದ ಬೆಸ್ಟ್ ಆಫರ್ ಗಳನ್ನು ನೀಡುವುದಕ್ಕೆ ನಾವು ಶ್ರಮಿಸುತ್ತೇವೆ" ಎಂದಿದ್ದಾರೆ.


Click it and Unblock the Notifications








