ಕೇವಲ 4 ನಿಮಿಷದಲ್ಲಿ ಒನ್‌ಪ್ಲಸ್ 6 ಸಮಾರಂಭದ ಟಿಕೆಟ್ ಸೇಲ್!..ಈಗ ಮತ್ತೊಂದು ಆಫರ್!!

|

ವಿಶ್ವ ಮೊಬೈಲ್ ಪ್ರಪಂಚವೇ ಭಾರೀ ಕುತೋಹಲದಿಂದ ಕಾಯುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಒನ್‌ಪ್ಲಸ್ ಮೊಬೈಲ್ ಕಂಪೆನಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಬಿಡುಗಡೆ ಸಮಾರಂಭಕ್ಕಾಗಿ ಟಿಕೆಟ್ ಪಡೆಯುವಲ್ಲಿ ವಿಫಲರಾದವರಿಗೆ ಒನ್‌ಪ್ಲಸ್ ಕಂಪೆನಿ ಮತ್ತೊಂದು ಆಫರ್ ನೀಡಿದೆ.!

ಇದೇ ಮೇ. 17 ರಂದು ಒನ್‌ಪ್ಲಸ್ ಕಂಪೆನಿ ಲಾಂಚ್ ಮಾಡುತ್ತಿರುವ ಒನ್‌ಪ್ಲಸ್ 6 ಸ್ಪೆಷಲ್ ಎಡಿಷನ್ ಸ್ಮಾರ್ಟ್‌ಫೋನ್ ಬಿಡುಗಡೆಯ ಲೈವ್ ಸ್ಟ್ರೀಮ್ ಅನ್ನು ಒನ್‌ಪ್ಲಸ್ ಕಂಪೆನಿ ನೀಡುತ್ತಿದೆ. ಈ ಲೈವ್ ಸ್ಟ್ರೀಮ್ ವೀಕ್ಷಿಸುವ ಮೂಲಕವೂ, ಅದೃಷ್ಟವಂತರು ಕಂಪೆನಿಯಿಂದ ಮಾರ್ವೆಲ್ ಅವೇಂಜರ್ಸ್ ಕ್ಯಾಪ್, ಟೀ-ಶರ್ಟ್ ಮತ್ತು 999. ರೂಪಾಯಿಗಳ ವೋಚರ್ ಪಡೆಯಬಹುದಾಗಿದೆ.

ಕೇವಲ 4 ನಿಮಿಷದಲ್ಲಿ ಒನ್‌ಪ್ಲಸ್ 6 ಸಮಾರಂಭದ ಟಿಕೆಟ್ ಸೇಲ್!..ಈಗ ಮತ್ತೊಂದು ಆಫರ್!!

ಒನ್‌ಪ್ಲಸ್ 6 ಬಿಡುಗಡೆ ಸಮಾರಂಭದ ಟಿಕೆಟ್‌ಗಳು ಕೇವಲ 4 ನಿಮಿಷದಲ್ಲಿಯೇ ಮಾರಾಟವಾದುದರಿಂದ ಒನ್‌ಪ್ಲಸ್ ಕಂಪೆನಿ ತನ್ನ ಅಭಿಮಾನಿಗಳಿಗೆ ಈ ಆಫರ್ ಅನ್ನು ನೀಡಿದ್ದು, ಬಿಡುಗಡೆ ದಿನದಂದು https://www.oneplus.in/launch-6 ಲಿಂಕ್ ಮೂಲಕ ಒನ್‌ಪ್ಲಸ್ 6 ಬಿಡುಗಡೆ ಸಮಾರಂಭವನ್ನು ಕಣ್ತುಂಬಿಕೊಳ್ಳಬಹುದು ಎಂದು ಒನ್‌ಪ್ಲಸ್ ಕಂಪೆನಿ ತಿಳಿಸಿದೆ.

ಡಿಸ್‌ಪ್ಲೇ ನೋಚ್:

ಡಿಸ್‌ಪ್ಲೇ ನೋಚ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6.28 ಇಂಚಿನ ಅಮೊಲೈಡ್ ಡಿಸ್‌ಪ್ಲೇ ಇದಾಗಿದೆ. 19:9 ಅನುಪಾತದಿಂದ ಕೂಡಿರಲಿದ್ದು, FHD+ ಗುಣಮಟ್ಟವನ್ನು ಹೊಂದಿರುವ ಸಾಧ್ಯತೆ ಇದೆ. ಗೇಮ್ ಆಡಲು ಮತ್ತು ಗುಣಮಟ್ಟದ ವಿಡಿಯೋವನ್ನು ನೋಡಲು ಹೇಳಿ ಮಾಡಿಸಿದಂತಿರಲಿದೆ. ಅಲ್ಲದೇ ಬೇರೆ ಸ್ಮಾರ್ಟ್‌ಫೋನಿಗಿಂತ ಭಿನ್ನವಾದ ನೋಚ್ ಅನ್ನು ಮುಂಭಾಗದ ಡಿಸ್‌ಪ್ಲೇಯಲ್ಲಿ ನೀಡಿದೆ.

ಫೇಷಿಯಲ್ ರೆಕಗ್ನಿಷನ್:

ಫೇಷಿಯಲ್ ರೆಕಗ್ನಿಷನ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಫುಲ್‌ ಸ್ಕ್ರಿನ್ ಡಿಸ್‌ಪ್ಲೇಯಲ್ಲಿ ನೋಚ್ ಸಹ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಫೇಸ್‌ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ.

ಸ್ನ್ಯಾಪ್‌ಡ್ರಾಗನ್ 845 ಪ್ರೋಸೆಸರ್:

ಸ್ನ್ಯಾಪ್‌ಡ್ರಾಗನ್ 845 ಪ್ರೋಸೆಸರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 845 ಚಿಪ್‌ ಸೆಟ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, 8GB RAM ಜೊತೆಗೆ ಲಭ್ಯವಿರಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ, ಮುಂಭಾಗದಲ್ಲಿ ಫೇಷಿಯಲ್ ರೆಕಗ್ನೇಷನ್ ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ನೋಡಬಹುದಾಗಿದೆ.

ಡ್ಯಾಚ್ ಚಾರ್ಜಿಂಗ್ :

ಡ್ಯಾಚ್ ಚಾರ್ಜಿಂಗ್ :

ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಇಂಟರ್ನೆಟ್ ಸೇವೆಗಾಗಿ X30 LTE ಮೊಡಮ್ ಅನ್ನು ಅಳವಡಿಸಲಾಗಿದ್ದು, ಇದು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಹಾಯವನ್ನು ಮಾಡಲಿದೆ. ಅಲ್ಲದೇ 3400mAh ಬ್ಯಾಟರಿಯನ್ನು ಹೊಂದಿದ್ದು, ಆಕ್ಸಿಜನ್ OS ನೊಂದಿಗೆ ಡ್ಯಾಚ್ ಚಾರ್ಜಿಂಗ್ ನೊಂದಿಗೆ ಕಾಣಿಸಿಕೊಳ್ಳಲಿದೆ.

ಒನ್‌ಪ್ಲಸ್‌ 6 ಬೆಲೆ

ಒನ್‌ಪ್ಲಸ್‌ 6 ಬೆಲೆ

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 63GB ಆವೃತ್ತಿಯೂ ರೂ.34,999ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ 128GB ಆವೃತ್ತಿ ರೂ.39,999ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಒನ್‌ಪ್ಲಸ್ 5T ಗಿಂತ ಹೆಚ್ಚಿನ ಬೆಲೆ ಹೊಂದಿದೆ ಎನ್ನಲಾಗಿದೆ.

Best Mobiles in India

English summary
OnePlus 6 launch event tickets sold out in 4 minutes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X