Home
ಮೊಬೈಲ್

ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಬಹಳ ನಿರೀಕ್ಷೆ ಹುಟ್ಟಿಸಿರುವ ಸ್ಮಾರ್ಟ್ ಫೋನ್ ಗಳು

By Gizbot Bureau

ಕೋವಿಡ್ 19 ಪರಿಣಾಮದಿಂದಾಗಿ ಸ್ಮಾರ್ಟ್ ಫೋನ್ ಗಳ ಮಾರಾಟ ಮತ್ತು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರೂ ಕೂಡ ಸ್ಮಾರ್ಟ್ ಫೋನ್ ಬಿಡುಗಡೆಯ ಬಗೆಗಿನ ವದಂತಿಗಳಿಗೆ ಮಾತ್ರ ಯಾವುದೇ ವಿರಾಮ ಬಿದ್ದಿಲ್ಲ. ಹೌದು ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುವ ತವಕದಲ್ಲಿದ್ದು ಮಾರುಕಟ್ಟೆಯಲ್ಲಿ ಅವುಗಳ ಬಗ್ಗೆ ಹಲವು ರೀತಿಯ ವದಂತಿಗಳು ಈಗಾಗಲೇ ಸೃಷ್ಟಿಯಾಗಿವೆ. ಒನ್ ಪ್ಲಸ್ ಬ್ರ್ಯಾಂಡ್ ಬಗ್ಗೆ ಹೆಚ್ಚಿನ ನಿರೀಕ್ಷೆ ಕೂಡ ಇದೆ.

ಸ್ಮಾರ್ಟ್ ಫೋನ್

ವದಂತಿಗಳು ಮತ್ತು ಊಹಾಪೋಹಗಳ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳು ಹೆಡ್ ಲೈನ್ ಸುದ್ದಿ ಮಾಡಿದ್ದು ಅವುಗಳಲ್ಲಿ ಪ್ರಮುಖವಾಗಿ ರೆಡ್ಮಿ ನೋಟ್9, ರಿಯಲ್ ಮಿ ನ್ಯಾರ್ಝೋ 10 ಮತ್ತು ಇತ್ಯಾದಿಗಳು ಸೇರಿವೆ. ನಾವಿಲ್ಲಿ ಅಂತಹ ಪ್ರಮುಖ ಕೆಲವು ಡಿವೈಸ್ ಗಳನ್ನು ಪಟ್ಟಿ ಮಾಡಿದ್ದೇವೆ.

ರೆಡ್ಮಿ ನೋಟ್ 9

ರೆಡ್ಮಿ ನೋಟ್ 9

ರೆಡ್ಮಿ ನೋಟ್ 9 ಪ್ರೋ ಮತ್ತು ನೋಟ್ 9 ಪ್ರೋ ಮ್ಯಾಕ್ಸ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದು ರೆಡ್ಮಿ ನೋಟ್ 9 ಇನ್ನೇನು ಪ್ರಕಟಗೊಳ್ಳಬೇಕಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಆಕ್ಟಾ ಕೋರ್ ಪ್ರೊಸೆಸರ್,ಕ್ವಿಕ್ ಚಾರ್ಜ್ 3.0 ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಮತ್ತು ಇತರೆ ಆಕರ್ಷಕ ಫೀಚರ್ ಗಳಿರಲಿವೆ ಎಂದು ಅಂದಾಜಿಸಲಾಗಿದೆ.

ರಿಯಲ್ ಮಿX50 ಯ್ಯೂತ್ 5ಜಿ

ರಿಯಲ್ ಮಿX50 ಯ್ಯೂತ್ 5ಜಿ

ರಿಯಲ್ ಮಿX50 ಯ್ಯೂತ್ 5ಜಿ ಕಂಪೆನಿ ಬಿಡುಗಡೆಗೊಳಿಸಲಿರುವ ಮತ್ತೊಂದು ಸ್ಮಾರ್ಟ್ ಫೋನ್ ಆಗಿರಲಿದೆ ಎಂಬ ವದಂತಿ ಇದೆ. ಈ ಡಿವೈಸ್ ಆಕ್ಟಾ ಕೋರ್ ಮೀಡಿಯಾ ಟೆಕ್ ಎಂಟಿ 6885 SoC ಮತ್ತು 5ಜಿ ಕನೆಕ್ಟಿವಿಟಿಯನ್ನು ಹೊಂದಿರಲಿದೆ. ಇದರಲ್ಲಿ 4,500 mAh ಬ್ಯಾಟರಿ ಇರಲಿದೆ ಎಂದು ಹೇಳಲಾಗುತ್ತಿದೆ.

ರಿಯಲ್ ಮಿ ನ್ಯಾರ್ಝೋ 10

ರಿಯಲ್ ಮಿ ನ್ಯಾರ್ಝೋ 10

ರಿಯಲ್ ಮಿ ನ್ಯಾರ್ಝೋ 10 ಮತ್ತೊಂದು ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ ಡಿವೈಸ್ ಆಗಿದ್ದು ಕೋವಿಡ್-19 ಲಾಕ್ ಡೌನ್ ನಿಂದಾಗಿ ಬಿಡುಗಡೆ ಸ್ಥಗಿತವಾಗಿದೆ. ಹೊಸ ಸರಣಿ ನ್ಯಾರ್ಝೋವನ್ನು ಇದು ಪ್ರಾರಂಭಿಸಲಿದೆ. ಇದರಲ್ಲಿ HD ಡಿಸ್ಪ್ಲೇ ಜೊತೆಗೆ 20:9 ಆಸ್ಪೆಕ್ಟ್ ಅನುಪಾತ ಮತ್ತು ಮೀಡಿಯಾ ಟೆಕ್ ಜಿ80 SoC ಇರಲಿದೆ.

ಒಪ್ಪೋ ರೆನೋ 3 ಎ

ಒಪ್ಪೋ ರೆನೋ 3 ಎ

ಒಪ್ಪೋ ರೆನೋ 3 ಎ ಮುಂದಿನ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆ ಕಾಣಲಿರುವ ಡಿವೈಸ್ ಆಗಿದೆ. ಇದರಲ್ಲಿ ಒಪ್ಪೋ ರೆನೋ3 ಎ ರೆನೋ 3 ಯ್ಯೂತ್ ನಲ್ಲಿರುವ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 6.44-ಇಂಚಿನ AMOLED ಡಿಸ್ಪ್ಲೇ, ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ 48MPಪ್ರೈಮರಿ ಕ್ಯಾಮರಾ ಸೆನ್ಸರ್ ಮತ್ತು ಇತ್ಯಾದಿ ಇರಲಿದೆ.

ರಿಯಲ್ ಮಿ ಎಕ್ಸ್3 5ಜಿ

ರಿಯಲ್ ಮಿ ಎಕ್ಸ್3 5ಜಿ

ರಿಯಲ್ ಮಿ ಎಕ್ಸ್3 5ಜಿ ಸ್ನ್ಯಾಪ್ ಡ್ರ್ಯಾಗನ್ 765ಜಿ SoC, 6.57-ಇಂಚಿನ IPS LCD ಡಿಸ್ಪ್ಲೇ, 5G ಕನೆಕ್ಟಿವಿಟಿಗೆ ಬೆಂಬಲ ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ ಎಂಬ ಬಗ್ಗೆ ವದಂತಿಗಳಿವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ91

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ91

ಸ್ಯಾಮ್ ಸಂಗ್ ಗ್ಯಾಲಕ್ಸಿ 91 ಸ್ನ್ಯಾಪ್ ಡ್ರ್ಯಾಗನ್ 855 SoC, 6.7-ಇಂಚಿನ ಡಿಸ್ಪ್ಲೇ ಮತ್ತು ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲವನ್ನು ನೀಡುತ್ತದೆ ಮತ್ತು ಸ್ಟ್ಯಾಂಡರ್ಡ್ ಕನೆಕ್ಟಿವಿಟಿಗೆ ಬೆಂಬಲ ಮತ್ತು ಇತರೆ ಹಲವು ಫೀಚರ್ ಗಳನ್ನು ಇದು ಹೊಂದಿರಲಿದೆ.

Best Mobiles in India

English summary
Talking about rumors and speculations, several upcoming smartphones are hitting the tech headlines including the highly anticipated ones such as the Redmi Note 9, Realme Narzo 10 and much more. Having said that, here is a list of upcoming smartphones that we expect to witness the spotlight soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+