ಬ್ಲಾಕ್‌ಬೆರ್ರಿಯ ಹತ್ತು ಫೋನ್‌ಗಳಿಗೆ ಹೈಕ್ ಮೆಸೆಂಜರ್

Posted By:

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ಗಳಾದ ವಾಟ್ಸಾಪ್ ಮತ್ತು ವಿಚಾಟ್ ತಮ್ಮ ನೆಲೆಯನ್ನು ಭದ್ರಗೊಳಿಸಲು ಉತ್ಸಾಹದಿಂದ ಪೈಪೋಟಿಯಲ್ಲಿರುವಂತೆ ಹೈಕ್ ಕೂಡ ತನ್ನ ಹೆಸರನ್ನು ಈ ಅಪ್ಲಿಕೇಶನ್‌ಗಳೊಂದಿಗೆ ಭದ್ರವಾಗಿ ನೆಲೆಗೊಳಿಸುವ ಪ್ರಯತ್ನದಲ್ಲಿದೆ. ಬ್ಲಾಕ್‌ಬೆರ್ರಿ ಬಳಕೆದಾರರು ಉಚಿತವಾಗಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಸದ್ಯದ ಮಟ್ಟಿಗೆ ಇದು ಸಂತಸದ ವಿಷಯವಾಗಿದೆ.

ಬ್ಲಾಕ್‌ಬೆರ್ರಿ Z3, Z10, Z30 ಮತ್ತು ಪೋರ್ಚ್ ವಿನ್ಯಾಸ P9982 ದೊಂದಿಗೆ ಈ ಅಪ್ಲಿಕೇಶನ್ ಸಂಯೋಜನೆಗೊಳ್ಳಲಿದೆ. ವಾಟ್ಸಾಪ್ ತ್ವರಿತ ಮೆಸೇಜಿಂಗ್‌ನಂತೆ ಹೈಕ್ ಕೂಡ ಆಕರ್ಷಕವಾಗಿದ್ದು ತನ್ನದೇ ವಿಶಿಷ್ಟ ಫೀಚರ್‌ಗಳು ಮತ್ತು ಸಂಯೋಜನೆಗಳಿಂದ ಬಳಕೆದಾರರ ಸ್ನೇಹಿತನಾಗಿ ಮಾರ್ಪಡಲಿದೆ. ವಾಟ್ಸಾಪ್ ಹೊಂದಿರುವಂತಹ ಒಂದು ಫೀಚರ್ ಅನ್ನು ಹೈಕ್ ಹೊಂದಿದ್ದು ಕೊನೆಯ ಬಾರಿ ಬಳಕೆದಾರರು ಆನ್‌ಲೈನ್‌ನಲ್ಲಿದ್ದಾಗ ಅವರ ಪ್ರೊಫೈಲ್ ಚಿತ್ರ ಒಳಗೊಂಡಂತೆ ಅವರನ್ನು ಯಾರು ನೋಡಬಹುದೆಂಬ ಆಯ್ಕೆಯನ್ನು ಮಾಡಲು ಬಳಕೆದಾರರಿಗೆ ಈ ಅಪ್ಲಿಕೇಶನ್ ಅನುವು ಮಾಡಿಕೊಡುತ್ತದೆ.

ಹೈಕ್ ಜಾದು ಇನ್ನು ಬ್ಲಾಕ್‌ಬೆರ್ರಿಯಲ್ಲೂ

ನಿಮಗೆ ಇದರಿಂದ ಭದ್ರತಾ ಅಪಾಯಗಳು ಉಂಟಾಗಬಹುದೆಂಬ ಹೆದರಿಕೆ ಇದ್ದಲ್ಲಿ, ಅದು ಬೇಡ ಏಕೆಂದರೆ ಹೈಕ್ ಮೆಸೆಂಜರ್‌ನಲ್ಲಿರುವ ಸಂದೇಶಗಳನ್ನು 128-ಬಿಟ್ SSL ಎನ್‌ಕ್ರಿಪ್ಶನ್ ಬಳಸಿಕೊಂಡು ವೈ-ಫೈಯಾದ್ಯಂತ ಇದನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ.

ಬಿಬಿಎಮ್ ಬಳಕೆದಾರರು ಸ್ಟಿಕ್ಕರ್‌ಗಳನ್ನು ಕಳುಹಿಸುವುದನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ, ಹೈಕ್ ಕೂಡ ಹೆಚ್ಚಿನ ಸಂಖ್ಯೆಯ ಸ್ಟಿಕ್ಕರ್‌ಗಳನ್ನು ಒದಗಿಸುತ್ತಿದ್ದು, ಬಿಬಿಎಮ್ ಬಳಕೆದಾರರು ಇದರ ಬಗ್ಗೆ ಚಿಂತಿಸಬೇಕಾಗಿಲ್ಲ. ಇಷ್ಟಲ್ಲದೆ ಹೈಕ್ ಸುಂದರವಾದ ವಿಶಿಷ್ಟವಾದ ಎರಡು ಸೌಲಭ್ಯಗಳನ್ನು ಹೊಂದಿದ್ದು, ಇದು ಎರಡು ರೀತಿಯ ಥೀಮ್‌ಗಳನ್ನು ಬದಲಾಯಿಸುತ್ತದೆ ಅಂದರೆ ಚಾಟ್ ಥೀಮ್ ಅನ್ನು ನೀವು ಬದಲಾಯಿಸಿದಾಗ, ಇದು ನಿಮ್ಮ ಸ್ನೇಹಿತರ ಚಾಟ್ ಥೀಮ್ ಅನ್ನು ಕೂಡ ಬದಲಾಯಿಸುತ್ತದೆ.

ನಿಮ್ಮ ಸ್ನೇಹಿತರು ಆಫ್‌ಲೈನ್‌ನಲ್ಲಿದ್ದಾಗ ಕೂಡ ಹೈಕ್ ಮೆಸೆಂಜರ್ ಅವರಿಗೆ ಸಂದೇಶಗಳನ್ನು ಕಳುಹಿಸಬಹುದು. ಇದು ನಿಜಕ್ಕೂ ಆಶ್ಚರ್ಯಕರವಾಗಿದೆ ಅಲ್ಲವೇ? ಈ ರೀತಿಯಲ್ಲಿ ಹೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ ಅಂದರೆ ಇದು ನಿಮ್ಮ ಎಸ್‌ಎಂಎಸ್‌ ಮೇಲೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot