'ಒನ್‌ಪ್ಲಸ್' ಇತಿಹಾಸ!..ಸೋಲನ್ನೇ ಕಾಣದ ಒಂದು ಮೊಬೈಲ್ ಕಂಪೆನಿ ಕಥೆ ಗೊತ್ತಾ?

  ಚೀನಾದಲ್ಲಿ ಹುಟ್ಟಿದ್ದ ಕಂಪೆನಿಯೊಂದು ಗುಣಮಟ್ಟದ ಸ್ಮಾರ್ಟ್‌ಪೋನ್‌ಗಳನ್ನು ತಯಾರಿಸಲು ಮುಂದಾಗಿದೆ ಎಂದಾಗ ಇಡೀ ವಿಶ್ವವೇ ನಕ್ಕಿತ್ತು. ಚೀನಾದ ಉತ್ಪನ್ನಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನಂತೂ ಕಳಪೆ ಎಂದೇ ತಿಳಿಯಲಾಗಿತ್ತು. ಆದರೆ, ಅಂತಹ ಸಮಯದಲ್ಲಿಯೂ ಆ ಯುವಕರಿಗೆ ಆತ್ಮವಿಶ್ವಾಸವಿತ್ತು.

  ಹೌದು, ನೀವಂದುಕೊಂಡಂತೆ ಇದು ಚೀನಾದ ಇಬ್ಬರು ಯಶಸ್ವಿ ಯುವಕರ ಕಥೆ. ಆಪಲ್ ಐಫೋನ್‌ಗಳನ್ನು ಖರೀದಿಸಲು ಕ್ಯೂ ನಿಲ್ಲುತ್ತಿದ್ದ ಕಾಲದಲ್ಲಿ ಗುಣಮಟ್ಟದ ಮೊಬೈಲ್ ಕಂಪೆನಿಯೊಂದನ್ನು ಹುಟ್ಟಿಹಾಕಿದ್ದ ಯುವಕರ ಸಾಹಸಗಾಥೆ. ಇಂದು ಯಾವ ಆಂಡ್ರಾಯ್ಡ್ ಫೋನ್ ಖರೀದಿಸಲು ಇಡೀ ವಿಶ್ವದ ಜನರು ಮುಗಿಬೀಳುತ್ತಿದ್ದಾರೋ ಆ ಕಂಪೆನಿ ಮಾಲಿಕರ ಕಥೆ.

  'ಒನ್‌ಪ್ಲಸ್' ಇತಿಹಾಸ!..ಸೋಲನ್ನೇ ಕಾಣದ ಒಂದು ಮೊಬೈಲ್ ಕಂಪೆನಿ ಕಥೆ ಗೊತ್ತಾ?

  ನಾವು ಇಷ್ಟು ಹೇಳಿದ ನಂತರ ನಿಮಗೆ ಅವರು ಯಾರು? ಆ ಕಂಪೆನಿ ಯಾವುದು ಎಂದು ತಿಳಿದಿರಬಹುದು. ತಿಳಿಯದೇ ಇದ್ದರೆ ತಿಳಿದುಕೊಳ್ಳಿ ಅದು "ಒನ್‌ಪ್ಲಸ್" ಮೊಬೈಲ್ ಕಂಪೆನಿ. ಇಂದು ವಿಶ್ವದಲ್ಲಿಯೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಹೈ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್ ತಯಾರಕ ಕಂಪೆನಿ. ಚೀನಾ ಮತ್ತು ಭಾರತೀಯರ ನೆಚ್ಚಿನ ಮೊಬೈಲ್ ಕಂಪೆನಿ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಒನ್‌ಪ್ಲಸ್ ಮೊಬೈಲ್ ಕಂಪೆನಿ!!

  ಮೊದಲೇ ಹೇಳಿದಂತೆ ಗುಣಮಟ್ಟದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಒನ್‌ಪ್ಲಸ್ ಮೊಬೈಲ್ ಕಂಪೆನಿ ಇಡೀ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸ್ಮಾರ್ಟ್‌ಫೋನುಗಳ ಯುಗ ಪ್ರಾರಂಭವಾಗಿ ಪ್ರವರ್ಧಮಾನಕ್ಕೆ ಬಂದಿದ್ದ ಹೊತ್ತಿನಲ್ಲಿ ಹುಟ್ಟಿದ ಒನ್‌ಪ್ಲಸ್ ಇಂದು ವಿಶ್ವದಲ್ಲಿಯೇ ಟ್ರೆಂಡ್ ಸೃಷ್ಟಿಸಿರುವ ಮೊಬೈಲ್ ಕಂಪೆನಿ!

  ಒನ್‌ಪ್ಲಸ್ ಕಂಪೆನಿ ಹುಟ್ಟಿದ್ದು ಹೇಗೆ?

  ಆಪಲ್‌ನ ಗುಣಮಟ್ಟ ಇರುವ ಫೋನ್ ಮತ್ತು ಅದರಲ್ಲಿ ಆಂಡ್ರಾಯ್ಡ್ ತಂತ್ರಾಂಶ ಎರಡೂ ಬೇಕಿರುವ ಗ್ರಾಹಕನನ್ನು ಹುಡುಕಿ ಹೊರಟಿದ್ದು ಒನ್‌ಪ್ಲಸ್ ಕಂಪೆನಿ ಹುಟ್ಟಿಹಾಕಿದ್ದು ಇಬ್ಬರು ಯುವಕರು. ಎಂಪಿ3ಗಳನ್ನು ಅಂತರ್ಜಾಲದಲ್ಲಿ ಮಾರಿ ದುಡ್ಡು ಮಾಡುತ್ತಿದ್ದ ಕಾರ್ಲ್‌ ಮತ್ತು ಓಪೋ ಮೊಬೈಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೀಟ್ ಲೌ ಕಂಪೆನಿಗೆ ಅಡಿಪಾಯ ಹಾಕಿದರು.

  ಒನ್‌ಪ್ಲಸ್ ಕಂಪೆನಿ ಹುಟ್ಟಿದ್ದು ಯಾವಾಗ?

  ಕಾರ್ಲ್‌ ಮತ್ತು ಪೀಟ್ ಲೌ ಸೇರಿ 2013ರ ಡಿಸೆಂಬರ್ 17ರಂದು ಮೊಬೈಲ್ ಕಂಪೆನಿಯೊಂದನ್ನು ಪ್ರಾರಂಭಿಸಿ ಒನ್‌ಪ್ಲಸ್ ಎಂಬ ಹೆಸರು ಕೊಟ್ಟರು. ನೀವು ಏನು ಮಾಡುತ್ತೀರಿ ಎಂದು ಕೇಳಿದವರಿಗೆ ಜಗತ್ತಿನಲ್ಲೇ ಅತ್ಯುತ್ತಮ ಸ್ಮಾರ್ಟ್‌ಫೋನ್ ಮಾಡಿಕೊಡುತ್ತೇವೆ ಎಂದರು. ಆದರೆ ಅವರು ತಯಾರಿಸಲಿದ್ದ ಫೋನಿನ ಶೇಕಡಾ 1 ಭಾಗವೂ ಕಾರ್ಯರೂಪಕ್ಕೆ ಬಂದಿರಲಿಲ್ಲ!

  ಕಾರ್ಲ್ ಮತ್ತು ಪೀಟ್‌ಗೆ ಭಯ!

  ಕಂಪೆನಿ ಹುಟ್ಟಿಹಾಕಿದ ನಂತರ ಕಾರ್ಲ್ ಮತ್ತು ಪೀಟ್‌ಗೆ ಆಪಲ್ ಮೀರಿಸುವಂತಹ ಫೋನ್ ತಯಾರಿಸುವುದಕ್ಕೆ ಸಾಧ್ಯವಾ ಎಂಬ ಹೆದರಿಕೆ ಉಂಟಾಯಿತು. ಅಸಲಿಗೆ ಈ ದಾರಿಯಲ್ಲಿ ಒಂದು ಹೆಜ್ಜೆಯನ್ನಾದರೂ ಇಡುವುದಕ್ಕೆ ಆಗಬಹುದಾ ಎಂಬ ಯೋಚನೆ, ಭಯ ಶುರುವಾದವು. ಆದರೇನಂತೆ, ನಿಶ್ಚಯ ಮಾಡಿಯಾಗಿತ್ತು. ಯಾತ್ರೆ ಪ್ರಾರಂಭಿಸಿದ್ದರು.

  ಗ್ರಾಹಕರಿಂದಲೇ ಸಲಹೆ ಪಡೆದರು!

  ಕಾರ್ಲ್ ಮತ್ತು ಪೀಟ್ ಅವರು ಸೇರಿ ಅಂತರ್ಜಾಲದಲ್ಲಿ ಒಂದು ಕಮ್ಯುನಿಟಿ ತೆರೆದರು. ಅದನ್ನು ಸೇರಿಕೊಳ್ಳಲು ಜನರಿಗೆ ಮುಕ್ತ ಆಹ್ವಾನ ಕೊಟ್ಟರು. ನಿಮಗೆ ಯಾವ ಬಗೆಯ ಫೋನು ಬೇಕು? ಅತ್ಯುತ್ತಮ ಫೋನಿಗೆ ನೀವು ಎಷ್ಟು ಬೆಲೆ ತೆರಬಲ್ಲಿರಿ? ಅದರಲ್ಲಿ ಏನಿರಬೇಕು, ಏನಿರಬಾರದು? ಎಂದೆಲ್ಲ ಕಮ್ಯುನಿಟಿಯಲ್ಲಿಯೇ ಕೇಳುತ್ತಿದ್ದರು. ಹೀಗೆ ತಮ್ಮ ಕನಸಿನ ಫೋನಿನ ಕಲ್ಪನೆ ಹಂಚಿಕೊಳ್ಳುವ ಗ್ರಾಹಕರಿಂದಲೇ ಸಲಹೆ ಪಡೆದರು.

  2014ರ ಏಪ್ರಿಲ್ ತಿಂಗಳಲ್ಲಿ ಮೊದಲ ಫೋನ್!

  2013 ರಲ್ಲಿ ಹುಟ್ಟಿದ ಒನ್‌ಪ್ಲಸ್ ಮೊಬೈಲ್ ಕಂಪೆನಿ 2014ರ ಏಪ್ರಿಲ್ ತಿಂಗಳಲ್ಲಿ ತನ್ನ ಕನಸಿನ ಮೊಬೈಲ್ ಫೋನು ಅನ್ನು ಬಿಡುಗಡೆ ಮಾಡಿತು. ಒನ್‌ಪ್ಲಸ್ 1 ಎಂದು ಅದಕ್ಕೆ ಹೆಸರಿಡಲಾಯಿತು. ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲದಂತೆ ಕಾರ್ಲ್ ಮತ್ತು ಪೀಟ್‌ರ ತಂಡ ಹಗಲಿರುಳು ಶ್ರಮಿಸಿ ಮೊಬೈಲ್ ಅನ್ನು ರೂಪಿಸಿತ್ತು.

  ಮೊದಲ ಪ್ರಯತ್ನಲ್ಲಿಯೇ ಯಶಸ್ವಿ!!

  ಕಾರ್ಲ್ ಮತ್ತು ಪೀಟ್ ಅವರ ನಿರೀಕ್ಷೆಗೂ ಮೀರಿ ಒನ್‌ಪ್ಲಸ್ 1 ಸ್ಮಾರ್ಟ್‌ಫೋನ್ ಮಾರಾಟವಾಗಲು ಶುರುವಾಯಿತು. ಫ್ಯಾಕ್ಟರಿಯಲ್ಲಿ ತಯಾರಿಸಿಟ್ಟಿದ್ದ ಸಾವಿರ ಮೊಬೈಲುಗಳು ಕೆಲವೇ ಗಂಟೆಗಳಲ್ಲಿ ಬುಕ್ ಆಗಿಬಿಟ್ಟವು. ನೋಡನೋಡುತ್ತಿದ್ದಂತೆಯೇ ಮೊದಲ ದಿನವೇ 30 ಸಾವಿರ ಮೊಬೈಲುಗಳು ಮಾರಾಟವಾದವು. ಅವರು ಹುಟ್ಟಿಹಾಕಿದ್ದ ಕಮ್ಯುನಿಟಿಯಲ್ಲಿ ಜಾಹಿರಾತಾಗಿ ಆರು ತಿಂಗಳು ಕಳೆವಷ್ಟರಲ್ಲಿ ಬರೋಬ್ಬರಿ 15 ಲಕ್ಷ ಫೋನುಗಳು ಮಾರಾಟವಾಗಿದ್ದವು.

  ಮುಂದಿನದ್ದು ಇತಿಹಾಸ!

  ಒನ್‌ಪ್ಲಸ್ 1 ನಂತರ 2015ರಲ್ಲಿ ಒನ್‌ಪ್ಲಸ್ 2, 2016ರಲ್ಲಿ ಒನ್‌ಪ್ಲಸ್ 3, 3ಟಿ, 2017ರಲ್ಲಿ ಒನ್‌ಪ್ಲಸ್ 5, 5ಟಿ, ಈಗ ಒನ್‌ಪ್ಲಸ್ 6 ಅನ್ನು ಬಿಡುಗಡೆ ಮಾಡಿರುವ ಒನ್‌ಪ್ಲಸ್ ಕಂಪೆನಿ ಅವುಗಳಲ್ಲಿ ಹೆಚ್ಚು ಹೆಚ್ಚು ಗುಣವಿಶೇಷಗಳನ್ನು ಸೇರಿಸಿ ವಿಶ್ವದಾಧ್ಯಂತ ಯಶಸ್ವಿಯಾಗಿದೆ. ನಾಲ್ಕು ವರ್ಷದ ಹಿಂದೆ 15-20 ಸಾವಿರ ರೂಪಾಯಿಗೆ ಸಿಗುತ್ತಿದ್ದ ಫೋನುಗಳ ಬೆಲೆ ಇಂದು40 ಸಾವಿರದ ಹತ್ತಿರ ಬಂದಿದೆ!

  ವರ್ಷಕ್ಕೊಂದೇ ಮೊಬೈಲ್!

  ವರ್ಷಕ್ಕೊಂದೇ ಮೊಬೈಲ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಪ್ರದಾಯವನ್ನು ಒನ್‌ಪ್ಲಸ್ ಕಂಪೆನಿ ಶುರುಮಾಡಿದೆ. ಮೊಬೈಲುಗಳ ಹೊಸ ಹೊಸ ಪೀಳಿಗೆಗಳನ್ನು ಮಾರಕಟ್ಟೆಗೆ ಬಿಡುತ್ತ, ಅವುಗಳಲ್ಲಿ ಹೆಚ್ಚು ಹೆಚ್ಚು ಗುಣವಿಶೇಷಗಳನ್ನು ಸೇರಿಸುತ್ತಿದೆ. ನೇರಮಾರಾಟದ ತಂತ್ರ ಮತ್ತು ಶೂನ್ಯ ಜಾಹೀರಾತು ವೆಚ್ಚದಿಂದ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡಿ ಒನ್‌ಪ್ಲಸ್ ಕಂಪೆನಿ ಮುನ್ನುಗ್ಗುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  OnePlus started in late 2013 and early 2014 but in short span of time, this new startup smartphone company has given a tough competition to established brand. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more