Home
ಮೊಬೈಲ್

ಜಸ್ಟ್ 1,899 ರೂ.! ಸದ್ದಿಲ್ಲದೆ ಎರಡು ಹೊಸ HMD ಫೋನ್ ಬಿಡುಗಡೆ; ವಿಶೇಷತೆಗಳೇನು ಗೊತ್ತಾ?

ಅಗ್ಗದ ಮೊಬೈಲ್ ಪ್ರಿಯರಿಗೆ ಇಂದು ಡಬಲ್ ಖುಷಿ ಸುದ್ದಿ. ಒಂದೆಡೆ ಲಾವಾ ಬೋಲ್ಡ್ 5G (LAVA Bold 5G) ಅಧಿಕೃತವಾಗಿ ಬಿಡುಗಡೆಯಾಗಿದೆ. ಮತ್ತೊಂದೆಡೆ, ಎಚ್‌ಎಂಡಿ (HMD) ಕಂಪನಿ ಭಾರತದಲ್ಲಿ ಎರಡು ಬಜೆಟ್ ಸ್ನೇಹಿ 2G ಫೀಚರ್ ಫೋನ್‌ಗಳನ್ನು ಪರಿಚಯಿಸಿದೆ. ಹೌದು, ಎಚ್‌ಎಂಡಿ 130 ಮ್ಯೂಸಿಕ್ (HMD 130 Music) ಮತ್ತು ಎಚ್‌ಎಂಡಿ 150 ಮ್ಯೂಸಿಕ್ (HMD 150 Music) ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬನ್ನಿ, ಈ ಹೊಸ ಫೋನ್‌ಗಳ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಳೆದ ತಿಂಗಳು MWC 2025 ಕಾರ್ಯಕ್ರಮದಲ್ಲಿ ಎಚ್‌ಎಂಡಿ 130 ಮ್ಯೂಸಿಕ್ ಮತ್ತು ಎಚ್‌ಎಂಡಿ 150 ಮ್ಯೂಸಿಕ್ ಪ್ರದರ್ಶಿಸಲಾಯಿತು. ಇದೀಗ, ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಮೊಬೈಲ್‌ಗಳು 2.4 ಇಂಚಿನ QVGA ಡಿಸ್ಪ್ಲೇಯೊಂದಿಗೆ ಬರುತ್ತವೆ. ಇದನ್ನು ಮೆನುಗಳು ಮತ್ತು ಸಂಗೀತ ಪ್ಲೇಪಟ್ಟಿಗಳ ಸುಲಭ ಸಂಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೋನ್‌ಗಳು 2,500mAh ಬ್ಯಾಟರಿಯೊಂದಿಗೆ ಬರುತ್ತವೆ. ಈ ಮೊಬೈಲ್ 32GB ಸ್ಟೋರೇಜ್ ಅನ್ನು ಒಳಗೊಂಡಿದೆ. ವಿಶೇಷವೆಂದರೆ, ಕಂಪನಿಯು ರಾಜಸ್ಥಾನ್ ರಾಯಲ್ಸ್ ಜೊತೆಗಿನ ಪಾಲುದಾರಿಕೆಯನ್ನು ವಿಸ್ತರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ HMD 130 Music ಮತ್ತು HMD 150 Music ಲಾಂಚ್; ಬೆಲೆ, ವಿಶೇಷತೆಗಳೇನು?

HMD 130 ಮ್ಯೂಸಿಕ್ ಮತ್ತು HMD 150 ಮ್ಯೂಸಿಕ್ ಬೆಲೆ

HMD 130 ಮ್ಯೂಸಿಕ್ ಫೋನಿನ ಬೆಲೆ 1,899 ರೂ. ಆಗಿದೆ. HMD 150 ಮ್ಯೂಸಿಕ್ ಮೊಬೈಲ್ 2,399 ರೂ. ಬೆಲೆಗೆ ಬಿಡುಗಡೆಯಾಗಿದೆ. ಎರಡೂ ಮಾದರಿಗಳು ಭಾರತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ, ಕಂಪನಿಯ ಅಧಿಕೃತ (HMD.com) ವೆಬ್‌ಸೈಟ್‌ನಲ್ಲಿ ಮತ್ತು ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

HMD 130 ಮ್ಯೂಸಿಕ್ ಮತ್ತು HMD 150 ಮ್ಯೂಸಿಕ್ ವೈಶಿಷ್ಟ್ಯಗಳು

HMD 130 ಮ್ಯೂಸಿಕ್ ಮತ್ತು HMD 150 ಮ್ಯೂಸಿಕ್ ಮೊಬೈಲ್‌ಗಳು 2.4 ಇಂಚಿನ QVGA ಡಿಸ್ಪ್ಲೇ ಅನ್ನು ಹೊಂದಿವೆ. ಇದು 240 x 320 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು ಎಸ್30+ (ಆರ್‌ಟಿಒಎಸ್), 8MB ಆಂತರಿಕ ಸ್ಟೋರೇಜ್ ಆಯ್ಕೆ ಹೊಂದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 32GB ವರೆಗೆ ಸ್ಟೋರೇಜ್ ವಿಸ್ತರಿಸುವ ಸೌಲಭ್ಯ ಒಳಗೊಂಡಿದೆ. ಈ ಫೋನ್‌ಗಳು ಎಫ್‌ಎಂ ರೇಡಿಯೋ ಮತ್ತು ಎಂಪಿ3 ಪ್ಲೇಯರ್ ಸಹ ಹೊಂದಿದೆ.

ಎರಡು ಹೊಸ ಮೊಬೈಲ್‌ಗಳು 2500mAh ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿದೆ. ಇದು ಮೀಸಲಾದ ಸಂಗೀತ ಬಟನ್‌ಗಳೊಂದಿಗೆ 2W ಸ್ಪೀಕರ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ 900/1800MHz (ಡ್ಯುಯಲ್ ಸಿಮ್), ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5mm ಆಡಿಯೋ ಹೆಡ್‌ಫೋನ್ ಜ್ಯಾಕ್ ಹೊಂದಿದೆ. ಈ ಫೋನಿನ ಮೇಲ್ಭಾಗದಲ್ಲಿ ಡ್ಯುಯಲ್ ಟಾರ್ಚ್ (130 ಮ್ಯೂಸಿಕ್), ಫ್ಲ್ಯಾಶ್/ಟಾರ್ಚ್ ಹೊಂದಿರುವ QVGA ಕ್ಯಾಮೆರಾ (150 ಮ್ಯೂಸಿಕ್), 34 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯ ನೀಡುತ್ತದೆ.

ಭಾರತದಲ್ಲಿ HMD 130 Music ಮತ್ತು HMD 150 Music ಲಾಂಚ್; ಬೆಲೆ, ವಿಶೇಷತೆಗಳೇನು?

ರಾಜಸ್ಥಾನ್ ರಾಯಲ್ಸ್ ಜೊತೆಗಿನ ಪಾಲುದಾರಿಕೆ ವಿಸ್ತರಣೆ

ಐಪಿಎಲ್ 2025 ಆವೃತ್ತಿಗೆ ಎಚ್‌ಎಂಡಿ ತನ್ನ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರನಾಗಿ ರಾಜಸ್ಥಾನ ರಾಯಲ್ಸ್ ಜೊತೆಗಿನ ಪಾಲುದಾರಿಕೆಯನ್ನು ನವೀಕರಿಸಿದೆ. ಈ ಸಹಯೋಗವು ಡಿಜಿಟಲ್ ಪರಿಹಾರಗಳನ್ನು ಒದಗಿಸುವುದನ್ನು ಮುಂದುವರಿಸುವುದರ ಜೊತೆಗೆ ಕ್ರಿಕೆಟ್ ಮೇಲಿನ ಪ್ರೀತಿಯ ಮೂಲಕ ಭಾರತೀಯ ಗ್ರಾಹಕರನ್ನು ತೊಡಗಿಸಿಕೊಳ್ಳುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದರೊಂದಿಗೆ ತಮ್ಮ ಗ್ರಾಹಕರಿಗೆ ಡಿಜಿಟಲ್ ಪರಿಹಾರಗಳನ್ನು ನೀಡುವುದನ್ನು ಮುಂದುವರಿಸುವುದಾಗಿ ಕಂಪನಿ ತಿಳಿಸಿದೆ.

ಹೊಸ ಮೊಬೈಲ್ ಬಿಡುಗಡೆಯ ಬಗ್ಗೆ ಎಚ್‌ಎಂಡಿ ಇಂಡಿಯಾ ಮತ್ತು ಎಪಿಎಸಿ (APAC) ಸಿಇಒ ರವಿ ಕುನ್ವರ್ ಪ್ರತಿಕ್ರಿಯಿಸಿದ್ದಾರೆ. ಎಚ್‌ಎಂಡಿಯಲ್ಲಿ, ವಿಶ್ವಾಸಾರ್ಹ ಫೀಚರ್ ಫೋನ್‌ಗಳನ್ನು ಬಯಸುವವರಿಂದ ಹಿಡಿದು ಇತ್ತೀಚಿನ ಸ್ಮಾರ್ಟ್‌ಫೋನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರವರೆಗೆ ಭಾರತೀಯ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನಾವು ಶೀಘ್ರದಲ್ಲೇ ನಮ್ಮ ಆರಂಭಿಕ ಹಂತದ 5G ಸ್ಮಾರ್ಟ್‌ಫೋನ್ ಅನ್ನು ಹೊರತರುತ್ತೇವೆ ಎಂದು ಘೋಷಿಸಲು ನಾವು ಉತ್ಸುಕರಾಗಿದ್ದೇವೆ. ಇದು ಹೆಚ್ಚಿನ ಬಳಕೆದಾರರಿಗೆ ವೇಗದ ಸಂಪರ್ಕವನ್ನು ತರುತ್ತದೆ ಎಂದು ಭರವಸೆ ನೀಡಿದ್ದಾರೆ.

Best Mobiles in India

English summary
HMD 130 Music and HMD 150 Music launched in India: Check Price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+