ಸದ್ದಿಲ್ಲದೆ HMD Aura² ಲಾಂಚ್; 5000mAh ಬ್ಯಾಟರಿ.. 256GB ಸ್ಟೋರೇಜ್.. 9500ಕ್ಕಿಂತ ಕಡಿಮೆ!
ನೋಕಿಯಾ ಸ್ಮಾರ್ಟ್‌ಫೋನ್ ತಯಾರಿಸುವ ಎಚ್‌ಎಂಡಿ (HMD) ಗ್ಲೋಬಲ್ ಸಂಸ್ಥೆಯು ಹೊಸ ಫೋನನ್ನು ಬಿಡುಡಗೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಎಚ್‌ಎಂಡಿ ಔರಾ (HMD Aura²) ಹೆಸರಿನೊಂದಿಗೆ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು 4GB RAM + 256GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಎಚ್‌ಎಂಡಿ ಔರಾ ಸ್ಕ್ವೇರ್ಡ್ ಅನ್ನು ಎಚ್‌ಎಂಡಿ ಔರಾ² ಎಂದು ಕರೆಯಲಾಗಿದೆ. ಇದು ಅಗ್ಗದ ಫೋನ್ ಆಗಿದ್ದು, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಕಂಪನಿಯು ಯಾವುದೇ ರಾಜಿ ಮಾಡಿಕೊಂಡಿಲ್ಲ. ಬನ್ನಿ, ಈ ಹೊಸ ಹೆಚ್‌ಎಂಡಿ ಫೊನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಎಚ್‌ಎಂಡಿ ಔರಾ² ಸ್ಮಾರ್ಟ್‌ಫೋನ್ 9,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗಿದೆ. ಈ ಮೊಬೈಲ್ ಯುನಿಸಾಕ್ 9863A ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.52 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 4GB ವರ್ಚುವಲ್ RAM, ಆಂಡ್ರಾಯ್ಡ್ 14 ಗೋ ಓಎಸ್ ಮತ್ತು 5000mAh ಬ್ಯಾಟರಿ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಮತ್ತಷ್ಟು ಫೀಚರ್ಸ್ ತಿಳಿಯಲು ಮುಂದೆ ಓದಿ.

ಡಿಸ್ಪ್ಲೇ ವಿವರ
ಎಚ್‌ಎಂಡಿ ಔರಾ² ಸ್ಮಾರ್ಟ್‌ಫೋನ್ 6.52 ಇಂಚಿನ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ವಾಟರ್‌ಡ್ರಾಪ್ ನಾಚ್ ಸ್ಕ್ರೀನ್ ಆಗಿದೆ. ಈ ಡಿಸ್ಪ್ಲೇಯು 576 x 1280 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 60Hz ರಿಫ್ರೆಶ್ ದರ ಮತ್ತು 460 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದನ್ನು 20:9 ಆಕಾರ ಅನುಪಾತದ ಚೌಕದಲ್ಲಿ ನಿರ್ಮಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಎಚ್‌ಎಂಡಿ ಔರಾ² ಮೊಬೈಲ್ ಯುನಿಸಾಕ್ ಸ್ಪ್ರೆಡ್‌ಟ್ರಮ್ 9863A (Unisoc Spreadtrum 9863A) ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಗೋ ಓಎಸ್ ಜೊತೆಗೆ ಕೆಲಸ ಮಾಡುತ್ತದೆ. ನೀವು ಕಡಿಮೆ RAM ಮತ್ತು ಸ್ಟೋರೇಜ್ ಬಳಸುವ ಈ ಮೊಬೈಲ್‌ನಲ್ಲಿ ಗೂಗಲ್ ಗೋ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಈ ಅಪ್ಲಿಕೇಶನ್‌ಗಳು ಇಂಟರ್ನೆಟ್ ಮತ್ತು ಬ್ಯಾಟರಿ ಬಳಕೆ ಕಡಿಮೆ ಮಾಡುತ್ತವೆ.
RAM ಮತ್ತು ಸ್ಟೋರೇಜ್
ಎಚ್‌ಎಂಡಿ ಔರಾ² ಫೋನ್ 4GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಫೋನ್ 4GB ವರ್ಚುವಲ್ RAM ಸಹ ಹೊಂದಿದೆ. ನೀವು ಭೌತಿಕ RAM ಜೊತೆಗೆ 8GB RAM (4+4) ಬಳಸಬಹುದು. ಈ ಸ್ಮಾರ್ಟ್‌ಫೋನ್ 256GB ಸ್ಟೋರೇಜ್ ಆಯ್ಕೆ ಹೊಂದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್
ಎಚ್‌ಎಂಡಿ ಔರಾ² ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಸೆಕೆಂಡರಿ ಪೋರ್ಟ್ರೇಟ್ ಲೆನ್ಸ್ ಸಹ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಎಚ್‌ಎಂಡಿ ಔರಾ² ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು ಸಂಪೂರ್ಣ ಚಾರ್ಜ್ ಬಳಿಕ, 51 ಗಂಟೆಗಳ ಬ್ಯಾಕಪ್ ಒದಗಿಸುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಸ್ಮಾರ್ಟ್‌ಫೋನ್ 10W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಎಚ್‌ಎಂಡಿ ಔರಾ² ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೋನ್ ಅನ್‌ಲಾಕ್ ವೈಶಿಷ್ಟ್ಯವನ್ನು ಹೊಂದಿದೆ. ಇದು ಎರಡು ವರ್ಷಗಳ ಭದ್ರತಾ ಅಪ್ಡೇಟ್‌ಗಳನ್ನು ಪಡೆಯುತ್ತದೆ. ಈ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP52 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಬ್ಲೂಟೂತ್ 5.2 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಎಚ್‌ಎಂಡಿ ಔರಾ² ಬೆಲೆ ಮತ್ತು ಲಭ್ಯತೆ
ಎಚ್‌ಎಂಡಿ ಔರಾ² ಫೋನ್ 4GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದನ್ನು 9,200 ರೂ.ಗೆ (AUD 169) ಪರಿಚಯಿಸಲಾಗಿದೆ. ನೀವು ಶ್ಯಾಡೋ ಬ್ಲಾಕ್ ಮತ್ತು ಎಲೆಕ್ಟ್ರಿಕ್ ಪರ್ಪಲ್ ಬಣ್ಣಗಳಲ್ಲಿ ಖರೀದಿಸಬಹುದು. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ ಲಾಂಚ್ ಆಗಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ.


Click it and Unblock the Notifications








