Home
ಮೊಬೈಲ್

HMD Fusion 2 ಸ್ಮಾರ್ಟ್‌ಫೋನ್‌: ಶೀಘ್ರದಲ್ಲೇ ಬಿಡುಗಡೆ ಆಗುವ ಸಾಧ್ಯತೆ!

ಈ ಮೊದಲು ನೋಕಿಯಾ ಬ್ರ್ಯಾಂಡ್ ಒಡೆತನವನ್ನು ಹೊಂದುವ ಮೂಲಕ ಗಮನಸೆಳೆದಿದ್ದ ಹೆಚ್‌ಎಂಡಿ (HMD) ಕಂಪೆನಿಯು ಇತ್ತೀಚಿಗೆ ತನ್ನದೇ ಹೆಸರಿನ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಗಮನಸೆಳೆಯುತ್ತಿದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿ ಮಿಶ್ರಿತ ಯಶಸ್ಸು ಗಳಿಸಿದ HMD Fusion ಫೋನಿನ ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ HMD ಕಂಪೆನಿಯು ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ.

ಈ ಹೊಸ ಮಾದರಿಯು HMD Fusion 2 ಹೆಸರಿನಲ್ಲಿ ಬರುತ್ತಿದ್ದು, ಇದು ಹೊಸ Smart Outfits Gen 2, ಸುಧಾರಿತ ವಿನ್ಯಾಸ ಮತ್ತು ಶಕ್ತಿಶಾಲಿ ಪ್ರೊಸೆಸರ್ ಹೊಂದಿರುವ ಸೂಚನೆ ದೊರೆತಿದೆ. ಹಾಗಾದರೆ, HMD ಕಂಪೆನಿಯು ಪರಿಚಯಿಸುತ್ತಿರುವ ಹೊಸ HMD Fusion 2 ಸ್ಮಾರ್ಟ್‌ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರಬಹುದು? ಮತ್ತು ಹೊಸ ಬದಲಾವಣೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

HMD ಸ್ಮಾರ್ಟ್‌ಫೋನ್‌ಗಳ ಕುರಿತು ಸಾಕಷ್ಟು ಅಪ್‌ಡೇಟ್ ಒದಗಿಸುವ HMD_MEME'S ಎಕ್ಸ್ ಪೋಸ್ಟ್‌ನಲ್ಲಿ HMD Fusion 2 ಸ್ಮಾರ್ಟ್‌ಫೋನ್ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಅದರಂತೆ, HMD Fusion 2 ಫೋನಿನಲ್ಲಿ 120Hz ರಿಫ್ರೆಶ್ ರೇಟ್‌ ಬೆಂಬಲವಿರುವ 6.58 ಇಂಚಿನ ಫುಲ್‌ HD+ OLED ಡಿಸ್‌ಪ್ಲೇ ಇರಲಿದೆ ಎಂದು ಹೇಳಲಾಗಿದೆ. ಇದರಿಂದ ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆಯಲ್ಲಿ ಮೃದುವಾದ ಅನುಭವ ಒದಗಿಸುವ ಸಾಧ್ಯತೆಯಿದೆ.

HMD Fusion 2 ಸ್ಮಾರ್ಟ್‌ಫೋನ್‌: ಶೀಘ್ರದಲ್ಲೇ ಬಿಡುಗಡೆ ಆಗುವ ಸಾಧ್ಯತೆ!

ಕಾರ್ಯಕ್ಷಮತೆ ವಿಭಾಗದಲ್ಲಿ, ಈ HMD Fusion 2 ಫೋನ್‌ನ್ನು ಹೊಸ Qualcomm Snapdragon 6s Gen 4 ಪ್ರೊಸೆಸರ್‌ ಚಲಾಯಿಸುವ ಸಾಧ್ಯತೆ ಇದೆ. ಕ್ಯಾಮೆರಾ ವಿಭಾಗದಲ್ಲಿ, ಹಿಂಭಾಗದಲ್ಲಿ 108 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ (OIS ಸಹಿತ) ಮತ್ತು 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಇರಲಿದೆ ಎಂದು ಹೇಳಲಾಗಿದೆ.

ಹೊಸ Smart Outfits Gen 2 ತಂತ್ರಜ್ಞಾನ
ಹೊಸ HMD Fusion 2 ಸ್ಮಾರ್ಟ್‌ಫೋನಿನಲ್ಲಿ ಕಂಪನಿಯು "Smart Outfits Gen 2" ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ತಂತ್ರಜ್ಞಾನದಲ್ಲಿ Pogo Pin 2.0 ಅಳವಡಿಕೆಯಾಗಿದ್ದು, ಬಳಕೆದಾರರು ವಿಭಿನ್ನ ಉಪಕರಣಗಳನ್ನು (Outfits) ಫೋನ್‌ಗೆ ಕನೆಕ್ಟ್ ಮಾಡಬಹುದು. ಈ Outfits‌ಗಳ ಮೂಲಕ ಫೋನ್‌ನ ವಿನ್ಯಾಸ ಹಾಗೂ ಕಾರ್ಯಕ್ಷಮತೆಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಬಹುದು.

ಲೀಕ್‌ಗಳ ಪ್ರಕಾರ, ಈ ಬಾರಿ ಹಲವು ಹೊಸ Smart Outfits‌ಗಳು ಪರಿಚಯವಾಗಲಿವೆ. ಇವುಗಳಲ್ಲಿ ಕಿಕ್‌ಸ್ಟ್ಯಾಂಡ್‌ ಹೊಂದಿರುವ ಕ್ಯಾಶುಯಲ್, ವೈರ್‌ಲೆಸ್ ಚಾರ್ಜಿಂಗ್, ರಗಡ್ , ಗೇಮಿಂಗ್, ಕ್ಯಾಮೆರಾ ಗ್ರಿಪ್ , ಸ್ಪೀಕರ್ ಮತ್ತು ಸ್ಮಾರ್ಟ್ ಪ್ರೋಜೆಕ್ಟರ್ ಔಟ್‌ಫಿಟ್‌ಗಳು ಸೇರಿವೆ. ಆದರೆ, ಈ ಹೊಸ Gen 2 ಔಟ್‌ಫಿಟ್‌ಗಳು ಮೊದಲ ತಲೆಮಾರಿನ ಫ್ಯೂಷನ್ ಫೋನ್‌ಗಳಿಗೆ ಹೊಂದಿಕೊಳ್ಳುವುದಿಲ್ಲ ಎನ್ನಲಾಗಿದೆ.

ಪ್ರಸ್ತುತ HMD Fusion 2 ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಇಲ್ಲದಿದ್ದರೂ, ವರದಿಗಳ ಪ್ರಕಾರ ಅದು ಮುಂದಿನ ತಿಂಗಳುಗಳಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಬಹುದು. ನಾವು ಗಮನಿಸುವುದಾದರೆ, ಕಳೆದ ವರ್ಷ HMD Fusion ಸ್ಮಾರ್ಟ್‌ಫೋನನ್ನು ₹17,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿತ್ತು. ನಂತರ ಕೊಡುಗೆಯ ಬೆಲೆಯಾಗಿ ₹15,999 ರೂ.ಗೆ ಮಾರಾಟ ಮಾಡಲಾಯಿತು.

ಈ ಬೆಲೆಯಲ್ಲಿ HMD Fusion ಫೋನಿನಲ್ಲಿ 6.56-ಇಂಚಿನ IPS LCD ಡಿಸ್ಪ್ಲೇ, ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್ ಮತ್ತು 33W ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿ, 108MP ಮುಖ್ಯ ಹಿಂಭಾಗದ ಕ್ಯಾಮೆರಾ ಮತ್ತು 50MP ಮುಂಭಾಗದ ಕ್ಯಾಮೆರಾ, ಜೊತೆಗೆ IP54 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧದಂತಹ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿತ್ತು.

ಇದೀಗ ಕಂಪೆನಿಯು HMD Fusion 2 ತನ್ನ ವಿಶಿಷ್ಟ Smart Outfits Gen 2 ತಂತ್ರಜ್ಞಾನ ಮತ್ತು ಹೊಸ Snapdragon ಪ್ರೊಸೆಸರ್‌ನಿಂದ ಬಳಕೆದಾರರಿಗೆ ವಿಭಿನ್ನ ಮತ್ತು ಅನುಕೂಲಕರ ಸ್ಮಾರ್ಟ್‌ಫೋನ್ ಅನುಭವ ನೀಡಲು ಸಜ್ಜಾಗಿರಬಹುದು. ಭಾರತದಲ್ಲೂ ಈ ಫೋನ್‌ ಬಿಡುಗಡೆ ಆಗುವ ಸಾಧ್ಯತೆ ಇದ್ದು, ಟೆಕ್ ಪ್ರೇಮಿಗಳಲ್ಲಿ ಈಗಾಗಲೇ ಕುತೂಹಲ ಹೆಚ್ಚಿಸಿದೆ. ಈ ಹೊಸ ಫೋನ್ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+