ಶಿಯೋಮಿ, ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದೆ ನೋಕಿಯಾದ ಹೊಸ 3 ಸ್ಮಾರ್ಟ್‌ಫೋನ್ಸ್ ಸುದ್ದಿ!!

|

ಬಜೆಟ್ ಸ್ಮಾರ್ಟ್‌ಫೋನ್‌ಗಳಿಂದ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಆಳುತ್ತಿರುವ ಶಿಯೋಮಿ, ಸ್ಯಾಮ್‌ಸಂಗ್‌ ಮೊಬೈಲ್ ಕಂಪೆನಿಗಳಿಗೆ ನೋಕಿಯಾದ ಹೊಸ ಯೋಜನೆ ನಡುಕಹುಟ್ಟಿಸಿದೆ. ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಹೆಸರಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ 3 ಸ್ಮಾರ್ಟ್‌ಫೋನ್‌ಗಳನ್ನು ಹೆಚ್‌ಎಮ್‌ಡಿ ಬಿಡುಗಡೆ ಮಾಡಲು ಸಜ್ಜಾಗಿದೆ.

ಹೌದು, ನೋಕಿಯಾ 5, ನೋಕಿಯಾ 3, ಮತ್ತು ನೋಕಿಯಾ 2 ಯಶಸ್ಸಿನ ನಂತರ ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಕಡಿಮೆ ಬೆಲೆಗೆ ಮತ್ತೆ ಇದೇ ತದ್ರೂಪಿ ಸ್ಮಾರ್ಟ್‌ಫೋನ್‌ಗಳನ್ನು ಹೊಸದಾಗಿ ಬಿಡುಗಡೆ ಮಾಡಿದೆ. ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಹೆಸರಿನಲ್ಲಿ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಒದಗಿಸಲು ನೋಕಿಯಾ ಮುಂದಾಗಿದೆ.

ಶಿಯೋಮಿ, ಸ್ಯಾಮ್‌ಸಂಗ್‌ಗೆ ನಡುಕ ಹುಟ್ಟಿಸಿದೆ ನೋಕಿಯಾದ ಹೊಸ 3 ಸ್ಮಾರ್ಟ್‌ಫೋನ್ಸ್!!

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗಿಂತ ಅತ್ಯಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ನೋಕಿಯಾ ತನ್ನ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಹೊಸದಾಗಿ ನೋಕಿಯಾ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಸೇರಿಸಿಕೊಳ್ಳುತ್ತಿದೆ. ಹಾಗಾದರೆ, ನೋಕಿಯಾ ಬಿಡುಗಡೆ ಮಾಡುತ್ತಿರುವ ನೂತನ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ, ಫೀಚರ್ಸ್ ಮತ್ತು ಬೆಲೆ ಮಾಹಿತಿಯನ್ನು ಮುಂದೆ ತಿಳಿಯಿರಿ.

ನೋಕಿಯಾ ನಂಬರ್ ಗೇಮ್!!

ನೋಕಿಯಾ ನಂಬರ್ ಗೇಮ್!!

ನೋಕಿಯಾ 5, ನೋಕಿಯಾ 3, ಮತ್ತು ನೋಕಿಯಾ 2 ಯಶಸ್ಸನ್ನು ಹೆಚ್ಚು ಮಾಡಿಕೊಳ್ಳಲು ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಇದೀಗ ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಮೊದಲಿನ ಸ್ಮಾರ್ಟ್‌ಫೋನ್‌ಗಳಿಗಿಂತ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಇರುವುದನ್ನು ಹೆಚ್‌ಎಮ್‌ಡಿ ಸ್ಪಷ್ಟಪಡಿಸಿದೆ.

ಫೋನ್‌ಗಳ ಬಿಡುಗಡೆ ಯಾವಾಗ!!

ಫೋನ್‌ಗಳ ಬಿಡುಗಡೆ ಯಾವಾಗ!!

ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಹೊಸದಾಗಿ ಬಿಡುಗಡೆ ಮಾಡುತ್ತಿರುವ ನೋಕಿಯಾ 5.1, ನೋಕಿಯಾ 3.1, ಮತ್ತು ನೋಕಿಯಾ 2.1 ಮೂರು ಸ್ಮಾರ್ಟ್‌ಫೋನ್‌ಗಳು ಇದೇ ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆ ಜುಲೈ ತಿಂಗಳಿನಲ್ಲಿ ಈ ಮೂರು ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದೆ.

ನೋಕಿಯಾ 5.1!!

ನೋಕಿಯಾ 5.1!!

ನೋಕಿಯಾ 5.1 ಸ್ಮಾರ್ಟ್‌ಫೋನಿನಲ್ಲಿ 18: 9 ಆಕಾರ ಅನುಪಾತ ಫುಲ್‌ ಹೆಚ್‌ಡಿ + (1,080 x 2,160 ಪಿಕ್ಸೆಲ್) ಡಿಸ್‌ಪ್ಲೇನ್ನು ನೀಡಲಾಗಿದೆ. 2.5 ಡಿ ಗೊರಿಲ್ಲಾ ಗ್ಲಾಸ್, ಡ್ಯೂಯಲ್ ಟೋನ್ ಫ್ಲಾಶ್‌ನೊಂದಿಗೆ ಹೊಸ 16 ಎಂಪಿ ರಿಯರ್ ಹಾಗೂ 8 MP ಸೆಲ್ಫಿ ಕ್ಯಾಮರಾ, 2,970 mAh ಬ್ಯಾಟರಿ, 3 ಜಿಬಿ RAM / 32 ಜಿಬಿ ಮೆಮೊರಿಯನ್ನು ಹೊಂದಿರುವ ನೋಕಿಯಾ 5.1 ಸ್ಮಾರ್ಟ್‌ಫೋನ್ 13,999 ಸಾವಿರ ರೂ. ಬೆಲೆಯನ್ನು ಹೊಂದಿರಲಿದೆ.

ನೋಕಿಯಾ 3.1

ನೋಕಿಯಾ 3.1

ನೋಕಿಯಾದ ಅತ್ಯಂತ ಯಶಸ್ವಿ ಸ್ಮಾರ್ಟ್‌ಫೋನ್ ನೋಕಿಯಾ 3 ಮಾದರಿಯು ಹಲವಾರು ಸುಧಾರಣೆಗಳೊಂದಿಗೆ ನೋಕಿಯಾ 3.1 ಸ್ಮಾರ್ಟ್‌ಫೋನ್ ಪ್ರವೇಶಿಸುತ್ತಿವೆ. 18: 9 ಅನುಪಾತದಲ್ಲಿ 5.2 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ, ಒಕ್ಟಾ ಕೋರ್ ಚಿಪ್‌ಸೆಟ್, 2 ಜಿಬಿ / 3 ಜಿಬಿ RAM, 16 ಜಿಬಿ / 32 ಜಿಬಿ ಮೆಮೊರಿ, 13 ಎಂಪಿ ರಿಯರ್ ಕ್ಯಾಮೆರಾ, ನೋಕಿಯಾ 3 (2018) , ಆಂಡ್ರಾಯ್ಡ್ 8.1 ಓರಿಯೊ ಮತ್ತು 2,990mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ 9,000 ರೂಪಾಯಿ ಬೆಲೆಯನ್ನು ಹೊಂದಿರಲಿದೆ.

Nokia 7 Plus now up for sale in India - GIZBOT KANNADA
ನೋಕಿಯಾ 2.1!

ನೋಕಿಯಾ 2.1!

ನೋಕಿಯಾ 5.1, ನೋಕಿಯಾ 3.1 ಸ್ಮಾರ್ಟ್‌ಫೋನ್‌ಗಳ ಜೊತೆಯಲ್ಲಿ ಆಂಡ್ರಾಯ್ಡ್ ಓರಿಯೊ ಗೋ ಆವೃತ್ತಿಯ ನೋಕಿಯಾ 2.1 ಸ್ಮಾರ್ಟ್‌ಫೋನ್ ಕೂಡ ಬಿಡುಗಡೆಯಾಗುತ್ತಿದೆ. 5.5 ಇಂಚಿನ ಹೆಚ್‌ ಡಿಸ್‌ಪ್ಲೇ, ಸ್ನಾಪ್ಡ್ರಾಗನ್ 425 ಚಿಪ್‌ಸೆಟ್, 1 ಜಿಬಿ RAM, 8 ಜಿಬಿ ಶೇಖರಣಾ (4.7 ಜಿಬಿ ಲಭ್ಯವಿದೆ), ಮೈಕ್ರೊ ಎಸ್‌ಡಿ ಸ್ಲಾಟ್ ಮತ್ತು 4,000mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗುತ್ತಿರುವ ನೋಕಿಯಾ 2.1 ಬೆಲೆ 7,೦೦೦ ಸಾವಿರ ರೂಪಾಯಿಗಳಾಗಿರಲಿವೆ.

Best Mobiles in India

English summary
Nokia has finally pulled the curtains from its most anticipated smartphones. The company has unveiled a trio of new smartphones today-the Nokia 2.1, Nokia 3.1 and Nokia 5.1. . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X