Nokia: ಮೂರು ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾದ HMD ! ಫೀಚರ್ಸ್ ಏನಿರಲಿವೆ ?
ಹೆಚ್‌ಎಂಡಿ (HMD) ಗ್ಲೋಬಲ್ ಎರಡು ಮಿಡ್‌ರೇಂಜ್ ಡಿವೈಸ್‌ಗಳು ಸೇರಿ ಮೂರು ನೂತನ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿದ ಪಲ್ಸ್ ಹ್ಯಾಂಡ್‌ಸೆಟ್‌ಗಳಿಗೆ ಹೋಲುವ ಫಿಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿ ತಿಳಿಸಿದೆ. ಈ ಹಿಂದಿನ ನೋಕಿಯಾ (Nokia) ಫೋನ್‌ಗಳಂತೆಯೇ ಮುಂಬರುವ ಹೆಚ್‌ಎಂಡಿ ಸಾಧನಗಳು ರೋಮಾಂಚಕ ಬಣ್ಣಗಳು ಮತ್ತು ಸೂಕ್ಷ್ಮವಾದ ರೇಖೆಗಳಲ್ಲಿ ಲಭ್ಯವಾಗಬಹುದು ಎಂದು ವರದಿ ತಿಳಿಸಿದೆ.
ನೋಕಿಯಾಮೊಬ್ (Nokiamob) ವರದಿ ಪ್ರಕಾರ, ಮೂರು ಸ್ಮಾರ್ಟ್‌ಫೋನ್‌ಗಳಿಗೆ HMD ನೈಟ್‌ಹಾಕ್ (HMD Nighthawk), HMD ಟಾಮ್‌ಕ್ಯಾಟ್ ( HMD Tomcat) ಮತ್ತು HMD ಪ್ರಾಜೆಕ್ಟ್ ಫ್ಯೂಷನ್ (HMD Project Fusion) ಎಂದು ಹೆಸರಿಡುವ ಸಾಧ್ಯತೆಗಳಿವೆ. ಮೊದಲ ಎರಡು ಡಿವೈಸ್‌ಗಳು ಮಧ್ಯಮ ಶ್ರೇಣಿಯ ಡಿವೈಸ್‌ಗಳಾಗಿರಲಿವೆ, ಆದರೆ ಇನ್ನೊಂದು ಸ್ವಲ್ಪ ಒರಟಾದ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ತಿಳಿಸಿದೆ. ಗಮನಿಸಬೇಕಾದ ಅಂಶವೇನೆಂದರೆ ಈ ಸ್ಮಾರ್ಟ್‌ಫೋನ್‌ಗಳ ಹೆಸರುಗಳು ಇನ್ನೂ ಅಂತಿಮವಾಗಿಲ್ಲ.

HMD ನೈಟ್‌ಹಾಕ್ ನಿರೀಕ್ಷಿತ ಫೀಚರ್ಸ್:
ಪಟ್ಟಿಯಲ್ಲಿರುವ ಮೊದಲ ಸ್ಮಾರ್ಟ್‌ಫೋನ್ HMD Nighthawk ಎಂದು ವರದಿಯಾಗಿದೆ. ಇದು 120Hz ರಿಫ್ರೆಶ್ ರೇಟ್‌ನೊಂದಿಗೆ ಫುಲ್ HD+ ಅಮೋಲ್ಡ್ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದು OIS ಜೊತೆಗೆ 108MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಸೆಕೆಂಡರಿ ಸೆನ್ಸಾರ್ ಕ್ಯಾಮೆರಾ ಹೊಂದಿರಬಹುದು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆಯಲಿದೆ ಎಂದು ವರದಿಯಾಗಿದೆ. ಮುಂಭಾಗದಲ್ಲಿ 32MP ಕ್ಯಾಮೆರಾ ಹೊಂದಿರಬಹುದು ಎಂದು ವರದಿಯಾಗಿದೆ.
ಕ್ವಾಲ್ಕಾಮ್ (Qualcomm) ನಿಂದ ಸ್ನಾಪ್‌ಡ್ರಾಗನ್ 4s Gen 1 ಚಿಪ್ ಹೊಂದಿರಬಹುದು ಹಾಗೂ ಇದು ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡಲಿದೆ ಎಂದು ವರದಿಯಾಗಿದೆ, ಜೊತೆಗೆ 5,000mAh ಬ್ಯಾಟರಿ ಹೊಂದಿರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇತರೆ ಫೀಚರ್ಸ್‌ಗಳನ್ನು ನೋಡುವುದಾದರೆ, ಆಂಡ್ರಾಯ್ಡ್ 14, ಬ್ಲೂಟೂತ್ 5.1, ವೈ-ಫೈ 5, ಡ್ಯುಯಲ್ ಸ್ಪೀಕರ್‌ಗಳು, NFC ಬೆಂಬಲ ಮತ್ತು 3.5mm ಹೆಡ್‌ಫೋನ್ ಜಾಕ್ ಒಳಗೊಂಡಿರಬಹುದು, ಜೊತೆಗೆ ಈ ಫೋನ್ 8GB+128GB ವೇರಿಯಂಟ್ ಸುಮಾರು 22,500 ರೂ. ಬೆಲೆ ಹೊಂದಿರಬಹುದು ಎಂದು ವರದಿಯಾಗಿದೆ.
HMD ಟಾಮ್‌ಕ್ಯಾಟ್ ನಿರೀಕ್ಷಿತ ಫೀಚರ್ಸ್: ವರದಿ ಪ್ರಕಾರ, HMD ಟಾಮ್‌ಕ್ಯಾಟ್ ಕೂಡ 120Hz ರಿಫ್ರೆಶ್ ರೇಟ್ ಮತ್ತು HDR 10+ ಬೆಂಬಲದೊಂದಿಗೆ ಫುಲ್ HD+ ಅಮೋಲ್ಡ್ ಡಿಸ್‌ಪ್ಲೇ ಹೊಂದಿರಬಹುದು, ಹೆಚ್ಚುವರಿಯಾಗಿ ಇದು 4nm ಆರ್ಕಿಟೆಕ್ಚರ್ ಆಧಾರಿತ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು. ಕ್ಯಾಮೆರಾ ವಿಷಯದಲ್ಲಿ ಇದು OIS ನೊಂದಿಗೆ 108MP ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿರಬಹುದು, ಜೊತೆಗೆ 8MP ಮತ್ತು 2MP ಸೆಕೆಂಡರಿ ಮತ್ತು ತೃತೀಯ ಸೆನ್ಸಾರ್‌ಗಳನ್ನು ಹೊಂದಿರಬಹುದು ಎಂದು ವರದಿ ತಿಳಿಸಿದೆ.
ಇದು 33W ಚಾರ್ಜರ್ ಜೊತೆಗೆ 4,900mAh ಬ್ಯಾಟರಿ, IP67 ರೇಟಿಂಗ್, ಸ್ಟೀರಿಯೋ ಸ್ಪೀಕರ್‌ಗಳು ಮತ್ತು NFC ಬೆಂಬಲದಂತಹ ಇತರ ವೈಶಿಷ್ಟ್ಯಗಳನ್ನು ಪಡೆಯಲಿದೆ ಎಂದು ವರದಿಯಾಗಿದೆ. HMD ಟಾಮ್‌ಕ್ಯಾಟ್ 8GB+256GB ವೇರಿಯಂಟ್ ಸುಮಾರು 36,000 ರೂ. ಬೆಲೆ ಹೊಂದಿರಬಹುದು ಎಂದು ವರದಿ ತಿಳಿಸಿದೆ.
HMD ಪ್ರಾಜೆಕ್ಟ್ ಫ್ಯೂಷನ್ ನಿರೀಕ್ಷಿತ ಫೀಚರ್ಸ್: ಇದು ಮೂಲ ಮಾದರಿಯಾಗಿರಬಹುದು, ಇದು 6.6 ಇಂಚಿನ IPS ಫುಲ್ HD+ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿಯಾಗಿದೆ. 8GB RAM ಹೊಂದಿರುವ ಕ್ವಾಲ್ಕಾಮ್ QCM6490 ಚಿಪ್ ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡುತ್ತದೆ. ಇದು 30W ವೈರ್ಡ್ ಮತ್ತು 15W ವೈರ್‌ಲೆಸ್ ವೇಗದ ಚಾರ್ಜರ್ ಜೊತೆಗೆ 4,800mAh ಬ್ಯಾಟರಿ ಹೊಂದಿರಬಹುದು ಎಂದು ಹೇಳಲಾಗಿದೆ.
ಗಮನಿಸಿಬೇಕಾದ ಅಂಶವೇನೆಂದರೆ ಈ ಮೊಬೈಲ್‌ಗಳ ಬಿಡುಗಡೆ ಕುರಿತು ಯಾವುದೇ ಅಧಿಕೃತವಾದ ಮಾಹತಿ ನೀಡಿಲ್ಲ ಮತ್ತು ಈ ಲೇಖನದಲ್ಲಿ ಉಲ್ಲೇಖಿಸಿರುವ ಅಂಶಗಳು ಅನಧಿಕೃತ ವರದಿಯನ್ನು ಆಧರಿಸಿವೆ.


Click it and Unblock the Notifications








