Home
ಮೊಬೈಲ್

ಮತ್ತೆ ಧೂಳೆಬ್ಬಿಸಲು ಸಿದ್ಧವಾದ Nokia Lumia 920 ಫೋನ್!: ಏನಿದೆ ಹೊಸ ಫೀಚರ್?

HMD ಗ್ಲೋಬಲ್ ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಫೀಚರ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಇದಲ್ಲದೇ, HMD ಗ್ಲೋಬಲ್ Nokia ಸ್ಮಾರ್ಟ್‌ಫೋನ್‌ಗಳನ್ನು ಮರು ಬಿಡುಗಡೆ ಮಾಡುವುದರಲ್ಲಿ ಪ್ರಸಿದ್ಧಿ ಪಡೆದಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚಿನವು ಬಜೆಟ್ ಫೋನ್‌ಗಳೇ ಆಗಿವೆ. ಈ ಮಧ್ಯೆ, HMDಯು ನೋಕಿಯಾ N9 ನಲ್ಲಿ ಮೊದಲು ಪರಿಚಯಿಸಲಾದ Nokia Lumia 920ರ ಐಕಾನಿಕ್ ಫ್ಯಾಬುಲಾ ವಿನ್ಯಾಸವನ್ನು HMD Skyline (HMD Skyline Nokia Lumia 920) ಎಂಬ ಹೊಸ ಮಧ್ಯ ಶ್ರೇಣಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ತರಲು ಮುಂದಾಗಿದೆ.

ಜನಪ್ರಿಯ ಮತ್ತು ಹಳೆಯ ಫೋನ್ ನೋಕಿಯಾ ಕಂಪನಿಯ ಮಾಲೀಕಕತ್ವದ HMD ಗ್ಲೋಬಲ್ ಬಿಡುಗಡೆ ಮಾಡುವ ಮೊಬೈಲ್ ಫೋನ್‌ಗಳು ಗ್ರಾಹಕರಿಗೆ ಬಜೆಟ್ ಒಳಗೆ ಲಭ್ಯವಿರುತ್ತದೆ. ಅದರಂತೆ, ಈ ಹಿಂದೆ ಬಿಡುಗಡೆಯಾದ ನೋಕಿಯಾ ಲುಮಿಯಾದ ಐಕಾನಿಕ್ ಫ್ಯಾಬುಲಾ ವಿನ್ಯಾಸವನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ. ಈ ಫೋನ್ 6.4 ಇಂಚಿನ AMOLED FHD+ ಡಿಸ್ಪ್ಲೇಯನ್ನು, 120Hz ರಿಫ್ರೆಶ್ ರೇಟ್ ಹೊಂದಿರಲಿದೆ. ಇದು Snapdragon 7s Gen 2 ಪ್ರೊಸೆಸರ್‌ನಿಂದ ಚಾಲಿತವಾಗಿರಲಿದೆ ಎಂದು ತಿಳಿದುಬಂದಿದೆ.

ಮತ್ತೆ ಧೂಳೆಬ್ಬಿಸಲು ಸಿದ್ಧವಾದ Nokia Lumia 920 ಫೋನ್!: ಏನಿದೆ ಹೊಸ ಫೀಚರ್?

ಈ ಫೋನ್ ಬಿಡುಗಡೆ ಮತ್ತು ಬೆಲೆಯ ಬಗ್ಗೆ ಕಂಪನಿಯು ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿಗಳನ್ನು ನೀಡಿಲ್ಲ. ಆದರೆ, Nokiamob.net ವರದಿಗಳ ಪ್ರಕಾರ, ಇದು HMD Skyline Nokia Lumia 920 ಡಿಸೈನಿಂಗ್ ಮೂಲಕ ಮಾರುಕಟ್ಟೆ ಬರಲಿದೆ. ಈ ಸ್ಮಾರ್ಟ್‌ಫೋನ್‌ ಅನ್ನು ಎರಡು ವರ್ಷಗಳ ಹಿಂದೆ 2012ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಕೋಡ್ ಹೆಸರನ್ನು ಪ್ರಸ್ತುತ ಟಾಮ್‌ಕ್ಯಾಟ್, ಕ್ಲಾಸಿಕ್ ನೋಕಿಯಾ ಲುಮಿಯಾ 920 ಎಂಬ ವಿನ್ಯಾಸದಲ್ಲಿ, ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಗಿರಲಿದೆ.

HMD Skyline Nokia Lumia 920 ಫೀಚರ್‌ಗಳೇನು?

ಈ ಮೊಬೈಲ್ Snapdragon 7s Gen 2 ಪ್ರೊಸೆಸರ್‌ನಿಂದ ಚಾಲಿತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು 6.4 ಇಂಚಿನ AMOLED FHD+ ಡಿಸ್ಪ್ಲೇಯನ್ನು ಮತ್ತು 120Hz ರಿಫ್ರೆಶ್ ರೇಟ್ ಹೊಂದಿರಲಿದೆ. ಈ ಫೋನ್ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಒಳಗೊಂಡಿರಲಿದೆ. ಇದು ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ನಂತೆ ಕಾಣುತ್ತದೆ. ಇತರ HMD ನಿರ್ಮಿತ Nokia ಸ್ಮಾರ್ಟ್‌ಫೋನ್‌ಗಳಂತೆ ಪ್ಯೂರ್ ಸ್ಟಾಕ್ ಆಂಡ್ರಾಯ್ಡ್ ಅನ್ನು ಅವಲಂಭಿಸಿದ್ದು, ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ.

HMD Skyline Nokia Lumia 920 ಕ್ಯಾಮೆರಾ ಸೆಟಪ್

ಇನ್ನೂ HMD Skyline Nokia Lumia 920 ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು 8MP MP ಅಲ್ಟ್ರಾ-ವೈಡ್ ಮತ್ತು 2MP ಡೆಪ್ತ್/ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದರ ಪ್ರೈಮರಿ ಕ್ಯಾಮೆರಾ 108MP ಸೆನ್ಸರ್ ಅನ್ನು ಮತ್ತು ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಇರಲಿದೆ. ಈ ಮೊಬೈಲ್ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೀಚರ್‌ಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದೆ.

4 ಕಡೆಗಳಲ್ಲಿ ಕರ್ವ್ ಡಿಸ್ಪ್ಲೇ

Nokiamob.net ವರದಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್‌ IP67 ವಾಟರ್ ಮತ್ತು ಡಸ್ಟ್ ಪ್ರೊಫ್ ಆಗಿದೆ. ಇದರಲ್ಲಿ ಸ್ಟಿರಿಯೊ ಸ್ಪೀಕರ್ ಸೆಟಪ್ ಮತ್ತು ಫೋನ್ ಡಿಸ್ಪ್ಲೇಯಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದು ಹೆಚ್ಚು ತೆಳುವಾದ ಬೆಜೆಲ್‌ಗಳನ್ನು ಒಳಗೊಂಡಿರುವ ದೊಡ್ಡ ಡಿಸ್‌ಪ್ಲೇ ಹೊಂದಿರಲಿದೆ. ಜೊತೆಗೆ, ವರ್ಣರಂಜಿತ ಪ್ಲಾಸ್ಟಿಕ್ ಬ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿದ್ದು, 4 ಕಡೆಗಳಲ್ಲಿ ಕರ್ವ್ ಡಿಸ್ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಒಟ್ಟಾರೆ, HMD ಗ್ಲೋಬಲ್ ಅತ್ಯುತ್ತಮವಾದ ಫೀಚರ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವಲ್ಲಿ ಖ್ಯಾತಿ ಪಡೆದಿದೆ. ಇದರ ಜೊತೆಗೆ, ಆಗಾಗ್ಗೆ Nokia ಸ್ಮಾರ್ಟ್‌ಫೋನ್‌ಗಳನ್ನು ರೀ ರಿಲೀಸ್‌ ಮಾಡುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಅದರಂತೆ ಇದೀಗ, 32MP ಸೆಲ್ಫಿ ಕ್ಯಾಮೆರಾದ HMD Skyline Nokia Lumia 920 ಡಿಸೈನ್ ಮತ್ತೆ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಸೂಚನೆ ನೀಡಿದೆ. ನೀವು ಬಜೆಟ್‌ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಹೊಂದಿದ್ದರೆ, ಕಂಪನಿಯ ಅಧಿಕೃತ ಪ್ರಕಟಣೆ ವರೆಗೆ ಕಾಯಲೇಬೇಕು.

Best Mobiles in India

English summary
HMD Global is known for resurrecting classic Nokia phones. This time around, HMD seems to be bringing back the legendary Nokia Lumia 920’s iconic Fabula design, first introduced on the Nokia N9, in the form of a new mid-tier Android smartphone called HMD Skyline.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+