Home
ಮೊಬೈಲ್

ಭಾರತಕ್ಕೆ ಕಾಲಿಟ್ಟ 'ಹಾನರ್ 10 ಲೈಟ್'!..ಜನವರಿ 20 ರಿಂದ ಭರ್ಜರಿ ಸೇಲ್!!

ಕಳೆದ ನವೆಂಬರ್ ತಿಂಗಳಿನಲ್ಲಿ ಚೀನಾದಲ್ಲಿ ಬಿಡುಗಡೆಯಾಗಿ ಜನಪ್ರಿಯತೆಗಳಿಸಿದ್ದ ಹುವಾವೆಯ ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ 'ಹಾನರ್ 10 ಲೈಟ್' ಭಾರತದಲ್ಲಿಂದು ಬಿಡುಗಡೆ ಕಂಡಿದೆ. ಭಾರತ ಮತ್ತು ಚೀನಾಗಳಲ್ಲಿ ಹೆಚ್ಚು ಸದ್ದು ಮಾಡಿದ್ದ 'ಹಾನರ್ 9 ಲೈಟ್' ಫೋನಿನ ಮುಂದಿನ ಭಾಗವಾಗಿ ಮಾರುಕಟ್ಟೆಗೆ ಕಾಲಿಟ್ಟಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಪೋನ್ ಈಗ ದೇಶದ ಮೊಬೈಲ್ ಪ್ರಿಯರ ಕೈ ಸೇರಲು ತಯಾರಾಗಿದೆ.

ಇಂದು ಬಿಡಗಡೆಯಾಗಿರುವ 'ಹಾನರ್ 10 ಲೈಟ್' ಇದೇ ತಿಂಗಳು 20 ನೇ ತಾರೀಖಿನಿಂದ ಮಾರಾಟಕ್ಕೆ ಬರುತ್ತಿದ್ದು, ಫ್ಲಿಪ್‌ಕಾರ್ಟ್ ಹಾಗೂ ಹುವಾವೆ ಹಾನರ್ ಇಂಡಿಯಾ ವೆಬ್ ತಾಣಗಳಲ್ಲಿ ಮುಂದಿನ ವಾರದಿಂದ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. ಈಗಲೇ ಮುಂಗಡ ಬುಕಿಂಗ್ ಆರಂಭವಾಗಿರುವ ಸ್ಮಾರ್ಟ್‌ಫೋನ್ ಖರೀದಿಗೆ 2,200 ರೂ. ಮೌಲ್ಯದ ಜಿಯೋ ಕ್ಯಾಶ್‌ಬ್ಯಾಕ್ ಹಾಗೂ 2,800 ರೂ. ಮೌಲ್ಯದ ಕ್ಲಿಯರ್‌ಟ್ರಿಪ್ ವೋಚರ್‌ಗಳು ದೊರೆಯಲಿದೆ.

ಭಾರತಕ್ಕೆ ಕಾಲಿಟ್ಟ 'ಹಾನರ್ 10 ಲೈಟ್'!..ಜನವರಿ 20 ರಿಂದ ಭರ್ಜರಿ ಸೇಲ್!!

ಚೀನಾ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಮೊಬೈಲ್ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಗೆ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಹಾಗಾದರೆ, ಇಂದು ಭಾರತದಲ್ಲಿ ಲಾಂಚ್ ಆಗಿರುವ ಹಾನರ್ 10 ಲೈಟ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಭಾರತದಲ್ಲಿ ಫೋನ್ ಬೆಲೆಗಳು ಎಷ್ಟು? ಭಾರತದಲ್ಲಿ ಹಾನರ್ 10 ಲೈಟ್ ಫೋನ್ ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

 ಸ್ಮಾರ್ಟ್‌ಫೋನ್ ವಿನ್ಯಾಸ!

ಸ್ಮಾರ್ಟ್‌ಫೋನ್ ವಿನ್ಯಾಸ!

ಮಧ್ಯಮ ವರ್ಗದ ಮೊಬೈಲ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಹಾನರ್ ಕಂಪೆನಿ ಬಜೆಟ್ ಬೆಲೆಯ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್‌ಗೆ ಪ್ರೀಮಿಯಮ್ ಟಚ್ ನೀಡಿದೆ. ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಬಹುತೇಕ ಬೆಜೆಲ್ ಲೆಸ್ ಆಗಿದ್ದು, ವಾಟರ್‌ಡ್ರಾಪ್ ಶೈಲಿಯ ನೋಚ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ಲುಕ್ ಅನ್ನು ಹೆಚ್ಚಿಸಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆಯ ವಿನ್ಯಾಸವನ್ನು ಹೊಂದಿದೆ.

ಸಾಮರ್ಥ್ಯ

ಸಾಮರ್ಥ್ಯ

'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ 21-ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಮೊದಲೇ ಹೇಳಿದಂತೆ ಡಿಸ್‌ಪ್ಲೇ ಬಹುತೇಕ ಬೆಜೆಲ್‌ಲೆಸ್ ಆಗಿದೆ. 1080x2340 ಸಾಮರ್ಥ್ಯದ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. 415ppi ಪಿಕ್ಸೆಲ್ ಸಾಂದ್ರತೆಯ ಈ ಡಿಸ್‌ಪ್ಲೇ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವುದು ಇದಕ್ಕೆ ಕಾರಣ ಎನ್ನಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ ಆಕ್ಟಕೋರ್ 'ಹಿಸಿಲಿಕಾನ್ ಕಿರಿನ್ 710' ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB ಮತ್ತು 6GB RAM ವೆರಿಯಂಟ್‌ಗಳೊಂದಿಗೆ 64GB ಮತ್ತು 128GB ಸಂಗ್ರಹಣಾ ಆಯ್ಕೆಗಳನ್ನು ಬಿಡುಗಡೆಯಾಗಿರುವ ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಇರುವುದು ವಿಶೇಷತೆ ಎಂದು ಹೇಳಬಹುದು.

ಕ್ಯಾಮೆರಾಗಳು ಹೇಗಿವೆ?

ಕ್ಯಾಮೆರಾಗಳು ಹೇಗಿವೆ?

'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ f/1.8 ಅಪಾರ್ಚರ್‌ನ 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಾಗೆಯೇ, ಮುಂಭಾಗದಲ್ಲಿ f/2.0 ಅಪಾರ್ಚರ್‌ನೊಂದಿಗೆ 24 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಕ್ಯಾಮೆರಾ ತಂತ್ರಜ್ಞಾನ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

 ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3,400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ 4ಜಿ ವೋಲ್ಟ್, ವೈ-ಫೈ 802.11 802.11, ಬ್ಲೂಟೂತ್ 4.2 ಎಲ್‌ಇ, 3.5 ಎಂಎಂ ಆಡಿಯೋ ಜಾಕ್, ಜಿಪಿಎಸ್ / ಎಜಿಪಿಎಸ್‌ನಂತರ ಸಾಮಾನ್ಯ ಫೀಚರ್ಸ್‌ಗಳನ್ನು ನೋಡಬಹುದು. ಬೆಳಕಿನ ಸಂವೇದಕ, ದಿಕ್ಸೂಚಿ, ಗುರುತ್ವ ಸಂವೇದಕ, ಗೈರೋಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 162 ಗ್ರಾಂ ತೂಕವನ್ನು ಹೊಂದಿರುವುದಾಗಿ ಕಂಪೆನಿ ತಿಳಿಸಿದೆ.

'ಹಾನರ್ 10 ಲೈಟ್' ಬೆಲೆ ಎಷ್ಟು?

'ಹಾನರ್ 10 ಲೈಟ್' ಬೆಲೆ ಎಷ್ಟು?

ಭಾರತದಲ್ಲಿ ಇಂದು ಬಿಡುಗಡೆಯಾಗಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನ 4 ಜಿಬಿ RAM ಹಾಗೂ 64 ಜಿಬಿ ಆಂತರಿಕ ಸ್ಟೋರೇಜ್ ಇರುವ ಆವೃತ್ತಿಯ ಬೆಲೆ 13,999 ರೂ.ಗಳಾಗಿವೆ. ಹಾಗೂ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಮೆಮೊರಿ ಇರುವ ಆವೃತ್ತಿಯ ಬೆಲೆ 17,999 ರೂ.ಗಳಾಗಿವೆ. ಜನವರಿ 20ರಿಂದ ಇದು ಫ್ಲಿಪ್‌ಕಾರ್ಟ್ ಹಾಗೂ ಹಾನರ್ ವೆಬ್ ತಾಣಗಳ ಮೂಲಕ ಲಭ್ಯವಾಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ. .

Best Mobiles in India

English summary
Honor 10 Lite was launched in China back in November. Indian buyers can get Honor 10 Lite through Flipkart and the official HiHonor India store starting 12 am (Midnight) IST on January 20.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+