ಇಂದು ಬಿಡುಗಡೆಯಾದ 'ಹಾನರ್ 10 ಲೈಟ್' ಫೋನ್ ಬೆಲೆ ಕೇವಲ 14,400 ರೂ.!!

|

ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿರುವ ಹುವಾವೆ ಒಡೆತನದ ಮೊಬೈಲ್ ಕಂಪೆನಿ 'ಹಾನರ್' ಇದೀಗ ಮತ್ತೊಂದು ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ. ಭಾರತ ಮತ್ತು ಚೀನಾಗಳಲ್ಲಿ ಹೆಚ್ಚು ಸದ್ದು ಮಾಡಿದ್ದ 'ಹಾನರ್ 9 ಲೈಟ್' ಸ್ಮಾರ್ಟ್‌ಫೋನಿನ ಮುಂದಿನ ಭಾಗವಾಗಿ ಈಗ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಅನ್ನು ಕಂಪೆನಿ ಚೀನಾದಲ್ಲಿ ಪರಿಚಯಿಸಿದೆ.

ಇಂದಷ್ಟೇ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ತಕ್ಷಣವೇ ಮೊಬೈಲ್ ಫೀಚರ್ಸ್ ವೈರಲ್ ಆಗಿದೆ. 6.21-ಇಂಚಿನ ಡಿಸ್‌ಪ್ಲೇ, ವಾಟರ್‌ಡ್ರಾಪ್ ಶೈಲಿಯಲ್ಲಿ ನೋಚ್, ಕಿರಿನ್ 710 ಸಿಒಸಿ ಪ್ರೊಸೆಸರ್ ಸೇರಿದಂತೆ 6ಜಿಬಿ RAM ಸಾಮರ್ಥ್ಯದಲ್ಲಿ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಹಾನರ್ 10 ಲೈಟ್ ಸ್ಮಾರ್ಟ್‌ಫೋನ್ ಚೀನಾ ಸೇರಿದಂತೆ ವಿಶ್ವ ಮೊಬೈಲ್ ಪ್ರಿಯರನ್ನು ಸೆಳೆಯುವಲ್ಲಿ ಸಫಲವಾಗಿದೆ.

ಇಂದು ಬಿಡುಗಡೆಯಾದ 'ಹಾನರ್ 10 ಲೈಟ್' ಫೋನ್ ಬೆಲೆ ಕೇವಲ 14,400 ರೂ.!!

ಚೀನಾದಲ್ಲಿ ಅಗ್ರಗಣ್ಯನಾಗಿ ನಿಂತಿರುವ ಹುವಾವೆ ಕಂಪೆನಿ ತನ್ನದೇ ನೂತನ ಬ್ರ್ಯಾಂಡ್‌ನ ಒಂದು ಸ್ಮಾರ್ಟ್‌ಫೋನ್ ಮೂಲಕ ಚೀನಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಹಾಗಾದರೆ, ಚೀನಾದಲ್ಲಿ ಇಂದು ಲಾಂಚ್ ಆಗಿರುವ ಹಾನರ್ 10 ಲೈಟ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಚೀನಾದಲ್ಲಿ ಫೋನ್ ಬೆಲೆಗಳು ಎಷ್ಟು? ಭಾರತದಲ್ಲಿ ಹಾನರ್ 10 ಲೈಟ್ ಫೋನ್ ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸ್ಮಾರ್ಟ್‌ಫೋನ್ ವಿನ್ಯಾಸ!

ಸ್ಮಾರ್ಟ್‌ಫೋನ್ ವಿನ್ಯಾಸ!

ಚೀನಾದ ಮಧ್ಯಮ ವರ್ಗದ ಮೊಬೈಲ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಹಾನರ್ ಕಂಪೆನಿ ಬಜೆಟ್ ಬೆಲೆಯ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್‌ಗೆ ಪ್ರೀಮಿಯಮ್ ಟಚ್ ನೀಡಿದೆ. ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಬಹುತೇಕ ಬೆಜೆಲ್ ಲೆಸ್ ಆಗಿದ್ದು, ವಾಟರ್‌ಡ್ರಾಪ್ ಶೈಲಿಯ ನೋಚ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ಲುಕ್ ಅನ್ನು ಹೆಚ್ಚಿಸಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆಯ ವಿನ್ಯಾಸವನ್ನು ಹೊಂದಿದೆ.

ಡಿಸ್‌ಪ್ಲೇ ಸಾಮರ್ಥ್ಯ ಹೇಗಿದೆ?

ಡಿಸ್‌ಪ್ಲೇ ಸಾಮರ್ಥ್ಯ ಹೇಗಿದೆ?

'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ 21-ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಮೊದಲೇ ಹೇಳಿದಂತೆ ಡಿಸ್‌ಪ್ಲೇ ಬಹುತೇಕ ಬೆಜೆಲ್‌ಲೆಸ್ ಆಗಿದೆ. 1080x2340 ಸಾಮರ್ಥ್ಯದ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. 415ppi ಪಿಕ್ಸೆಲ್ ಸಾಂದ್ರತೆಯ ಈ ಡಿಸ್‌ಪ್ಲೇ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವುದು ಇದಕ್ಕೆ ಕಾರಣ ಎನ್ನಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ ಆಕ್ಟಕೋರ್ 'ಹಿಸಿಲಿಕಾನ್ ಕಿರಿನ್ 710' ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB ಮತ್ತು 6GB RAM ವೆರಿಯಂಟ್‌ಗಳೊಂದಿಗೆ 64GB ಮತ್ತು 128GB ಸಂಗ್ರಹಣಾ ಆಯ್ಕೆಗಳನ್ನು ಬಿಡುಗಡೆಯಾಗಿರುವ ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಇರುವುದು ವಿಶೇಷತೆ ಎಂದು ಹೇಳಬಹುದು.

ಕ್ಯಾಮೆರಾಗಳು ಹೇಗಿವೆ?

ಕ್ಯಾಮೆರಾಗಳು ಹೇಗಿವೆ?

'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ f/1.8 ಅಪಾರ್ಚರ್‌ನ 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಾಗೆಯೇ, ಮುಂಭಾಗದಲ್ಲಿ f/2.0 ಅಪಾರ್ಚರ್‌ನೊಂದಿಗೆ 24 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಕ್ಯಾಮೆರಾ ತಂತ್ರಜ್ಞಾನ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3,400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ 4ಜಿ ವೋಲ್ಟ್, ವೈ-ಫೈ 802.11 802.11, ಬ್ಲೂಟೂತ್ 4.2 ಎಲ್‌ಇ, 3.5 ಎಂಎಂ ಆಡಿಯೋ ಜಾಕ್, ಜಿಪಿಎಸ್ / ಎಜಿಪಿಎಸ್‌ನಂತರ ಸಾಮಾನ್ಯ ಫೀಚರ್ಸ್‌ಗಳನ್ನು ನೋಡಬಹುದು. ಬೆಳಕಿನ ಸಂವೇದಕ, ದಿಕ್ಸೂಚಿ, ಗುರುತ್ವ ಸಂವೇದಕ, ಗೈರೋಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 162 ಗ್ರಾಂ ತೂಕವನ್ನು ಹೊಂದಿರುವುದಾಗಿ ಕಂಪೆನಿ ತಿಳಿಸಿದೆ.

'ಹಾನರ್ 10 ಲೈಟ್' ಬೆಲೆ ಎಷ್ಟು?

'ಹಾನರ್ 10 ಲೈಟ್' ಬೆಲೆ ಎಷ್ಟು?

ನವೆಂಬರ್ 22 ರಿಂದಲೇ ಚೀನಾದಲ್ಲಿ ಖರೀದಿಗೆ ಲಭ್ಯವಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಬೆಲೆ 1399 ಸಿಎನ್‌ವೈಗಳಿಂದ (ಸರಿಸುಮಾರು ರೂ.14,400) ಆರಂಭವಾಗಿದೆ. 6ಜಿಬಿ RAM / 64ಜಿಬಿ ಶೇಖರಣಾ ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 1,699 ಸಿನ್‌ವೈಗಳಾಗಿದ್ದು, ಭಾರತೀಯ ರೂಪಾಯಿಯಲ್ಲಿ ಸರಿಸುಮಾರು 17,500 ರೂಪಾಯಿಗಳಾಗಿದೆ. ಇನ್ನು 2019 ನೇ ಜನವರಿ ವೇಳೆಗೆ ಭಾರತದಲ್ಲೂ ಸಹ 'ಹಾನರ್ 10 ಲೈಟ್' ಎಂಟ್ರಿಯನ್ನು ನಿರೀಕ್ಷಿಸಬಹುದು.

Best Mobiles in India

English summary
Honor 10 Lite With 6.2-Inch Display, Up to 6GB RAM, Kirin 710 SoC Launched: Price, Specifications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X