HONOR: ಹೊಸ 5G ಫೋನ್ ಲಾಂಚ್: 108MP ಕ್ಯಾಮೆರಾ.. 35W ಚಾರ್ಜಿಂಗ್.. ಯಾವುದು?
ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಹಾನರ್ ಕಂಪನಿಯು ಹಾನರ್ 200 ಸರಣಿಯ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಹಾನರ್ 200 ಲೈಟ್ 5G (HONOR 200 Lite 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ. ನೀವು, ಈ ಫೋನಿನ ಮುಂಭಾಗದಲ್ಲಿ ಐಫೋನ್‌ನಂತಹ ಕ್ಯಾಪ್ಸುಲ್ ವಿನ್ಯಾಸವನ್ನು ಕಾಣಬಹುದು. ಬನ್ನಿ, ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಹಾನರ್ 200 ಲೈಟ್ 5G ಫೋನ್ 6.78 ಎಂಎಂ ಅಲ್ಟ್ರಾ ಸ್ಲಿಮ್ ವಿನ್ಯಾಸದೊಂದಿಗೆ ಬರುತ್ತದೆ. ನಿರೀಕ್ಷೆಯಂತೆಯೇ ಈ ಮೊಬೈಲ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 'ಮ್ಯಾಜಿಕ್ ಪೋರ್ಟಲ್' ನಂತಹ ಕೆಲವು ಎಐ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6.7 ಇಂಚಿನ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಶನ್ 6080 ಪ್ರೊಸೆಸರ್, 5000mAh ಬ್ಯಾಟರಿ ಸೇರಿದಂತೆ ಹಲವು ಉತ್ತಮ ಗುಣಮಟ್ಟದ ಫೀಚರ್ಸ್‌ಗಳನ್ನು ಹೊಂದಿದೆ.

ಹಾನರ್ 200 ಲೈಟ್ 5G ಬೆಲೆ ಮತ್ತು ಆಫರ್‌ಗಳು
ಕಂಪನಿಯು ಹಾನರ್ 200 ಲೈಟ್ 5G ಸ್ಮಾರ್ಟ್‌ಫೋನ್ ಅನ್ನು ಕೇವಲ 8GB RAM + 256GB ಸ್ಟೋರೇಜ್ ಆಯ್ಕೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 17,999 ರೂ. ಆಗಿದೆ. ನೀವು, ಇದನ್ನು ಸ್ಟಾರ್ರಿ ಬ್ಲೂ, ಸಯಾನ್ ಲೇಕ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಸೇರಿದಂತೆ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಹಾನರ್ ಹೊಸ ಫೋನಿನ ಬಿಡುಗಡೆಯ ಕೊಡುಗೆಯ ಭಾಗವಾಗಿ ಕೆಲವು ಆಫರ್ ಘೋಷಿಸಿದೆ. ಈ ಫೋನ್ ಖರೀದಿ ಮೇಲೆ 2,000 ರೂ. ಬ್ಯಾಂಕ್ ರಿಯಾಯಿತಿ ಲಭ್ಯವಿದೆ. ಡಿಸ್ಕೌಂಟ್ ಬಳಿಕ ಈ ಮೊಬೈಲ್ ಬೆಲೆ 15,999 ರೂ.ಗೆ ಇಳಿಕೆಯಾಗಲಿದೆ. ಇದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಸೆಪ್ಟೆಂಬರ್ 26 ರಂದು ಮಧ್ಯಾಹ್ನ 12 ರಿಂದ ಖರೀದಿಗೆ ಲಭ್ಯವಿರುತ್ತದೆ.
ಹಾನರ್ 200 ಲೈಟ್ 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ: ಹಾನರ್ 200 ಲೈಟ್ 5G ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ AMOLED ಡಿಸ್ಪ್ಲೇಯನ್ನು ಹೊಂಡಿದೆ. ಇದು 120 Hz ರಿಫ್ರೆಶ್ ರೇಟ್, 2000 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ. ಜೊತೆಗೆ, 1200 ನೀಟ್ಸ್ ಹೈ ಬ್ರೈಟ್‌ನೆಸ್ ಮೋಡ್, 3240Hz ಹೈ ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಬೆಂಬಲವನ್ನು ಸಹ ಹೊಂದಿದೆ.
ಪ್ರೊಸೆಸರ್: ಹಾನರ್ 200 ಲೈಟ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 ಪ್ರೊಸೆಸರ್ ಅನ್ನು ಹೊಂದಿದೆ. ಈ ಪ್ರೊಸೆಸರ್ ಗರಿಷ್ಠ ಗಡಿಯಾರದ ವೇಗ 2.4 GHz ಆಗಿದೆ. ನೂತನ ಹಾನ್ ಮೊಬೈಲ್ 8GB RAM ಮತ್ತು 256GB ವರೆಗೆ ಸ್ಟೋರೇಜ್‌ನೊಂದಿಗೆ ಬರುತ್ತದೆ. ಈ ಫೋನ್ RAM ಟರ್ಬೊ ತಂತ್ರಜ್ಞಾನವನ್ನು ಸಹ ಹೊಂದಿದೆ. ಇದರ ಮೂಲಕ ನೀವು 16GB RAM ಶಕ್ತಿಯನ್ನು ಪಡೆಯಬಹುದು.

ಕ್ಯಾಮೆರಾ: ಹಾನರ್ 200 ಲೈಟ್ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ ಎಲ್ಇಡಿ ಲೈಟ್ ಕೂಡ ಇದೆ.
ಬ್ಯಾಟರಿ: ಕಂಪನಿಯು ಹಾನರ್ 200 ಲೈಟ್ 5G ಅನ್ನು 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಇದು 35 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಸಾಫ್ಟ್‌ವೇರ್: ಹಾನರ್ 200 ಲೈಟ್ 5G ಸ್ಮಾರ್ಟ್‌ಫೋನ್ ಅನ್ನು Android 14 OS ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಫೋನ್ ಭದ್ರತೆಗಾಗಿ, IP52 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳಿನ ನಿರೋಧಕ ರಕ್ಷಣೆಯನ್ನು ನೀಡುತ್ತದೆ.
ಎಐ ವೈಶಿಷ್ಟ್ಯಗಳು: ಹಾನರ್ 200 ಲೈಟ್ 5G ಸ್ಮಾರ್ಟ್‌ಫೋನ್ ಮ್ಯಾಜಿಕ್ ಪೋರ್ಟಲ್ 14, ಮ್ಯಾಜಿಕ್ ಲಾಕ್ ಸ್ಕ್ರೀನ್, ಎಐ ಫೋಟೋಗ್ರಫಿ, ಇನ್‌ಸ್ಟಂಟ್ ಮೂವಿ, ಮ್ಯಾಜಿಕ್ ಕ್ಯಾಪ್ಸುಲ್‌ನಂತಹ ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, Wi-Fi ನಂತಹ ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








