Home
ಮೊಬೈಲ್

ಖುಷಿ ಸುದ್ದಿ..! ನಾಳೆ Honorನ ಎರಡು ಹೊಸ ಫೋನ್‌ ಬಿಡುಗಡೆ: ಬೆಲೆ, ವಿಶೇಷತೆಗಳೇನು?

ಮೊಬೈಲ್ ಪ್ರಿಯರಿಗೆ ಎರಡು ಸಿಹಿ ಸುದ್ದಿ ಇದೆ. ಹಾನರ್‌ (Honor) ಕಂಪನಿಯು ನಾಳೆ (ಜುಲೈ 18) ಭಾರತದಲ್ಲಿ ತನ್ನ Honor 200 ಸರಣಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳು ಇರುತ್ತವೆ. ಒಂದು Honor 200 5G, ಮತ್ತೊಂದು Honor 200 Pro 5G ಫೋನ್ ಆಗಿರಲಿದೆ. ಮುಂಬರುವ ನೂತನ ಫೋನ್‌ಗಳು ಅದ್ಭುತ ವಿನ್ಯಾಸ ಮತ್ತು AI ಫೀಚರ್ಸ್‌ಗಳೊಂದಿಗೆ ಬರಲಿವೆ. ಬಿಡುಗಡೆಯ ನಂತರ, ಅಮೇಜಾನ್, ಹಾನರ್‌ ಅಧಿಕೃತ ವೆಬ್‌ಸೈಟ್ ಮತ್ತು ಇತರ ದೊಡ್ಡ ಅಂಗಡಿಗಳ ಮೂಲಕ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.

ಈಗಾಗಲೇ Amazon Indiaನಲ್ಲಿ ಹಾನರ್ 200 ಮತ್ತು ಹಾನರ್ 200 ಪ್ರೊ ಪಟ್ಟಿಯನ್ನು ಕಾಣಬಹುದಾಗಿದೆ. 'ನೋಟಿಫೈ' ಬಟನ್ ಒತ್ತುವ ಮೂಲಕ ನೀವು ಫೋನ್ ಲಾಂಚ್ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಪಟ್ಟಿಯು ಫೋನ್‌ನ ಹಿಂಭಾಗದ ವಿನ್ಯಾಸವನ್ನು ತೋರಿಸುತ್ತದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್‌ ಮತ್ತು 5G ಸಂಪರ್ಕವನ್ನು ಹೊಂದಿದೆ. ಹಾನರ್ 200 ಸರಣಿಯ ವಿಶೇಷತೆಗಳು ಮತ್ತು ಬೆಲೆ ವಿವರಗಳನ್ನು ತಿಳಿಯೋಣ ಬನ್ನಿ.

ನಾಳೆ Honorನ 2 ಫೋನ್‌ ಅಬ್ಬರಿಸಲು ಸಿದ್ಧ: ಬೆಲೆ, ವಿಶೇಷತೆಗಳೇನು?

ಹಾನರ್ 200 5G ಸರಣಿಯ ಬೆಲೆ ಎಷ್ಟು?

ಹಾನರ್ 200 5G ವೆನಿಲ್ಲಾ ವೇರಿಯಂಟ್‌ನ 12GB RAM/256GB ಸ್ಟೋರೇಜ್ ಮಾದರಿಯನ್ನು ಚೀನಾದಲ್ಲಿ ಸುಮಾರು 31,000 ರೂ. (2,699 ಯುವಾನ್) ಬೆಲೆಗೆ ಬಿಡುಗಡೆ ಮಾಡಲಾಯಿತು. 16GB RAM ಮತ್ತು 512GB ಸ್ಟೋರೇಜ್‌ ಮಾದರಿಯು ಸುಮಾರು 37,000 ರೂ. (3,199 ಯುವಾನ್) ಬೆಲೆ ಹೊಂದಿದೆ. ಹಾನರ್ 200 ಪ್ರೊನ 12GB RAM/256GB ಸ್ಟೋರೇಜ್ ರೂಪಾಂತರವು ಅಂದಾಜು 40,000 ರೂ.(3,499 ಯುವಾನ್) ಇದೆ. 16GB RAM/1TB ಸ್ಟೋರೇಜ್‌ನ ಮಾದರಿಯು ಸುಮಾರು 51,000 ರೂ. (4,499 ಯುವಾನ್) ಬೆಲೆ ಹೊಂದಿದೆ.

ಹಾನರ್ 200 5G ಸರಣಿಯ ವಿಶೇಷತೆಗಳೇನು?

ಹಾನರ್ 200 5G ಸರಣಿಯು 6.78 ಇಂಚಿನ ಕ್ವಾಡ್-ಕರ್ವ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. Honor 200 Pro ಓಷನ್ ಸಯಾನ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಆದರೆ, ಹಾನರ್ 200 ಮೂನ್‌ಲೈಟ್ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬರಲಿದೆ. ಈ ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು Android 14 ಆಧಾರಿತ MagicOS 8.0 ನಲ್ಲಿ ಕಾರ್ಯನಿರ್ವಹಿಸುತ್ತವೆ. ಇಂಟರ್ಫೇಸ್ ಹಾನರ್‌ನ ಸ್ವಾಮ್ಯದ ಮ್ಯಾಜಿಕ್‌ಎಲ್‌ಎಂ ಆನ್-ಡಿವೈಸ್ AI ದೊಡ್ಡ ಭಾಷಾ ಮಾದರಿಯಿಂದ ಚಾಲಿತವಾಗಿದೆ.

ಹಾನರ್ 200 5G ಡಿಸ್ಪ್ಲೇ: ಭಾರತದಲ್ಲಿ ಬಿಡುಗಡೆಯಾಗಲಿರುವ ಹಾನರ್ 200 ಸರಣಿಯ ಸ್ಮಾರ್ಟ್‌ಫೋನ್‌ಗಳ ಕುರಿತು ಕಂಪನಿಯು ಈವರೆಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ. ಆದರೆ, ಈ ಸರಣಿಯನ್ನು ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಜಾಗತಿಕ ಆವೃತ್ತಿಯು 6.7 ಇಂಚಿನ ಪೂರ್ಣ HD+ ಬಾಗಿದ OLED ಡಿಸ್ಪ್ಲೇಯನ್ನು ಹೊಂದಿದೆ. 2664 x 1200 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4,000nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ.

ಹಾನರ್ 200 5G ಪ್ರೊಸೆಸರ್: ಹಾನರ್ 200 ಸರಣಿಯ ಸ್ಮಾರ್ಟ್‌ಫೋನ್‌ಗಳು Qualcomm Snapdragon 7 Gen 3 ಪ್ರೊಸೆರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 16GB ಯ RAM ಮತ್ತು 512GB ವರೆಗಿನ ಸ್ಟೋರೇಜ್‌ನೊಂದಿಗೆ ಬರಲಿದೆ.

ಕ್ಯಾಮೆರಾ ಸೆಟಪ್: ಹಾನರ್ 200 5G ಸರಣಿಯ ವಿಶೇಷತೆ ಎಂದರೆ ಅದರ ಕ್ಯಾಮೆರಾ ಸೆಟಪ್. ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್‌ ಕ್ಯಾಮೆರಾ ಹೊಂದಿರಲಿದೆ.

ಬ್ಯಾಟರಿ ಬ್ಯಾಕಪ್‌: ಹಾನರ್ 200 5G ಸರಣಿಯು ಶಕ್ತಿಯುತ ಕಾರ್ಯಕ್ಷಮತೆಗಾಗಿ 5200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಪಡೆದಿರುವ ನಿರೀಕ್ಷೆಯಿದೆ. ಜೊತೆಗೆ, 100W ವೇಗದ ಚಾರ್ಜಿಂಗ್ ಅನ್ನು ಬೆಂಬಲ ಹೊಂದಿರಲಿದೆ. ಇದಲ್ಲದೆ, ಈ ಫೋನ್‌ಗಳಿಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಡ್ಯುಯಲ್ ಸಿಮ್ ಬೆಂಬಲ, 5G ಸಂಪರ್ಕವನ್ನು ಸಹ ಒದಗಿಸಲಾಗಿರುತ್ತದೆ.

ಅಂತೂ ಇಂತೂ ಮೊಬೈಲ್‌ ಪ್ರಿಯರ ನಿರೀಕ್ಷೆಯಂತೆ, ನಾಳೆ (ಜುಲೈ 18) ಭಾರತದಲ್ಲಿ Honor 200 ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಸಮಾರಂಭ ನಡೆಯಲಿದೆ. ಬಿಡುಗಡೆ ಬಳಿಕ ಈ ಸರಣಿಯ ಅಧಿಕೃತ ಫೀಚರ್ಸ್‌ ಮತ್ತು ಬೆಲೆ ಬಹಿರಂಗವಾಗಲಿದೆ. ಇನ್ನೂ, ಈ ಫೋನ್‌ಗಳು ಜುಲೈ 20 ರಂದು ನಿಗದಿಯಾಗಿರುವ Amazon Prime Day ಸಮಯದಲ್ಲಿ ಮಾರಾಟವಾಗಲಿದೆ.

Best Mobiles in India

English summary
Honor 200 and Honor 200 Pro launching in India on July 18: To Go on Sale During Amazon Prime Day: Expected price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+