Home
ಮೊಬೈಲ್

Honor: ಸದ್ದಿಲ್ಲದೆ ಹೊಸ ಫೋನ್ ಬಿಡುಗಡೆ; ಕಡಿಮೆ ಬೆಲೆ.. ಹೇಗಿದೆ ಗೊತ್ತಾ?

ಹಾನರ್‌ ಕಂಪನಿಯು ಸದ್ದಿಲ್ಲದೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. Honor 200, Honor 200 Lite ಮತ್ತು Honor 200 Pro ನಂತರ, ಕಂಪನಿಯು ಇದೀಗ, ಈ ಸರಣಿಯ ಮೂರನೇ ಸ್ಮಾರ್ಟ್‌ಫೋನ್, ಹಾನರ್‌ 200 ಸ್ಮಾರ್ಟ್ (Honor 200 Smart) ಅನ್ನು ಜಾಗತಿಕವಾಗಿ ಪರಿಚಯಿಸಿದೆ. ಈ ಮೊಬೈಲ್ ಫೋನ್ ಅನ್ನು ಜರ್ಮನಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮಧ್ಯಮ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗಿದೆ. IP64 ರೇಟಿಂಗ್ ಮತ್ತು 5 ಸ್ಟಾರ್ ಡ್ರಾಪ್ ರೆಸಿಸ್ಟೆನ್ಸ್ ಅನ್ನು ಪ್ರಮಾಣೀಕರಿಸಲಾಗಿದೆ. ಬನ್ನಿ, ಈ ಪೋನಿನ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯೋಣ.

ನೂತನ ಹಾನರ್ 200 ಸ್ಮಾರ್ಟ್‌ ಫೋನ್‌ 6.8 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಕಂಪನಿಯು ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. 8GB RAM ಮತ್ತು 256GB UFS 3.1 ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,200mAh ಬ್ಯಾಟರಿ ಮತ್ತು 35W ಸೂಪರ್‌ ರ್ಚಾರ್ಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Honor: ಸದ್ದಿಲ್ಲದೆ ಹೊಸ ಫೋನ್ ಬಿಡುಗಡೆ; ಕಡಿಮೆ ಬೆಲೆ.. ಹೇಗಿದೆ ಗೊತ್ತಾ?

ಹಾನರ್ 200 ಸ್ಮಾರ್ಟ್ ಮೊಬೈಲ್‌ನ ಬೆಲೆ

ಹಾನರ್ 200 ಸ್ಮಾರ್ಟ್ ಫೋನ್ ಜರ್ಮನ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದೆ. ಮುಂಬರುವ ದಿನಗಳಲ್ಲಿ ವಿಶ್ವದ ಇತರ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ಜರ್ಮನಿಯಲ್ಲಿ ಈ ಮೊಬೈಲ್‌ನ ಬೆಲೆ ಸುಮಾರು 18,599 ರೂ. (199.90 ಯುರೋ) ಆಗಿದೆ. ಫಾರೆಸ್ಟ್ ಗ್ರೀನ್ ಮತ್ತು ಮಿಡ್‌ನೈಟ್ ಬ್ಲಾಕ್ ಬಣ್ಣಗಳಲ್ಲಿ ಈ ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹಾನರ್ 200 ಸ್ಮಾರ್ಟ್ ಮೊಬೈಲ್‌ನ ವೈಶಿಷ್ಟ್ಯಗಳು

ಡಿಸ್ಪ್ಲೇ: ಹಾನರ್ 200 ಸ್ಮಾರ್ಟ್‌ ಫೋನ್ 6.8 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2412 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಪಂಚ್-ಹೋಲ್ ಶೈಲಿಯಲ್ಲಿ ನಿರ್ಮಿಸಲಾದ ಈ ಡಿಸ್ಪ್ಲೇಯು TFT LCD ಪ್ಯಾನೆಲ್ ಆಗಿದೆ. ಈ ಮೊಬೈಲ್ 120Hz ರಿಫ್ರೆಶ್ ದರ ಮತ್ತು 850 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ.

ಪ್ರೊಸೆಸರ್: ಹಾನರ್ 200 ಸ್ಮಾರ್ಟ್‌ ಮೊಬೈಲ್ 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ಮಾಡಲಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್ 2 ಆಕ್ಟಾಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದನ್ನು Android 14 ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು MagicOS 8.0 ಜೊತೆಗೆ ಕಾರ್ಯನಿರ್ವಹಿಸುತ್ತದೆ.ಈ ಮೊಬೈಲ್ ಫೋನ್ ಗ್ರಾಫಿಕ್ಸ್‌ಗಾಗಿ, Adreno 613 GPU ಅನ್ನು ಬೆಂಬಲಿಸುತ್ತದೆ.

ಸ್ಟೋರೇಜ್: ಹಾನರ್ 200 ಸ್ಮಾರ್ಟ್‌ ಅನ್ನು 4 GB RAM ಮೆಮೊರಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಕಂಪನಿಯು 4GB ವರ್ಚುವಲ್ RAM ತಂತ್ರಜ್ಞಾನದೊಂದಿಗೆ ಫೋನ್ ಅನ್ನು ಪರಿಚಯಿಸಿದೆ. ಇದು 8GB RAM ನ ಶಕ್ತಿಯನ್ನು ನೀಡುತ್ತದೆ. ಈ ಮೊಬೈಲ್ 256GB ಆಂತರಿಕ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ: ಹಾನರ್‌ 200 ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಇದು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಹಾನರ್ 200 ಸ್ಮಾರ್ಟ್‌ ಮೊಬೈಲ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಹಾನರ್ 200 ಸ್ಮಾರ್ಟ್ ಮೊಬೈಲ್ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್ ಮಾಡಿದ ನಂತರ, ಈ ಮೊಬೈಲ್ 55 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಸಮಯವನ್ನು ಅಥವಾ 19 ಗಂಟೆಗಳ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಬ್ಯಾಕಪ್ ಒದಗಿಸುತ್ತದೆ. ಈ ದೊಡ್ಡ ಬ್ಯಾಟರಿಯನ್ನು ವೇಗವಾಗಿ ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದೆ. ಈ ಮೊಬೈಲ್ IP64 ರೇಟಿಂಗ್‌ನೊಂದಿಗೆ ಬಂದಿದೆ.

Best Mobiles in India

English summary
Honor 200 Smart launched globally with ip64 rating : know price and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+