Just In
- 1 min ago
ಕೇಂದ್ರ ಬಜೆಟ್ 2023: ಪ್ಯಾನ್ ಕಾರ್ಡ್ ಬಳಕೆದಾರರೇ ಇಲ್ಲಿ ಗಮನಿಸಿ!
- 12 min ago
ಕೇಂದ್ರ ಬಜೆಟ್ 2023: ತಂತ್ರಜ್ಞಾನ ವಲಯಕ್ಕೆ ನೀಡಿರುವ ಕೊಡುಗೆಗಳ ಪೂರ್ಣ ಮಾಹಿತಿ ಇಲ್ಲಿದೆ
- 53 min ago
ಗೂಗಲ್ ಪಿಕ್ಸಲ್ 6a ಫೋನ್ಗೆ ಸಖತ್ ಡಿಸ್ಕೌಂಟ್; ಈ ಅವಕಾಶ ಮತ್ತೆ ಸಿಗಲ್ಲ!
- 1 hr ago
Budget 2023: ಸಾಂಪ್ರದಾಯಿಕ ಶೈಲಿಯ ಬಜೆಟ್ ಮಂಡನೆಗೆ ಫುಲ್ ಸ್ಟಾಪ್; ಟ್ಯಾಬ್ ಮೂಲಕ ಮಂಡನೆ
Don't Miss
- Sports
Ind Vs Aus Test: ಬೆಂಗಳೂರಿಗೆ ಬಂದ ಕಾಂಗರೂ ಪಡೆ: ಫೆಬ್ರವರಿ 2ರಿಂದ ಆಲೂರಿನಲ್ಲಿ ಅಭ್ಯಾಸ
- News
Budget 2023: ಮಕ್ಕಳು ಮತ್ತು ಹದಿಹರೆಯದವರಿಗಾಗಿ ನ್ಯಾಷನಲ್ ಡಿಜಿಟಲ್ ಲೈಬ್ರರಿ ಸ್ಥಾಪನೆ ಘೋಷಣೆ
- Finance
ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ
- Movies
4 ದಿನಗಳಲ್ಲೇ ವಿಜಯ್, ಅಜಿತ್, ಬಾಲಯ್ಯ, ಚಿರುಗೆ ಟಕ್ಕರ್ ಕೊಡ್ತಾ 'ಕ್ರಾಂತಿ'? ಏನಿದು ಬಾಕ್ಸಾಫೀಸ್ ಲೆಕ್ಕ?
- Automobiles
ಭಾರತದಲ್ಲಿ ಬಹುನಿರೀಕ್ಷಿತ ಮಹೀಂದ್ರಾ ಥಾರ್ RWD ವಿತರಣೆ ಪ್ರಾರಂಭ: ಅದು ಕೈಗೆಟುಕುವ ಬೆಲೆಯಲ್ಲಿಯೇ..
- Lifestyle
ಫೆಬ್ರವರಿ ತಿಂಗಳಿನಲ್ಲಿ ಈ 5 ರಾಶಿಯವರಿಗೆ ಲಕ್ಷ್ಮಿ ಕೃಪೆಯಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ 3 ದಿನಗಳಲ್ಲಿ ಮೊಬೈಲ್ ಖರೀದಿಸುವುದಾದರೆ 'ಹಾನರ್ 20ಐ' ಖರೀದಿಸಿ!
ಕಳೆದ ತಿಂಗಳಷ್ಟೇ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿ ಗಮನಸೆಳೆದಿರುವ 'ಹಾನರ್ 20ಐ' ಸ್ಮಾರ್ಟ್‌ಫೋನ್ ಖರೀದಿಗೆ ಇದು ಸಕಾಲ ಎನ್ನಬಹುದು. ಏಕೆಂದರೆ, ಇದೇ ಆಗಸ್ಟ್ 8 ರಿಂದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳು ಆಯೋಜಿಸಿರುವ ಬಿಗ್ ಶಾಪಿಂಗ್ ಡೇಸ್‌ಗಳಲ್ಲಿ ಹಾನರ್ 20ಐ ಕೇವಲ 11,699 ರೂಪಾಯಿಗಳಿಗೆ ಲಭ್ಯವಿದೆ. ಒಂದೇ ತಿಂಗಳಿನಲ್ಲಿ 2000 ರೂಪಾಯಿಗಳಷ್ಟು ಬೆಲೆ ಕಳೆದುಕೊಂಡಿರುವ ಈ ಸ್ಮಾರ್ಟ್‌ಫೋನ್ ಮೇಲೆ ಮತ್ತಷ್ಟು ಆಫರ್ ಸಿಕ್ಕಿವೆ.

ಹೌದು, ಕಳೆದ ತಿಂಗಳು 14,990 ರೂ.ಗಳಿಗೆ ಬಿಡುಗಡೆಯಾಗಿದ್ದ ಹಾನರ್ 20ಐ ಸ್ಮಾರ್ಟ್‌ಫೋನನ್ನು, ಫ್ಲಿಪ್‌ಕಾರ್ಟ್ ನ್ಯಾಷನಲ್ ಶಾಪಿಂಗ್ ಡೇಸ್ ಮತ್ತು ಅಮೆಜಾನಿನ ಫ್ರೀಡಂ ಸೇಲ್‌ನಲ್ಲಿ ಕೇವಲ 12,999 ರೂಪಾಯಿಗಳಿಗೆ ಮಾರಾಟಕ್ಕಿಡಲಾಗಿದೆ. ಇದರ ಜೊತೆಗೆ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಶೇ.10 ರಷ್ಟು ಡಿಸ್ಕೌಂಟ್ ಕ್ಯಾಶ್‌ಬ್ಯಾಕ್ ಸಿಗುವುದರಿಂದ ಹಾನರ್ 20ಐ ಸ್ಮಾರ್ಟ್‌ಫೋನ್ ಇದೀಗ ಕೇವಲ 11,699 ರೂಪಾಯಿಗಳಿಗೆ ಮೊಬೈಲ್ ಪ್ರಿಯರ ಕೈಸೇರಲು ತಯಾರಾಗಿದೆ.
ರೆಡ್‌ಮಿ ನೋಟ್ 7 ಪ್ರೊ ಮತ್ತು ರಿಯಲ್‌ಮಿ 3 ಸ್ಮಾರ್ಟ್‌ಫೋನ್‌ಗಳಿಗೆ ನೇರಾನೇರ ಸೆಡ್ಡು ಹೊಡೆದಿರುವ ಈ ಸ್ಮಾರ್ಟ್‌ಫೋನ್, ದೇಶದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯನ್ನು ಆಳಲು ತಯಾರಾಗಿದೆ. ಹಾಗಾದರೆ, ಹಾಗಾದರೆ, ಕಳೆದ ತಿಂಗಳಷ್ಟೇ ಬಿಡುಗಡೆಯಾಗಿ ಗಮನಸೆಳೆದಿರುವ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಗಿದೆ?, ಈ ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು ಮತ್ತು ಖರೀದಿಸಲು ಯೋಗ್ಯವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಹಾನರ್ 20ಐ' ಡಿಸೈನ್
ಬಜೆಟ್ ಫೋನ್‌ಗಳಲ್ಲೇ ಆಕರ್ಷಕ ಡಿಸೈನ್ ಹೊಂದಿದೆ ಎಂದು ಹೇಳಬಹುದಾದ ವಿನ್ಯಾಸದಲ್ಲಿ 'ಹಾನರ್ 20ಐ' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಪಂಚ್‌ಹೋಲ್ ಸೆಲ್ಫೀ ಕ್ಯಾಮೆರಾ ನೋಚ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಗ್ಲಾಸ್ ಬಾಡಿಯನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಗಳನ್ನು ನೋಡಬಹುದು.

'ಹಾನರ್ 20ಐ' ಡಿಸೈನ್
ಬಜೆಟ್ ಫೋನ್‌ಗಳಲ್ಲೇ ಆಕರ್ಷಕ ಡಿಸೈನ್ ಹೊಂದಿದೆ ಎಂದು ಹೇಳಬಹುದಾದ ವಿನ್ಯಾಸದಲ್ಲಿ 'ಹಾನರ್ 20ಐ' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಪಂಚ್‌ಹೋಲ್ ಸೆಲ್ಫೀ ಕ್ಯಾಮೆರಾ ನೋಚ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಗ್ಲಾಸ್ ಬಾಡಿಯನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ಮೂರು ರಿಯರ್ ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಗಳನ್ನು ನೋಡಬಹುದು.

'ಹಾನರ್ 20ಐ' ಡಿಸ್‌ಪ್ಲೇ
1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.21 ಇಂಚಿನ FHD+ ಡಿಸ್‌ಪ್ಲೇಯನ್ನು 'ಹಾನರ್ 20ಐ' ಹೊಂದಿದೆ. ಸ್ಮಾರ್ಟ್‌ಫೋನ್ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರ ಶೇ.82.91 % ರಷ್ಟಿದ್ದು, ಪಿಕ್ಸಲ್ ಸಾಂದ್ರತೆಯು 415ppi ಮತ್ತು ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. FHD+ ಡಿಸ್‌ಪ್ಲೇ ವೀಡಿಯೊಗೆ ಮತ್ತು ಗೇಮಿಂಗ್‌ಗೆ ಸರಿಯಾದ ರೆಸಲ್ಯೂಶನ್ ನೀಡಲಿದೆ.

'ಹಾನರ್ 20ಐ' ಪ್ರೊಸೆಸರ್
'ಹಾನರ್ 20ಐ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ EMUI 9 ಆಂಡ್ರಾಯ್ಡ್ 9 ಪೈ ಮೂಲಕ ರನ್ ಆಗಲಿದೆ. Mali-G51 MP4 ಸಾಮರ್ಥ್ಯದ ಗ್ರಾಫಿಕ್ ಸೌಲಭ್ಯ ಪಬ್‌ಜಿಯಂತಹ ಗೇಮ್ ಆಡಲು ಸಹಾಯಕ.

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ
ಸೆಲ್ಫೀ ಪ್ರಿರಿಗೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಳಿಮಾಡಿಸಿದಂತಿದ್ದು, 32ಎಂಪಿ ಸಾಮರ್ಥ್ಯದ ಕೃತಕ ಬುದ್ದಿಮತ್ತೆ (ಎಐ) ಸೆಲ್ಫೀ ಕ್ಯಾಮೆರಾವನ್ನು ಫೋನಿನಲ್ಲಿ ಅಳವಡಿಲಾಗಿದೆ. ಬ್ಯೂಟಿ ಪ್ಲಸ್, ಆಟೊ ಫೋಕಸ್ ಸೇರಿದಂತೆ ಎಐಎಸ್ ಸೂಪರ್ ನೈಟ್ ಮೋಡ್‌ಗೆ ಬೆಂಬಲ ನೀಡುವಂತಹ ಹಲವು ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನಗಳು ಸೆಲ್ಫೀ ಪ್ರಿಯರನ್ನು ಸೆಳೆಯಲಿವೆ.

'ಹಾನರ್ 20ಐ' ರಿಯರ್ ಕ್ಯಾಮೆರಾ
'ಹಾನರ್ 20ಐ' ಫೋನ್ ತ್ರಿವಳಿ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು l f/1.8 ಅಪಾರ್ಚರ್‌ನಲ್ಲಿ 24ಎಂಪಿ ಸಾಮರ್ಥ್ಯದಾಗಿದ್ದರೆ, 8ಎಂಪಿ ವೈಡ್ ಆಂಗಲ್ ಮತ್ತು 2ಎಂಪಿ ಡೆಪ್ತ್ ಕ್ಯಾಮೆರಾಗಳು ರಿಯರ್ ಕ್ಯಾಮೆರಾ ಸಾಮರ್ಥ್ಯ ಎಂದು ಹೇಳಬಹುದು. ಇನ್ನು ರಿಯರ್ ಕ್ಯಾಮೆರಾವು ಸಂಪೂರ್ಣ 'ಎಐ' ಎಂಬುದನ್ನು ಕ್ಯಾಮೆರಾದ ಮೇಲೆಯೇ ಬರೆಯಲಾಗಿದೆ.

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ
'ಹಾನರ್ 20ಐ' ಸ್ಮಾರ್ಟ್‌ಫೋನ್ 3,400mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ ಎಂದು ಹಾನರ್ ಕಂಪೆನಿ ಹೇಳಿಕೊಂಡಿದೆ. ಆದರೆ, ಈ ಸ್ಮಾರ್ಟ್‌ಫೋನ್ ಯಾವುದೇ ವೇಗವಾದ ಚಾರ್ಜಿಂಗ್ ಅನ್ನು ಬೆಂಬಲಿಸುವಂತೆ ಕಾಣಿಸುತ್ತಿಲ್ಲ. ಏಕೆಂದರೆ, ಮೊಬೈಲ್ ಬಾಕ್ಸ್‌ನಲ್ಲಿ 10W ಚಾರ್ಜರ್ ಅನ್ನು ನೀಡಲಾಗಿದೆ.

'ಹಾನರ್ 20ಐ' ವಿಶೇಷತೆಗಳು
12,999 ರೂ.ಗಳಲ್ಲಿ ತ್ರಿವಳಿ ಕ್ಯಾಮರಾ ವ್ಯವಸ್ಥೆ ಹಾಗೂ 32 ಎಂಪಿ ಎಐ ಸೆಲ್ಫಿ ಕ್ಯಾಮರಾ ಹೊಂದಿರುವ ಫೋನ್‌ಗಳಲ್ಲಿ 'ಹಾನರ್ 20ಐ' ಮೊದಲ ಸ್ಥಾನದಲ್ಲಿದೆ ಎಂದು ಹೇಳಬಹುದು. ಇನ್ನು ಪ್ರೊಸೆಸರ್ ಕೂಡ ಬೆಲೆಗೆ ತಕ್ಕಂತಂಹ ಶಕ್ತಿಯುತವಾಗಿದೆ. FHD+ ಡಿಸ್‌ಪ್ಲೇ ಮೂಲಕ ಗಮನಸೆಳೆಯುವ ಈ ಫೋನ್ ಖರೀದಿಗೆ ಅತ್ಯುತ್ತಮವಾದ ಒಂದು ಬಜೆಟ್ ಫೋನ್ ಎಂದೆನ್ನಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470