ಹೋನರ್ 7 ವರ್ಸಸ್ ಎಲ್‌ಜಿ ಜಿ3 ಸ್ಮಾರ್ಟ್‌ಫೋನ್ ಕಾದಾಟ
ಹೋನರ್ ಉಪ ಬ್ರ್ಯಾಂಡ್‌ನಲ್ಲಿ ಭಾರತಕ್ಕೆ ಕಾಲಿಡುತ್ತಿರುವ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಅನ್ನು ಹುವಾವೆ ಫೋಷಿಸಿದೆ. ಹೋನರ್ 7 ಚೀನಾದಲ್ಲಿ ಜೂನ್‌ನಲ್ಲಿ ನಂತರ ಯುರೋಪಿಯನ್ ದೇಶಗಳಲ್ಲಿ ಈಗಾಗಲೇ ಲಾಂಚ್ ಆಗಿದೆ.
ಮೆಟಲ್ ಬಾಡಿ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಹೋನರ್ 7 ಬರುತ್ತಿದ್ದು ಮಾರುಕಟ್ಟೆಯಲ್ಲಿ ಈ ಡಿವೈಸ್‌ಗೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಎಲ್‌ಜಿ ಜಿ3 ಹೋನರ್ 7 ಗೆ ಪ್ರತಿಸ್ಪರ್ಧಿ ಎಂದೆನಿಸಿದ್ದು ಇವೆರಡೂ ಡಿವೈಸ್‌ಗಳಿಗಿರುವ ವ್ಯತ್ಯಾಸಗಳನ್ನು ಇಂದಿನ ಲೇಖನದಲ್ಲಿ ನೋಡೋಣ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7 ಅತ್ಯುತ್ತಮ ಡೈಮೆನ್ಶನ್‌ಗಳು ಮತ್ತು ಮೆಟಾಲಿಕ್ ವಿನ್ಯಾಸದೊಂದಿಗೆ ಬಂದಿದ್ದು ಅಲ್ಯುಮಿನಿಯಮ್ ಮೆಟಲ್ ಅನ್ನು ಫೋನ್ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗಿದೆ. ಎಲ್‌ಜಿ ಜಿ3 ಪ್ಲಾಸ್ಟಿಕ್ ದೇಹರಚನೆಯನ್ನು ಪಡೆದುಕೊಂಡಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
5.2 ಇಂಚಿನ ಐಪಿಎಸ್ ನಿಯೋ ಎಲ್‌ಸಿಡಿ ಡಿಸ್‌ಪ್ಲೇಯನ್ನು ಇದು ಹೊಂದಿದ್ದು ರೆಸಲ್ಯೂಶನ್ 1920x1080 ಆಗಿದೆ. ಇನ್ನು ಎಲ್‌ಜಿ ಜಿ3. 5.5 ಇಂಚಿನ 1440x2560 ಪಿಕ್ಸೆಲ್‌ಗಳ ರೆಸಲ್ಯೂಶನ್‌ಗಳನ್ನು ಪಡೆದುಕೊಂಡಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ ಇದರಲ್ಲಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7 ತನ್ನದೇ ಕಿರಿನ್ 930 ಓಕ್ಟಾ ಕೋರ್ ಚಿಪ್‌ಸೆಟ್‌ನೊಂದಿಗೆ ಬಂದಿದ್ದು 3ಜಿಬಿ RAM ಅನ್ನು ಪಡೆದುಕೊಂಡಿದೆ. Mali T628 GUP ಯೂನಿಟ್ ಅನ್ನು ಉತ್ತಮ ಗೇಮಿಂಗ್ ಅನುಭವಕ್ಕಾಗಿ ಒಳಗೊಂಡಿದೆ. ಎಲ್‌ಜಿ ಜಿ3 ಕ್ವಾಲ್‌ಕಾಮ್ MSM8974AC ಸ್ನ್ಯಾಪ್‌ಡ್ರಾಗನ್ 801 ಕ್ಲಾಕ್ ಸ್ಪೀಡ್‌ನಲ್ಲಿ ಬಂದಿದ್ದು ಕ್ವಾಡ್ ಕೋರ್ 2.5 GHz ಮತ್ತು ಕ್ರೇಟ್ 400 ಜಿಪಿಯುವನ್ನು ಒಳಗೊಂಡಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7 ತನ್ನದೇ ಆದ EMUI 3.1 ಅನ್ನು ಹೊಂದಿ ಆಂಡ್ರಾಯ್ಡ್ 5.0 ಲಾಲಿಪಪ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಎಲ್‌ಜಿ ಜಿ3 4.4.2 ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಚಾಲನೆಯಾಗುತ್ತಿದ್ದು, ಇದನ್ನು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7, 20 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಕ್ಯಾಮೆರಾವು Sony IMX230 ಸೆನ್ಸಾರ್ ಅನ್ನು ಒಳಗೊಂಡಿದ್ದು f/2.0 ಅಪಾರ್ಚರ್ ಇದರಲ್ಲಿದೆ. 8 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಒಳಗೊಂಡಿದ್ದು ವೀಡಿಯೊ ಕರೆ ಮತ್ತು ಸೆಲ್ಫಿಗೆ ಅತ್ಯುತ್ತಮವಾಗಿದೆ. ಇನ್ನು ಎಲ್‌ಜಿ ಜಿ3, 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಡ್ಯುಯಲ್ ಟೋನ್ ಫ್ಲ್ಯಾಶ್ ಅನ್ನು ಒಳಗೊಂಡಿದೆ. 2.1 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7 ಎರಡು ಸಂಗ್ರಹಣಾ ಆಯ್ಕೆಗಳೊಂದಿಗೆ ಬಂದಿದೆ. 16 ಜಿಬಿ ಮತ್ತು 64 ಜಿಬಿ ಆಂತರಿಕ ಸಂಗ್ರಹಣೆ ಇದರಲ್ಲಿದೆ.ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಇದರಲ್ಲಿದ್ದು ಇದನ್ನು 128 ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಎಲ್‌ಜಿ ಜಿ3 ಎರಡೂ ಸಂಗ್ರಹಣಾ ವ್ಯವಸ್ಥೆಗಳೊಂದಿಗೆ ಬಂದಿದೆ. 16ಜಿಬಿ ಮತ್ತು 32ಜಿಬಿ ಇದರಲ್ಲಿದ್ದು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಬಹುದಾಗಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7 ನಲ್ಲಿರುವ ಅತ್ಯುತ್ತಮ ಅಂಶವೆಂದರೆ ಇದು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿರುವುದಾಗಿದೆ. ಇನ್ನು ಫೋನ್ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ. ಎಲ್‌ಜಿ ಜಿ3 ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿಲ್ಲ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7, 3,100mAh ಬ್ಯಾಟರಿಯೊಂದಿಗೆ ಬಂದಿದ್ದು 8 ಗಂಟೆಗಳ ಟಾಕ್‌ಟೈಮ್ ಅನ್ನು 3ಜಿಯಲ್ಲಿ ಒದಗಿಸಲಿದೆ. ವೇಗದ ಚಾರ್ಜಿಂಗ್ ಫೀಚರ್‌ನೊಂದಿಗೆ ಇದು ಬಂದಿದೆ. ಎಲ್‌ಜಿ ಜಿ3 3,000mAh ಬ್ಯಾಟರಿ ಇದರಲ್ಲಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಹೋನರ್ 7 ರೂ 22,999 ಕ್ಕೆ ಲಭ್ಯಾಗುತ್ತಿದ್ದು ಎಲ್‌ಜಿ ಜಿ3 ಬೆಲೆ ರೂ 30,499 ಆಗಿದೆ.

ಹೋನರ್ 7 ವರ್ಸಸ್ ಎಲ್‌ಜಿ ಜಿ3
ಎರಡೂ ಸ್ಮಾರ್ಟ್‌ಫೋನ್‌ಗಳು ತಮ್ಮದೇ ಆದ ಬಲ ಮತ್ತು ಬಲಹೀನತೆಯನ್ನು ಒಳಗೊಂಡಿದೆ.ಹೋನರ್ 7 ಬೆಲೆ ಮತ್ತು ಫೀಚರ್‌ಗಳ ವಿಷಯದಲ್ಲಿ ಎಲ್‌ಜಿ ಜಿ3 ಗಿಂತಲೂ ಒಂದು ಕೈ ಮೇಲಿದೆ.


Click it and Unblock the Notifications