TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸದ್ಯ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್ ಫೋನ್ ಗಳು ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಹಾನರ್ 7A ಸ್ಮಾರ್ಟ್ ಫೋನ್ ರೂ.10000ದ ಒಳಗೆ ದೊರೆಯುತ್ತಿರುವ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಹೈ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಇರುವಂತಹ ಆಯ್ಕೆಗಳನ್ನು ಹೊಂದಿರುವ ಹಾನರ್ 7A ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಾಪ್ ಎಂಡ್ ಫೋನ್ ಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ರೂ.8999ಕ್ಕೆ ಮಾರಾಟವಾಗಲಿರುವ ಹಾನರ್ 7A ಸ್ಮಾರ್ಟ್ ಫೋನ್, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಹೊಂದಿರುವ ಬೆಸ್ಟ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, 13 MP + 2 MP ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದಿದೆ. ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 8 MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದರಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.
ಅತೀ ಕಡಿಮೆ ಬೆಲೆಗೆ ಲಭ್ಯವಿದ್ಧರೂ ಸಹ ಹಾನರ್ 7A ಸ್ಮಾರ್ಟ್ ಫೋನಿನಲ್ಲಿ ಅಳವಡಿಸಿರುವ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳು ಉತ್ತಮ ಗುಣಮಟ್ಟದಾಗಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಮಾರುಕಟ್ಟೆಯಲ್ಲಿ ಟಾಪ್ ಸ್ಮಾರ್ಟ್ ಫೋನ್ ಗಳಿಗೆ ಇದು ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.
ಉತ್ತಮವಾದ ಕ್ಯಾಮೆರಾ
ಹಾನರ್ 7A ಸ್ಮಾರ್ಟ್ ಫೋನಿನಲ್ಲಿ ಉತ್ತಮವಾದ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಬಳಕೆದಾರರು ಕಡಿಮೆ ಬೆಲೆಯನ್ನು ನೀಡಿದ್ದಾರೆ ಎನ್ನುವ ಕಾರಣಕ್ಕೆ ಕಡಿಮೆ ಗುಣಮಟ್ಟದ ಫೋನ್ ಅನ್ನು ನೀಡುವ ಬದಲಿಗೆ, ಕಡಿಮೆ ಬೆಲೆಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಬೆಸ್ಟ್ ಡ್ಯುಯಲ್ ಕ್ಯಾಮೆರಾವನ್ನು ಈ ಸ್ಮಾರ್ಟ್ ಫೋನಿನಲ್ಲಿ ಅಳವಡಿಸಲಾಗಿದೆ.
ರೆಡ್ ಮಿ ನೋಟ್ 5 ನಲ್ಲಿಯೂ ಈ ಮಾದರಿಯ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ನೋಡಲು ಸಾಧ್ಯವಿಲ್ಲ. ಅಲ್ಲದೇ ಬೊಕ್ಕೆ ಎಫೆಕ್ಟ್ ಸಹ ಈ ಫೋನಿನಲ್ಲಿ ಲಭ್ಯವಿದ್ದು, ಬಳಕೆದಾರರಿಗೆ DSLR ಮಾದರಿಯಲ್ಲಿ ಚಿತ್ರಗಳನ್ನು ಸೆರೆ ಹಿಡಿಯಲು ಈ ಫೋನಿನಲ್ಲಿರುವ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸಹಾಯವನ್ನು ಮಾಡಲಿದೆ.
ಉತ್ತಮ ಸೆಲ್ಫಿ
ಹಾನರ್ 7A ಸ್ಮಾರ್ಟ್ ಫೋನಿನಲ್ಲಿ ಉತ್ತಮ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದಾಗಿದ್ದು, ಲೋ ಲೈಟ್ ಕಂಡಿಷನ್ ನಲ್ಲಿಯೂ ಉತ್ತಮ ಸೆಲ್ಫಿ ಗಳನ್ನು ತೆಗೆಯಬಹುದಾಗಿದೆ. ಇದಕ್ಕಾಗಿಯೇ ಹಾನರ್ 7A ಸ್ಮಾರ್ಟ್ ಫೋನಿನಲ್ಲಿ 8 MP ಕ್ಯಾಮೆರಾವನ್ನು ಮುಂಭಾಗದಲ್ಲಿ ನೀಡಲಾಗಿದೆ. ಇದಕ್ಕಾಗಿ LED ಲೈಟ್ ಅನ್ನು ನೀಡಿದ್ದು, ಉತ್ತಮ ಚಿತ್ರಗಳನ್ನು ಕ್ಲಿಕಿಸಲು ಸಹಾಯ ಮಾಡಲಿದೆ. ಇದಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಡೈರೆಕ್ಟ್ ಫೋಟೊಗಳನ್ನು ಸೆಂಡ್ ಮಾಡಬಹುದಾಗಿದೆ.
ಕ್ಯಾಮೆರಾ ಬಳಕೆ ಸುಲಭ
ಇದಲ್ಲದೇ ಹಾನರ್ 7A ಸ್ಮಾರ್ಟ್ ಫೋನಿನಲ್ಲಿ ನೀಡಿರುವ ಕ್ಯಾಮೆರಾ ಆಪ್ ಉತ್ತಮವಾಗಿದ್ದು, ಇದರ ಬಳಕೆಯೂ ಅತೀ ಸುಲಭ ಎನ್ನಬಹುದಾಗಿದೆ. ಬಳಕೆದಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಕ್ಯಾಮೆರಾ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕ್ಯಾಮೆರಾ UI ವಿಶಿಷ್ಠವಾಗಿ ರೂಪಿಸಲಾಗಿದೆ. ಇದರಲ್ಲಿಯೇ ಹಲವು ಆಯ್ಕೆಗಳನ್ನು ನೀಡಿದ್ದು, ಫೋಟೋಗಳನ್ನು ಕ್ಲಿಕ್ ಮಾಡುವುದು ಸುಲಭವಾಗಿಸಿದೆ.
ಹೆಚ್ಚು ಫಿಲ್ಟರ್ ಗಳು
ಇದಲ್ಲದೇ ಹಾನರ್ 7A ಸ್ಮಾರ್ಟ್ ಫೋನಿನಲ್ಲಿ ಉತ್ತಮ ಚಿತ್ರಗಳನ್ನು ಕ್ಲಿಕಿಸುವ ಸಲುವಾಗಿಯೇ ಹಲವು ಹೊಸ ಮಾದರಿಯ ಫಿಲ್ಟರ್ ಗಳನ್ನು ಹಾಗೂ ಮೋಡ್ ಗಳನ್ನು ನೀಡಲಾಗಿದೆ. ಇದಲ್ಲದೇ ವಿಡಿಯೋ ಮಾಡುವುದು ಸಹ ಇದರಲ್ಲಿ ಸುಲಭ ಎನ್ನಲಾಗಿದೆ. ಇದರಲ್ಲಿ ನೀಡಿರುವ ಫಿಲ್ಟರ್ ಗಳು ನಿಮ್ಮ ಫೋಟೋಗೆ ಬ್ಯುಟಿಫುಲ್ ಟಚ್ ನೀಡಲಿದೆ. ಅನೇಕ ಫಿಲ್ಟರ್ ಗಳು ನಿಮ್ಮ ಫೋಟೋವನ್ನು ಮತ್ತಷ್ಟು ಸುಂದರಗೊಳಿಸಲಿದೆ.
ಬೆಸ್ಟ್ ಕ್ಯಾಮೆರಾ ಫೋನ್ ಎನ್ನಬಹುದು
ಉತ್ತಮವಾದ ಡ್ಯುಯಲ್ ಲೈನ್ಸ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಬೆಸ್ಟ್ ಎನ್ನುವ ಸೆಲ್ಪಿ ಕ್ಯಾಮೆರಾವನ್ನು ಹೊಂದಿರುವ ಹಾನರ್ 7A ಸ್ಮಾರ್ಟ್ ಫೋನ್ ಅನ್ನು ಬೆಸ್ಟ್ ಕ್ಯಾಮೆರಾ ಫೋನ್ ಎಂದು ಕರೆಯಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನ ವಿಶೇಷತೆಗಳು ಸಹ ಈ ಫೋನಿಗೆ ಮೆರಗು ಹೆಚ್ಚಿಸಲಿದೆ.
ಫುಲ್ ವಿವ್ ಡಿಸ್ ಪ್ಲೇ ಸೇರಿದಂತೆ 3000mAh ಬ್ಯಾಟರಿ ಆಯ್ಕೆಗಳು ಬಳಕೆದಾರರಿಗೆ ಬೆಸ್ಟ್ ಎನ್ನುವ ಅನುಭವವನ್ನು ನೀಡಲಿದೆ. ಇದರೊಂದಿಗೆ 256GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಮೆಮೊರಿ ಆಯ್ಕೆಯೂ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಮದಿಗೆ ದೊರೆಯುವ ಹಾನರ್ 7A ಸ್ಮಾರ್ಟ್ ಫೋನ್ ಬಳಕೆದಾರರ ಸ್ನೇಹಿಯಾಗಿದೆ.
ಬ್ಲೂ, ಬ್ಲಾಕ್, ಗೋಲ್ಡ್ ಕಲರ್ ಗಳಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗುತ್ತಿದ್ದು, ರೂ.10000ದ ಒಳಗೆ ಉತ್ತಮ ಫೋನ್ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆಯಾಗಲಿದೆ. ಹಾನರ್ 7A ಸ್ಮಾರ್ಟ್ ಫೋನ್ ನಿಮ್ಮ ಹಣಕ್ಕೆ ತಕ್ಕ ಫೋನ್ ಆಗಲಿದೆ.