10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ ಈ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್‌ಗಳು!!
ಹುವಾವೆ ಕಂಪೆನಿಯ ಭಾರೀ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಾದ ಹಾನರ್ 7ಎ ಮತ್ತು ಹಾನರ್ 7ಸಿ ಸ್ಮಾರ್ಟ್‌ಫೋನ್‌ಗಳು ಇದೇ ಬುಧವಾರದಂದು ಭಾರತದಲ್ಲಿ ಬಿಡುಗಡೆಯಾಗಿವೆ. ಬಜೆಟ್ ಬೆಲೆಯಲ್ಲಿ ಅಂದರೆ 10,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿ ಮೊಬೈಲ್ ಮಾರುಕಟ್ಟೆಯನ್ನು ಪ್ರವೇಶಿಸಿವೆ.
10,000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಎರಡೂ ಫೋನ್‌ಗಳು ಸಹ ಡ್ಯುಯಲ್ ಕ್ಯಾಮೆರಾ ಹೊಂದಿರುವುದು ಹಾನರ್ 7ಎ ಮತ್ತು ಹಾನರ್ 7ಸಿ ಸ್ಮಾರ್ಟ್‌ಫೋನ್‌ಗಳ ವಿಶೇಷತೆಯಾಗಿದೆ. ಭಾರತದಲ್ಲಿ ರೆಡ್ ಮಿ ನೋಟ್ 5 ಮತ್ತು ಗ್ಯಾಲಾಕ್ಸಿ ಜೆ ಸೀರೀಸ್ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವ ಸಲುವಾಗಿ ಈ ಸ್ಮಾರ್ಟ್‌ಪೋನ್‌ಗಳು ಎಂಟ್ರಿ ನಿಡಿವೆ.

ಹಾನರ್ 7ಎ ಮತ್ತು ಹಾನರ್ 7ಸಿ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದ್ದು, ಇದೇ ಮೇ 29 ರಿಂದ ಮಾರಾಟಕ್ಕಿವೆ. ಹಾಗಾದರೆ, ಆಂಡ್ರಾಯ್ಡ್ 8.0 ಓರಿಯೋ ಅಪ್‌ಡೇಟ್ ಜೊತೆಗೆ ಭಾರತಕ್ಕೆ ಕಾಲಿಟ್ಟಿರುವ ಹಾನರ್ 7ಎ ಮತ್ತು ಹಾನರ್ 7ಸಿ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಮತ್ತು ಬೆಲೆ ಮಾಹಿತಿಯನ್ನು ಮುಂದೆ ತಿಳಿಯಿರಿ.

ಹಾನರ್ 7A ಸ್ಮಾರ್ಟ್‌ಫೋನ್
ಹಾನರ್ 7A ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ನೀಡಲಾಗಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅಳವಡಿಸಲಾಗಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವಿದೆ. 13MP + 2MP ರಿಯರ್ ಕ್ಯಾಮೆರಾಗಳು ಹಾಗೂ 8 MP ಸೆಲ್ಫಿ ಕ್ಯಾಮೆರಾ, ಆಂಡ್ರಾಯ್ಡ್ 8.0 ಆಪರೇಟಿಂಗ್ ಸಿಸ್ಟಂ ಜತೆ EMUI 8.0, ಫೆಸ್ ಅನ್‌ಲಾಕ್ ಆಯ್ಕೆ, 3000mAh ಬ್ಯಾಟರಿ ಯಂತಹ ಅತ್ಯುತ್ತಮ ಫೀಚರ್ಸ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಹಾನರ್ 7C ಸ್ಮಾರ್ಟ್‌ಫೋನ್
ಹಾನರ್ 7A ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.99 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ನೀಡಲಾಗಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಮತ್ತು 3GB RAM ಹಾಗೂ 4GB RAM ನೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. 32GB ಮತ್ತು 64GB ಇಂಟರ್ನಲ್ ಮೆಮೊರಿ ಮಾದರಿಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನ 256GB ವರೆಗೂ ವಿಸ್ತರಿಸಿಕೊಳ್ಳಬಹುದು. , 13MP + 2MP ಕ್ಯಾಮೆರಾ ರಿಯರ್ ಕ್ಯಾಮೆರಾ, ಆಂಡ್ರಾಯ್ಡ್ 8.0 ಆಪರೇಟಿಂಗ್ ಸಿಸ್ಟಂ ಜತೆ EMUI 8.0, ಫೆಸ್ ಅನ್‌ಲಾಕ್ ಆಯ್ಕೆ, 3000mAh ಬ್ಯಾಟರಿ ಯಂತಹ ಅತ್ಯುತ್ತಮ ಫೀಚರ್ಸ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಜಿಯೋ ಲಾಂಚಿಂಗ್ ಆಫರ್!!
ಹಾನರ್ 7A ಮತ್ತು ಹಾನರ್ 7C ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ಬೊಂಬಾಟ್ ಆಫರ್ ಘೋಷಣೆ ಮಾಡಿದೆ. ಹಾನರ್ 7A ಮತ್ತು ಹಾನರ್ 7C ಎರಡು ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ರೂ.2200 ಕ್ಯಾಷನ್ ಬ್ಯಾಕ್ ನೀಡಲಿದೆ. ಇಷ್ಟು ಮಾತ್ರವಲ್ಲದೆ, ಹಾನರ್ 7A ಸ್ಮಾರ್ಟ್‌ಫೋನ್ ಖರೀದಿದಾರರಿಗೆ 50GB ಉಚಿತ ಡೇಟಾ ಹಾಗೂ ಹಾನರ್ 7C ಸ್ಮಾರ್ಟ್‌ಫೋನ್ ಮೇಲೆ 100GB ಉಚಿತ ಡೇಟಾವನ್ನು ನೀಡಲು ಜಿಯೋ ಮುಂದಾಗಿದೆ.

ಹಾನರ್ 7A ಬೆಲೆ ಎಷ್ಟು?
ಹಾನರ್ 7A ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರೂ.8999ಕ್ಕೆ ಮಾರಾಟವಾಗಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಎಕ್ಸ್‌ಕ್ಲೂಸಿವ್ ಆಗಿ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಮೇ.29ರಿಂದ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಜೊತೆಗೆ ಹಾನರ್ ಆನ್‌ಲೈನ್ ಸ್ಟೋರಿನಲ್ಲಿಯೂ ದೊರೆಯಲಿದೆ.

ಹಾನರ್ 7C ಬೆಲೆ:
ಹಾನರ್ 7C 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ.9,999ಕ್ಕೆ, 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಆವೃತ್ತಿಯೂ ರೂ.11,999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿದ್ದು, ಮೇ.29ರಂದು ಮಾರಾಟಕ್ಕೆ ದೊರೆಯಲಿದೆ. ಜೊತೆಗೆ ಹಾನರ್ ಆನ್‌ಲೈನ್ ಸ್ಟೋರಿನಲ್ಲಿಯೂ ದೊರೆಯಲಿದೆ.


Click it and Unblock the Notifications








