Home
ಮೊಬೈಲ್

ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದ್ರೆ ಶಿಯೋಮಿನ ಕೇಳುವವರು ಇರುವುದಿಲ್ಲ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹುವಾವೆ ಒಡೆತನಕ್ಕೆ ಸೇರಿರುವ ಹಾನರ್ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ 7A ಮತ್ತು ಹಾನರ್ 7C ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ ಹೊಸ ಹಾನರ್ ಫೋನ್‌ಗಳು ಸೆಡ್ಡು ಹೊಡೆಯಲಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ರೂ.10,000ಕ್ಕಿಂತ ಕಡಿಮೆ ಬೆಲೆಗೆ ದೊರೆಯಲಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ ಎನ್ನಲಾಗಿದೆ.

ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದ್ರೆ ಶಿಯೋಮಿನ ಕೇಳುವವರು ಇರುವುದಿಲ್ಲ..!

ಈ ಎರಡು ಸ್ಮಾರ್ಟ್‌ಫೋನ್‌ಗಳು ಒಂದೇ ಮಾದರಿಯಲ್ಲಿ ಕಾಣಿಸಿಕೊಂಡರು ಸಹ ಕೊಂಚ ವ್ಯತ್ಯಾಸವನ್ನು ಹೊಂದಿವೆ. ಅಲ್ಲದೇ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಜೊತೆಗೆ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, EMUI 8.0ದಲ್ಲಿ ಇದು ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಹಾನರ್ 7A  ಸ್ಮಾರ್ಟ್‌ಫೋನ್‌:

ಹಾನರ್ 7A ಸ್ಮಾರ್ಟ್‌ಫೋನ್‌:

5.7 ಇಂಚಿನ ಡಿಸ್‌ಪ್ಲೇಯನ್ನು ಹಾನರ್ 7A ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದು 18:9 ಅನುಪಾತದ ಡಿಸ್‌ಪ್ಲೇಯಾಗಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ವಿಡಿಯೋವನ್ನು ಪ್ಲೇ ಮಾಡಲಿದೆ. ಇದಲ್ಲದೇ 3GB RAM ನೀಡಲಾಗಿದ್ದು, ಇದರೊಂದಿಗೆ 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಜೊತೆಗೆ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಸಹ ನೀಡಲಾಗಿದೆ. 3000mAh ಬ್ಯಾಟರಿಯೂ ಇದರಲ್ಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಹಾನರ್ 7A ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 13MP + 2MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ ಉತ್ತಮ ಸೆಲ್ಫಿಗಾಗಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಭಾಗ ಮತ್ತು ಮುಂಭಾಗದಲ್ಲಿ ಫ್ಲಾಷ್ ಲೈಟ್‌ಗಳನ್ನು ಕಾಣಬಹುದಾಗಿದೆ. ಅಲ್ಲದೇ ಫೆಸ್ ಅನ್‌ಲಾಕ್ ಆಯ್ಕೆಯೂ ಈ ಸ್ಮಾರ್ಟ್‌ಫೋನಿನಲ್ಲಿದೆ.

ಹಾನರ್ 7C ಸ್ಮಾರ್ಟ್‌ಫೋನ್‌:

ಹಾನರ್ 7C ಸ್ಮಾರ್ಟ್‌ಫೋನ್‌:

5.99 ಇಂಚಿನ ಡಿಸ್‌ಪ್ಲೇಯನ್ನು ಹಾನರ್ 7C ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ದು 18:9 ಅನುಪಾತದ ಡಿಸ್‌ಪ್ಲೇಯಾಗಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ವಿಡಿಯೋವನ್ನು ಪ್ಲೇ ಮಾಡಲಿದೆ. ಇದಲ್ಲದೇ 3GB RAM ಮತ್ತು 4GB RAM ನೊಂದಿಗೆ ಕಾಣಿಸಿಕೊಂಡಿದೆ. ಇದಲ್ಲದೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಸಹ ನೀಡಲಾಗಿದೆ. 32GB ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಜೊತೆಗೆ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಹಾನರ್ 7C ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದ್ದು, 13MP + 2MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ ಉತ್ತಮ ಸೆಲ್ಫಿಗಾಗಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಹಿಂಭಾಗ ಮತ್ತು ಮುಂಭಾಗದಲ್ಲಿ ಫ್ಲಾಷ್ ಲೈಟ್‌ಗಳನ್ನು ಕಾಣಬಹುದಾಗಿದೆ. ಅಲ್ಲದೇ ಫೆಸ್ ಅನ್‌ಲಾಕ್ ಆಯ್ಕೆಯೂ ಈ ಸ್ಮಾರ್ಟ್‌ಫೋನಿನಲ್ಲಿದೆ. 3000mAh ಬ್ಯಾಟರಿಯೂ ಇದರಲ್ಲಿದೆ.

ಜಿಯೋ ಲಾಂಚಿಂಗ್ ಆಫರ್:

ಜಿಯೋ ಲಾಂಚಿಂಗ್ ಆಫರ್:

ಹಾನರ್ 7A ಮತ್ತು ಹಾನರ್ 7C ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ಬೊಂಬಾಟ್ ಆಫರ್ ವೊಂದನ್ನು ಘೋಷಣೆ ಮಾಡಿದ್ದು, ಎರಡು ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.2200 ಕ್ಯಾಷನ್ ಬ್ಯಾಕ್ ನೀಡಲಿದೆ. ಇದಲ್ಲದೇ ಹಾನರ್ 7A 50GB ಡೇಟಾವನ್ನು ಉಚಿತವಾಗಿ ನೀಡಲಿದ್ದು, ಇದೇ ಮಾದರಿಯಲ್ಲಿ ಹಾನರ್ 7C ಸ್ಮಾರ್ಟ್ ಫೋನ್ ಮೇಲೆ 100GB ಡೇಟಾವನ್ನು ನೀಡಲು ಜಿಯೋ ಮುಂದಾಗಿದೆ.

ಹಾನರ್ 7A ಬೆಲೆ:

ಹಾನರ್ 7A ಬೆಲೆ:

ಹಾನರ್ 7A ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ರೂ.8999ಕ್ಕೆ ಮಾರಾಟವಾಗಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಎಕ್ಸ್‌ಕ್ಲೂಸಿವ್ ಆಗಿ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಮೇ.29ರಿಂದ ಈ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಜೊತೆಗೆ ಹಾನರ್ ಆನ್‌ಲೈನ್‌ ಸ್ಟೋರಿನಲ್ಲಿಯೂ ದೊರೆಯಲಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಹಾನರ್ 7C ಬೆಲೆ:

ಹಾನರ್ 7C ಬೆಲೆ:

ಹಾನರ್ 7C 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ.9,999ಕ್ಕೆ, 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಆವೃತ್ತಿಯೂ ರೂ.11,999ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಎಕ್ಸ್‌ಕ್ಲೂಸಿವ್ ಆಗಿದ್ದು, ಮೇ.29ರಂದು ಮಾರಟಕ್ಕೆ ದೊರೆಯಲಿದೆ. ಜೊತೆಗೆ ಹಾನರ್ ಆನ್‌ಲೈನ್‌ ಸ್ಟೋರಿನಲ್ಲಿಯೂ ದೊರೆಯಲಿದೆ.

Best Mobiles in India

English summary
Honor 7A, Honor 7C With Dual Rear Cameras, 18:9 Displays Launched in India: Price, Specifications. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+