ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಕೇವಲ ರೂ. 9,499 ಕ್ಕೆ 'ಹಾನರ್ 7ಸಿ'!..ಖರೀದಿಗೆ ರೆಡಿಯಾಗಿ!!

  |

  ಆಕರ್ಷಕ ಫೀಚರ್ಸ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಫೋನ್‌ಗಳು ಸಹ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಿರುವುದು ಗ್ರಾಹಕರಿಗೂ ಮೊಬೈಲ್‌ಗಳ ಆಯ್ಕೆ ವಿಷಯದಲ್ಲಿ ಕಷ್ಟವಾಗುತ್ತಿದೆ.ಆದರೆ, ಮಾರುಕಟ್ಟೆಯಲ್ಲಿರುವ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಎಂದು ಕರೆಸಿಕೊಳ್ಳುತ್ತಿರುವ 'ಹಾನರ್ 7ಸಿ' ಸ್ಮಾರ್ಟ್‌ಫೋನ್ ಖರೀದಿಗೆ ಈ ಸಮಯ ಯೋಗ್ಯವಾಗಿದೆ.

  ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಕೇವಲ ರೂ. 9,499 ಕ್ಕೆ 'ಹಾನರ್ 7ಸಿ'!!

  ಹೌದು, ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಮಾರುಕಟ್ಟೆಯಲ್ಲಿ ಸಧ್ಯ ಟ್ರೆಂಡ್ ಸೃಷ್ಟಿಸಿರುವ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ 'ಹಾನರ್ 7ಸಿ' ಕೇವಲ 9,499 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಕಳೆದ ತಿಂಗಳಷ್ಟೆ 9,999ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಈ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬೆಲೆ ಕೇವಲ ಒಂದು ತಿಂಗಳಿನಲ್ಲಿ ಕಡಿತವಾಗಿದೆ.

  ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಕೇವಲ ರೂ. 9,499 ಕ್ಕೆ 'ಹಾನರ್ 7ಸಿ'!!

  ಖರೀದಿಸಲು ಯೋಗ್ಯವಾದ ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರುವ 'ಹಾನರ್ 7ಸಿ' ಇಂದು ನಮ್ಮ ಹಾಟ್‌ ಫೇವರೇಟ್ ಸ್ಮಾರ್ಟ್‌ಫೋನ್ ಆಗಿದ್ದು, ಹಾಗಾದರೆ, 'ಹಾನರ್ 7ಸಿ' ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷ ಫೀಚರ್ಸ್ ಯಾವುವು? ಖರೀದಿಸಲು ಏನು ಕಾರಣಗಳಿವೆ ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  5.99 ಇಂಚ್ ಫುಲ್ ವೀವ್ ಡಿಸ್‌ಪ್ಲೇ

  'ಹಾನರ್ 7ಸಿ' ಸ್ಮಾರ್ಟ್‌ಫೋನ್ 18:9 ಅನುಪಾತದ 5.99-ಇಂಚಿನ ಫುಲ್‌ ವೀವ್ಯೂ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 2.5D ಕರ್ವಡ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 1440 x 720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಗೇಮಿಂಗ್, ವೀಡಿಯೊ ಸ್ಟ್ರೀಮಿಂಗ್, ಮತ್ತು ಬ್ರೌಸಿಂಗ್‌ಗಾಗಿ ಉತ್ತಮ ಅನುಭವ ನೀಡುವ ಈ ಸ್ಮಾರ್ಟ್‌ಫೋನ್ 76.3% ನಷ್ಟು ಸ್ಕ್ರೀನ್ ಅನುಪಾತವನ್ನು ಹೊಂದಿದೆ.

  ಡ್ಯುಯಲ್ ರಿಯರ್ ಕ್ಯಾಮೆರಾಗಳು!

  ಕೇವಲ 10 ಸಾವಿರ ರೂಪಾಯಿಗಳ ಬೆಲೆಯಿಂದ ಆರಂಭವಾಗಿರುವ 'ಹಾನರ್ 7ಸಿ' ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಎಫ್2.2 ಅಪಾರ್ಚರ್‌ನೊಂದಿಗೆ 13 ಮೆಗಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹಾಗೂ 2MP ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದ ಕ್ಯಾಮೆರಾ ಡೆಪ್ತ್ ಮತ್ತು ಬೊಕ್ಕೆ ಚಿತ್ರಗಳನ್ನು ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಎಲ್‌ಇಡಿ ಫ್ಲಾಶ್‌ಲೈಟ್‌ನಲ್ಲಿಯೂ ಅಪ್‌ಡೇಟ್ ಆಗಿರುವ ಹುವಾವೆ ಕಂಪೆನಿ ಹೆಚ್ಚು ಬೆಳಕನ್ನು ನೀಡುವ ಎಲ್‌ಇಡಿ ಫ್ಲಾಶ್‌ಲೈಟ್‌ಗಳನ್ನು ಅಳವಡಿಸಿದೆ.

  ಡ್ಯುಯಲ್ ಬ್ಲೂಟೂತ್ ಫೀಚರ್!

  ಡ್ಯುಯಲ್ ಕ್ಯಾಮೆರಾ ಬಗ್ಗೆ ತಿಳಿದಿದ್ದ ನಿಮಗೆ, ಈ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಬ್ಲೂಟೂತ್ ಇದೆ ಎಂದರೆಆಶ್ಚರ್ಯವಾಗಬೇಕು. ಬ್ಲೂಟೂತ್ ಸ್ಪೀಕರ್‌ನಲಗಲಿ ಸಂಗೀತವನ್ನು ಆಲಿಸುತ್ತಾ, ನೀವು ಬ್ಲೂಟೂತ್ ಹೆಡ್‌ಸೆಟ್ ಮೂಲಕ ಕರೆಗಳನ್ನು ಪಡೆದಾಗ ನೀವು ಡ್ಯುಯಲ್ ಬ್ಲೂಟೂತ್ ಸಹಾಯವನ್ನು ಪಡೆಯುತ್ತೀರಾ. ಏಕಕಾಲದಲ್ಲಿ ಎರಡು ಸಾಧನಗಳ ಬ್ಲೂಟೂತ್ ಸಂಪರ್ಕವನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀವು ಪಡೆಯಬಹುದಾಗಿದೆ.

  ಸೆಲ್ಫಿ ಕ್ಯಾಮೆರಾ ಹಾಗೂ ಫೇಸ್‌ ಅನ್‌ಲಾಕ್!

  'ಹಾನರ್ 7ಸಿ' ಸ್ಮಾರ್ಟ್‌ಫೋನ್ ಸ್ಮಾರ್ಟ್‌ಪೋನಿನಲ್ಲಿ ಎಫ್/ 2.0 ಅಪರ್ಚರ್ ಮತ್ತು ಎಲ್ಇಡಿ ಫ್ಲಾಶ್‌ ಜೊತೆಗೆ 8ಎಂಪಿ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಬೆಳಕನ್ನು ಮತ್ತು ಟೋನ್ ಅನ್ನು ಸರಿಹೊಂದಿಸುವುದರ ಮೂಲಕ ಪರಿಪೂರ್ಣ ಸ್ವಯಂ ಚಿತ್ರಗಳನ್ನು ತೆಗೆಯಬಹುದಾದಂತಹ ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನದಲ್ಲಿದೆ. ಹಿಂಭಾಗದಲ್ಲಿ ಬೆರಳಚ್ಚು ಸಂವೇದಕವಿದ್ದರೂ ಸಹ, ಇದು ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ ಫೋನ್ ಅನ್ನು ಅನ್‌ಲಾಕ್ ಮಾಡುತ್ತದೆ.

  ಮೂರು ಕಾರ್ಡ್ ಸ್ಲಾಟ್!

  ಆಂತರಿಕ ಶೇಖರಣಾ ಮೆಮೊರಿ ಮತ್ತು ಕ್ಲೌಡ್ ಶೇಖರಣಾ ಪರಿಹಾರಗಳ ಸಾಮರ್ಥ್ಯದ ಹೊರತಾಗಿಯೂ ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮೆಮೊರಿ ಕಾರ್ಡ್ ಸ್ಲಾಟ್ ವರವಾಗಿದೆ. ಕೆಲವು ಸ್ಮಾರ್ಟ್‌ಫೋನ್‌ಗಳು ಎರಡು ಸ್ಲಾಟ್‌ಗಳನ್ನು ಮಾತ್ರ ಹೊಂದಿದ್ದರೆ, 'ಹಾನರ್ 7ಸಿ' ಸ್ಮಾರ್ಟ್‌ಫೋನ್ ಎರಡು ಸಿಮ್‌ಗಳ ಹಾಗು ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಡೀಫಾಲ್ಟ್ ಮೆಮೊರಿ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಪೋನಿನಲ್ಲಿ 256GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ.

  ತಡೆರಹಿತ ಗೇಮಿಂಗ್ ಮತ್ತು ಸ್ಟುಡಿಯೋ ಅನುಭವ!

  'ಹಾನರ್ 7ಸಿ' ಸ್ಮಾರ್ಟ್‌ಫೋನ್ ಸ್ಮಾರ್ಟ್‌ಪೋನ್ 3000mAh ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು ಸ್ಮಾರ್ಟ್ ಪವರ್ 5.0 ತಂತ್ರಜ್ಞಾನವನ್ನು ಹೊಂದಿರುವುದರಿಂದ ದೀರ್ಘಕಾಲೀನ ಬ್ಯಾಟರಿ ಶಕ್ತಿಯನ್ನು ಒದಗಿಸುತ್ತದೆ. ತಡೆರಹಿತ ಗೇಮಿಂಗ್ ಅನುಭವ ನೀಡುವ ಸಾಮರ್ಥ್ಯವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ನೈಜ-ಸಮಯದ ಆಡಿಯೋ ಮೇಲ್ವಿಚಾರಣೆಯ ವೈಶಿಷ್ಟ್ಯವನ್ನು ಹೊಂದಿದೆ. ಇದರಿಂದ ಇಯರ್‌ಪೋನ್ ಹಾಕಿಕೊಂಡು ಆಲಿಸಿದರೆ ಸ್ಟುಡಿಯೋ ಅನುಭವ ನಿಮಗೆ ಸಿಗಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Honor 7C has received a price cut on Amazon.in. With a configuration-wide price cut of Rs. 500, the mid-range smartphone from Huawei brand Honor is currently being sold for Rs. 9,499. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more