ಕೊಡುವ ಬೆಲೆಗೆ ತಕ್ಕ ಫೋನ್ ಹಾನರ್ 7S: ಜೇಬಿಗೆ ಹೊರೆಯಂತು ಅಲ್ಲ..!

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿರುವ ಹುವಾವೆ ಸಬ್ ಬ್ರಾಂಡ್ ಹಾನರ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ಪರಿಚಯ ಮಾಡಿದೆ. ಈಗಾಗಲೇ ಬಜೆಟ್ ವಿಭಾಗದಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಹಾನರ್, ಈ ಬಾರಿ ಹಾನರ್ 7S ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಬಜೆಟ್ ವಿಭಾಗದಲ್ಲಿ ಇತರೆ ಚೀನಾ ಕಂಪನಿಗಳೊಂದಿಗೆ ಸ್ಪರ್ಧೆಗೆ ಮುಂದಾಗಿದೆ.

ಬಜೆಟ್ ಬೆಲೆಯಲ್ಲಿ ಲಾಂಚ್ ಆಗಿರುವ ಹಾನರ್ 7S ಸ್ಮಾರ್ಟ್‌ಫೋನ್ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಬೇಕು ಎನ್ನುವವರಿಗೆ ಇದು ಬೆಸ್ಟ್ ಆಯ್ಕೆಯಾಗಲಿದೆ. ಬೆಲೆಗೆ ತಕ್ಕಂತೆ ಇದರಲ್ಲಿ ಗುಣಮಟ್ಟವನ್ನು ನೋಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಹಾನರ್ 7S ಸ್ಮಾರ್ಟ್‌ಫೋನ್ ಬೆಲೆ:
ರೂ.6999ಕ್ಕೆ ಹಾನರ್ 7S ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, ಬೆಲೆಯ ಮೂಲಕವೇ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ರೂಪಿಸಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಲಾಂಚ್ ಆಗಲಿದ್ದು, ಸೆಪ್ಟೆಂಬರ್ 14 ರಂದು ಮಧ್ಯಾಹ್ನ 12ಗೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಹಾನರ್ 7S ವಿಶೇಷತೆ:
ಡ್ಯುಯಲ್ ನ್ಯಾನೋ ಸಿಮ್ ನೊಂದಿಗೆ SD ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಹೊಂದಿರುವ ಹಾನರ್ 7S ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ ಒರಿಯೋ 8.1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ 3020mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಡಿಸ್‌ಪ್ಲೇ:
ಹಾನರ್ 7S ಸ್ಮಾರ್ಟ್‌ಫೋನ್ 5.45 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೇ ಇದು HD+ ಗುಣಮಟ್ಟವನ್ನು ಹೊಂದಿದೆ. ಅಲ್ಲದೇ ಇದು 18:9 ಅನುಪಾತದ ಫುಲ್‌ವ್ಯೂವ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಇದರೊಂದಿಗೆ ಕ್ವಾಡ್ ಓರ್ ಮೀಡಿಯಾ ಟೆಕ್ MT6739 ಪ್ರೋಸೆಸರ್ ಅನ್ನು ಹೊಂದಿದೆ.

RAM ಮತ್ತು ROM:
ಹಾನರ್ 7S ಸ್ಮಾರ್ಟ್‌ಫೋನ್ 2 GB RAM ನೊಂದಿಗೆ ಕಾಣಿಸಿಕೊಳ್ಳಲಿದೆ. ಇದಲ್ಲದೇ 16 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಅಲ್ಲದೇ 256 GB ವರೆಗೂ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ:
ಹಾನರ್ 7S ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಇದರೊಂದಿಗೆ ಸಾಫ್ಟ್ ಲೈಟ್ ಸಹ ಇದೆ. ಅಲ್ಲದೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಅಲ್ಲದೇ LED ಫ್ಲಾಷ್ ಲೈಟ್ ಅನ್ನು ಇದರಲ್ಲಿ ನೀಡಲಾಗಿದೆ ಅಲ್ಲದೇ ಫೇಸ್ ಆನ್‌ಲಾಕ್ ಆಯ್ಕೆಯನ್ನು ಇದರಲ್ಲಿ ನೋಡಲಾಗಿದೆ.


Click it and Unblock the Notifications



