Home
ಮೊಬೈಲ್

ಹಾನರ್ 7 ಎಕ್ಸ್‌ ಬೆಲೆಯಲ್ಲಿ 2000 ರೂ. ಕಡಿತ!!!

By Gizbot Bureau

ಸದ್ಯದಲ್ಲೇ ಯಾವುದಾದರೂ ಮೊಬೈಲ್ ಖರೀದಿಸುವ ಉಪಾಯ ಇದಿಯಾ? ಹಾಗಿದ್ದರೆ ನೋಡಿ ನಿಮ್ಮ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಒಂದು ಉತ್ತಮ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ನೀವು ಹಾನರ್ ಸಂಸ್ಥೆಯ ಸ್ಮಾರ್ಟ್ ಫೋನ್ ಪ್ರಿಯರಾಗಿದ್ದಲ್ಲಿ ನಿಮಗೊಂದು ಸಿಹಿಸುದ್ದಿಯನ್ನು ನೀಡುತ್ತಿದ್ದೇವೆ. ಭಾರತದಲ್ಲಿ 18:9 ಅನುಪಾತದ ಡಿಸ್ಲ್ಪೇ ಮತ್ತು ಡುಯಲ್ ಕ್ಯಾಮರಾ ಸೆಟ್ ಅಪ್ ನೊಂದಿಗೆ ಬಿಡುಗಡೆಗೊಂಡ ಮೊದಲ ಬಜೆಟ್ ಸ್ಮಾರ್ಟ್ ಫೋನ್ ಹಾನರ್ 7ಎಕ್ಸ್ . ಈಗ ಇದರ ಬೆಲೆ 2000 ರುಪಾಯಿ ಕುಸಿದಿದೆ.

ಹಾನರ್ 7 ಎಕ್ಸ್‌ ಬೆಲೆಯಲ್ಲಿ 2000 ರೂ. ಕಡಿತ!!!

ಹಾನರ್ 7ಎಕ್ಸ್ 4ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಅವಕಾಶವಿರುವ ಫೋನ್ ಬಿಡುಗಡೆಯ ಸಂದರ್ಬದಲ್ಲಿದ್ದ ಬೆಲೆ 12,999 ರುಪಾಯಿಗಳು ಆದರೆ ಈಗ 11,999 ರುಪಾಯಿಗಳಾಗಿದೆ. ಇನ್ನು ಹಾನರ್ 7ಎಕ್ಸ್ ನ 4ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಅವಕಾಶವಿರುವ ಫೋನಿನ ಬೆಲೆ ಬಿಡುಗಡೆಗೊಂಡಾಗ 15,999 ರುಪಾಯಿಗಳು ಮತ್ತು ಈಗಿನ ಬೆಲೆ 14,999 ರುಪಾಯಿಗಳು.

ಈ ಎರಡೂ ಸ್ಮಾರ್ಟ್ ಫೋನ್ ಗಳು ಅಮೇಜಾನ್ ನಲ್ಲಿ ಹೊಸ ಬೆಲೆಯಲ್ಲಿ ಲಭ್ಯವಿದೆ. ಬೆಲೆಯಲ್ಲಿ ಕಡಿಮೆಯಾಗಿದೆ ಅಂದರೆ ಅದರ ಅರ್ಥ ಇನ್ನು ಕೆಲವೇ ವಾರಗಳಲ್ಲಿ ಈ ಪೋನಿನ ಯಶಸ್ಸಿನ ವರ್ಷನ್ ಹಾನರ್ 8 ಎಕ್ಸ್ ಕೂಡ ಬಿಡುಗಡೆಗೊಳ್ಳಲಿದೆ. ಸದ್ಯಕ್ಕೆ ಹಾನರ್ 8 ಎಕ್ಸ್ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಮತ್ತು ಕಂಪೆನಿ ಹಾನರ್ 8 ಎಕ್ಸ್ ನ್ನು ಸದ್ಯದ ಮಾರುಕಟ್ಟೆಯ ಟ್ರೆಂಡಿಗೆ ತಕ್ಕಂತೆ ಕಾಂಪಿಟೇಷನ್ ನೀಡುವ ಮಟ್ಟದಲ್ಲಿ ಹೊರತರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಹಾನರ್ 7ಎಕ್ಸ್ ವೈಶಿಷ್ಟ್ಯತೆಗಳು

ಉತ್ತಮ ಡಿಸ್ಪ್ಲೇ

ಉತ್ತಮ ಡಿಸ್ಪ್ಲೇ

ಈ ಫೋನು 5.93- ಇಂಚಿನ ಫುಲ್ ಸ್ಕ್ರೀನ್ ಡಿಸ್ಪ್ಲೇ ಯನ್ನು 1080 x 2160 ಪಿಕ್ಸಲ್ ರೆಸಲ್ಯೂಷನ್ ನಲ್ಲಿ ಹೊಂದಿದೆ. ಈ ಸ್ಮಾರ್ಟ್ ಫೋನ್ 1.7GHz ಆಕ್ಟಾ -ಕೋರ್- HiSilicon Kirin 659 ಪ್ರೆಸೆಸರ್ 4ಜಿಬಿ RAM ನೊಂದಿಗೆ ಪೇರ್ ಆಗಿ ಇರಲಿದೆ. ಇದರಲ್ಲಿ 32ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ ಮತ್ತು ಅದನ್ನು ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ 256 ಜಿಬಿ ವರೆಗೂ ಹಿಗ್ಗಿಸಿಕೊಳ್ಳಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಹಾನರ್ 7 ಎಕ್ಸ 16ಎಂಪಿ + 2ಎಂಪಿ ಪ್ರೈಮರಿ ಕ್ಯಾಮರಾವನ್ನು ಹಿಂಭಾಗದಲ್ಲಿ ಮತ್ತು 8 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. ಆಂಡ್ರಾಯ್ 7.0 ನಲ್ಲಿ ಈ ಡಿವೈಸ್ ರನ್ ಆಗುತ್ತದೆ ಮತ್ತು 3340mAh ನಾನ್-ರಿಮೂವೇಬಲ್ ಬ್ಯಾಟರಿ ಸೌಲಭ್ಯವನ್ನು ಇದು ಹೊಂದಿದೆ.

ಡ್ಯುಯಲ್ ಸಿಮ್

ಡ್ಯುಯಲ್ ಸಿಮ್

ಡುಯಲ್ ಸಿಮ್ (GSM ಮತ್ತು GSM)ನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದಾಗಿದ್ದು, ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ವೈ-ಫೈ, ಜಿಪಿಎಸ್, ಬ್ಲೂ ಟೂತ್, ಯುಎಸ್ ಬಿ ಒಟಿಜಿ, 3ಜಿ ಮತ್ತು 4ಜಿ ( ಭಾರತದಲ್ಲಿ ಎಲ್ ಇ ಟಿ ನೆಟ್ ವರ್ಕ್ ಗಳ ಸಹಾಯದಿಂದ ಬ್ಯಾಂಡ್ 40 ಗೆ ಸಹಾಯ).

ಸೆನ್ಸಾರ್‌ಗಳಲ್ಲಿ ಉತ್ತಮ ಸ್ಮಾರ್ಟ್‌ಪೋನ್

ಸೆನ್ಸಾರ್‌ಗಳಲ್ಲಿ ಉತ್ತಮ ಸ್ಮಾರ್ಟ್‌ಪೋನ್

ಸೆನ್ಸರ್ ಗಳ ವಿಚಾರದಲ್ಲಿ ಹೇಳುವುದಾದರೆ, ಕಂಪಾಸ್ ಮ್ಯಾಗ್ನೆಟೋಮೀಟರ್ , ಪ್ರಾಕ್ಸಿಮಿಟಿ ಸೆನ್ಸರ್, ಎಕ್ಸರೋಮೀಟರ್, ಏಂಬಿಯಂಟೈ ಲೈಟ್ ಸೆನ್ಸರ್, ಗೈರೋಸ್ಕೋಪ್ ಗಳು ಇದರಲ್ಲಿ ಲಭ್ಯವಿದೆ. ಈ ಫೋನಿನ ಅಳತೆ 156.50 x 75.30 x 7.60 (ಎತ್ತರ x ಅಗಲ x ದಪ್ಪ) 165.00 ಗ್ರಾಮ್ಸ್ ತೂಕವಿದೆ.. ನಿಮಗೂ ಈ ಫೋನ್ ಹಿತವೆನಿಸಿದರೆ, ಆಫರ್ ಬೆಲೆಯಲ್ಲಿ ಕೊಂಡುಕೊಳ್ಳಿ.

Best Mobiles in India

English summary
Honor 7x price slashed: Now available for just Rs 11,999. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+