Subscribe to Gizbot

ಹೈ ಎಂಡ್ ಸ್ಮಾರ್ಟ್‌ಫೋನ್ 'ಹಾನರ್ 8 ಪ್ರೊ' ಬಿಡುಗಡೆ!!..ಹೇಗಿದೆ?

Written By:

ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಹುವಾವೆ ಕಂಪೆನಿ ಇದೀಗ ತನ್ನ ನೂತನ ಹಾನರ್ ಸರಣಿಯ ಹೈ ಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.! 6ಜಿಬಿ RAM ಹೊಂದಿರುವ ಈ ನೂತನ ಸ್ಮಾರ್ಟ್‌ಫೋನ್ 'ಹಾನರ್ 8 ಪ್ರೊ' ಅತ್ಯದ್ಬುತವಾಗಿದ್ದು ಬಹಳ ವಿಶೇಷವಾಗಿದೆ.!!

ಡ್ಯುವೆಲ್ ರಿಯರ್ ಕ್ಯಾಮೆರಾ, ವಾಟರ್‌ಪ್ರೂಫ್ ಮತ್ತು ಲೈಟನಿಂಗ್ ಫಾಸ್ಟ್ ಫಿಂಗರ್‌ಪ್ರಿಂಟ್ ಫೀಚರ್ಸ್‌ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ನಿಲಿ ಮತ್ತು ಕಪ್ಪು ಬಣ್ಣದಲ್ಲಿಯೂ ಈ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಕೆಲವೇ ದಿವಸಗಳಲ್ಲಿ ಲಭ್ಯವಿರಲಿದೆ.!!

ಹಾಗಾದರೆ, ಹಾನರ್ 8 ಪ್ರೊ ಸ್ಮಾರ್ಟ್‌ಫೋನ್ ಹೇಗಿದೆ? ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ? ಬೆಲೆ ಎಷ್ಟು? ಸ್ಮಾರ್ಟ್‌ಫೋನ್ ಖರೀದಿಸಲು ಉತ್ತಮವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೆ ಹೇಗಿದೆ?

ಡಿಸ್‌ಪ್ಲೆ ಹೇಗಿದೆ?

ಹಾನರ್ 8 ಪ್ರೊ ಸ್ಮಾರ್ಟ್‌ಫೋನ್ 5.7 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಡಿಸ್‌ಪ್ಲೆ ಹೊಂದಿದ್ದು, 1440*2560 ರೆಸ್ಯುಲೇಶನ್ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಹೊಂದಿದೆ.! ಇದೇ ಮೊದಲ ಬಾರಿಗೆ ಮಲ್ಟಿಮೀಡಿಯಾ ಉದ್ದೇಶಕ್ಕಾಗಿಯೇ ಹೆಚ್ಚು ಗುಣಮಟ್ಟದ ಡಿಸ್‌ಪ್ಲೆ ಮಾರುಕಟ್ಟೆಗೆ ಕಾಲಿಟ್ಟಿದೆ.!!

RAM ಮತ್ತು ಆಂತರಿಕ ಮೆಮೊರಿ.!!

RAM ಮತ್ತು ಆಂತರಿಕ ಮೆಮೊರಿ.!!

ಹಾನರ್ 8 ಪ್ರೊ ಸ್ಮಾರ್ಟ್‌ಫೋನ್ ಫೀಚರ್ಸ್ ಅತ್ಯಾಧುನಿಕವಾಗಿದ್ದು, 6GB RAM ಮತ್ತು 64 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಇನ್ನ ಹೈಬ್ರೀಡ್ ಸಿಮ್ ವ್ಯವಸ್ಥೆ ಇದ್ದು, ಎಕ್ಸ್‌ಟರ್ನಲ್ ಮೆಮೊರಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೊರಿಯನ್ನು ವಿಸ್ತರಿಸಬಹುದು.!!

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ಹೈ ಸಿಲಿಕಾನ್ ಕಿರಿನ್ 960 ಅಕ್ಟಾಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ನ್ಯೂಗಾದಲ್ಲಿ ಹಾನರ್ 8 ಪ್ರೊ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೀಡಲಿದೆ.!! ಹಾಗಾಗಿ, ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಅದ್ಬುತವಾಗಿರಲಿದೆ.!!

ಬ್ಯಾಟರಿ ಮತ್ತು ಬೆಲೆ ಎಷ್ಟು?

ಬ್ಯಾಟರಿ ಮತ್ತು ಬೆಲೆ ಎಷ್ಟು?

ಹಾನರ್ ಸ್ಮಾರ್ಟ್‌ಫೋನ್‌ಗಳು ಬ್ಯಾಟರಿ ವಿಷಯದಲ್ಲಿ ಯಾವಾಗಲು ಮುಂದಿದ್ದು, ಹಾನರ್ 8 ಪ್ರೊ ಸ್ಮಾರ್ಟ್‌ಫೋನ್ 400೦mAh ಬ್ಯಾರಿಯನ್ನು ಹೊಂದಿದೆ. ಇನ್ನು ಬೆಲೆ 35,000 ದಿಂದ 38 ಸಾವಿರ ರೂಪಾಯಿಗಣಳಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 8 Pro Dual Rear Cameras Unveiled in India
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot