'ಹಾನರ್ 8ಸಿ' ಬೆಲೆ ಮತ್ತೆ ಕಡಿತ!..ಅಮೆಜಾನ್‌ನಲ್ಲಿ ಈಗ 8,999 ರೂ.ಗೆ ಲಭ್ಯ!

|

ಕಳೆದ ವರ್ಷ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡಿದ್ದ ಎಂಟ್ರಿ ಸೆಗ್ಮೆಂಟ್ ಸ್ಮಾರ್ಟ್‌ಫೋನ್ 'ಹಾನರ್ 8ಸಿ' ಬೆಲೆ ಮತ್ತೆ ಕಡಿತವಾಗಿದೆ. 12,999 ರೂಪಾಯಿಗಳಿಗೆ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನ್ ಒಟ್ಟಾರೆಯಾಗಿ 5 ಸಾವಿರದಷ್ಟು ಬೆಲೆ ಕಳೆದುಕೊಂಡಿದ್ದು, ಇದೀಗ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟರ್ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.!

'ಹಾನರ್ 8ಸಿ' ಬೆಲೆ ಮತ್ತೆ ಕಡಿತ!..ಅಮೆಜಾನ್‌ನಲ್ಲಿ ಈಗ 8,999 ರೂ.ಗೆ ಲಭ್ಯ!

ಹೌದು, ದೇಶದಲ್ಲಿ 'ಹಾನರ್ 8ಸಿ' ಬಿಡುಗಡೆಯಾದ ನಂತರ ಹಲವು ಬಾರಿ ರಿಯಾಯಿತಿ ನೀಡಲಾಗಿದೆ. ಇದೀಗ ಮತ್ತೆ 1,000 ರೂ. ಬೆಲೆ ಇಳಿಕೆ ಮಾಡಿ ಹಾನರ್ ಕಂಪೆನಿ ಸಿಹಿಸುದ್ದಿ ನೀಡಿದೆ. ಈ ಬೆಲೆ ಇಳಿಕೆಯಿಂದಾಗಿ 4 ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಹೊಂದಿರುವ ಬೇಸ್ ರೂಪಾಂತರದ ಹಾನರ್ 8 ಸಿ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.ಗಳಿಗೆ ಇಳಿಕೆಯಾಗಿದೆ.

'ಹಾನರ್ 8ಸಿ' ಬಿಡುಗಡೆಯಾಗಿ ಒಂದು ವರ್ಷವೇ ಕಳೆಯುತ್ತಾ ಬಂದರೂ ಈಗಲೂ ಸ್ಮಾರ್ಟ್‌ಫೋನಿಗೆ ಬೇಡಿಕೆ ಕಡಿಮೆಯಾಗಿಲ್ಲ. ಹಾಗಾದರೆ, ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ 6.26 ಹೆಚ್‌ಡಿ+ ಡಿಸ್‌ಪ್ಲೇ, 4000mAh ಬ್ಯಾಟರಿ ಸಾಮರ್ಥ್ಯಗಳಂತಹ ಅತ್ಯುತ್ತಮ ಫೀಚರ್ಸ್ ಹೊಂದಿರುವ 'ಹಾನರ್ 8ಸಿ' ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮತ್ತೊಮ್ಮೆ ನೋಡೋಣ ಬನ್ನಿ.

 'ಹಾನರ್ 8ಸಿ' ಡಿಸ್‌ಪ್ಲೇ

'ಹಾನರ್ 8ಸಿ' ಡಿಸ್‌ಪ್ಲೇ

'ಹಾನರ್ 8ಸಿ' ಸ್ಮಾರ್ಟ್‌ಫೋನ್‌ 6.26 ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದ್ದು, 720x1520 ಪಿಕ್ಸೆಲ್‌ ಟಿಎಫ್‌ಟಿ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇದಾಗಿದೆ. ಇದರ ಫಲಕ 19:9 ಆಕಾರ ಅನುಪಾತದಲ್ಲಿ 86.6 ಪ್ರತಿಶತ ಸ್ಕ್ರೀನ್-ಟು-ದೇಹ ಅನುಪಾತವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 2.D ಕರ್ವಡ್ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದನ್ನು ಸಹ ನಾವು ನೋಡಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಕೋರ್ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಅಳವಡಿಸಿಕೊಂಡಿರುವ ವಿಶ್ವದ ಮೊದಲ ಪೋನ್ ಎಂಬ ಖ್ಯಾತಿಗೆ 'ಹಾನರ್ 8ಸಿ' ಪಾತ್ರವಾಗಿದೆ. ಕ್ವಾಲ್ಕಂ ಚಿಪ್‌ಸೆಟ್, ಅಡ್ರಿನೊ 506 ಜಿಪಿಯು ಹಾಗೂ 4GB RAM ಸಹಯೋಗದಲ್ಲಿ, 4GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GBಯ ಎರಡು ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

ಕ್ಯಾಮೆರಾ ಹೇಗಿವೆ?

ಕ್ಯಾಮೆರಾ ಹೇಗಿವೆ?

ಎಲ್ಇಡಿ ಫ್ಲಾಶ್ ಜೊತೆಯಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಅದು f/2.0 ಅಪಾರ್ಚರ್ ಮತ್ತು ಸೆಲ್ಫ್ ಟೂನಿಂಗ್ ಲೈಟ್ನೊಂದಿಗೆ ಸ್ಥಿರ ಫೋಕಸ್ ಲೆನ್ಸ್ ಅನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

5V/2A (10W) ಚಾರ್ಜಿಂಗ್ ಅನ್ನು ಬೆಂಬಲಿಸುವ 4,000mAh ಬ್ಯಾಟರಿಯನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಬ್ಲೂಟೂತ್ v4.2 ಎಲ್ಎಲ್, ಎಪಿಟಿಎಕ್ಸ್, ಜಿಪಿಎಸ್ / ಎ-ಜಿಪಿಎಸ್, ಗ್ಲೋನಾಸ್, ಮೈಕ್ರೋ-ಯುಎಸ್ಬಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಜೊತೆಗೆ SD ಕಾರ್ಡ್ ಮೂಲಕ 256GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯೂ ಸಹ ಇದೆ.

Best Mobiles in India

English summary
The Honor 8C base model's price has been axed in the country by Rs. 1,000. The smartphone was announced with an initial price of Rs 11,999 and has been discounted a couple of times since its launch. The base variant with 4GB RAM and 32GB storage is now retailing for Rs. 8,999 following the latest discount.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X