ಜನಪ್ರಿಯ 'ಹಾನರ್ 8ಸಿ' ಬೆಲೆ ಇಳಿಕೆ!..ಮೊಬೈಲ್ ಪ್ರಿಯರಿಗೆ ಸುಗ್ಗಿ!

|

2018 ನೇ ಕೊನೆಯಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಹೊತ್ತು ಬಂದಿದ್ದ ಹಾನರ್‌ನ ಜನಪ್ರಿಯ 'ಹಾನರ್ 8ಸಿ' ಸ್ಮಾರ್ಟ್‌ಫೋನಿನ ಬೆಲೆ ಇಳಿಕೆಯಾಗಿದೆ. ರೆಡ್‌ಮಿ ನೋಟ್ 6 ಪ್ರೊ ಮತ್ತು ರಿಯಲ್‌ಮಿ ಯು1 ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಹೊಡೆಯುತ್ತಿದ್ದ ಹಾನರ್ 8ಸಿ' ಸ್ಮಾರ್ಟ್‌ಫೋನಿನ ಬೆಲೆಯನ್ನು 1000 ರೂ. ಇಳಕೆ ಮಾಡಿ ಹಾನರ್ ಮೊಬೈಲ್ ಕಂಪೆನಿ ಸಿಹಿಸುದ್ದಿ ನೀಡಿದೆ.

ಭಾರತದಲ್ಲಿ ಶಿಯೋಮಿ ರೆಡ್‌ಮಿ ನೋಟ್ 7 ಬಿಡುಗಡೆ ನಂತರ ರೆಡ್‌ಮಿ ನೋಟ್ 6 ಪ್ರೊ ಬೆಲೆ ಕಳೆದುಕೊಂಡಿತ್ತು. ಇದಾದ ಕೆಲವೇ ದಿನಗಳಲ್ಲಿ ಇದೀಗ 'ಹಾನರ್ 8ಸಿ' ಸ್ಮಾರ್ಟ್‌ಫೋನಿನ ಬೆಲೆ ಕೂಡ ಇಳಿಕೆಯಾಗಿದ್ದು, 4GB RAM ಮತ್ತು 32GB ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 11,999 ರೂ.ಗಳಿಂದ 10,999 ರೂ.ಗಳಿಗೆ ಇಳಿಕೆಯಾಗಿದೆ. ಆದರೆ, 4GB RAM ಮತ್ತು 64GBಯ ಮೆಮೊರಿ ವೆರಿಯಂಟ್ ಫೋನ್ ಬೆಲೆ ಮೊದಲಿನಂತೆ 12,999 ರೂಪಾಯಿಯೇ ಆಗಿದೆ.

ಜನಪ್ರಿಯ 'ಹಾನರ್ 8ಸಿ' ಬೆಲೆ ಇಳಿಕೆ!..ಮೊಬೈಲ್ ಪ್ರಿಯರಿಗೆ ಸುಗ್ಗಿ!

6.26 ಹೆಚ್‌ಡಿ+ ಡಿಸ್‌ಪ್ಲೇ, 4000mAh ಬ್ಯಾಟರಿ ಸಾಮರ್ಥ್ಯ ಹಾಗೂ ಇನ್ನಿತರ ಅತ್ಯುತ್ತಮ ಫೀಚರ್ಸ್ ಹೊಂದಿದ್ದ 'ಹಾನರ್ 8ಸಿ' ಸ್ಮಾರ್ಟ್‌ಫೋನ್ ಬಿಡುಗಡೆಯಾದಾಗಲೇ ಭಾರೀ ಹೆಸರುಗಳಿಸಿತ್ತು. ಹೇಳಿ ಮಾಡಿಸಿದಂತಹ ಗುಣಮಟ್ಟ ಮತ್ತು ಭಾರೀ ಫೀಚರ್ಸ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುತ್ತಿತ್ತು . ಹಾಗಾದರೆ, ಬೆಲೆ ಕಳೆದುಕೊಂಡಿರುವ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ ಹೇಗಿದೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಹಾನರ್ 8ಸಿ' ವಿನ್ಯಾಸ!

'ಹಾನರ್ 8ಸಿ' ವಿನ್ಯಾಸ!

ಮೊಬೈಲ್ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾಗಿರುವ ಮೂರನೇ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾದರೂ ವಿನ್ಯಾಸದಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಹೋಲುತ್ತಿದೆ. ಡಿಸ್‌ಪ್ಲೇ ನೋಚ್, ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ ಎಂದು ಹೇಳಬಹುದು.

'ಹಾನರ್ 8ಸಿ' ಡಿಸ್‌ಪ್ಲೇ!

'ಹಾನರ್ 8ಸಿ' ಡಿಸ್‌ಪ್ಲೇ!

ಮೊದಲೇ ಹೇಳಿದಂತೆ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ 6.26 ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. 720x1520 ಪಿಕ್ಸೆಲ್‌ ಟಿಎಫ್‌ಟಿ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇದಾಗಿದ್ದು, ಫಲಕ 19:9 ಆಕಾರ ಅನುಪಾತದಲ್ಲಿ 86.6 ಪ್ರತಿಶತ ಸ್ಕ್ರೀನ್-ಟು-ದೇಹ ಅನುಪಾತವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 2.D ಕರ್ವಡ್ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದನ್ನು ಸಹ ನಾವು ನೋಡಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಅಳವಡಿಸಿಕೊಂಡಿರುವ ವಿಶ್ವದ ಮೊದಲ ಪೋನ್ ಎಂಬ ಖ್ಯಾತಿಗೆ 'ಹಾನರ್ 8ಸಿ' ಪಾತ್ರವಾಗಿದೆ. ಕ್ವಾಲ್ಕಂ ಚಿಪ್‌ಸೆಟ್, ಅಡ್ರಿನೊ 506 ಜಿಪಿಯು ಹಾಗೂ 4GB RAM ಸಹಯೋಗದಲ್ಲಿ, 4GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GBಯ ಎರಡು ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

ಕ್ಯಾಮೆರಾ ಹೇಗಿವೆ?

ಕ್ಯಾಮೆರಾ ಹೇಗಿವೆ?

ಎಲ್ಇಡಿ ಫ್ಲಾಶ್ ಜೊತೆಯಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಅದು f/2.0 ಅಪಾರ್ಚರ್ ಮತ್ತು ಸೆಲ್ಫ್ ಟೂನಿಂಗ್ ಲೈಟ್ನೊಂದಿಗೆ ಸ್ಥಿರ ಫೋಕಸ್ ಲೆನ್ಸ್ ಅನ್ನು ಹೊಂದಿದೆ ಎಂದು ಹಾನರ್ ಕಂಪೆನಿ ತಿಳಿಸಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

5V/2A (10W) ಚಾರ್ಜಿಂಗ್ ಅನ್ನು ಬೆಂಬಲಿಸುವ 4,000mAh ಬ್ಯಾಟರಿಯನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಬ್ಲೂಟೂತ್ v4.2 ಎಲ್ಎಲ್, ಎಪಿಟಿಎಕ್ಸ್, ಜಿಪಿಎಸ್ / ಎ-ಜಿಪಿಎಸ್, ಗ್ಲೋನಾಸ್, ಮೈಕ್ರೋ-ಯುಎಸ್ಬಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಜೊತೆಗೆ SD ಕಾರ್ಡ್ ಮೂಲಕ 256GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯೂ ಸಹ ಇದೆ.

Most Read Articles
Best Mobiles in India

English summary
Honor 8C is listed on Amazon.in starting at Rs. 10,999 for the 4GB RAM + 42GB storage option and Rs. 12,999 for the 4GB RAM + 64GB storage model. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more