ಹಾನರ್ 8ಎಕ್ಸ್ ಮತ್ತು ಹಾನರ್ 10 ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ!

|

ಹಾನರ್ ಕಂಪೆನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಹಾನರ್ 8ಎಕ್ಸ್ ಮತ್ತು ಹಾನರ್ 10 ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಕ್ಯೂ ( ಆಂಡ್ರಾಯ್ಡ್ ಪೈ) ನವೀಕರಣವನ್ನು ಸ್ವೀಕರಿಸಲಿವೆ ಎಂದು ಕಂಪೆನಿ ದೃಢೀಕರಿಸಿದೆ. ಇತ್ತೀಚಿಗಷ್ಟೇ ಹಾನರ್ ಸ್ಮಾರ್ಟ್‌ಫೋನ್ ಗ್ರಾಹಕರೋರ್ವರ ಟ್ವೀಟ್‌ಗೆ ನೀಡಿದ ಉತ್ತರದಲ್ಲಿ, ಕಂಪೆನಿಯು ಈಗಾಗಲೇ ಆಂಡ್ರಾಯ್ಡ್ ಕ್ಯೂ ಸಾಫ್ಟ್‌ವೇರ್ ಅನ್ನು ಹಾನರ್ 8 ಎಕ್ಸ್ ಮತ್ತು ಹಾನರ್ 10 ಗಾಗಿ ಮೌಲ್ಯಮಾಪನ ಮಾಡಿದೆ ಎಂದು ಕಂಪೆನಿ ತಿಳಿಸಿದೆ.

ಹಾನರ್ 8ಎಕ್ಸ್ ಮತ್ತು ಹಾನರ್ 10 ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ!

ಆಂಡ್ರಾಯ್ಡ್ ಕ್ಯೂಗಾಗಿ ನಿಮ್ಮ ಆಸಕ್ತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಹಾನರ್ 8ಎಕ್ಸ್‌ನೊಂದಿಗೆ ಆಂಡ್ರಾಯ್ಡ್ ಕ್ಯೂ ಅಪ್‌ಗ್ರೇಡ್‌ನ ಹೊಂದಾಣಿಕೆಯನ್ನು ನಮ್ಮ ಸಾಫ್ಟ್‌ವೇರ್ ತಂಡವು ಈಗಾಗಲೇ ಮೌಲ್ಯಮಾಪನ ಮಾಡಿದೆ. ಇದನ್ನು ನಾವು ನಿಮಗೆ ತಿಳಿಸಲು ಬಯಸುತ್ತೇವೆ ಎಂದು ಕಂಪೆನಿ ಟ್ವೀಟ್ ಮೂಲಕ ತಿಳಿಸಿದೆ. ಆದರೆ, ಈ ಸಾಧನಗಳು ಆಂಡ್ರಾಯ್ಡ್ ಕ್ಯೂ ಅಪ್‌ಡೇಟ್‌ನೊಂದಿಗೆ ಹೊಂದಿಕೊಳ್ಳುವ ನಿಖರವಾದ ಸಮಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇನ್ನು ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ, ಹಾನರ್ ವೀವ್ 10, ಹಾನರ್ 20, ಹಾನರ್ 20 ಲೈಟ್ ಮತ್ತು ಹಾನರ್ ಪ್ಲೆ ಸ್ಮಾರ್ಟ್‌ಫೋನ್‌ಗಳು ಸಹ ಈ ವರ್ಷದ ಕೊನೆಯಲ್ಲಿ ಆಂಡ್ರಾಯ್ಡ್ ಕ್ಯೂ ನವೀಕರಣವನ್ನು ಪಡೆಯುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಇತ್ತೀಚಿಗಷ್ಟೇ ಬೆಲೆ ಕಳೆದುಕೊಂಡಿದ್ದ ಹಾನರ್ 8ಎಕ್ಸ್ ಮತ್ತೊಂದು ಸಿಹಿಸುದ್ದಿ ಹೊತ್ತು ಬಂದಿದೆ.ಹಾಗಾದರೆ, ಭಾರತದಲ್ಲಿ ಹಾನರ್ ಕಂಪೆನಿ ಹೆಚ್ಚು ಮಾರಾಟ ಮಾಡಿರುವ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್‌ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

 91% ಸ್ಕ್ರೀನ್-ಟು-ಬಾಡಿ ಡಿಸ್‌ಪ್ಲೇ

91% ಸ್ಕ್ರೀನ್-ಟು-ಬಾಡಿ ಡಿಸ್‌ಪ್ಲೇ

ಪೂರ್ಣ ಹೈ ಡೆಫಿನಿಷನಬ್ ರೆಸಲೂಶನ್ ಅನ್ನು ಬೆಂಬಲಿಸುವ ಮತ್ತು 85% ವಿಶಾಲವಾದ ಬಣ್ಣದ ಗ್ಯಾಮಟ್ ಹೊಂದಿರುವ ಬೃಹತ್ 16.51cm (6.5 ") ಎಫ್‌ಹೆಚ್‌ಡಿ ಪ್ಲಸ್ ಬಾರ್ಡರ್ಲೆಸ್ ನಾಚ್ ಫುಲ್‌ವೀವ್ ಡಿಸ್‌ಪ್ಲೇ 2.0 ವೀಡಿಯೊ ವರ್ಧನೆಯ ತಂತ್ರಜ್ಞಾನದೊಂದಿಗೆ ಸಂಯೋಜಿತವಾಗಿದೆ. ವೀಡಿಯೊಗಳು ಮತ್ತು ಸಿನೆಮಾಗಳ ಸ್ಪಷ್ಟವಾಗಿ ಮತ್ತು ಹೆಚ್ಚು ವಿವರವಾದ ವೀಕ್ಷಣೆಯನ್ನು ನೀಡುತ್ತದೆ. ಎಡ್ಜ್-ಟು-ಎಡ್ಜ್ ಡಿಸ್‌ಪ್ಲೇ 91% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, ನೀವು ಆಡುವ ಆಟಗಳಲ್ಲಿ ಪ್ರತಿ ನಿಮಿಷದ ವಿವರಣೆಯನ್ನು ಮತ್ತು ಸ್ಮಾರ್ಟ್‌ಪೋನಿನಲ್ಲಿ ನೀವು ಸ್ಟ್ರೀಮ್ ಮಾಡಿದ ಪೂರ್ಣ HD ವೀಡಿಯೊಗಳನ್ನು ನೋಡಲು ಸಾಧ್ಯವಾಗುತ್ತದೆ.

ಅದ್ಬುತ ಪ್ರೊಸೆಸರ್ ಮತ್ತು ತಂತ್ರಜ್ಞಾನ!

ಅದ್ಬುತ ಪ್ರೊಸೆಸರ್ ಮತ್ತು ತಂತ್ರಜ್ಞಾನ!

'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನಿನಲ್ಲಿ ಕಂಪೆನಿಯ ಸ್ವಂತ Kirin 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 'ಹಾನರ್ 8ಎಕ್ಸ್'ನ ಪ್ರಬಲ ಕಿರಿನ್ 710 ಚಿಪ್ಸೆಟ್ ಕ್ರಾಂತಿಕಾರಿ ಜಿಪಿಯು ಟರ್ಬೊ ತಂತ್ರಜ್ಞಾನದೊಂದಿಗೆ ಜೋಡಿಸಲ್ಪಟ್ಟಿರುತ್ತದೆ, ಈ ಪ್ರೊಸೆಸರ್ ವಿಪರೀತ ಗ್ರಾಫಿಕ್ಸ್ ತಡೆಯುವ ಯಂತ್ರಾಂಶ ಹಾಗೂ ತಂತ್ರಾಂಶದ ಏಕೀಕರಣವಾಗಿದೆ. ಮೊಬೈಲ್ ಗೇಮಿಂಗ್ ಅನುಭವವನ್ನು ಉತ್ತಮಗೊಳಿಸುವಂತಹ ಗ್ರಾಫಿಕ್ಸ್ ಪ್ರಕ್ರಿಯೆ ವೇಗವರ್ಧನೆಯ ತಂತ್ರಜ್ಞಾನ ಅಗತ್ಯತೆಗಳನ್ನು ಪೂರೈಸಲು ಸ್ಮಾರ್ಟ್‌ಫೋನ್ ಶಕ್ತವಾಗಿದೆ. ಆಂಡ್ರಾಯ್ಡ್ 8.1 ಓರಿಯೊದಲ್ಲಿ ಕಾರ್ಯನಿರ್ವಹಣೆ ನೀಡುತ್ತಿರುವ ಈ ಸ್ಮಾರ್ಟ್‌ಫೋನ್ ಇದೀಗ ಆಂಡ್ರಾಯ್ಡ್ ಪೈಗೆ ಅಪ್‌ಡೇಟ್ ಆಗುತ್ತಿದೆ.

ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಸ್ಮಾರ್ಟ್‌ಫೋನ್!

ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಸ್ಮಾರ್ಟ್‌ಫೋನ್!

'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನಿನಲ್ಲಿರುವ Kirin 710 ಪ್ರೊಸೆಸರ್ ಹಾಗೂ ಆಂತರಿಕ ಜಿಪಿಯು ಟರ್ಬೊ ತಂತ್ರಜ್ಞಾನದಿಂದ ಬಜೆಟ್ ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮ ವರ್ಗದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಹೆಚ್ಚು ಶಕ್ತಿಶಾಲಿ ಗೇಮ್‌ಗಳನ್ನು ಆಡುತ್ತಿರುವಾಗಲೂ ಜಿಪಿಯು ಟರ್ಬೋ ತಂತ್ರಜ್ಞಾನದೊಂದಿಗೆ ವಿಳಂಬ ಮುಕ್ತ ಆಟದ ಅನುಭವವನ್ನು ಒದಗಿಸುತ್ತದೆ. ಜಿಪಿಯು ಕಾರ್ಯನಿರ್ವಹಣೆಯಲ್ಲಿ 3D ಇಮ್ಮರ್ಸಿವ್ ಗ್ರಾಫಿಕ್ಸ್ ಕಾರ್ಯಕ್ಷಮತೆ ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಗ್ರಾಫಿಕ್ಸ್ ಪ್ರಕ್ರಿಯೆ ತಂತ್ರಜ್ಞಾನವನ್ನೂ ಸಹ ನೀವು ಪಡೆಯುತ್ತೀರಿ. ಹಾಗಾಗಿ, ಇದು ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಸ್ಮಾರ್ಟ್‌ಫೋನ್!

 ಡ್ಯುಯಲ್ ರಿಯರ್ ಕ್ಯಾಮೆರಾ

ಡ್ಯುಯಲ್ ರಿಯರ್ ಕ್ಯಾಮೆರಾ

f/1.8 ಅಪರ್ಚರ್ ಸಾಮರ್ಥ್ಯವಿರುವ 20ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ಸೆಕೆಂಡರಿ ಸೆನ್ಸರ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನ್ ಹೊಂದಿದೆ. f/2.0 ಅಪರ್ಚರ್ ಸಾಮರ್ಥ್ಯದಲ್ಲಿ 16ಎಂಪಿ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನಿನಲ್ಲಿರುವ ಎರಡೂ ಬದಿಯ ಕ್ಯಾಮೆರಾಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ. ಸ್ಮಾರ್ಟ್‌ಫೋನಿನಲ್ಲಿ ಕಡಿಮೆ ಬೆಳಕಿನಲ್ಲೂ ಪನೋರಮ, ಬೊಕೆ ಚಿತ್ರಗಳನ್ನು ಚಿತ್ರಿಸಲು ಈ ತಂತ್ರಜ್ಞಾನ ಸಹಾಯಕವಾಗಲಿದೆ. ಹಾಗಾಗಿ, ಕ್ಯಾಮೆರಾ ಪ್ರಿಯರನ್ನು ಸಹ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್ ಗಮನಸೆಳೆಯುತ್ತಿದೆ.

ಶಕ್ತಿಯುತ ಬ್ಯಾಟರಿ ಮತ್ತು ಸ್ಪೀಕರ್

ಶಕ್ತಿಯುತ ಬ್ಯಾಟರಿ ಮತ್ತು ಸ್ಪೀಕರ್

ಶಕ್ತಿಯುತ ಸ್ಪೀಕರ್ ಮತ್ತು ಬೃಹತ್ ಬ್ಯಾಟರಿ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನಿನ ವಿಶೇಷತೆಗಳಾಗಿವೆ. ಈ ಸ್ಮಾರ್ಟ್‌ಫೋನ್ ಒಂದು ಬಾಟಮ್-ಫೈರಿಂಗ್ ಸ್ಪೀಕರ್ ಅನ್ನು ಹೊಂದಿದ್ದು, ಸ್ಪಷ್ಟ ಹಾಗೂ ಶಕ್ತಿಯುತ ಔಟ್‌ಪುಟ್ ಆಡಿಯೋವನ್ನು ನೀಡಲಿದೆ. ವೀಡಿಯೋ ಪ್ಲೇಬ್ಯಾಕ್ ಮತ್ತು ದೀರ್ಘ ಗೇಮಿಂಗ್ ಸೆಷನ್‌ಗಳನ್ನು ಬೆಂಬಲಿಸಲು 3750mAh ಸಾಮರ್ಥ್ಯದ ಬ್ಯಾಟರಿ ಸ್ಮಾರ್ಟ್‌ಫೋನಿನಲ್ಲಿದೆ. EMUI ಕಸ್ಟಮ್ ಬ್ಯಾಟರಿಯ ಜೀವಿತಾವಧಿಯನ್ನು 33% ರಷ್ಟು ಹೆಚ್ಚಿಸುವ ಇಂಟೆಲಿಜೆಂಟ್ ಪವರ್ ಸೇವಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4GB RAM + 64GB ಇಂಟರ್ನಲ್ ಸ್ಟೋರೇಜ್ , 6GB RAM + 64GB ಇಂಟರ್ನಲ್ ಸ್ಟೋರೇಜ್ ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಮೂರು ಮಾದರಿಯ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗಲಿದೆ. 4G, VoLTE, 3G, ವೈ-ಫೈ, ಬ್ಲೂಟೂತ್ ಮತ್ತು GPS ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಾಗಿದೆ. ಸ್ಕ್ರೀನ್ ಟು ಬಾಡಿ ರೇಷ್ಯೂ 91 ಪರ್ಸೆಂಟ್ ಇರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳಲ್ಲಿ ಒಂದು.

ಹಾನರ್ 8ಎಕ್ಸ್ ಬೆಲೆ ಎಷ್ಟು?

ಹಾನರ್ 8ಎಕ್ಸ್ ಬೆಲೆ ಎಷ್ಟು?

ಹಾನರ್ 8ಎಕ್ಸ್ ಸ್ಮಾರ್ಟ್‌ಪೋನಿನ ಬೆಸಿಕ್ ಮಾದರಿ 4GB+32GBಫೋನ್ 12999 ರೂ.ಗಳಿಗೆ ಲಭ್ಯವಿದ್ದು, 6GB+64GB ಮಾದರಿ14999 ರೂ.ಗಳಿಗೆ ಹಾಗೂ 6GB+128GB ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 17,999 ರೂ.ಗಳಾಗಿಗೆ ಪ್ರಸ್ತುತ ಖರೀದಿಸಬಹುದು. ಈ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ಅಮೆಜಾನ್ ತಾಣದಲ್ಲಿ ಖರೀದಿಗೆ ಲಭ್ಯವಿವೆ. ಡಿಸ್‌ಪ್ಲೇಯು ನೋಚ್ ವಿನ್ಯಾಸದ ಹೈ ಎಂಡ್ ಲುಕ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಪೈ ಸಪೋರ್ಟ್ ಹೊಂದುವುದರಿಂದ ನಿಮ್ಮ ಬೆಸ್ಟ್ ಆಯ್ಕೆಯ ಸ್ಮಾರ್ಟ್‌ಪೋನ್ ಕುಡ ಆಗಬಹುದು.

Best Mobiles in India

English summary
HONOR, the sub smartphone brand of Huawei has officially confirmed that the HONOR 8x and the HONOR 10 will receive an Android Q update. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X