ಇಂದಿನಿಂದ 'ಹಾನರ್ 8ಎಕ್ಸ್' ಮಾರಾಟ ಆರಂಭ!..ಬೆಸ್ಟ್ ಬಜೆಟ್ ಫೋನಿನ ಫುಲ್ ರಿವ್ಯೂವ್!!

    ವಿನ್ಯಾಸ, ಕಾರ್ಯದಕ್ಷತೆ ಹಾಗೂ ದರ ಈ ಮೂರು ವಿಷಯಗಳಿಂದ ಭಾರತದ ಬೆಸ್ಟ್ ಬಜೆಟ್ ಸ್ಮಾರ್ಟ್‌ಪೋನ್ ಎಂದು ಕರೆಸಿಕೊಂಡಿರುವ 'ಹಾನರ್ 8ಎಕ್ಸ್' ಮಾರಾಟ ಇಂದಿನಿಂದ ಆರಂಭವಾಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿರುವ 'ಹಾನರ್ 8ಎಕ್ಸ್' ಅಮೆಜಾನ್‌ನಲ್ಲಿ ಇಂದಿನಿಂದ ಫ್ಲಾಶ್‌ಸೇಲ್‌ನಲ್ಲಿ ಮಾರಾಟಕ್ಕೆ ಬಂದಿರುವ ಬಗ್ಗೆ ಹಾನರ್ ಕಂಪೆನಿ ತಿಳಿಸಿದೆ.

    ಇಂದಿನಿಂದ 'ಹಾನರ್ 8ಎಕ್ಸ್' ಮಾರಾಟ ಆರಂಭ!..ಬೆಸ್ಟ್ ಬಜೆಟ್ ಫೋನಿನ ಫುಲ್ ರಿವ್ಯೂವ್!

    ಬೆಲೆಗೂ ಮೀರಿದ ಫೀಚರ್ಸ್, ಅತ್ಯುತ್ತಮ ವಿನ್ಯಾಸದ ಮೂಲಕ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುತ್ತಿರುವ 'ಹಾನರ್ 8ಎಕ್ಸ್' ಈಗಾಗಲೇ ಮೊಬೈಲ್‌ ಪ್ರಿಯರನ್ನು ಕಾಯ್ದಿರಿಸಿದೆ. ಹಾಗಾದರೆ 'ಹಾನರ್ 8ಎಕ್ಸ್ ಅನ್ನು ಭಾರತದಲ್ಲಿ ಸಧ್ಯ ಲಭ್ಯವಿರುವ ನಂ.1 ಬಜೆಟ್ ಎನ್ನಲು ಕಾರಣಗಳೇನು? ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಮತ್ತು ಈ ಸ್ಮಾರ್ಟ್‌ಫೋನ್ ಖರೀದಿಸಲು ಯೋಗ್ಯವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಖಂಡಿತವಾಗಿ ರೋಮಾಂಚನಕಾರಿ ಡಿಸ್‌ಪ್ಲೇ

    ಪೂರ್ಣ ಹೈ ಡೆಫಿನಿಷನಬ್ ರೆಸಲೂಶನ್ ಅನ್ನು ಬೆಂಬಲಿಸುವ ಮತ್ತು 85% ವಿಶಾಲವಾದ ಬಣ್ಣದ ಗ್ಯಾಮಟ್ ಹೊಂದಿರುವ ಬೃಹತ್ 16.51cm (6.5 ") ಎಫ್‌ಹೆಚ್‌ಡಿ ಪ್ಲಸ್ ಬಾರ್ಡರ್ಲೆಸ್ ನಾಚ್ ಫುಲ್‌ವೀವ್ ಡಿಸ್‌ಪ್ಲೇ 2.0 ವೀಡಿಯೊ ವರ್ಧನೆಯ ತಂತ್ರಜ್ಞಾನದೊಂದಿಗೆ ಸಂಯೋಜಿತವಾಗಿದೆ. ವೀಡಿಯೊಗಳು ಮತ್ತು ಸಿನೆಮಾಗಳ ಸ್ಪಷ್ಟವಾಗಿ ಮತ್ತು ಹೆಚ್ಚು ವಿವರವಾದ ವೀಕ್ಷಣೆಯನ್ನು ನೀಡುತ್ತದೆ. ಎಡ್ಜ್-ಟು-ಎಡ್ಜ್ ಡಿಸ್‌ಪ್ಲೇ 91% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, ನೀವು ಆಡುವ ಆಟಗಳಲ್ಲಿ ಪ್ರತಿ ನಿಮಿಷದ ವಿವರಣೆಯನ್ನು ಮತ್ತು ಸ್ಮಾರ್ಟ್‌ಪೋನಿನಲ್ಲಿ ನೀವು ಸ್ಟ್ರೀಮ್ ಮಾಡಿದ ಪೂರ್ಣ HD ವೀಡಿಯೊಗಳನ್ನು ನೋಡಲು ಸಾಧ್ಯವಾಗುತ್ತದೆ.

    ಅದ್ಬುತ ಪ್ರೊಸೆಸರ್ ಮತ್ತು ತಂತ್ರಜ್ಞಾನ!

    'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನಿನಲ್ಲಿ ಕಂಪೆನಿಯ ಸ್ವಂತ Kirin 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 'ಹಾನರ್ 8ಎಕ್ಸ್'ನ ಪ್ರಬಲ ಕಿರಿನ್ 710 ಚಿಪ್ಸೆಟ್ ಕ್ರಾಂತಿಕಾರಿ ಜಿಪಿಯು ಟರ್ಬೊ ತಂತ್ರಜ್ಞಾನದೊಂದಿಗೆ ಜೋಡಿಸಲ್ಪಟ್ಟಿರುತ್ತದೆ, ಈ ಪ್ರೊಸೆಸರ್ ವಿಪರೀತ ಗ್ರಾಫಿಕ್ಸ್ ತಡೆಯುವ ಯಂತ್ರಾಂಶ ಹಾಗೂ ತಂತ್ರಾಂಶದ ಏಕೀಕರಣವಾಗಿದೆ. ಮೊಬೈಲ್ ಗೇಮಿಂಗ್ ಅನುಭವವನ್ನು ಉತ್ತಮಗೊಳಿಸುವಂತಹ ಗ್ರಾಫಿಕ್ಸ್ ಪ್ರಕ್ರಿಯೆ ವೇಗವರ್ಧನೆಯ ತಂತ್ರಜ್ಞಾನ ಅಗತ್ಯತೆಗಳನ್ನು ಪೂರೈಸಲು ಸ್ಮಾರ್ಟ್‌ಫೋನ್ ಶಕ್ತವಾಗಿದೆ.ಆಂಡ್ರಾಯ್ಡ್ 8.1 ಓರಿಯೊದಲ್ಲಿ ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನ್ ನಿಮ್ಮ ಆದ್ಯತೆ ಪ್ರಕಾರ ನೋಟವನ್ನು ಕಸ್ಟಮೈಸ್ ಮಾಡಲು ಹೊಸ ವಿಷಯಗಳನ್ನು ಹೊಂದಿದೆ.

    ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಸ್ಮಾರ್ಟ್‌ಫೋನ್!

    'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನಿನಲ್ಲಿರುವ Kirin 710 ಪ್ರೊಸೆಸರ್ ಹಾಗೂ ಆಂತರಿಕ ಜಿಪಿಯು ಟರ್ಬೊ ತಂತ್ರಜ್ಞಾನದಿಂದ ಬಜೆಟ್ ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮ ವರ್ಗದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಹೆಚ್ಚು ಶಕ್ತಿಶಾಲಿ ಗೇಮ್‌ಗಳನ್ನು ಆಡುತ್ತಿರುವಾಗಲೂ ಜಿಪಿಯು ಟರ್ಬೋ ತಂತ್ರಜ್ಞಾನದೊಂದಿಗೆ ವಿಳಂಬ ಮುಕ್ತ ಆಟದ ಅನುಭವವನ್ನು ಒದಗಿಸುತ್ತದೆ. ಜಿಪಿಯು ಕಾರ್ಯನಿರ್ವಹಣೆಯಲ್ಲಿ 3D ಇಮ್ಮರ್ಸಿವ್ ಗ್ರಾಫಿಕ್ಸ್ ಕಾರ್ಯಕ್ಷಮತೆ ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಗ್ರಾಫಿಕ್ಸ್ ಪ್ರಕ್ರಿಯೆ ತಂತ್ರಜ್ಞಾನವನ್ನೂ ಸಹ ನೀವು ಪಡೆಯುತ್ತೀರಿ. ಹಾಗಾಗಿ, ಇದು ಗೇಮಿಂಗ್ ಪ್ರಿಯರಿಗೆ ಬೆಸ್ಟ್ ಸ್ಮಾರ್ಟ್‌ಫೋನ್!

    ಡ್ಯುಯಲ್ ರಿಯರ್ ಕ್ಯಾಮೆರಾ

    f/1.8 ಅಪರ್ಚರ್ ಸಾಮರ್ಥ್ಯವಿರುವ 20ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ಸೆಕೆಂಡರಿ ಸೆನ್ಸರ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನ್ ಹೊಂದಿದೆ. f/2.0 ಅಪರ್ಚರ್ ಸಾಮರ್ಥ್ಯದಲ್ಲಿ 16ಎಂಪಿ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನಿನಲ್ಲಿರುವ ಎರಡೂ ಬದಿಯ ಕ್ಯಾಮೆರಾಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ. ಸ್ಮಾರ್ಟ್‌ಫೋನಿನಲ್ಲಿ ಕಡಿಮೆ ಬೆಳಕಿನಲ್ಲೂ ಪನೋರಮ, ಬೊಕೆ ಚಿತ್ರಗಳನ್ನು ಚಿತ್ರಿಸಲು ಈ ತಂತ್ರಜ್ಞಾನ ಸಹಾಯಕವಾಗಲಿದೆ. ಹಾಗಾಗಿ, ಕ್ಯಾಮೆರಾ ಪ್ರಿಯರನ್ನು ಸಹ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್ ಗಮನಸೆಳೆಯುತ್ತಿದೆ.

    ಶಕ್ತಿಯುತ ಬ್ಯಾಟರಿ ಮತ್ತು ಸ್ಪೀಕರ್

    ಶಕ್ತಿಯುತ ಸ್ಪೀಕರ್ ಮತ್ತು ಬೃಹತ್ ಬ್ಯಾಟರಿ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನಿನ ವಿಶೇಷತೆಗಳಾಗಿವೆ. ಈ ಸ್ಮಾರ್ಟ್‌ಫೋನ್ ಒಂದು ಬಾಟಮ್-ಫೈರಿಂಗ್ ಸ್ಪೀಕರ್ ಅನ್ನು ಹೊಂದಿದ್ದು, ಸ್ಪಷ್ಟ ಹಾಗೂ ಶಕ್ತಿಯುತ ಔಟ್‌ಪುಟ್ ಆಡಿಯೋವನ್ನು ನೀಡಲಿದೆ. ವೀಡಿಯೋ ಪ್ಲೇಬ್ಯಾಕ್ ಮತ್ತು ದೀರ್ಘ ಗೇಮಿಂಗ್ ಸೆಷನ್‌ಗಳನ್ನು ಬೆಂಬಲಿಸಲು 3750mAh ಸಾಮರ್ಥ್ಯದ ಬ್ಯಾಟರಿ ಸ್ಮಾರ್ಟ್‌ಫೋನಿನಲ್ಲಿದೆ. EMUI ಕಸ್ಟಮ್ ಬ್ಯಾಟರಿಯ ಜೀವಿತಾವಧಿಯನ್ನು 33% ರಷ್ಟು ಹೆಚ್ಚಿಸುವ ಇಂಟೆಲಿಜೆಂಟ್ ಪವರ್ ಸೇವಿಂಗ್ ತಂತ್ರಜ್ಞಾನವನ್ನು ಸಹ ಹೊಂದಿದೆ.

    ಇತರೆ ಏನೆಲ್ಲಾ ಫೀಚರ್ಸ್?

    4GB RAM + 64GB ಇಂಟರ್ನಲ್ ಸ್ಟೋರೇಜ್ , 6GB RAM + 64GB ಇಂಟರ್ನಲ್ ಸ್ಟೋರೇಜ್ ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಮೂರು ಮಾದರಿಯ ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗಲಿದೆ. 4G, VoLTE, 3G, ವೈ-ಫೈ, ಬ್ಲೂಟೂತ್ ಮತ್ತು GPS ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಾಗಿದೆ. ಸ್ಕ್ರೀನ್ ಟು ಬಾಡಿ ರೇಷ್ಯೂ 91 ಪರ್ಸೆಂಟ್ ಇರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳಲ್ಲಿ ಒಂದು.

    ಹಾನರ್ 8ಎಕ್ಸ್ ಬೆಲೆ ಎಷ್ಟು?

    ಮೂರು ವಿಭಿನ್ನ ಸ್ಟೊರೇಜ್ ವೇರಿಯಂಟ್‌ಗಳಲ್ಲಿ ಹಾನರ್ 8ಎಕ್ಸ್ ಸ್ಮಾರ್ಟ್‌ಪೋನ್ ಖರೀದಿಗೆ ಲಭ್ಯವಿದ್ದು, 4GB+64GB ಮಾದರಿ 14,999 ರೂ. ಮತ್ತು 6GB+64GB ಮಾದರಿ 16,999 ರೂ. ಹಾಗೂ 6GB+128GB ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 18,999 ರೂ.ಗಳಾಗಿವೆ. ಈ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಖರೀದಿಗೆ ಲಭ್ಯವಿವೆ. ಹಾಗಾಗಿ, ಡಿಸ್‌ಪ್ಲೇಯು ನೋಚ್ ವಿನ್ಯಾಸದ ಹೈ ಎಂಡ್ ಲುಕ್ ಹೊಂದಿರುವ ಈ ಸ್ಮಾರ್ಟ್‌ಫೋನ್ ನಿಮ್ಮ ಬೆಸ್ಟ್ ಆಯ್ಕೆಯ ಸ್ಮಾರ್ಟ್‌ಪೋನ್ ಆಗಬಹುದು.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    Honor 8X, the latest sub-Rs. 15,000 smartphone by Honor, is now on available in India via Amazon as part of the Great Indian Festival sale . to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more