ಇದೇ 16ಕ್ಕೆ ಭಾರತದಲ್ಲಿ ಲಾಂಚ್‌ ಆಗಲಿದೆ ಹಾನರ್ 8X..!

|

ಹುವಾಯಿಯ ಸಬ್ ಬ್ರ್ಯಾಂಡ್ ಆಗಿರುವ ಹಾನರ್ ಸಂಸ್ಥೆಯು ತನ್ನ ಮಿಡ್ ರೇಂಜ್ ಸ್ಮಾರ್ಟ್ ಫೋನ್ ಹಾನರ್ 8ಎಕ್ಸ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಕಂಪೆನಿಯ ಅಧಿಕೃತ ವೆಬ್ ಸೈಟ್ ಮಾಹಿತಿ ನೀಡುವ ಪ್ರಕಾರ ಇದೇ ಅಕ್ಟೋಬರ್ 18 ರಂದು ಇದಕ್ಕೆ ದಿನಾಂಕ ನಿಗದಿಗೊಳಿಸಲಾಗಿದೆ. ಈ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಚೀನಾದಲ್ಲಿ ಕಳೆದ ತಿಂಗಳು ಹಾನರ್ 8ಎಕ್ಸ್ ಮತ್ತು ಹಾನರ್ 8ಎಕ್ಸ್ ಮ್ಯಾಕ್ ನ್ನು ಒಟ್ಟಿಗೆ ಬಿಡುಗಡೆಗೊಳಿಸಿತ್ತು.

ವಿಶ್ವದ ಇತರೆಡೆಗಳಲ್ಲೂ ಬಿಡುಗಡೆ:

ವಿಶ್ವದ ಇತರೆಡೆಗಳಲ್ಲೂ ಬಿಡುಗಡೆ:

ಇನ್ನು ವಿಶ್ವದ ಇತರೆ ಪ್ರದೇಶಗಳಲ್ಲಿ ಯಾವಾಗೆಲ್ಲ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂಪೂರ್ಣ ವಿವರಗಳನ್ನೊಂಡ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಕೌಲಾಲಂಪುರ ಮತ್ತು ಮಲೇಷಿಯಾದಲ್ಲಿ ಅಕ್ಟೋಬರ್ 9, ಮಾಸ್ಕೋ, ರಷ್ಯಾಗಳಲ್ಲಿ ಅಕ್ಟೋಬರ್ 10, ಝೆಕ್ ಗಣರಾಜ್ಯ ಮತ್ತು ಪ್ರಾಗ್ ದೇಶಗಳಲ್ಲಿ ಅಕ್ಟೋಬರ್ 11, ಭಾರತದಲ್ಲಿ ಅಕ್ಟೋಬರ್ 16, ಬ್ಯಾಂಕಾಕ್ ಮತ್ತು ಥೈಲ್ಯಾಂಡ್ ಗಳಲ್ಲಿ ಅಕ್ಟೋಬರ್ 24 ಕ್ಕೆ ಹಾನರ್ 8ಎಕ್ಸ್ ನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಹಾನರ್ 8ಎಕ್ಸ್ ಮೂರು ವಿಭಿನ್ನ ಸ್ಟೊರೇಜ್ ವೇರಿಯಂಟ್ ಗಳಲ್ಲಿ ಚೀನಾದಲ್ಲಿ ಲಭ್ಯವಾಗುತ್ತದೆ. 4GB+64GB (CNY 1,399) 14,700 ರೂ., 6GB+64GB (CNY 1,599) 16,800 ರೂ. ಮತ್ತು 6GB+128GB (CNY 1,899) 20,000 ರೂ.ಗೆ ದೊರೆಯಲಿವೆ.

ಹಾನರ್ 8ಎಕ್ಸ್ ನ ವೈಶಿಷ್ಟ್ಯತೆಗಳು

ಹಾನರ್ 8ಎಕ್ಸ್ ನ ವೈಶಿಷ್ಟ್ಯತೆಗಳು

ಈ ಸ್ಮಾರ್ಟ್ ಫೋನ್ 6.5-ಇಂಚಿನ ಪುಲ್ HD+ ಡಿಸ್ಪ್ಲೇ ಜೊತೆಗೆ 1080x2340 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ ಮತ್ತು ಅದರ ಅನುಪಾತ19.5:9 ಆಗಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. ಕಂಪೆನಿಯ ಸ್ವಂತ Kirin 710 ಪ್ರೊಸೆಸರ್ ನ್ನು ಹೊಂದಿದೆ.

ಮೂರು ವೇರಿಯಂಟ್ ನ ಸ್ಟೋರೇಜ್ ಆಯ್ಕೆಗಳಲ್ಲಿ ಈ ಫೋನ್ ಲಭ್ಯವಾಗುತ್ತದೆ. 4GB RAM + 64GB ಇಂಟರ್ನಲ್ ಸ್ಟೋರೇಜ್ , 6GB RAM + 64GB ಇಂಟರ್ನಲ್ ಸ್ಟೋರೇಜ್ ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್.

ಕ್ಯಾಮೆರಾ

ಕ್ಯಾಮೆರಾ

ಕ್ಯಾಮರಾ ವಿಭಾಗದ ಬಗ್ಗೆ ಹೇಳುವುದಾದರೆ, ಡುಯಲ್ ಹಿಂಭಾಗದ ಕ್ಯಾಮರಾವನ್ನು ಹೊಂದಿದೆ.20ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ಸೆಕೆಂಡರಿ ಸೆನ್ಸರ್ ಜೊತೆಗೆ f/1.8 ಅಪರ್ಚರ್ ನ್ನು ಇದು ಹೊಂದಿದೆ. ಮುಂಭಾಗದಲ್ಲಿ 16ಎಂಪಿ ಕ್ಯಾಮರಾವು f/2.0 ಅಪರ್ಚರ್ ನ್ನು ಹೊಂದಿದೆ. ಹಾನರ್ 8ಎಕ್ಸ್ 3750mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು 4G, VoLTE, 3G, ವೈ-ಫೈ, ಬ್ಲೂಟೂತ್ ಮತ್ತು GPS ಕನೆಕ್ಟಿವಿಟಿ ಆಯ್ಕೆಗಳನ್ನು ಒದಗಿಸುತ್ತದೆ.

Best Mobiles in India

English summary
Honor 8X smartphone to launch in India on October 16. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X