ಭಾರತದಲ್ಲಿ 'ಹಾನರ್ 8ಎಕ್ಸ್' ಬಿಡುಗಡೆ!..ರೆಡ್‌ಮಿ ನೋಟ್ 5 ಪ್ರೋಗೆ ಸೆಡ್ಡು!!

|

ಹುವಾವೆಯ ಸಬ್ ಬ್ರ್ಯಾಂಡ್ ಆಗಿರುವ ಹಾನರ್ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ಹಾನರ್ 8ಎಕ್ಸ್' ಖರೀದಿಸಲು ಕಾಯುತ್ತಿದ್ದವರಿಗೆ ಇಂದು ಸಿಹಿಸುದ್ದಿ ನೀಡಿದೆ. ಶಿಯೋಮಿ ರೆಡ್‌ಮಿ ನೋಟ್ 5 ಪ್ರೋ ಮತ್ತು ನೋಕಿಯಾ 6.1 ಪ್ಲಸ್ ಫೋನ್‌ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದ ಮಿಡ್ ರೇಂಜ್ ಸ್ಮಾರ್ಟ್‌ಫೋನ್ 'ಹಾನರ್ 8ಎಕ್ಸ್' ಭಾರತದಲ್ಲಿ ಇಂದು ಬಿಡುಗಡೆಯಾಗಿದೆ.

ಹಾನರ್ ಕಂಪೆನಿ ಇಂದು ಆಯೋಜಿಸಿದ್ದ ಬೃಹತ್ ಬಿಡುಗಡೆ ಸಮಾರಂಭದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು 'ಹಾನರ್ 8ಎಕ್ಸ್' ಪ್ರವೇಶಿಸಿದೆ. ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಿ ಮೊಬೈಲ್ ಪ್ರಿಯರ ಗಮನ ಸೆಳೆದಿದ್ದ 'ಹಾನರ್ 8ಎಕ್ಸ್', ಭಾರತದಲ್ಲಿ ಇಂದಿನಿಂದಲೇ ಖರೀದಿಗೂ ಸಹ ಲಭ್ಯವಿದ್ದು, ಬೆಲೆ ಕೂಡ ನಿರೀಕ್ಷೆಗೆ ತಕ್ಕಂತೆ ನಿಗದಿಯಾಗಿದೆ.

ಭಾರತದಲ್ಲಿ 'ಹಾನರ್ 8ಎಕ್ಸ್' ಬಿಡುಗಡೆ!..ರೆಡ್‌ಮಿ ನೋಟ್ 5 ಪ್ರೋಗೆ ಸೆಡ್ಡು!!

6.5-ಇಂಚಿನ ಪುಲ್ HD+ ಡಿಸ್ಪ್ಲೇ, 1080x2340 ಪಿಕ್ಸಲ್ ರೆಸಲ್ಯೂಷನ್, 20ಎಂಪಿ ಪ್ರೈಮರಿ ಸೆನ್ಸರ್ ಕ್ಯಾಮೆರಾಗಳಂತಹ ಫೀಚರ್ಸ್ ಹೊಂದಿರುವ 'ಹಾನರ್ 8ಎಕ್ಸ್' ಮೊಬೈಲ್ ಪ್ರಿಯರಿಗೆ ಈಗ ಉತ್ತಮ ಆಯ್ಕೆಯ ಸ್ಮಾರ್ಟ್‌ಪೋನ್ ಕೂಡ. ಹಾಗಾಗಿ, 'ಹಾನರ್ 8ಎಕ್ಸ್' ಫೀಚರ್ಸ್ ಮತ್ತು ವೈಶಿಷ್ಟ್ಯಗಳು ಯಾವುವು?, ಬೆಲೆ ಎಷ್ಟು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

'ಹಾನರ್ 8ಎಕ್ಸ್' ಸ್ಮಾರ್ಟ್‌ಪೋನಿನಲ್ಲಿ 19.5:9 ಅನುಪಾತ ಆಕಾರದಲ್ಲಿ 1080x2340 ಪಿಕ್ಸಲ್ ರೆಸಲ್ಯೂಷನ್ ಸಾಮರ್ಥ್ಯದ 6.5-ಇಂಚಿನ ಪುಲ್ HD+ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಡಿಸ್‌ಪ್ಲೇಯು ನೋಚ್ ವಿನ್ಯಾಸದಲ್ಲಿದ್ದು, ಹಿಂಬಾಗದಲ್ಲಿ ರಿಯರ್ ಕ್ಯಾಮೆರಾಗಳೂ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಹೈ ಎಂಡ್ ಲುಕ್ ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನಿನಲ್ಲಿ ಕಂಪೆನಿಯ ಸ್ವಂತ Kirin 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, 4GB RAM + 64GB ಇಂಟರ್ನಲ್ ಸ್ಟೋರೇಜ್ , 6GB RAM + 64GB ಇಂಟರ್ನಲ್ ಸ್ಟೋರೇಜ್ ಮತ್ತು 6GB RAM + 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾಡುಕಟ್ಟೆಗೆ ಪರಿಚಯಿಸಲಾಗಿದೆ.

ಡ್ಯುಯಲ್ ರಿಯರ್ ಕ್ಯಾಮೆರಾ

ಡ್ಯುಯಲ್ ರಿಯರ್ ಕ್ಯಾಮೆರಾ

f/1.8 ಅಪರ್ಚರ್ ಸಾಮರ್ಥ್ಯವಿರುವ 20ಎಂಪಿ ಪ್ರೈಮರಿ ಸೆನ್ಸರ್ ಮತ್ತು 2ಎಂಪಿ ಸೆಕೆಂಡರಿ ಸೆನ್ಸರ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು 'ಹಾನರ್ 8ಎಕ್ಸ್' ಸ್ಮಾರ್ಟ್‌ಫೋನ್ ಹೊಂದಿದೆ. f/2.0 ಅಪರ್ಚರ್ ಸಾಮರ್ಥ್ಯದಲ್ಲಿ 16ಎಂಪಿ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನಿನಲ್ಲಿರುವ ಎರಡೂ ಬದಿಯ ಕ್ಯಾಮೆರಾಗಳು ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ .

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಹಾನರ್ 8ಎಕ್ಸ್ ಸ್ಮಾರ್ಟ್‌ಫೋನ್ 3750mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗಲಿದೆ. 4G, VoLTE, 3G, ವೈ-ಫೈ, ಬ್ಲೂಟೂತ್ ಮತ್ತು GPS ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಾಗಿದೆ. ಸ್ಕ್ರೀನ್ ಟು ಬಾಡಿ ರೇಷ್ಯೂ 91 ಪರ್ಸೆಂಟ್ ಇರುವುದು ಈ ಸ್ಮಾರ್ಟ್‌ಫೋನಿನ ವಿಶೇಷತೆಗಳಲ್ಲಿ ಒಂದು.

ಹಾನರ್ 8ಎಕ್ಸ್ ಬೆಲೆ ಎಷ್ಟು?

ಹಾನರ್ 8ಎಕ್ಸ್ ಬೆಲೆ ಎಷ್ಟು?

ಮೂರು ವಿಭಿನ್ನ ಸ್ಟೊರೇಜ್ ವೇರಿಯಂಟ್‌ಗಳಲ್ಲಿ ಹಾನರ್ 8ಎಕ್ಸ್ ಸ್ಮಾರ್ಟ್‌ಪೋನ್ ಖರೀದಿಗೆ ಲಭ್ಯವಿದ್ದು, 4GB+64GB ಮಾದರಿ 14,999 ರೂ. ಮತ್ತು 6GB+64GB ಮಾದರಿ 16,999 ರೂ. ಹಾಗೂ 6GB+128GB ಮಾದರಿಯ ಸ್ಮಾರ್ಟ್‌ಪೋನ್ ಬೆಲೆ 18,999 ರೂ.ಗಳಾಗಿವೆ. ಈ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ಇಂದಿನಿಂದಲೇ ಖರೀದಿಗೂ ಸಹ ಲಭ್ಯವಿವೆ.

Best Mobiles in India

English summary
Huawei's sub-brand Honor has finally launched the Honor 8X smartphone in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X