ಇಷ್ಟು ಕಡಿಮೆ ಬೆಲೆಗೆ 4 ಕ್ಯಾಮೆರಾ, ಗ್ಲಾಸ್ ಡಿಸೈನ್ ಇರುವ ಸ್ಮಾರ್ಟ್‌ಫೋನ್..!

Posted By:
Honor 9 Lite with four cameras (KANNADA)

2018ರಲ್ಲಿ ಹುವಾವೆ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚಿನ ಆಯ್ಕೆಯನ್ನು ಬಳಕೆಗೆ ನೀಡಲು ಮುಂದಾಗಿದೆ. ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನ ಹಿಂಭಾಗ ಮತ್ತು ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಈ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಫಾಗ್‌ಶಿಪ್‌ಗಳಲ್ಲಿ ಇರುವ ಆಯ್ಕೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಇಷ್ಟು ಕಡಿಮೆ ಬೆಲೆಗೆ 4 ಕ್ಯಾಮೆರಾ, ಗ್ಲಾಸ್ ಡಿಸೈನ್ ಇರುವ ಸ್ಮಾರ್ಟ್‌ಫೋನ್..!

ಸದ್ಯ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ನಾಲ್ಕು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದ್ದು, ಈ ಸ್ಮಾರ್ಟ್‌ಫೋನಿನಲ್ಲಿ ಕೃತಕ ಬುದ್ದಿಮತ್ತೆಯನ್ನು ಉತ್ತಮ ಚಿತ್ರಗಳನ್ನು ಸೆರೆಹಿಡಿಯುವುದಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಕೊಡುವ ಬೆಲೆಗೆ ಈ ಸ್ಮಾರ್ಟ್‌ಫೋನ್ ಉತ್ತಮವೇ ಅಥಾವ ಇಲ್ಲವೇ ಎಂಬುದನ್ನು ಮುಂದಿನಂತೆ ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಯೂನಿಬಾಡಿ ವಿನ್ಯಾಸ:

ಉತ್ತಮ ಯೂನಿಬಾಡಿ ವಿನ್ಯಾಸ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ವಿನ್ಯಾಸದ ವಿಚಾರದಲ್ಲಿ ಕ್ಲಾಸಿಕ್ ಆಗಿದೆ. ಹಿಂಭಾಗದಲ್ಲಿ ಗ್ಲಾಸ್ ಪ್ಲಾನಲ್ ಕಾಣಬಹುದಾಗಿದ್ದು, ಇದು ಫೋನ್‌ಗೆ ಪ್ರಿಮಿಯಮ್ ಲುಕ್ ನೀಡಿದೆ. ಅಲ್ಲದೇ ಬ್ಲೂ, ಮಿಡ್‌ನೈಟ್ ಬ್ಲಾಕ್ ಮತ್ತು ಗ್ರೇ ಬಣ್ಣದಲ್ಲಿ ಈ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಅಲ್ಲದೇ ಇದರ 18:9 ಅನುಪಾತದ ಡಿಸ್‌ಪ್ಲೇ ಈ ಫೋನಿನ ವಿಶೇಷತೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೊಟೊ G5S ಸ್ಮಾರ್ಟ್‌ಫೋನ್ ಇಷ್ಟು ಆಯ್ಕೆಗಳನ್ನು ಹೊಂದಿಲ್ಲ ಎನ್ನಲಾಗಿದೆ.

ಎರಡು ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್:

ಎರಡು ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್:

ಸದ್ಯದ ಮಾರುಕಟ್ಟೆಯಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾಗಳ ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಯಲ್ಲಿಯೂ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ನೀಡಲಾಗಿದೆ. ಎರಡು ಕಡೆಯಲ್ಲಿಯೂ 13MP+2MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು ನೀವು ಸೆರೆಹಿಡಿಯುವ ಚಿತ್ರವನ್ನು ಅದ್ಬುತವಾಗಿ ಮೂಡಿಸಲಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಕೃತಕ ಬುದ್ದಿಮತ್ತೆಯನ್ನು ಸಹ ನೀಡಲಾಗಿದೆ.

ಸದ್ಯದ ಮಾರುಕಟ್ಟೆಯಲ್ಲಿ ಬೇರೆ ಯಾವುದೇ ಸ್ಮಾರ್ಟ್‌ಫೋನ್‌ಗಳು ಇಷ್ಟು ಕಡಿಮೆ ಬೆಲೆಗೆ ಎರಡು ಡ್ಯುಯಲ್ ಲೈನ್ಸ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿಲ್ಲ ಎನ್ನಲಾಗಿದೆ. ಇಲ್ಲದೇ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಮೋಡ್ ಗಳನ್ನು ನಾವು ಕಾಣಬಹುದಾಗಿದೆ.

ಉದ್ದದ ಡಿಸ್‌ಪ್ಲೇ:

ಉದ್ದದ ಡಿಸ್‌ಪ್ಲೇ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಅತೀ ಉದ್ದ ಡಿಸ್‌ಪ್ಲೇಯಾಗಿದೆ. ಈ ಬೆಲೆಯಲ್ಲಿ ಆಸುಪಾಸಿನಲ್ಲಿ ದೊರೆಯುವ ಸ್ಮಾರ್ಟ್‌ಫೋನ್‌ಗಳು 16:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿವೆ. ಇದಲ್ಲದೇ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 5.6 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು ವಿಡಿಯೋವನ್ನು ನೋಡಲು ಮತ್ತು ಗೇಮ್‌ಗಳನ್ನು ಆಡಲು ಅತ್ಯುತ್ತಮವಾಗಿದೆ ಎನ್ನಲಾಗಿದೆ.

ಬೆಲೆಯ ವಿಚಾರ:

ಬೆಲೆಯ ವಿಚಾರ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಅತೀ ಕಡಿಮೆ ಬೆಲೆಗೆ ಎಂದರೆ ರೂ.10,999ಕ್ಕೆ ದೊರೆಯುತ್ತಿದ್ದು, ಈಗಾಗಲೇ ಫ್ಲಾಷ್ ಸೇಲ್‌ನಲ್ಲಿ ಸೋಲ್ಡ್‌ಔಟ್ ಆಗಿದೆ. ಈ ಬೆಲೆಗೆ ಮಾರುಕಟ್ಟೆಯಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ದೊರೆಯುವುದೇ ಕಷ್ಟ ಅಂತಹುದರಲ್ಲಿ ನಾಲ್ಕು ಕ್ಯಾಮೆರಾದ ಈ ಫೋನ್ ಜೇಬಿಗೆ ಹೊರೆಯಾಗುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 9 Lite is a total value for money deal for millennials. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot