Home
ಮೊಬೈಲ್

ಮಾರ್ಕೆಟ್ ಗೆ ಕಾಲಿಟ್ಟ ಹಾನರ್ 9i (2018)...ಬೆಲೆಯೆಷ್ಟು? ಏನೆಲ್ಲಾ ಫೀಚರ್ಸ್ ಇದೆ ನೋಡಿ..!

By Sushma Charhra

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಭಾರತದಲ್ಲಿ ರಿಲೀಸ್ ಆಗಿದ್ದ ಹುವಾಯಿ ಬ್ರಾಂಡ್ ನ ಹಾನರ್ 9i ನ ಮುಂದಿನ ಅವತರಣಿಕೆ ಹಾನರ್ 9i (2018) ಚೀನಾದಲ್ಲಿ ಬಿಡುಗಡೆಗೊಂಡಿದೆ. ಈ ಹೊಸ ಮಾಡೆಲ್ ಮೆಟಲ್ ಫ್ರೇಮ್ ನ್ನು ಹೊಂದಿದ್ದು, ಕನ್ನಡಿಯಂತ ಹಿಂಭಾಗವನ್ನು ಹೊಂದಿದೆ.ಇದರಲ್ಲಿ ಸೆಲ್ಫೀ ಗೆ ಹೆಚ್ಚಿನ ಅವಕಾಶಗಳಿದ್ದು, ಅಧ್ಬುತ ಸೆಲ್ಫೀ ಫೋಟೋಗಳನ್ನು ತೆಗೆದುಕೊಳ್ಳಬಹುದು.

ಎರಡು ರೀತಿಯ ಸ್ಟೋರೇಜ್ ಗಳಲ್ಲಿ ಈ ಫೋನ್ ಲಭ್ಯವಾಗಲಿದ್ದು ಒಂದು 64ಜಿಬಿ ಮತ್ತೊಂದು 128 ಜಿಬಿ ಸ್ಟೋರೇಜ್ ಕೆಪಾಸಿಟಿಯನ್ನು ಹೊಂದಿರುತ್ತದೆ. ಹಲವು ರೀತಿಯ ಬಣ್ಣಗಳ ಆಯ್ಕೆಯೂ ಇದ್ದು, ಕಪ್ಪು, ನೀಲಿ, ಗ್ರೀನ್ ಮತ್ತು ನೇರಳೆ ಬಣ್ಣದ ಆಯ್ಕೆಗಳಿವೆ.

ಮಾರ್ಕೆಟ್ ಗೆ ಕಾಲಿಟ್ಟ ಹಾನರ್ 9i...ಬೆಲೆಯೆಷ್ಟು? ಏನೆಲ್ಲಾ ಫೀಚರ್ಸ್ ಇದೆ ನೋಡಿ..!

ಹಾನರ್ 9i (2018) ದರ...
ಹಾನರ್ 9i (2018) ಚೀನಾ ಮಾರುಕಟ್ಟೆಯಲ್ಲಿ 64ಜಿಬಿ ಸ್ಟೋರೇಜ್ ಮೊಬೈಲ್ ನ ದರ CNY 1,399( ಭಾರತೀಯ ಮಾರುಕಟ್ಟೆಯ ಅಂದಾಜು ಬೆಲೆ Rs. 14,600) ಇನ್ನು 128 ಜಿಬಿ ಮೊಬೈಲ್ ನ ಬೆಲೆ CNY 1,699 ( ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು ಬೆಲೆ Rs. 17,800). ಜೂನ್ 7 ನೇ ತಾರೀಕಿನಿಂದ ಎರಡೂ ವೇರಿಯಂಟ್ ನ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಹುವಾಯಿ ಮಾಲ್ ಮೂಲಕ ಮೊದಲೇ ಆರ್ಡರ್ ಮಾಡುವ ಅವಕಾಶವೂ ಇದೆ. ಇನ್ನು ವಿಶ್ವ ಮಾರುಕಟ್ಟೆಯಲ್ಲಿ ಇದರ ಬೆಲೆ ಹೇಗಿರಲಿದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಾರ್ಕೆಟ್ ಗೆ ಕಾಲಿಟ್ಟ ಹಾನರ್ 9i...ಬೆಲೆಯೆಷ್ಟು? ಏನೆಲ್ಲಾ ಫೀಚರ್ಸ್ ಇದೆ ನೋಡಿ..!


ಹಾನರ್ 9i (2018) ವೈಶಿಷ್ಟ್ಯತೆಗಳ ಪಟ್ಟಿ
ಎರಡು ನ್ಯಾನೋ ಸಿಮ್ ಗಳನ್ನು ಹಾನರ್ 9i (2018) ನಲ್ಲಿ ಬಳಸಬಹುದಾಗಿದ್ದು ಇದು ಆಂಡ್ರಾಯ್ಡ್ 8.0 ಓರಿಯೋ ಜೊತೆಗೆ ಮೇಲ್ಬಾಗದಲ್ಲಿ EMUI 8.0 ನಿಂದ ರನ್ ಆಗುತ್ತೆ ಮತ್ತು 5.84-ಇಂಚು (1080x2280 ಪಿಕ್ಸಲ್ಸ್) ಫುಲ್-HD+ IPS ಡಿಸ್ಪ್ಲೇಯನ್ನು ಒಳಗೊಂಡಿದೆ.. ಅಕ್ಟಾ-ಕೋರ್ HiSilicon Kirin 659 ಸಾಕೆಟ್ ಇರಲಿದ್ದು ಅದು, Mali T830-MP2 GPU ಮತ್ತು 4ಜಿಬಿ RAM ನೊಂದಿಗೆ ಹೊಂದಿಕೊಂಡಿರುತ್ತದೆ. ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದು 3-ಮೆಗಾ ಪಿಕ್ಸಲ್ ಪ್ರೈಮರಿ ಸನ್ಸರ್ ಮತ್ತು 2-ಮೆಗಾ ಪಿಕ್ಸಲ್ ಸೆಕೆಂಡರಿ ಸೆನ್ಸರ್ ನ್ನು ಒಳಗೊಂಡಿರುತ್ತೆ ಜೊತೆಗೆ LED ಫ್ಲ್ಯಾಶ್ ಇರಲಿದೆ..

ಕ್ಯಾಮರಾವು PDAF ಮತ್ತು HDR, ಟೈ- ಲ್ಯಾಪ್ಸ್ ಮತ್ತು burst ಮೋಡ್ ವೈಶಿಷ್ಟ್ಯತೆಗಳಿಗೆ ಅವಕಾಶ ಕಲ್ಪಿಸುತ್ತದೆ. ಮುಂಭಾಗದಲ್ಲಿ 16-ಮೆಗಾಪಿಕ್ಸಲ್ ಸೆನ್ಸರ್ ಇದ್ದು ಅದು ಬ್ಯೂಟಿ ಮೋಡ್ ನಲ್ಲಿ ಕೆಲಸ ನಿರ್ವಹಿಸುತ್ತೆ.. ಎರಡೂ ಕ್ಯಾಮರಾಗಳು ಫುಲ್ HD (1080p) ವೀಡಿಯೋ ರೆಕಾರ್ಡಿಂಗ್ ಗೆ ಬೆಂಬಲ ನೀಡುತ್ತೆ.

ಇನ್ನು ಸ್ಟೋರೇಜ್ ವಿಚಾರಕ್ಕೆ ಬಂದರೆ ಹಾನರ್ 9i (2018) ನಲ್ಲಿ 64ಜಿಬಿ ಮತ್ತು 128ಜಿಬಿ ಆನ್ ಬೋರ್ಡ್ ಸ್ಟೋರೇಜ್ ಆಪ್ಶನ್ ಗಳಿರುತ್ತೆ. ಅದನ್ನು ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 256 ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾಗಿದೆ.

ಇನ್ನು ಇದರಲ್ಲಿ 4ಜಿ ಎಲ್ ಟಿ ಇ, ವೈ-ಫೈ 802.11ac, ಬ್ಲೂ ಟೂತ್, GPS/ A-GPS, and ಮೈಕ್ರೋ-USB ಗಳಿಗೆ ಅವಕಾಶವಿದೆ. ಹಿಂಭಾಗದಲ್ಲಿ ಬೆರಳಚ್ಚು ತಂತ್ರಜ್ಞಾನವನ್ನೂ ಒಳಗೊಂಡಿದ್ದು, ಫೇಸ್ ಅನ್ ಲಾಕ್ ಆಯ್ಕೆಯನ್ನು ಹೊಂದಿದೆ. ಮೊಬೈಲ್ ನಲ್ಲಿ 3000mAh Li-ಪಾಲಿಮರ್ ಬ್ಯಾಟರಿ ಇದೆ ಮತ್ತು ಒಟ್ಟು ಮೊಬೈಲ್ ನ ಅಳತೆಯು 149.2x71.8x7.7ಎಂಎಂ ಆಗಿದೆ.

Best Mobiles in India

English summary
Honor 9i (2018) With 18:9 Display, Dual Rear Camera Setup Launched: Price, Specifications. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+