ಮತ್ತೊಂದು ಬೊಂಬಾಟ್ ಕ್ಯಾಮೆರಾ ಫೋನ್ ಭಾರತೀಯ ಮಾರುಕಟ್ಟೆಗೆ..!

|

ಜಾಗತಿಕ‌ ಮಾರುಕಟ್ಟೆಯಲ್ಲಿ ಹುವಾವೆ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹುವಾವೆ ಸಬ್ ಬ್ರಾಂಡ್ ಸಾಕಷ್ಟು ಪ್ರಮಾಣ ದಲ್ಲಿ ಜನಮನ್ನಣೆಯನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಹಲವು ಸ್ಮಾರ್ಟ್‌ಫೋನ್ ಗಳನ್ನು ಲಾಂಚ್‌ ಮಾಡುತ್ತಿದೆ. ‌ಇದೇ ಮಾದರಿಯಲ್ಲಿ ಹಾನರ್ 9i ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ದತೆ ನಡೆಸಿದೆ.

ಮತ್ತೊಂದು ಬೊಂಬಾಟ್ ಕ್ಯಾಮೆರಾ ಫೋನ್ ಭಾರತೀಯ ಮಾರುಕಟ್ಟೆಗೆ..!

ಹಾನರ್‌ ಇದೇ ಜುಲೈ 27 ರಂದು ಹಾನರ್ 9i ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ. ಈಗಾಗಲೇ ಈ ಕುರಿತು ಮಾಹಿತಿಗಳು ಲೀಕ್ ಆಗಿದ್ದು, ಈ ಹಿಂದೆಯೂ ಸಹ ಇದೇ ಹೆಸರಿನಲ್ಲಿ ಸ್ಮಾರ್ಟ್ ಫೋನ್ ವೊಂದು ಲಾಂಚ್ ಆಗಿತ್ತು, ಈಗ ಅದರ ಪರಿಷ್ಕೃತ ಆವೃತ್ತಿಯೂ ಲಾಂಚ್ ಆಗುತ್ತಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಐಫೋನ್ ಮಾದರಿ ಡಿಸ್ ಪ್ಲೇ:

ಐಫೋನ್ ಮಾದರಿ ಡಿಸ್ ಪ್ಲೇ:

ಹಾನರ್ 9i ಸ್ಮಾರ್ಟ್‌ಫೋನಿನಲ್ಲಿ ಐಫೋನ್ X ಮಾದರಿಯ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು 19:9 ಅನುಪಾತದಿಂದ ಕೂಡಿದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ. ಇದಲ್ಲದೇ 5.84 ಇಂಚಿನ್ ಡಿಸ್ ಪ್ಲೇ 2.5 D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ. ಬಳಕೆದಾರರಿಗೆ ಸಾಕಷ್ಟು ಹೊಸ ಮಾದರಿಯ ಅನುಭವನ್ನು ನೀಡಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಹಾನರ್ 9i ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಬಳೆಕೆದಾರರಿಗೆ ವೇಗದ ಸೇವೆಯನ್ನು ನೀಡುವ ಸಲುವಾಗಿ ಕಿರನ್ 659 ಪ್ರೋಸೆಸರ್ ಅನ್ನು ನೀಡಲಾಗಿದೆ. ಇದಲ್ಲದೇ 4 GB RAM ಸಹ ಈ ಸ್ಮಾರ್ಟ್ ಫೋನಿನಲ್ಲಿ ಅಳವಡಿಸಲಾಇದೆ. 64GB ಇಂಟರ್ನಲ್ ಮೆಮೊರಿಯೊಂದಿಗೆ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದ್ದು, ಹೆಚ್ಚವರಿ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಹಾನರ್ 9i ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ 13MP + 2MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯ ಮಾಡಲಿದೆ.

ಫೇಸ್ ಅನ್ ಲಾಕ್:

ಫೇಸ್ ಅನ್ ಲಾಕ್:

ಹಾನರ್ 9i ಸ್ಮಾರ್ಟ್‌ಫೋನಿನಲ್ಲಿ ಫೇಸ್ ಅನ್ ಲಾಕ್ ಆಯ್ಕೆಯನ್ನು ಕಾಣಬಹುದಾಗಿದ್ದು, ಇದಕ್ಕಾಗಿಯೇ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಇದು ಉತ್ತಮ ಸೆಲ್ಫಿಗಳನ್ನು ಕಿಕ್ಲಿಸಲು ಸಹಾಯವನ್ನು ಮಾಡಲಿದೆ. ಇದು ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ EMUI ಅನ್ನು ಸಹ ಕಾಣಬಹುದಾಗಿದೆ.

ದೊಡ್ಡ ಬ್ಯಾಟರಿ:

ದೊಡ್ಡ ಬ್ಯಾಟರಿ:

ವೇಗದ ಕಾರ್ಯಚರಣೆಯೊಂದಿಗೆ ಹಾನರ್ 9i ಸ್ಮಾರ್ಟ್‌ಫೋನಿನಲ್ಲಿ ದೊಡ್ಡ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕಾಗಿ 3000 mAh ಬ್ಯಾಟರಿಯನ್ನು ನೀಡಲಾಗಿದೆ. ಇದು ಹೆಚ್ಚಿನ ಪ್ರಮಾಣದ ಬ್ಯಾಕಪ್ ಅನ್ನು ನೀಡಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬೆಸ್ಟ್ ಕ್ಯಾಮೆರಾ ಫೋನ್ ಎನ್ನಲು ಬೇಕಾಗಿರುವ ಎಲ್ಲಾ ಆಯ್ಕೆಗಳನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ.

Best Mobiles in India

English summary
Honor 9i launch in India on the 24th of july. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X