ಪ್ರಸ್ತುತ ಖರೀದಿಸಲು ಬೆಸ್ಟ್ ಫೋನ್ ಹಾನರ್ 9ಐ ಪ್ರೊ!!..ವಿವೊ, ಒಪ್ಪೊ, ಶೀಯೋಮಿ ಎಲ್ಲಾ ವೇಸ್ಟ್!?

Written By:

ಸ್ಮಾರ್ಟ್‌ಫೋನ್ ಫೀಚರ್ಸ್‌ಗಳಲ್ಲಿ ವೇಗವಾಗಿ ಬೆಳಯುತ್ತಿರುವ ಒಂದು ಫೀಚರ್ ಎಂದರೆ ಕ್ಯಾಮೆರಾ ತಂತ್ರಜ್ಞಾನ. ಡಿಎಸ್‌ಎಲ್‌ಆರ್‌ಗೂ ಸೆಡ್ಡುಹೊಡೆಯುವ ನಿಟ್ಟಿನಲ್ಲಿ ಹೊರಬರುತ್ತಿರುವ ಮೊಬೈಲ್ ಕ್ಯಾಮೆರಾ ತಂತ್ರಜ್ಞಾನಕ್ಕೆ ಒಂದು ಮಿತಿಯೇ ಇಲ್ಲದಂತಾಗಿತ್ತು.! ಆದರೀಗ ಮೊಬೈಲ್‌ನಲ್ಲಿರುವ ಕ್ಯಾಮೆರಾಗಳಿಗೂ ಮಿತಿ ಇಲ್ಲ ಎನ್ನಬಹುದು.!!

ಹೌದು, ಒಂದು ಇದ್ದ ಕ್ಯಾಮೆರಾ, ಎರಡಾಗಿ, ಮೂರಾಗಿ ಈಗ ನಾಲ್ಕಾಗಿದೆ.! ಇತ್ತೀಚೆಗಂತೂ ಎಲ್ಲ ಫೋನ್ ತಯಾರಕರೂ ಅವರ ಫೋನ್‌ ಬಗ್ಗೆ ಮಾತನಾಡುವುದನ್ನು ಬಿಟ್ಟು ಅದರಲ್ಲಿರುವ ಕ್ಯಾಮೆರಾ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಜೊತೆಯಲ್ಲಿ ನಾಲ್ಕು ಕ್ಯಾಮೆರಾಗಳಿರುವ ಹಾನರ್ 9ಐ ಪ್ರೊ (Honor 9i) ಎಂಬ ಸ್ಮಾರ್ಟ್‌ಫೋನ್ ಜನರ ಕಣ್ಣುಕುಕ್ಕುತ್ತಿದೆ.!! .

ವಿಶ್ವದ ನಂಬರ್ ಒನ್  ಮೊಬೈಲ್ ಕಂಪೆನಿಯಾಗಿರುವ ಹುವಾವೆ ಕಂಪೆನಿಯ ಹಾನರ್‌ನ 9ಐ ಪ್ರೊ (Honor 9i) ಸ್ಮಾರ್ಟ್‌ಫೋನ್ ಬೇಜೆಲ್‌ಲೆಸ್ ಡಿಸ್‌ಪ್ಲೇ, ನಾಲ್ಕು ಕ್ಯಾಮೆರಾ ಹಾಗೂ ಇನ್ನು ಹತ್ತು ಹಲವು ಫೀಚರ್ಸ್ ಹೊಂದಿದ್ದು, ಸ್ಮಾರ್ಟ್‌ಫೋನ್ ಬೇರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

5.9 ಇಂಚ್ ಗಾತ್ರದ 1080 x 2160 ಪಿಕ್ಸೆಲ್ ರೆಸೊಲೂಶನ್‌ನ ಹೊಂದಿರುವ ವಿನ್ಯಾಸದಲ್ಲಿ ಹಾನರ್‌ನ 9ಐ ಪ್ರೊ ಸ್ಮಾರ್ಟ್‌ಫೋನ್ ರೂಪುಗೊಂಡಿದ್ದು, ಟಚ್‌ ಸ್ಕ್ರೀನ್ ಡಿಸ್‌ಪ್ಲೇಯೇ 5.5 ಇಂಚ್‌ನಷ್ಟಿದೆ.!! ಮೊಬೈಲ್ ವಿನ್ಯಾಸ ಸ್ಯಾಮ್‌ಸಂಗ್ ಹೈ ಎಂಡ್‌ ಸ್ಮಾರ್ಟ್‌ಪೋನ್‌ಗಳ ರೀತಿಯಲ್ಲಿ ಮೂಡಿಬಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಹಾನರ್ 9ಐ ಪ್ರೊ ಸ್ಮಾರ್ಟ್‌ಫೋನ್ 4*2.4GHz + 4*1.7GHz ಕಿರಿನ್ 659 ಪ್ರೊಸೆಸರ್ ಹೊಂದಿದ್ದು, ಅತ್ಯದ್ಬುತ ಕಾರ್ಯನಿರ್ವಹಣೆ ನೀಡಲಿದೆ.!! ಗ್ರಾಫಿಕ್‌ಗಾಗಿ ಮಾಲಿ-G71 ಲಭ್ಯವಿದ್ದು, ಆಂಡ್ರಾಯ್ಡ್ 7.0 ಮತ್ತು EMUI 5.1 ಕಾರ್ಯಾಚರಣ ವ್ಯವಸ್ಥೆಯನ್ನು ಹೊಂದಿದೆ.!!

RAM ಮತ್ತು ROM!!

RAM ಮತ್ತು ROM!!

ಹಾನರ್‌ನ 9ಐ ಪ್ರೊ ಸ್ಮಾರ್ಟ್‌ಫೋನ್ 4GB RAM ಹಾಗೂ 64GB ಮೆಮೊರಿಯನ್ನು ಹೊಂದಿದ್ದು, ಎಸ್‌ಡಿಕಾರ್ಡ್ ಮೂಲಕ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಇದೆ.! ಮಧ್ಯಮ ವರ್ಗದ ಬೆಲೆಯಲ್ಲಿ ಲಭ್ಯವಿರುವ ಫೋನ್‌ನಲ್ಲಿ 4GB RAM ಹಾಗೂ 64GB ಮೆಮೊರಿ ಉತ್ತಮ ಎನ್ನಬಹುದು.!!

ಅದ್ಬುತವಾಗಿದೆ ಕ್ಯಾಮೆರಾ!!

ಅದ್ಬುತವಾಗಿದೆ ಕ್ಯಾಮೆರಾ!!

ಮೊದಲೇ ಹೇಳಿದಂತೆ ಹಾನರ್‌ನ 9ಐ ಪ್ರೊ ನಾಲ್ಕು ಕ್ಯಾಮೆರಾಗಳನ್ನು ಹೊಂದಿದ್ದು, 16+2mp ಎರಡು ಪ್ರಾಥಮಿಕ ಕ್ಯಾಮೆರಾ ಹಾಗೂ ಎರಡು 13+2MP ಸೆಲ್ಫಿ ಕ್ಯಾಮೆರಾಗಳಿವೆ.! ಇವುಗಳಲ್ಲಿ ಒಂದು ಕ್ಯಾಮೆರಾ ಹತ್ತಿರದ ವಸ್ತುವನ್ನು ನಿಖರವಾಗಿ ಫೋಕಸ್ ಮಾಡುವಾಗ ಇನ್ನೊಂದು ಕ್ಯಾಮೆರಾ ಅದರ ಹಿನ್ನೆಲೆಯನ್ನು ಫೋಕಸ್ ಮಾಡುತ್ತದೆ.!!

ಬೇರೆ ಏನೆಲ್ಲಾ ಫೀಚರ್ಸ್ ಮತ್ತು ಬೆಲೆ?

ಬೇರೆ ಏನೆಲ್ಲಾ ಫೀಚರ್ಸ್ ಮತ್ತು ಬೆಲೆ?

3340mAh ಬ್ಯಾಟರಿ, ಫಿಂಗರ್‌ಪ್ರಿಂಟ್, ಓಟಿಜಿ, ಡ್ಯುಯಲ್ ಸಿಮ್ ನಂತರ ಅತ್ಯುತ್ತಮ ಫೀಚರ್ಸ್‌ಗಳನ್ನು ಹಾನರ್‌ನ 9ಐ ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾಗಿದೆ.!! ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಹಾನರ್‌ನ 9ಐ ಪ್ರೊ ಸ್ಮಾರ್ಟ್‌ಫೋನ್‌ ಬೆಲೆ 17,999 ರೂಪಾಯಿಗಳಿಗೆ ಲಭ್ಯವಿದೆ.!!

ಓದಿರಿ:ಮೊಬೈಲ್‌ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸುವುದಿಲ್ಲವೆಂದ ಮುಖ್ಯಮಂತ್ರಿ!!..ಏಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
his smartphone is pretty much similar to the Huawei Maiming 6, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot