ಬೆಸ್ಟ್ ಸೆಲ್ಫಿ ತೆಗೆಯಲಿದೆ ಈ ಟಾಪ್ ಎಂಡ್ ಸ್ಮಾರ್ಟ್‌ಫೋನ್: ಬೆಲೆಯೂ ಹೆಚ್ಚಿಲ್ಲ...!
ಮಾರುಕಟ್ಟೆಯಲ್ಲಿ ಎಲ್ಲಾ ಮಾದರಿಯ ಸ್ಮಾರ್ಟ್ಪೋನ್‌ಗಳನ್ನು ಲಾಂಚ್ ಮಾಡುವ ಹಾನರ್ ಸಹ ವಿಶೇಷ ಸ್ಮಾರ್ಟ್‌ಫೋನ್ ಅನ್ನು ಸೆಲ್ಫಿ ವಿಭಾಗದಲ್ಲಿ ಲಾಂಚ್ ಮಾಡಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಭಿನ್ನವಾಗಿ ಕಾಣಿಸಿಕೊಂಡಿದ್ದು, ಹಲವು ಟಾಪ್ ಕಂಪನಿಗಳು ಲಾಂಚ್ ಮಾಡಿರುವ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಬಜೆಟ್ ಬೆಲೆ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಇದು ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

ನೋಡಲು ಸುಂದರವಾಗಿರುವ ಹಾನರ್ 9N ಸ್ಮಾರ್ಟ್‌ಫೋನ್, ಬಳಕೆದಾರರಿಗೆ ಉತ್ತಮ ಬಳಕೆಯ ಅನುಭವನ್ನು ನೀಡಲಿದೆ. ನೀಡುವ ಬೆಲೆಗೆ ಈ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಿನ ಆಯ್ಕೆಗಳನ್ನು ಕಾಣಬಹುದಾಗಿದೆ. ಬ್ರೌಸಿಂಗ್, ಗೇಮೀಂಗ್, ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಇದು ಹೇಳಿ ಮಾಡಿಸಿದಂತಿದೆ. ಅಲ್ಲದೇ ವಿಡಿಯೋ ನೋಡಲು ಮತ್ತು ಫೋನಿನಲ್ಲಿಯೇ ಪುಸ್ತಕಗಳನ್ನು ಓದಲು ಸಹ ಡಿಸ್‌ಪ್ಲೇ ಸಹಾಯ ಮಾಡಲಿದೆ. ಇದಕ್ಕದಾಗಿಯೇ ದೊಡ್ಡ ಮಾದರಿಯ ಸ್ಕ್ರಿನ್ ಅನ್ನು ನೀಡಲಾಗಿದೆ. ಎಲ್ಲಾ ಮಾದರಿಯ ಟಾಸ್ಕ್‌ಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ.
ಅಲ್ಲದೇ ಇದು ಫೋಟೋ ತೆಗೆದುಕೊಳ್ಳುವ ಸಲುವಾಗಿ ಉತ್ತಮ ಕ್ಯಾಮೆರಾವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಹಾನರ್ 9N ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಕ್ಯಾಮೆರಾ ಬಗ್ಗೆ ಮಾಹಿತಿಯೂ ಮುಂದಿದೆ. ಹಿಂಭಾಗ ಮತ್ತು ಮುಂಭಾಗದಲ್ಲಿ ಬೆಸ್ಟ್ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಬೆಸ್ಟ್ ಎನ್ನುವ ಕ್ಯಾಮೆರಾ ಬಗ್ಗೆ ಮಾಹಿತಿಯೂ ಇಲ್ಲಿದೆ.

16 MP ಸೆಲ್ಫಿ ಕ್ಯಾಮೆರಾ:
ಹಾನರ್ 9N ಸ್ಮಾರ್ಟ್‌ಫೋನ್ ಕ್ಯಾಮೆರಾ ಪ್ರೀಮಿಯಮ್ ಮಾದರಿಯಲ್ಲಿದೆ. ಉತ್ತಮ ಚಿತ್ರಗಳನ್ನು ಹಿಡಿಯುವ ಸಲುವಾಗಿ ಹಲವು ಮಾದರಿಯ ಆಯ್ಕೆಗಳನ್ನು ಇದರಲ್ಲಿ ಕಾಣಬಹುದಾಗಿದೆ. ಹೈ ಎಂಡ್ ಟೆಕ್ನಾಲಜಿಯನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲಿದೆ. ಇದರಿಂದ ಬಳಕೆದಾರರಿಗೆ ಉತ್ತಮ ಸೇವೆಯೂ ಲಭ್ಯವಾಗಲಿದೆ.

ಸ್ಮಾರ್ಟ್ ಪೋರ್ಟೆಟ್ ಮೋಡ್:
ಹಾನರ್ 9N ಸ್ಮಾರ್ಟ್‌ಫೋನ್ ನಲ್ಲಿ ಉತ್ತಮವಾದ ಸ್ಮಾರ್ಟ್ ಫೋರ್ಟೆಟ್ ಮೋಡ್ ಗಳನ್ನು ನೀಡಲಾಗಿದೆ. ಇದರಿಂದಾಗಿ ಗುಣಮಟ್ಟದ ಫೋಟೋಗಳನ್ನು ಕ್ಲಿಕ್ ಮಾಡಬಹುದಾಗಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನಿನಲ್ಲಿ ಇರುವ ಆಯ್ಕೆಯೂ ಇರದಲ್ಲಿ. ನ್ಯಾಚ್ಯುರಲ್ ಆಗಿ ಫೋಟೋಗಳನ್ನು ಕ್ಲಿಕ್ ಮಾಡಲು ಸಹಾಯವನ್ನು ಮಾಡಲಿದೆ. ಇನ್ ಡೆಪ್ತ್ ಪೋಟೋಗಳನ್ನು ಸೆರೆಹಿಡಿಯಬಹುದಾಗಿದೆ.

3D ಬ್ಯೂಟಿ:
ಇದಲ್ಲದೇ ಹೊಸ ಮಾದರಿಯ ಬ್ಯೂಟಿ ಆಯ್ಕೆಯನ್ನು ನೀಡಲಾಗಿದ್ದು, ಬೇರೆ ಯಾವುದೇ ಸ್ಮಾರ್ಟ್ ಫೋನಿನಲ್ಲಿಯೂ ಈ ಮಾದರಿಯ ಆಯ್ಕೆಯನ್ನು ನೀಡಲಾಗಿಲ್ಲ ಎನ್ನಲಾಗಿದೆ. 3D ಬ್ಯೂಟಿಯೂ ನಿಮ್ಮ ಚಿತ್ರಗಳನ್ನು ಉತ್ತಮವಾಗಿ ಸೆರೆಹಿಡಿಯಲು ಶಕ್ತವಾಗಿದೆ. ಇದರಿಂದಾಗಿ ಪರ್ಫೇಕ್ಟ್ ಫೋಟೋಗಳನ್ನು ಕ್ಲಿಕ್ ಮಾಡುವ ಅವಕಾಶವು ದೊರೆಯಲಿದೆ. ಇದರಿಂದಾಗಿ ನಿಮ್ಮ ಸೋಶಿಯಲ್ ಮೀಡಿಯಾ ಇನ್ನಷ್ಟು ಸುಂದರವಾಗಲಿದೆ.

AR ಎಫೆಕ್ಟ್ ಬ್ಯಾಕ್‌ಗ್ರೌಂಡ್:
ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನ್ ಕ್ಯಾಮೆರಾದೊಂದಿಗೆ AR ಎಫೆಕ್ಟ್ ಅನ್ನು ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೊಸ ಮಾದರಿಯ ಫೋಟೋಗಳನ್ನು ಕ್ಲಿಕ್ ಮಾಡುವ ಅವಕಾಶ ಲಭ್ಯವಾಗಲಿದೆ. ಇದೀಂದಾಗಿ ನಿಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳು ಹೊಸದಾಗಿ ಕಾಣಿಸಿಕೊಳ್ಳಲಿದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ:
ಹಾನರ್ 9N ಸ್ಮಾರ್ಟ್‌ಫೋನ್ ಕ್ಯಾಮೆರಾ ಪ್ರೀಮಿಯಮ್ ಮಾದರಿಯ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ 13 MP + 2 MP ಕ್ಯಾಮೆರಾ ಸೆಟಪ್ ಹೊಂದಿದ್ದು, ಉತ್ತಮ ಮಾದರಿಯ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ ಎನ್ನಲಾಗಿದೆ. DSLR ಮಾದರಿಯ ಫೋಟೋಗಳನ್ನು ಇದರಲ್ಲಿ ಸೆರೆಹಿಡಿಯ ಬಹುದಾಗಿದೆ.

ಹಾನರ್ 9N ವಿಶೇಷತೆ:
ಹಾನರ್ 9N ಸ್ಮಾರ್ಟ್‌ಫೋನ್ ಡಿಸೈನ್ ಈಗಾಗಲೇ ಬಳಕೆದಾರರಿಗೆ ಮೆಚ್ಚುಗೆಯಾಗಿದ್ದು, ಇದರಿಂದಲೇ ಬೇಡಿಕೆ ಹೆಚ್ಚಾಗಿದೆ. 5.84 ಇಂಚಿನ FHD+ ಗುಣಮಟ್ಟದ ಫುಲ್‌ವ್ಯೂ ಡಿಸ್‌ಪ್ಲೇಯೊಂದಿಗೆ ನೋಚ್ ಅನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಈ ಬೆಲೆಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಮಾದರಿಯ ಡಿಸ್‌ಪ್ಲೇಯನ್ನು ಕಾಣಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಇದು ಈ ಸ್ಮಾರ್ಟ್‌ಫೋನ್ ಗೆ ಒಂದು ಮಾದರಿಯಲ್ಲಿ ಸ್ಟಾಂಡೆರ್ಡ್ ಅನ್ನು ತಂದು ಕೊಟ್ಟಿದೆ.

ಬೆಲೆ:
ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ಹಾನರ್ 9N ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ರೂ11,999ಕ್ಕೆ ದೊರೆಯುವ ಈ ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರಿಗೆ 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೂ ಲಭ್ಯವಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ ಬೆಲೆಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ. ಇದರಿಂದಾಗಿ 2018ರ ಮೊಸ್ಟ್ ಸ್ಟೈಲಿಶ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಆಯ್ಕೆ ಯಾವ ಕಾರಣಕ್ಕೆ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ.


Click it and Unblock the Notifications








