Home
ಮೊಬೈಲ್

ಹಾನರ್ 9N ಲಾಂಚ್ ಆಫರ್: ರೂ.11,999 ಫೋನ್ ಮೇಲೆ ರೂ.2200 ಕ್ಯಾಷ್ ಬ್ಯಾಕ್, 100 GB ಡೇಟಾ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕುವ ಸಲುವಾಗಿ ಹಾನರ್ ಲಾಂಚ್ ಮಾಡಿರುವ 'ಹಾನರ್ 9N' ಸ್ಮಾರ್ಟ್‌ಫೋನ್, ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳಿಗೆ ಕಂಟಕವಾಗಲಿದೆ. ಬಜೆಟ್ ಬೆಲೆಯಲ್ಲಿ ಲಭ್ಯವಿದ್ದರೂ ಸಹ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿರುವ ಆಯ್ಕೆಯನ್ನು ಹೊಂದುವ ಮೂಲಕ ನೋಕಿಯಾ, ಸ್ಯಾಮ್‌ಸಂಗ್, ಆಸುಸ್ ಮತ್ತು ಶಿಯೋಮಿ ಕಂಪನಿಗಳಿಗೆ ಒಂದೇ ಒಟ್ಟಿಗೆ ಹೊಡೆತವನ್ನು ನೀಡಲು ಮುಂದಾಗಿದೆ.

ಹಾನರ್ 9N: ರೂ.11,999 ಫೋನ್ ಮೇಲೆ ರೂ.2200 ಕ್ಯಾಷ್ ಬ್ಯಾಕ್, 100 GB ಡೇಟಾ..!

ಚೀನಾದಲ್ಲಿ ಕಳೆದ ತಿಂಗಳು ಲಾಂಚ್ ಆಗಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದ 'ಹಾನರ್ 9N' ಸ್ಮಾರ್ಟ್‌ಫೋನ್, ಭಾರತೀಯ ಮಾರುಕಟ್ಟೆಯಲ್ಲಿ ಮೂರು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಫ್ಲಿಪ್‌ಕಾರ್ಟಿನಲ್ಲಿ ಮಾತ್ರವೇ ಮಾರಾಟವಾಗಲಿರುವ ಹಾನರ್ 9N ಸ್ಮಾರ್ಟ್‌ಫೋನ್ ತನ್ನದೇ ವಿಭಿನ್ನ ವಿಶೇಷತೆಗಳ ಮೂಲಕ ಮಾರುಕಟ್ಟೆಯಲ್ಲಿ ಹೊಸ ಕಮಾಲ್ ಮಾಡಲಿದೆ ಎನ್ನುವ ಮಾತು ಕೇಳಿ ಬಂದಿದೆ. ಉತ್ತಮ ವಿಶೇಷತೆಗಳನ್ನು ಹೊಂದಿರುವುದರಿಂದಾಗಿ ಬೇಡಿಕೆಯೂ ಅಧಿಕವಾಗುವ ನಿರೀಕ್ಷೆ ಇದೆ.

ಮೂರು ಆವೃತ್ತಿಯಲ್ಲಿ ಲಭ್ಯ:

ಮೂರು ಆವೃತ್ತಿಯಲ್ಲಿ ಲಭ್ಯ:

ಹಾನರ್ 9N ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಪ್ಪೋ ರಿಯಲ್ ಮಿ ಸ್ಮಾರ್ಟ್‌ಫೋನಿಗೆ ಸೆಡ್ಡು ಹೊಡೆಯುವ ಸಲುವಾಗಿ ಮೂರು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. 3 GB / 4GB RAM ನೊಂದಿಗೆ ಬಳಕೆದಾರರಿಗೆ 32 GB/ 64 GB / 128 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಅಲ್ಲದೇ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇದರಲ್ಲಿದೆ.

ನೋಚ್ ಡಿಸ್‌ಪ್ಲೇ:

ನೋಚ್ ಡಿಸ್‌ಪ್ಲೇ:

ಹಾನರ್ 9N ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ ಎಂದರೆ ನೋಚ್ ಡಿಸ್‌ಪ್ಲೇ. ಫುಲ್ ಸ್ಕ್ರಿನ್ ಡಿಸ್‌ಪ್ಲೇ ವಿನ್ಯಾಸದಲ್ಲಿ 5.84 ಇಂಚಿನ FHD+ 19:9 ಅನುಪಾತದ ಫುಲ್ ವ್ಯೂವ್ ಡಿಸ್‌ಪ್ಲೇ ಜೊತೆಗೆ ನೋಚ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಗೇಮ್ ಆಡುವ ಅನುಭವ ಮತ್ತು ವಿಡಿಯೋ ನೋಡುವ ಅನುಭವವು ಉತ್ತಮವಾಗಿರಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಹುವಾವೆ ನಿರ್ಮಾಣದ ಕಿರನ್ 659 ಪ್ರೋಸೆಸರ್ ಅನ್ನು ಕಾಣಬಹದಾಗಿದೆ. ಇದರೊಂದಿಗೆ 3GB/4GB RAM ಅನ್ನು ನೀಡಲಾಗಿದ್ದು, ಇದರಿಂದಾಗಿ ಹಾನರ್ 9N ಸ್ಮಾರ್ಟ್‌ಫೋನಿನ ವೇಗ ಹೆಚ್ಚಾಗಿರಲಿದೆ. ಬಳಕೆದಾರರಿಗೆ ಸಾಕಷ್ಟು ವೇಗದ ಕಾರ್ಯಚರಣೆಯನ್ನು ಸಫೋರ್ಟ್ ಮಾಡಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಹಾನರ್ 9N ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. 13MP + 2MP ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಮುಂಭಾಗದಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ ಬ್ಯೂಟಿ ಮೋಡ್ ಸಹ ಇದೆ.

ಬೆಲೆ:

ಬೆಲೆ:

ಹಾನರ್ 9N ಸ್ಮಾರ್ಟ್‌ಫೋನ್ ಮೂರು ಆವೃತ್ತಿಯಲ್ಲಿ ಲಭ್ಯವಿದೆ. 3 GB RAM ಮತ್ತು 32 GB ಮೆಮೊರಿ ಫೋನ್ ರೂ.11,999ಕ್ಕೆ ದೊರೆಯಲಿದೆ. 4GB RAM ಮತ್ತು 64 GB ಮೆಮೊರಿಯ ಫೋನ್ ರೂ.13,999ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ 4GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಟಾಪ್ ಎಂಡ್ ಫೋನ್ ರೂ.17,999ಕ್ಕೆ ಲಭ್ಯವಿರಲಿದೆ.

ಲಾಂಚಿಂಗ್ ಆಫರ್:

ಲಾಂಚಿಂಗ್ ಆಫರ್:

ಹಾನರ್ 9N ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟಿನಲ್ಲಿ ಮಾತ್ರವೇ ಮಾರಾಟವಾಗಲಿದ್ದು, ಜುಲೈ 31 ರಂದು ಮಧ್ಯಾಹ್ನ 12ಕ್ಕೆ ಸೇಲ್ ಆರಂಭವಾಗಲಿದೆ. ಆರಂಭಿಕ ಕೊಡುಗೆಯಾಗಿ ಜಿಯೋದಿಂದ ರೂ.2200 ಕ್ಯಾಷ್ ಬ್ಯಾಕ್ ದೊರೆಯಲಿದ್ದು, ಇದರೊಂದಿಗೆ 100 GB ಹೆಚ್ಚುವರಿ ಡೇಟಾ ಸಹ ಲಭ್ಯವಿದೆ. ಇದಲ್ಲದೇ ರೂ.1200 ಮಿಂತ್ರಾ ವೋಚರ್ ಗಳು ಸಹ ದೊರೆಯಲಿದೆ.

Best Mobiles in India

English summary
Honor 9N launched in India starting Rs. 11,999; sale debuts from July 31. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+