Home
ಮೊಬೈಲ್

ಟ್ರೆಂಡಿಗ್ ಫೀಚರ್ ಇರುವ ಸ್ಮಾರ್ಟ್‌ಫೋನ್ ಬೇಕಾ..? ಇದರಲ್ಲಿ ಅದಕ್ಕಿಂತಲೂ ಜಾಸ್ತಿ ಇದೆ...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದೆ. ಅದರಲ್ಲಿಯೂ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೆಚ್ಚುಗೆಯಾಗಿರುವ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಬೆಲೆಯ ಮತ್ತು ಬಜೆಟ್ ಬೆಲೆಯದ್ದಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಲಾಂಚ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಹಾನರ್ ಸಹ ಇದೇ ವಿಭಾಗದಲ್ಲಿ ಮತ್ತೊಂದು ಬೆಸ್ಟ್ ಎನ್ನಬಹುದಾದ ಸ್ಮಾರ್ಟ್‌ಫೋನ್‌ ವೊಂದನ್ನು ಇಂದು ಲಾಂಚ್ ಮಾಡುತ್ತಿದೆ.

ಟ್ರೆಂಡಿಗ್ ಫೀಚರ್ ಇರುವ ಸ್ಮಾರ್ಟ್‌ಫೋನ್ ಬೇಕಾ..? ಇದರಲ್ಲಿ ಅದಕ್ಕಿಂತಲೂ ಜಾಸ್ತಿ.!

ಫೇಸ್‌ಲಾಕ್, ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್, ಡಿಸ್‌ಪ್ಲೇ ನೋಚ್, ಉತ್ತಮವಾದ ಸೆಲ್ಫಿ ಕ್ಯಾಮೆರಾದೊಂದಿಗೆ ಹಾನರ್ ಹೊಸದೊಂದು ಸ್ಮಾರ್ಟ್‌ಫೊನ್ ಅನ್ನು ಲಾಂಚ್ ಮಾಡುವ ಯೋಜನೆ ರೂಪಿಸಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌ಗಿಂತಲೂ ಉತ್ತಮವಾದ ವಿನ್ಯಾಸ ಮತ್ತು ವಿಶೇಷತೆಗಳನ್ನ ಹೊಂದಿರುವ ಹಾನರ್ 9N ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಈ ಸ್ಮಾರ್ಟ್ ಫೋನ್ ಜುಲೈ 24 ರಂದು ಲಾಂಚ್ ಆಗುತ್ತಿದೆ. ಬಳಕೆದಾರರಿಗೆ ಒಂದು ಸ್ಮಾರ್ಟ್‌ಫೋನ್‌ ನಲ್ಲಿ ಯಾವ ಫೀಚರ್‌ಗಳು ಇರಬೇಕೊ ಅದೆಲ್ಲವೂ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಂಡಿದೆ ಎನ್ನಬಹುದಾಗಿದೆ.

ದೊಡ್ಡದಾದ ಸ್ಕ್ರಿನ್ ಮತ್ತು ಫುಲ್ ವ್ಯೂ ಡಿಸ್‌ಪ್ಲೇ:

ದೊಡ್ಡದಾದ ಸ್ಕ್ರಿನ್ ಮತ್ತು ಫುಲ್ ವ್ಯೂ ಡಿಸ್‌ಪ್ಲೇ:

ಹಾನರ್ 9N ಸ್ಮಾರ್ಟ್‌ಫೋನ್ ನಲ್ಲಿ ಬಳಕೆದಾರರಿಗೆ ಪೂರ್ಣ ಪ್ರಮಾಣದ ಡಿಸ್‌ಪ್ಲೇಯೂ ಬಳಕೆಗೆ ದೊರೆಯಲಿದೆ. ಫುಲ್ ಸ್ಕ್ರಿನ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಸಾಲಿಗೇ ಸೇರಲಿರುವ ಈ ಸ್ಮಾರ್ಟ್‌ಫೋನಿನಲ್ಲಿ 5.84 ಇಂಚಿನ FHD+ ಗುಣಮಟ್ಟದ ಫುಲ್ ವ್ಯೂವ್ ಡಿಸ್‌ಪ್ಲೇ ಜೊತೆಗೆ ನೋಚ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಮಾನ್ಯ ಫೋನಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಡಿಸ್‌ಪ್ಲೇ ಬಳಕೆಗೆ ದೊರೆಯಲಿದೆ.

ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಹಾನರ್ 9N ಸ್ಮಾರ್ಟ್‌ಫೋನ್ ಬೆಸ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಇದು 13 MP ಪ್ರೈಮರಿ ಸೆನ್ಸಾರ್ ನೊಂದಿಗೆ 2 MP ಸೆಕೆಂಡರಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರಿಂದಾಗಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಫ್ರಿ ಲೋಡ್ ಕ್ಯಾಮೆರಾ ಆಯ್ಕೆಗಳಿದ್ದು, ಇದು ನಿಮಗೆ ಪ್ರೋ ಮಾದರಿಯಲ್ಲಿ ಫೋಟೋಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ.

ಸೆಲ್ಫಿಗಾಗಿಯೇ ಬ್ಯೂಟಿಫಿಕೇಷನ್:

ಸೆಲ್ಫಿಗಾಗಿಯೇ ಬ್ಯೂಟಿಫಿಕೇಷನ್:

ಸ್ಯಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಸೆಲ್ಪಿ ಬ್ಯೂಟಿಫಿಕೇಷನ್ ಮೋಡ್ ಅನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಲಾಗಿರುವುದನ್ನು ನೀವು ಕಾಣಬಹುದಾಗಿದೆ. ಮುಂಭಾಗದಲ್ಲಿ 16ವMP ಸೆಲ್ಪೀ ಕ್ಯಾಮೆರಾವನ್ನು ನೀಡಲಾಗಿದೆ. ಇದು ಬೆಸ್ಟ್ ಮಾದರಿಯ ಫೋಟೋಗಳನ್ನು ಸೆರೆಹಿಡಿಯಲು ಹೊಸ ಮಾದರಿಯ ಕ್ಯಾಮೆರಾ UI ಅನ್ನು ಹೊಂದಿದೆ.

ಬೆಸ್ಟ್ ಮೋಡ್‌ಗಳು:

ಬೆಸ್ಟ್ ಮೋಡ್‌ಗಳು:

ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಪ್ರೋಟೆಟ್ ಮೋಡ್, ಫೇಸ್ ಐಡಿಟಿಫಿಕೇಷನ್ ಮೋಡ್, ಬೋಕೆ ಮೋಡ್, ಜೆಂಡರ್ ಬ್ಯೂಟಿ ಮೋಡ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಬ್ಯೂಟಿ ಮೋಡ್ ಫೋಟೊವನ್ನು ಎಡಿಟ್ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಬೇರೆ ಮಾದರಿಯಲ್ಲಿ ಮತ್ತು ಪುರುಷರಿಗೆ ಬೇರೆ ಮಾದರಿಯಲ್ಲಿ ಎಫೆಕ್ಟ್ ಅನ್ನು ನೀಡಲಿದೆ. ಇದಲ್ಲದೇ ಫೋಟೋ ಕ್ಲಿಕಿಸಲು ವಿವಿಧ ಮಾದರಿಯ ಅವಕಾಶವನ್ನು ನೀಡಲಾಗಿದೆ.

ಸ್ಮಾರ್ಟ್‌ಫೇಸ್‌ ಲಾಕ್:

ಸ್ಮಾರ್ಟ್‌ಫೇಸ್‌ ಲಾಕ್:

ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಫೀಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಫೇಸ್‌ ಲಾಕ್ ಆನ್ನು ಸಹ ನೀಡಲಾಗಿದೆ. ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಅನ್ನು ಒಪನ್ ಮಾಡಬಹುದಾಗಿದೆ. ಅಲ್ಲದೇ ನಿಮ್ಮ ಡೇಟಾವನ್ನು ಕೇವಲ ಫೇಸ್‌ಲಾಕ್ ಮೂಲಕ ಮಾತ್ರವೇ ಓಪನ್ ಆಗುವಂತೆ ಮಾಡಬಹುದಾಗಿದೆ.

ವೈ-ಫೈ ಬ್ರಿಡ್ಜ್:

ವೈ-ಫೈ ಬ್ರಿಡ್ಜ್:

ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನ್ ಇನ್ನಷ್ಟು ವಿಶೇಷತೆಗಳನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾಗಿರುವುದು ವೈ-ಫೈ ಬ್ರಿಡ್ಜ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ವೈ-ಫೈ ಕನೆಕ್ಟಿವಿಟಿಯನ್ನು ಹಾಟ್ ಸ್ಪಾಟ್ ಮಾದರಿಯಲ್ಲಿ ಅದನ್ನು ಸ್ನೇಹಿತರೊಂದಿಗೆ ಶೇರ್ ಮಾಡಬಹುದಾಗಿದೆ. ಅಲ್ಲದೇ ಇದು ಗೇಮಿಂಗ್ ಸಂದರ್ಭದಲ್ಲಿ ನಿಮಗೆ ಸಾಕಷ್ಟು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

ಡ್ಯುಯಲ್ ಬ್ಲೂಟೂತ್:

ಡ್ಯುಯಲ್ ಬ್ಲೂಟೂತ್:

ಡ್ಯುಯಲ್ ಬ್ಲೂಟೂತ್ ಸೇವೆಯನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದು ಒಂದೇ ಸಂದರ್ಭದಲ್ಲಿ ಎರಡು ಡಿವೈಸ್‌ಗಳನ್ನು ಕನೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಒಂದೇ ಸಂದರ್ಭದಲ್ಲಿ ಬ್ಲೂಟೂತ್ ಹೆಡ್ ಸೆಟ್ ಮತ್ತು ಸ್ಮಾರ್ಟ್‌ವಾಚ್ ಎರಡನ್ನು ಒಟ್ಟಿಗೆ ಬಳಸುವ ಅವಕಾಶವನ್ನು ಮಾಡಿಕೊಡಲಿದೆ.

ರೈಡ್ ಮೋಡ್ ಸಹ ಇದೆ:

ರೈಡ್ ಮೋಡ್ ಸಹ ಇದೆ:

ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಟೂ ವೀಲ್ಹರ್ ರೈಡರ್ಸ್‌ಗಾಗಿಯೇ ರೈಡ್ ಮೋಡ್ ವೊಂದನ್ನು ನೀಡಲಾಗಿದೆ. ಇದರಿಂದಾಗಿ ಟೂ ವೀಲ್ಹರ್ ರೈಡಿಂಗ್ ಸೇಫ್ ಆಗಲಿದೆ. ಇದಲ್ಲದೇ ಪೇಟಿಎಂ ಪೇ ಆಯ್ಕೆಯನ್ನು ನೀಡಲಾಗಿದೆ. ಇದು ಒಂದೇ ಟಚ್ ನಲ್ಲಿ ಪೇಮೆಂಟ್ ಮಾಡುವ ಅವಕಾಶವನ್ನು ನೀಡುತ್ತಿದೆ.

Best Mobiles in India

English summary
Honor 9N: Most beautiful smartphone with a very stylish Notch, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+