Home
ಮೊಬೈಲ್

ಇದೇ 24ಕ್ಕೆ ಭಾರತದಲ್ಲಿ ಹಾನರ್ 9 ಎನ್ ಸ್ಮಾರ್ಟ್‌ಫೋನ್ ಲಾಂಚ್..!

By Gizbot Bureau

ಹುವಾಯಿಯ ಉಪ ಬ್ರ್ಯಾಂಡ್ ಆಗಿರುವ ಆಹಾನರ್ ಇತ್ತೀಚೆಗಷ್ಟೇ ಜುಲೈ 24 ರ ಸ್ಮಾರ್ಟ್ ಫೋನ್ ಬಿಡುಗಡೆ ಸಮರಂಭದ ಆಮಂತ್ರಣವನ್ನು ಎಲ್ಲರಿಗೂ ನೀಡುತ್ತಿದೆ ಎಂಬ ಸುದ್ದಿಯನ್ನು ನಾವೇ ನಿಮಗೆ ನೀಡಿದ್ದೆವು.ಸದ್ಯ ಕಂಪೆನಿಯು ಆ ದಿನದಂದು ಬಿಡುಗಡೆಗೊಳಿಸುವ ಫೋನಿನ ಬಗೆಗಿನ ವಿವರವನ್ನೂ ಪ್ರಕಟಿಸಿದೆ. ಇದಕ್ಕಾಗಿ ಕಂಪೆನಿಯು ತನ್ನ ಟ್ವೀಟರ್ ಖಾತೆಯನ್ನು ಬಳಸಿಕೊಂಡಿದೆ.

ಅಂದು ಭಾರತದಲ್ಲಿ ಹಾನರ್ 9ಎನ್ ಸ್ಮಾರ್ಟ್ ಫೋನ್ ಬಿಡುಗಡೆಯಾಗುತ್ತದೆ ಎಂಬುದನ್ನು ತಿಳಿಸಿದೆ. ಈಗಾಗಲೇ ಎಲ್ಲರೂ ಊಹಿಸಿರುವಂತೆ ಈ ಫೋನ್ ಹಾನರ್ 9ಐ ನಂತಹ ಕೆಲವು ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಯಾಕೆಂದರೆ ಈ ಹಾನರ್ 9ಐ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಗೊಂಡಿದೆ.

ಇದೇ 24ಕ್ಕೆ ಭಾರತದಲ್ಲಿ ಹಾನರ್ 9 ಎನ್ ಸ್ಮಾರ್ಟ್‌ಫೋನ್ ಲಾಂಚ್..!

ಕಂಪೆನಿಯು ಟ್ವೀಟ್ ಹೀಗಿದೆ “ ಸೌಂದರ್ಯ ಕೇವಲ ಕಣ್ಣಿಗೆ ಕಾಣುವುದಷ್ಟೇ ಅಲ್ಲ ಆದರೆ ನಮ್ಮ ಸುತ್ತಲಿನ ಎಲ್ಲಾ ಮೂಲಭೂತಗಳಲ್ಲೂ ಇದೆ! ಹಾಗಾದ್ರೆ ಇದುವರೆಗೂ ನೀವು ಕಾಣದ ಒಂದು ಸೌಂದರ್ಯವನ್ನು ಕಾಣಲು ತಯಾರಾಗಿ #ಹಾನರ್9ಎನ್ ಜುಲೈ 24ಕ್ಕೆ ”

ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಈಗಾಗಲೇ ಹಬ್ಬಿರುವ ಸುದ್ದಿಯ ಅನುಸಾರವೇ ಹೇಳುವುದಾದರೆ ಕಂಪೆನಿಯು ಈ ಫೋನ್ ನ್ನು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಕಪ್ಪು, ಹಸಿರು, ನೀಲಿ ಮತ್ತು ನೇರಳೆ ಬಣ್ಣಗಳ ಆಯ್ಕೆಯಿರಬಹುದು. ಚೀನಾದಲ್ಲಿ ಹಾನರ್ 9ಐ(2018) ನ ಬೆಲೆ 1399 ಯುವನ್. ಇದನ್ನೇ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗೆ ಅಂದಾಜಿಸುವುದಾದರೆ ಸರಿಸುಮಾರು 14,460 ರುಪಾಯಿ ಆಗುತ್ತದೆ. ಹಾಗಾಗಿ ಭಾರತದಲ್ಲೂ ಕೂಡ ಹೆಚ್ಚುಕಡಿಮೆ ಇದೇ ಬೆಲೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಯನ್ನು ಭಾರತೀಯರು ಇಟ್ಟುಕೊಳ್ಳಬಹುದು.

5.84 ಇಂಚ್‌ ಫುಲ್ HD+ ಡಿಸ್‌ಪ್ಲೇ

5.84 ಇಂಚ್‌ ಫುಲ್ HD+ ಡಿಸ್‌ಪ್ಲೇ

ವೈಶಿಷ್ಟ್ಯತೆಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುವುದಾದರೆ ಹಾನರ್ 9ಎನ್ 5.84-ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2280 ಪಿಕ್ಸಲ್ ರೆಸಲ್ಯೂಷನ್ ಹೊಂದಿರಲಿದೆ. ಐಫೋನ್ ನಂತಹ ನಾಚ್ ನ್ನು ಡಿಸ್ಪ್ಲೇಯಲ್ಲಿ ಹೊಂದಿರುವ ನಿರೀಕ್ಷೆ ಇದೆ ಮತ್ತು ಇದರ ಅನುಪಾತ 18:9 ಆಗಿರಲಿದೆ. ಕಂಪೆನಿಯ ಸ್ವಂತ ಕಿರನ್ 659 ಚಿಪ್ ಸೆಟ್ 4ಜಿಬಿ ಮೆಮೊರಿಯೊಂದಿಗೆ ಪೇರ್ ಆಗಿರಲಿದೆ. ಎರಡು ರೀತಿಯ ಸ್ಟೋರೇಜ್ ಅವಕಾಶವನ್ನು ಫೋನ್ ಹೊಂದಿರಲಿದೆ. ಒಂದು 64ಜಿಬಿ ಮತ್ತೊಂದು 128ಜಿಬಿ ಮೆಮೊರಿ ಎಂದು ನಿರೀಕ್ಷಿಸಲಾಗಿದೆ. ಬಳಕೆದಾರರು ಮೈಕ್ರೋ ಎಸ್ ಕಾರ್ಡ್ ಮೂಲಕ 256ಜಿಬಿ ವರೆಗೂ ಹಿಗ್ಗಿಸಿಕೊಳ್ಳಲು ಅವಕಾಶವಿರುತ್ತದೆ.

ಆಂಡ್ರಾಯ್ಡ್ 8.0 ಓರಿಯೋ ಒಎಸ್

ಆಂಡ್ರಾಯ್ಡ್ 8.0 ಓರಿಯೋ ಒಎಸ್

ಹ್ಯಾಂಡ್ ಸೆಟ್ ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗಲಿದ್ದು EMUI 8.0 ಕಸ್ಟಮೈಸೇಷನ್ ನ್ನು ಹೊಂದಿರಲಿದೆ. ಹೈಬ್ರಿಡ್ ಡುಯಲ್ ಸಿಮ್ ಸ್ಮಾರ್ಟ್ ಫೋನ್ ಆಗಿರುವ ಇದರಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇರಲಿದ್ದು ಒಂದು 13ಎಂಪಿ ಮತ್ತೊಂದು 2ಎಂಪಿ ಸಾಮರ್ಥ್ಯವನ್ನು ಹೊಂದಿರಲಿದೆ. ಜೊತೆಗೆ ಸೆಲ್ಫೀ ಕ್ಯಾಮರಾವು 16ಎಂಪಿ ಸಾಮರ್ಥ್ಯವನ್ನು ಹೊಂದಿರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

3,000 mAh ಬ್ಯಾಟರಿ

3,000 mAh ಬ್ಯಾಟರಿ

ಬೆರಳಚ್ಚು ತಂತ್ರಜ್ಞಾನವನ್ನು ಒಳಗೊಂಡೇ ಬರುವ ಫೋನ್ 3,000 mAh ಬ್ಯಾಟರಿ ಸೌಲಭ್ಯವನ್ನು ಹೊಂದರಲಿದೆ. ಒಟ್ಟಾರೆ ಇದೆಲ್ಲ ವೈಶಿಷ್ಟ್ಯತೆಗಳು ಊಹಾಪೋಹಗಳೇ ವಿನಃ ಇದಕ್ಕೆಲ್ಲ ತೆರೆ ಬೀಳಬೇಕು ಅಂದರೆ ಜುಲೈ 24 ರ ವರೆಗೂ ಕಾಯಲೇಬೇಕು.

Best Mobiles in India

English summary
Honor 9N smartphone with dual rear camera to launch in India on July 24. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+