Home
ಮೊಬೈಲ್

Honor: ಶೀಘ್ರದಲ್ಲೇ ಜಾಗತಿಕ ಮಾರುಟ್ಟೆಗ ಹಾನರ್ 200 ಸರಣಿ ಮೊಬೈಲ್‌ಗಳು; ಫೀಚರ್ಸ್ ಏನಿರಲಿವೆ ? ಬೆಲೆ ಎಷ್ಟು

ಹಾನರ್‌ (Honor) ಇದೀಗ ಟಾಪ್‌ ಬ್ರ್ಯಾಂಡ್‌ಗಳಿಗೆ ತನ್ನದೇ ಆದ ರೀತಿಯಲ್ಲಿ ತೀವ್ರ ಪೈಪೋಟಿ ನೀಡುವ ಕೆಲಸ ಮಾಡುತ್ತಿದೆ. ಅದರಂತೆ ಸಂಸ್ಥೆ ತನ್ನ ಎರಡು ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ಹಾನರ್ 200 ಮತ್ತು ಹಾನರ್ 200 ಪ್ರೊ ಗಳನ್ನು ಮೇ 27ರಂದು ಚೀನಾದಲ್ಲಿ ಲಾಂಚ್ ಮಾಡಿದೆ. ಈ ಮೊಬೈಲ್‌ಗಳ ಫೀಚರ್ಸ್‌ ಹಾಗೂ ಇತರೆ ಮಾಹಿತಿ ತಿಳಿಯಲು ಈ ಲೇಖನ ಸಂಪೂರ್ಣ ಓದಿ.

ಈ ಸ್ಮಾರ್ಟ್‌ಫೋನ್‌ಗಳ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ OS 8.0 ನೊಂದಿಗೆ ಕಾರ್ಯನಿರ್ವಹಿಸಲಿವೆ. ಫ್ರೆಂಚ್ ಸ್ಟುಡಿಯೋ ಹಾರ್ಕೋರ್ಟ್ ಪೋಟ್ರೇಟ್ ಡೇಟಾಸೆಟ್‌ಗಳಲ್ಲಿ ತರಬೇತಿ ಪಡೆದ ಎಐ ಬೆಂಬಲಿತ ಭಾವಚಿತ್ರದ ವೈಶಿಷ್ಟ್ಯವನ್ನು ಹೊಂದಿವೆ.

Honor: ಶೀಘ್ರದಲ್ಲೇ ಜಾಗತಿಕ ಮಾರುಟ್ಟೆಗ ಹಾನರ್ 200 ಸರಣಿ ಮೊಬೈಲ್‌ಗಳು

ಈ ಹ್ಯಾಂಡ್‌ಸೆಟ್‌ಗಳು 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕ, 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ. ಪ್ರೊ ಮಾದರಿಯು ಸೆಲ್ಫಿ ಶೂಟರ್ ಜೊತೆಗೆ ಹೆಚ್ಚುವರಿ 3D ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ. ಹಾನರ್ 200 ಸರಣಿಯು ಜೂನ್ 12 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಹಾನರ್ 200, ಹಾನರ್ 200 ಪ್ರೋ ಬೆಲೆ ಹಾಗೂ ಲಭ್ಯತೆ:

ಹಾನರ್ 200 ಇದರ 12GB + 256GB ವೇರಿಯಂಟ್ ಸುಮಾರು 31,000 ರೂ. ಆರಂಭಿಕ ಬೆಲೆ ಹೊಂದಿರಲಿದೆ, 12GB + 512GB ಮತ್ತು 16GB + 256GB ವೇರಿಯಂಟ್‌ಗಳು ಸರಿಸುಮಾರು 34,400 ರೂ. ಬೆಲೆ ಹೊಂದಿರಲಿದ್ದು, 16GB + 512GB ವೇರಿಯಂಟ್ 36,700 ರೂ. ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ಹಾನರ್ 200 ಪ್ರೋ 12GB + 256GB ವೇರಿಯಂಟ್‌ ಸುಮಾರು 40,200 ರೂ. 12GB + 512GB ಸರಿಸುಮಾರು 43,600 ರೂ. ಹೊಂದಿರಲಿದೆ. ಉನ್ನತ ಮಟ್ಟದ 16GB + 512GB ಮತ್ತು 16GB + 1TB ವೇರಿಯಂಟ್‌ಗಳು ಕ್ರಮವಾಗಿ ಸುಮಾರು ರೂ. 45,000 ಮತ್ತು 51,600 ರೂ. ಗಳಿಗೆ ಗ್ರಾಹಕರ ಕೈ ಸೇರಲಿದೆ ಎಂದು ತಿಳಿದು ಬಂದಿದೆ.

ಈ ಸ್ಮಾರ್ಟ್‌ಫೋನ್‌ಗಳಿಗೆ ಮುಂಗಡ ಬುಕಿಂಗ್ ಕೂಡ ಲಭ್ಯವಿದ್ದು, ಹಾನರ್ ಚೀನಾ ವೆಬ್‌ಸೈಟ್ ಮೂಲಕವೆ ಮೇ 31ರಿಂದ ದೇಶದಲ್ಲಿ ಮಾರಾಟವಾಗಲಿದೆ. ಈ ಫೋನ್‌ಗಳು ಕೋರಲ್ ಪಿಂಕ್, ಮೂನ್ ಶಾಡೋ ವೈಟ್, ಸ್ಕೈ ಬ್ಲೂ ಮತ್ತು ವೆಲ್ವೆಟ್ ಬ್ಲಾಕ್ ಈ ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿವೆ.

ಹಾನರ್ 200, ಹಾನರ್‌ 200 Pro ಫೀಚರ್ಸ್‌:

ಹಾನರ್ 200: 6.7 ಇಂಚಿನ ಫುಲ್‌ HD+ (2,664 x 1,200 ಪಿಕ್ಸೆಲ್‌ಗಳು) ಓಲ್‌ಡ್ (OLED) ಬಾಗಿದ ಡಿಸ್‌ಪ್ಲೇ, 120Hz ರಿಫ್ರೆಶ್ ದರದ ಜೊತೆಗೆ 4,000 nits ವರೆಗಿನ ಗರಿಷ್ಠ ಬ್ರೈಟ್‌ನೆಸ್, 3,840Hz PWM ಮಬ್ಬಾಗಿಸುವಿಕೆಯ ರೇಟ್‌ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 7 ಜನ್ 3 SoC ಮೂಲಕ ಅಂಡ್ರೆನೊ 720 GPU ಜೊತೆ ಜೋಡಣೆಯಾಗಿದೆ. 16GB ಯ LPDDR5 RAM ಮತ್ತು 512GB ವರೆಗಿನ ಸ್ಟೋರೆಜ್ ಸಾಮರ್ಥ್ಯ ಹೊಂದಿದೆ.

ಹಾನರ್ 200 Pro: ಇದು 6.78 ಇಂಚಿನ ಡಿಸ್‌ಪ್ಲೇ ಜೊತೆಗೆ ಹಾನರ್ 200 ರೀತಿಯ ಫೀಚರ್ಸ್ ಹೊಂದಿರಲಿದೆ. ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್‌ನೊಂದಿಗೆ ಅಂಡ್ರೆನೊ 735 GPU ಜೊತೆ ಜೋಡಿಸಲ್ಪಟ್ಟಿದೆ, 16GB ಯ LPDDR5 RAM ಮತ್ತು 1TB ವರೆಗಿನ ಆಂತರಿಕ ಸ್ಟೋರೆಜ್ ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಆಂಡ್ರಾಯ್ಡ್‌ 14 ಆಧಾರಿತ ಮ್ಯಾಜಿಕ್ OS 8.0 ನೊಂದಿಗೆ ಬೇಸ್ ಮತ್ತು ಪ್ರೊ ಆವೃತ್ತಿಗಳೆರಡೂ ಕಾರ್ಯ ನಿರ್ವಹಿಸಲಿವೆ.

ಈ ಎರಡೂ ಸ್ಮಾರ್ಟ್‌ಫೋನ್ ಗಳು 50 ಮೆಗಾಪಿಕ್ಸೆಲ್ 1/1.56 ಇಂಚಿನ Sony IMX906 ಪ್ರಾಥಮಿಕ ಸೆನ್ಸಾರ್ OIS ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಶಾಟ್ ಮತ್ತು 50 ಮೆಗಾಪಿಕ್ಸೆಲ್ ಸೋನಿ IMX856 ಸೆನ್ಸಾರ್ ಕ್ಯಾಮೆರಾ ಹೊಂದಿದೆ. ಪ್ರೋ ವೇರಿಯಂಟ್ 50 ಮೆಗಾಪಿಕ್ಸೆಲ್‌ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಘಟಕ ಸಹ ಹೊಂದಿದೆ.

50 ಮೆಗಾಪಿಕ್ಸೆಲ್ 1/1.3 ಇಂಚಿನ ಓಮ್ನಿ ವಿಷನ್ OV50H ಮುಖ್ಯ ಸೆನ್ಸಾರ್ ಹೊಂದಿದೆ. ಎರಡೂ ಫೋನ್‌ಗಳು ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ ಸೋನಿ IMX906 ಸೆನ್ಸಾರ್ ಕ್ಯಾಮೆರಾ ಹೊಂದಿವೆ ಆದರೆ ಪ್ರೊ ಆವೃತ್ತಿಯು ಹೆಚ್ಚುವರಿಯಾಗಿ 3D ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ.

ಈ ಮೊಬೈಲ್‌ಗಳು 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,200mAh ಬ್ಯಾಟರಿ ಹೊಂದಿದೆ ಮತ್ತು USB ಟೈಪ್ C ಸಂಪರ್ಕವನ್ನು ಹೊಂದಿದೆ. ಭದ್ರತೆಗಾಗಿ ಫೋನ್‌ಗಳು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿವೆ ಇದು 199g ತೂಕ ಹೊಂದಿದೆ.

Best Mobiles in India

English summary
Honor launched the Honor 200 and Honor 200 Pro in China on May 27. Read this complete article to know the features and other information of these mobiles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+